Organ Donation: ಸಾವಿನ ನಂತರವೂ ನೆರವಾದ ಜೀವ
Team Udayavani, Nov 15, 2024, 4:53 PM IST
ಬೆಂಗಳೂರು: ಅಂಗ ದಾನವು ಸಾಟಿಯಿಲ್ಲದ ನಿಸ್ವಾರ್ಥತೆತೆಯ ಪ್ರತೀಕವಾಗಿದ್ದು, ಜೀವದ ನಷ್ಟವನ್ನು ಇತರರ ಜೀವನಕ್ಕೆ ಉಡುಗೊರೆಯಾಗಿ ನೀಡುತ್ತದೆ. ಹಠಾತ್ ಹೃದಯ ಸ್ತಂಭನಕ್ಕೆ ಒಳಗಾದ 37 ವರ್ಷ ವಯಸ್ಸಿನ ದೇಬದತ್ತ ಪಾತ್ರಾ ಮೆದುಳಿಗೆ ಹಾನಿಯಾದ ಕಾರಣ ಅವರ ಕುಟುಂಬವು ಅವರ ಅಂಗಗಳನ್ನು ದಾನ ಮಾಡುವ ಮೂಲಕ ಮಾದರಿಯಾಗಿದೆ.
ಮೂಲತಃ ಒರಿಸ್ಸಾದವರಾದ ದೇಬದತ್ತ ಪಾತ್ರಾ ಅವರು ಕೆಆರ್ ಪುರಂನಲ್ಲಿ ವಾಸಿಸುತ್ತಿದ್ದರು. ಅ.29 ರಂದು ಅವರಿಗೆ ಹೃದಯ ಸ್ತಂಭನವಾಗಿದ್ದು, ಬಳಿಕ ಮೆದುಳು ನಿಶ್ಕ್ರಿಯವಾಗಿತ್ತು.
ಕುಟುಂಬವು ದೇಬದತ್ತ ಪಾತ್ರಾ ಅವರ ಮೂತ್ರಪಿಂಡಗಳು, ಯಕೃತ್ತು, ಹೃದಯ ಮತ್ತು ಕಾರ್ನಿಯಾಗಳನ್ನು ದಾನ ಮಾಡುವ ಮೂಲಕ ಇತರರಿಗೆ ಹೊಸ ಜೀವನ ನೀಡಲು ನಿರ್ಧರಿಸಿತು.
ಮಣಿಪಾಲ್ ಆಸ್ಪತ್ರೆಯ ಎಚ್ಒಡಿ ಮತ್ತು ಕನ್ಸಲ್ಟೆಂಟ್ – ಕ್ರಿಟಿಕಲ್ ಕೇರ್ ಮೆಡಿಸಿನ್ ನ ಅಧ್ಯಕ್ಷ ಡಾ. ಸುನಿಲ್ ಕಾರಂತ್, ಅವರು ಮಾತನಾಡಿ, “ಭಾರತದಲ್ಲಿ, ಸಾವಿನ ನಂತರ ಅಂಗಾಂಗ ದಾನದ ಪ್ರಮಾಣವು ಅಮೆರಿಕದಂತಹ ದೇಶಗಳಿಗಿಂತ ತುಂಬಾ ಕಡಿಮೆಯಾಗಿದೆ. ಅವರ ವೈಯಕ್ತಿಕ ದುರಂತದ ನಡುವೆ ಕೂಡ, ದೇಬದತ್ತ ಅವರ ಕುಟುಂಬವು ಅವರ ಅಂಗಗಳನ್ನು ದಾನ ಮಾಡುವ ನಿರ್ಧಾರವು ಕಸಿ ಅಗತ್ಯವಿರುವ ಜನರ ಜೀವಗಳನ್ನು ಉಳಿಸಿತು ಮತ್ತು ಇತರರಿಗೆ ಈ ಉದಾರ ಕಾರ್ಯವನ್ನು ಪರಿಗಣಿಸಲು ಭರವಸೆ ಮತ್ತು ಪ್ರೋತ್ಸಾಹವನ್ನು ನೀಡಿತು” ಎಂದರು.
ದೇಬದತ್ತ ಪಾತ್ರಾ ಅವರು ಪತ್ನಿ, ಮಗು, ಪೋಷಕರು ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ. ಅಂಗದಾನದ ಈ ನಿಸ್ವಾರ್ಥ ಕ್ರಿಯೆಯ ಮೂಲಕ, ಜೀವ ಉಳಿಸುವ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಸಹಾಯ ಮಾಡಲು ಅವರು ಇತರರಿಗೆ ಮಾದರಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Amazon,Flipkart ವಿರುದ್ಧ ತನಿಖೆ: ಸುಪ್ರೀಂನಿಂದ ಎಲ್ಲಾ ಪ್ರಕರಣಗಳು ಕರ್ನಾಟಕ ಹೈಕೋರ್ಟ್ಗೆ
Waqf; ವಿಜಯೇಂದ್ರ ವಿರುದ್ಧ ಲಂಚ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
Kiccha Sudeep: ಬಿಗ್ ಬಾಸ್ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.