ಕರಗ ಹೊತ್ತವರೇ ಬೇರೆ


Team Udayavani, Apr 2, 2018, 12:33 PM IST

karaga.jpg

ಬೆಂಗಳೂರು: ಜಗತ್ಪ್ರಸಿದ್ಧ ಬೆಂಗಳೂರು ಕರಗ ಮಹೋತ್ಸವದಲ್ಲಿ ಕೊನೆಯ ಕ್ಷಣದಲ್ಲಿ ಕೆಲವು ಗೊಂದಲಗಳು ಉಂಟಾಗಿರುವುದು ಚರ್ಚೆಗೆ ಗ್ರಾಸವಾಗಿದೆ. 
ಅಂತಿಮ ಕ್ಷಣದಲ್ಲಿ ಕರಗ ಹೊರುವ ಪೂಜಾರಿಯೇ ಬದಲಾಗಿ ಮನು ಬದಲಿಗೆ ಜ್ಞಾನೇಂದ್ರ ಎಂಬುವರು ಕರಗ ಹೊತ್ತಿದ್ದು, ನಸುಕಿನ 3.30ರ ನಂತರ ದೇವಾಲಯದಿಂದ ಕರಗ ಹೊರಡಿದ್ದು ಭಕ್ತರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ರೀತಿಯ ಘಟನೆಯ ಅಪರೂಪದ ಎಂದು ಹೇಳಲಾಗುತ್ತಿದ್ದು ಕಾರಣವೇನು ಎಂಬ ಪ್ರಶ್ನೆಗಳು ಮೂಡಿವೆ.

ಕಳೆದ ಎಂಟು ದಿನಗಳಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದ ಅರ್ಚಕ ಎನ್‌.ಮನು ಅವರು ಕರಗ ಹೊರಲು ಶನಿವಾರ ತಡರಾತ್ರಿ 1.30ರ ಸುಮಾರಿಗೆ ದೇವಸ್ಥಾನ ಪ್ರವೇಶಿಸಿದ್ದಾರೆ. ಆದರೆ, ಎರಡು ಗಂಟೆ ಕಳೆದರೂ ಅವರು ಕರಗ ಹೊತ್ತು ದೇವಾಲಯದಿಂದ ಹೊರಬಂದಿಲ್ಲ. ಆದರೆ, ನುಸುಕಿನ 3.50ರ ಸುಮಾರಿಗೆ ದೇವಸ್ಥಾನದಿಂದ ಕರಗ ಹೊತ್ತು ಹೊರಬಂದಿದ್ದು ಮನು ಅಲ್ಲ, ಜ್ಞಾನೇಂದ್ರ ಎಂದು ಹೇಳಲಾಗುತ್ತಿದೆ.

ಅದರ ನಡುವೆಯೇ ಭಾನುವಾರ ಬೆಳಗ್ಗೆಯಿಂದ ದೇವಾಲಯದಲ್ಲಿ ಎನ್‌.ಮನು ಭಕ್ತರಿಂದ ಪಾದಪೂಜೆ ಸ್ವೀಕರಿಸುತ್ತಿರುವುದು ಇನ್ನಷ್ಟು ಗೊಂದಲಗಳಿಗೆ ಎಡೆಮಾಡಿಕೊಟ್ಟಿದೆ. ಸಾಮಾನ್ಯವಾಗಿ ಕರಗ ಹೊತ್ತವರು ದೇವಾಲಯದಲ್ಲಿ ಭಕ್ತರಿಂದ ಪಾದಪೂಜೆಯನ್ನು ಸ್ವೀಕರಿಸುವುದು ವಾಡಿಕೆಯಾಗಿದೆ.

ಈ ಕುರಿತು ಕರಗ ಮಹೋತ್ಸವದ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ರಾಜಗೋಪಾಲ್‌ ಅವರನ್ನು ಕೇಳಿದರೆ, “ದೇವಾಲಯದಿಂದ ಕರಗ ಹೊರಡಲು ತಡವಾಗಿದ್ದು ಏಕೆ ಮತ್ತು ಕಡೇ ಕ್ಷಣದಲ್ಲಿ ಕರಗ ಹೊರುವ ಅರ್ಚಕ ಬದಲಾಗಿದ್ದಕ್ಕೆ ಕಾರಣವೇನು ಎಂಬ ಕುರಿತು ಸೋಮವಾರ ಸಂಪೂರ್ಣ ಮಾಹಿತಿ ನೀಡಲಾಗುವುದು,’ ಎಂದು ಹೇಳಿದ್ದಾರೆ.

ಸರದಿ ಅರ್ಚಕರೂ ಕರಗ ಹೊರಬಹುದು: ಸಾಮಾನ್ಯವಾಗಿ ಪ್ರತಿ ಬಾರಿಯೂ ಕರಗ ಹೊರುವ ಅರ್ಚಕರ ಜತೆಗೆ ಸರದಿ ಅರ್ಚಕರನ್ನು ಆಯ್ಕೆ ಮಾಡಲಾಗಿರುತ್ತದೆ. ಕರಗ ಹೊರುವ ಅರ್ಚಕರಿಗೆ ಅನಾರೋಗ್ಯ ಅಥವಾ ಇತರೆ ತೊಂದರೆಯಾದಾಗ ಸರದಿ ಅರ್ಚಕರು ಕರಗವನ್ನು ಹೊರುತ್ತಾರೆ. ಆದರೆ, ಭಾನುವಾರ ಬೆಳಗ್ಗೆಯಿಂದ ಮನು ಅವರು ಪಾದಪೂಜೆ ಸ್ವೀಕರಿಸಿದ್ದಾರೆ. ಕೆಲವೊಮ್ಮೆ ಸರದಿ ಅರ್ಚಕರು ಕರಗ ಹೊತ್ತರೂ ಎಂಟು ದಿನಗಳಿಂದ ವಿಧಿ ವಿಧಾನ ಪೂರೈಸಿದ ಅರ್ಚಕರು ಪಾದಪೂಜೆ ಸ್ವೀಕರಿಸುತ್ತಾರೆ. ಈ ಕುರಿತು ಅರ್ಚಕರಿಂದ ಸಂಪೂರ್ಣ ಮಾಹಿತಿ ಪಡೆಯಲಾಗುವುದು ಎಂದು ಸಮಿತಿ ಅಧ್ಯಕ್ಷ ರಾಜಗೋಪಾಲ್‌ ಹೇಳಿದ್ದಾರೆ.

-ವಾರದಿಂದ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗಿಯಾಗಿದ್ದ ಮನು
-ಮನು ಬದಲಿಗೆ ಕರಗ ಹೊತ್ತು ಹೊರಬಂದ ಜ್ಞಾನೇಂದ್ರ
-ಅಪರೂಪದ ಘಟನೆಗೆ ಸಾಕ್ಷಿಯಾದ ಜಗತøಸಿದ್ಧ ಕರಗ ಮಹೋತ್ಸವ
-ಅರ್ಚಕ ಬದಲಾಗಲು ಕಾರಣವೇನು ಎಂಬ ಗೊಂದಲದಲ್ಲಿ ಭಕ್ತರು
-ಸೋಮವಾರ ಎಲ್ಲ ಗೊಂದಲ ಬಗೆಹರಿಸುವುದಾಗಿ ಹೇಳಿದ ಸಮಿತಿ
-1.30 (ರಾತ್ರಿ): ದೇವಸ್ಥಾನ ಪ್ರವೇಶಿಸಿದ ಅರ್ಚಕ ಎನ್‌.ಮನು
-3.50 (ನಸುಕು): ದೇವಸ್ಥಾನದಿಂದ ಕರಗ ಹೊತ್ತು ಹೊರಬಂದ ಜ್ಞಾನೇಂದ್ರ

ಕರಗ ಹೊರಲು ಮನು ಅವರು ಮಾನಸಿಕವಾಗಿ ಸಿದ್ಧರಾಗಿರಲಿಲ್ಲ. ಆದ ಕಾರಣ ಜ್ಞಾನೇಂದ್ರ ಅವರು ಕರಗ ಹೊತ್ತಿದ್ದಾರೆ. ಇದೇ ಕಾರಣದಿಂದಾಗಿ ದೇವಾಲಯದಿಂದ ಕರಗ ಹೊರಡುವುದು ಸಹ ತಡವಾಯಿತು.
-ಪಿ.ಆರ್‌.ರಮೇಶ್‌, ವಿಧಾನ ಪರಿಷತ್‌ ಸದಸ್ಯ

ಟಾಪ್ ನ್ಯೂಸ್

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.