ಕೆರೆ ಸ್ವಚ್ಛಗೊಳಿಸದ ಸರ್ಕಾರದ ಕ್ರಮಕ್ಕೆ ಆಕ್ರೋಶ
Team Udayavani, May 31, 2017, 12:56 PM IST
ಮಹದೇವಪುರ: ಕಲುಷಿತಗೊಂಡಿದ್ದ ಬೆಳ್ಳಂದೂರು ಕೆರೆ ಸ್ವಚ್ಛಗೊಳಿಸುವಂತೆ ಹಸಿರು ನ್ಯಾಯಾಧಿಕರಣ ಬಿಸಿ ಮುಟ್ಟಿಸಿದ ನಂತರವೂ ಕ್ರಮಕ್ಕೆ ಮುಂದಾಗದ ಸರ್ಕಾರದ ವರ್ತನೆ ಖಂಡಿಸಿ ಮಹದೇವಪುರ ಕ್ಷೇತ್ರ ಜೆಡಿಎಸ್ ಕಾರ್ಯಕರ್ತರು ಮಂಗಳವಾರ ಪ್ರತಿಭಟಿಸಿದರು.
ಪ್ರತಿಭಟನೆ ವೇಳೆ ಮಾತನಾಡಿದ ಮಹದೇವಪುರ ಕ್ಷೇತ್ರ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಕೆ.ಸತೀಶ್ ಕೋನದಾಸಪುರ, ಕೆರೆ ಸ್ವಚ್ಛತೆ ಬಗ್ಗೆ ಎನ್‌ಜಿಟಿ ಎಚ್ಚರಿಸಿದ ನಂತರ, ನಾಮಕಾವಸ್ತೆಗೆ ಕ್ರಮ ಕೈಗೊಂಡ ಸರ್ಕಾರ, 900 ಎಕರೆ ವಿಸ್ತೀರ್ಣದ ಕೆರೆ ಸ್ವಚ್ಛತೆಗೆ ಕೇವಲ ಎರಡು ಯಂತ್ರ ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದು, ತಿಂಗಳು ಕಳೆದರೂ ಶೇ.10ರಷ್ಟೂ ಕೆಲಸ ನಡೆದಿಲ್ಲ ಎಂದು ಆರೋಪಿಸಿದರು.
ಕೆರೆ ಸುತ್ತ ಇರುವ ಕೈಗಾರಿಕೆಗಳು ದಶಕಗಳಿಂದ ಸಂಸ್ಕರಿಸದ ರಾಸಾಯನಿಕ ತ್ಯಾಜ್ಯವನ್ನು ಕೆರೆಗೆ ಬಿಡುತ್ತಿದ್ದರೂ ಗಮನಹರಿಸದ ಅಧಿಕಾರಿಗಳು, ಹಸಿರು ನ್ಯಾಯಾಧಿಕರಣದ ಆದೇಶವನ್ನೂ ಸಮರ್ಪಕವಾಗಿ ಪಾಲಿಸುತ್ತಿಲ್ಲ. ವರ್ತೂರು ಮತ್ತು ಬೆಳ್ಳಂದೂರು ಕೆರೆಗಳಲ್ಲಿ ನೊರೆ ಹೆಚ್ಚಿ, ರಸ್ತೆಗೆ ಹಾರುತ್ತಿದ್ದು, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಆದರೂ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಲ್ಲಿ ಬಿಬಿಎಂಪಿ, ಬಿಡಿಎ, ಸರ್ಕಾರ ಸಂಪೂರ್ಣ ವಿಪಲವಾಗಿದೆ ಎಂದು ದೂರಿದರು. ಸೇವಾದಳದ ನಗರಾಧ್ಯಕ್ಷ ಮಹೇಶ್, ಉಪಾಧ್ಯಕ್ಷ ನಂಜಾರೆಡ್ಡಿ, ಎಂ.ಬಿ. ಶ್ರೀನಿವಾಸ್ ಮುಳ್ಳೂರು, ಎಂ.ಯಲ್ಲಪ್ಪ, ಗಿರೀಶ್ ಗೌಡ, ದಿನೇಶ್ ಕುಮಾರ್ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.