ಮೇಲ್ಪದರ ನೀರಿನ ಸಂರಕ್ಷಣೆ ಅಗತ್ಯ
Team Udayavani, Sep 24, 2018, 12:29 PM IST
ಬೆಂಗಳೂರು: ಭೂಮಿಯ ಮೇಲ್ಪದರದಲ್ಲಿ ಲಭ್ಯವಿರುವ ನೀರಿನ ಸಮರ್ಪಕ ನಿರ್ವಹಣೆಯಿಂದ ಅಂತರ್ಜಲ ಕಾಪಾಡಿಕೊಳ್ಳಲು ಸಾಧ್ಯ ಎಂದು ಇಸ್ರೊ ಪ್ರಾಧ್ಯಾಪಕ ಡಾ.ವೈ.ವಿ.ಎನ್. ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬೆಂಗಳೂರು ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ವಿಭಾಗ ಹಾಗೂ ಡೆಕ್ಕನ್ ಭೌಗೋಳಿಕ ಒಕ್ಕೂಟದಿಂದ ಜ್ಞಾನಭಾರತಿ ಆವರಣದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಭೂಮಿಯ ಮೇಲ್ಮೆ„ನಲ್ಲಿ ಇರುವ ನೀರಿನ ಸಂರಕ್ಷಣೆ ಅತಿ ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಅಂತರ್ಜಲ ಕುಸಿಯುತ್ತಿರುವುದು ಆತಂಕ ಹೆಚ್ಚಿಸುತ್ತಿದೆ.
ಜಲ ಸಂಪನ್ಮೂಲದ ಸಂರಕ್ಷಣೆ ಹಾಗೂ ನೈಸರ್ಗಿಕ ವಿಕೋಪ ಕಾರಣವಾಗುತ್ತಿರುವ ಜನಸಂಖ್ಯಾ ಸ್ಫೋಟ ಇತ್ಯಾದಿ ವಿಷಯಗಳ ಕುರಿತು ಮಾಹಿತಿ ನೀಡಿದರು. ಬೆಂಗಳೂರು ವಿವಿ ಕುಲಪತಿ ಪ್ರೊ.ಕೆ.ಆರ್.ವೇಣಗೋಪಾಲ್ ಮಾತನಾಡಿ, ಅರಣ್ಯನಾಶ, ಬೆಳೆನಾಶ, ನೀರು ಮತ್ತು ಇತರೆ ಹಾಗೂ ಇತರೆ ನೈಸರ್ಗಿಕ ಸಂಪನ್ಮೂಲಕ ದುರ್ಬಳಕೆ ಹೇಗಾಗುತ್ತಿದೆ ಎಂಬುದನ್ನು ಉಪಗ್ರಹಗಳು ಛಾಯಚಿತ್ರ ಸಹಿತವಾದ ಮಾಹಿತಿ ನೀಡುತ್ತಿವೆ.
ಭೂಗೋಳಶಾಸ್ತ್ರ ಇಂತಹ ಆಧುನಿಕ ತಂತ್ರಜ್ಞನ ಬಳಸಿ ಪ್ರಕೃತಿ ಸಂಪತ್ತು ಉಳಿಸಲು ಮುಂದಾಗಬೇಕು ಎಂದರು. ಭೂಗೋಳಶಾಸ್ತ್ರ ಪ್ರಾಧ್ಯಾಪಕ ಡಾ.ಅಶೋಕ್ ಡಿ.ಹಂಜಗಿ, ವಿಭಾಗದ ಮುಖ್ಯಸ್ಥ ಪ್ರೊ.ಎಸ್.ರಾಯಮಾನೆ, ಒಕ್ಕೂಟದ ಕಾರ್ಯದರ್ಶಿ ಪ್ರೊ.ಬಿ.ಸಿ.ವೈದ್ಯ, ಬೆಂವಿವಿ ಕುಲಸಚಿವ ಪ್ರೊ.ಬಿ.ಕೆ.ರವಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.