ಆಕ್ಸಿ ಬಸ್‌ಗೆ ಮುಂದೆ ಬಂದ ಮತ್ತಷ್ಟು ಸಂಸ್ಥೆಗಳು
Team Udayavani, May 15, 2021, 3:27 PM IST
ಬೆಂಗಳೂರು: ಆಕ್ಸಿ ಬಸ್‌ಗೆ ಉತ್ತಮ ಸ್ಪಂದನೆದೊರೆಯುತ್ತಿರುವ ಬೆನ್ನಲ್ಲೇ ಮತ್ತಷ್ಟು ಸ್ವಯಂಸೇವಾಸಂಸ್ಥೆಗಳು ಇದೇ ಮಾದರಿಯಲ್ಲಿ ಕೊರೊನಾಸೋಂಕಿತರಿಗೆ ಆಮ್ಲಜನಕ ಪೂರೈಸಲು ಮುಂದಾಗಿವೆ.
ಈಗಾಗಲೇ ಮೂರ್‍ನಾಲ್ಕು ಸ್ವಯಂಸೇವಾಸಂಘಟನೆಗಳು ಬೆಂಗಳೂರು ಮಹಾನಗರ ಸಾರಿಗೆಸಂಸ್ಥೆ (ಬಿಎಂಟಿಸಿ)ಯ ಬಸ್‌ಗಳಿಗೆ ಬೇಡಿಕೆ ಇಟ್ಟಿದ್ದು,ಪ್ರತಿ ಒಂದು ಸಂಸ್ಥೆ ತಲಾ ಹತ್ತು ಬಸ್‌ಗಳನ್ನು ಹೀಗೆಪರಿವರ್ತಿಸಿದರೂ ನಗರದಲ್ಲಿ ಮುಂದಿನ ದಿನಗಳಲ್ಲಿಇನ್ನೂ 30-40 ಆಕ್ಸಿ ಬಸ್‌ಗಳು ಕಾರ್ಯಾಚರಣೆ ಮಾಡಲಿವೆ.
ಉಚಿತವಾಗಿ ಆಮ್ಲಜನಕ ಪೂರೈಸಲು ಮುಂದೆಬರುವ ಸಂಸ್ಥೆಗಳಿಗೆ ಬಸ್‌ಗಳನ್ನು ನೀಡಲಾಗುವುದು.ಅಲ್ಲದೆ, ಬಿಬಿಎಂಪಿಗೆ ಇದಕ್ಕೆ ಅಗತ್ಯವಿರುವ ಅನುಮತಿಪಡೆದುಕೊಂಡು ಬರುವಂತೆ ಸೂಚಿಸಲಾಗಿದೆ.ಸೋಮವಾರ (ಮೇ 17)ದ ವೇಳೆಗೆ ಸ್ಪಷ್ಟ ಚಿತ್ರಣಸಿಗಲಿದೆ. ಅಲ್ಲಿಯವರೆಗೆ ಹೆಸರು ಬಹಿರಂಗಪಡಿಸದಿರಲು ಆಯಾ ಸಂಸ್ಥೆಗಳು ಮನವಿ ಮಾಡಿವೆಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದರು.
ಕೊರತೆ ಇರುವಲ್ಲಿ ನಿಯೋಜನೆ?: ಅಧಿಕ ಸೋಂಕುಪ್ರಕರಣಗಳು ವರದಿಯಾಗುತ್ತಿರುವ ಹಾಗೂ ಹೆಚ್ಚಾಗಿಆಮ್ಲಜನಕ ಕೊರತೆಯಿಂದ ಬಳಲುತ್ತಿರುವರೋಗಿಗಳು ಕಂಡುಬರುವ ಪ್ರದೇಶಗಳನ್ನು ಗುರುತಿಸಿ,ಆ ಭಾಗಗಳಲ್ಲಿ ಆಕ್ಸಿ ಬಸ್‌ಗಳ ನಿಯೋಜನೆಮಾಡುವುದು ಸೂಕ್ತ. ಈ ಬಗ್ಗೆಯೂ ಮುಂಬರುವಸಂಸ್ಥೆಗಳಿಗೆ ಮನವಿ ಮಾಡಲಾಗುವುದು. ಇದರಿಂದರೋಗಿಗಳಿಗೂ ಅನುಕೂಲ ಆಗಲಿದೆ ಎಂದುಅಧಿಕಾರಿಗಳು ತಿಳಿಸಿದರು.ಸೋಂಕಿತರು ಆಕ್ಸಿಜನ್‌ಗಾಗಿ ಆಸ್ಪತ್ರೆಗೆ ಬಂದಾಗ,ತಕ್ಷಣಕ್ಕೆ ಒಳಗೆ ಪ್ರವೇಶ ಸಿಗುವುದಿಲ್ಲ. ಆಗ ರೋಗಿಗಳಿಗೆತೀವ್ರ ತೊಂದರೆ ಆಗಬಹುದು.
ಇಂತಹ ಸಂದರ್ಭದಲ್ಲಿಉದ್ದೇಶಿತ ಮೊಬೈಲ್ ಆಕ್ಸಿಜನ್ ಸೌಲಭ್ಯವುಳ್ಳ ಬಸ್‌ನೆರವಿಗೆ ಬರಲಿದೆ. ಇದರಲ್ಲಿ ಸಾಮಾನ್ಯವಾಗಿ ಆಕ್ಸಿಜನ್,ಕಾನ್ಸಂಟ್ರೇಟರ್ ಮತ್ತು ಆಕ್ಸಿಜನ್ ಸಿಲಿಂಡರ್‌ಗಳು,ಸ್ಯಾನಿಟೈಸರ್, ಆಮ್ಲಜನಕ ಪ್ರಮಾಣ ಅಳೆಯುವ ಆಕ್ಸಿಮೀಟರ್, ಮಾಸ್ಕ್, ಸ್ಯಾನಿಟೈಸರ್ ಲಭ್ಯ ಇರುತ್ತದೆ.
ಟಿಟಿಎಂಸಿಗಳಲ್ಲಿ ಆಕ್ಸಿ ಸೆಂಟರ್?: ಈ ಮಧ್ಯೆಈಗಾಗಲೇ ಆಕ್ಸಿ ಬಸ್ ಪರಿಚಯಿಸಿರುವ ಫೌಂಡೇಶನ್‌ಇಂಡಿಯಾ ಸಂಸ್ಥೆಯು ನಗರದ ಎಲ್ಲ 11ಟಿಟಿಎಂಸಿಗಳಲ್ಲಿ ಆಕ್ಸಿಜನ್ ಪೂರೈಕೆ ಕೇಂದ್ರಗಳನ್ನುತೆರೆಯಲು ಮುಂದಾಗಿದ್ದು, ಇದಕ್ಕೆ ಅಗತ್ಯ ಜಾಗವನ್ನುಉಚಿತವಾಗಿ ಪೂರೈಸಲು ಬಿಎಂಟಿಸಿ ಅನುಮತಿ ನೀಡಿದೆ.
ಬಸ್‌ನಲ್ಲಿರುವ ವ್ಯವಸ್ಥೆಯೇ ಆಕ್ಸಿಜನ್ ಪೂರೈಕೆಕೇಂದ್ರದಲ್ಲಿಯೂ ಇರಲಿದೆ. ಆದರೆ, ಇದು ಇದ್ದಲ್ಲಿಗೇರೋಗಿಗಳು ಬರಬೇಕಾಗುತ್ತದೆ. ಪ್ರತಿ ರೋಗಿಯೂಸಾಮಾನ್ಯವಾಗಿ 2ರಿಂದ 4 ಗಂಟೆ ಅವಧಿಯಲ್ಲಿ ಈಸೌಲಭ್ಯದಿಂದ ಅಗತ್ಯ ಪ್ರಮಾಣದ ಆಕ್ಸಿಜನ್ ಅನ್ನುಇಲ್ಲಿ ಪಡೆಯಬಹುದು. ಆದರೆ, ಆಮ್ಲಜನಕ ಲಭ್ಯತೆಹಾಗೂ ನಮಗೆ ಬರುವ ಆರ್ಥಿಕ ನೆರವು ಆಧರಿಸಿಮುಂದಿನ ವಾರದಲ್ಲಿ ಕೈಗೆತ್ತಿಕೊಳ್ಳುವ ಚಿಂತನೆ ಇದೆಎಂದು ಫೌಂಡೇಶನ್ ಇಂಡಿಯಾ ಗೌರವ ಕಾರ್ಯದರ್ಶಿ ಆರ್. ಸಂಜಯ್ ಗುಪ್ತ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.