ಖಾಲಿ ಬಿದ್ದಿವೆ 30 ಆಕ್ಸಿಜನ್  ಬೆಡ್‌ಗಳು


Team Udayavani, May 20, 2021, 3:25 PM IST

Oxygen Bed

ಬೆಂಗಳೂರು: ಒಂದೊಂದು ಆಕ್ಸಿಜನ್‌ ಹಾಸಿಗೆಗಾಗಿ ಕೊರೊನಾ ಸೋಂಕಿತರು ಪರದಾಡುತ್ತಿದ್ದಾರೆ. ರೋಗಿಗಳನ್ನು ಆ್ಯಂಬುಲೆನ್ಸ್‌ನಲ್ಲಿ ಒಂದು ದಿಕ್ಕಿನಿಂದಮತ್ತೂಂದು ದಿಕ್ಕಿಗೆ ಅಲೆದಾಡುತ್ತಿದ್ದಾರೆ. ಆದರೆ,ನಗರದ ಹೃದಯಭಾಗದಲ್ಲಿ ಕಳೆದ  ಐದು ತಿಂಗಳಿಂದ 30ಕ್ಕೂ ಹೆಚ್ಚು ಆಕ್ಸಿಜನ್‌ ಹಾಸಿಗೆಗಳುಖಾಲಿ ಬಿದ್ದಿವೆ!

ಮಾಗಡಿ ರಸ್ತೆಯಲ್ಲಿರುವ ಕುಷ್ಠರೋಗಆಸ್ಪತ್ರೆಯಲ್ಲಿ ಆಮ್ಲಜನಕ ಸೇರಿದಂತೆ ಎಲ್ಲ ಅಗತ್ಯಸೌಲಭ್ಯಗಳನ್ನು ಒಳಗೊಂಡ 30ಕ್ಕೂ ಹೆಚ್ಚುಹಾಸಿಗೆಗಳು ಜನವರಿಯಿಂದ ಖಾಲಿ ಇವೆ. ಸರ್ಕಾರ ಇತ್ತ ತಿರುಗಿಯೂ ನೋಡಿಲ್ಲ. ವೈದ್ಯರನ್ನೂನಿಯೋಜಿಸಿಲ್ಲ. ಇದರಿಂದ ಲೆಕ್ಕಕ್ಕುಂಟು ಸೇವೆಗಿಲ್ಲ ಎನ್ನುವಂತಾಗಿದೆ. ಕ್ಸಿಜನ್‌ ಸಹಿತ ಹಾಸಿಗೆಗಳ ವಾರ್ಡ್‌ ಇದ್ದೂ ಇಲ್ಲದಂತಾಗಲು ಪ್ರಮುಖ ಕಾರಣ ಉದ್ದೇಶಿತ  ಆಸ್ಪತ್ರೆಯಲ್ಲಿನ ವೈದ್ಯರನ್ನು ಇತರೆ ಆಸ್ಪತ್ರೆಗಳಿಗೆ ನಿಯೋಜನೆ ಮಾಡಿದ್ದು, ರೋಗಿಗಳ ಚಿಕಿತ್ಸೆ ಮತ್ತು ನಿರ್ವಹಣೆ ವೈದ್ಯಕೀಯ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ಮೂಲಗಳು  ಉದಯವಾಣಿಗೆ ತಿಳಿಸಿವೆ.

ರೋಗಿಗಳ ಒತ್ತಡ ಕಡಿಮೆ ಇದೆ ಎಂಬ ನೆಪದಲ್ಲಿ ಕುಷ್ಠರೋಗ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 6 ವೈದ್ಯರು, 6 ಶುಶ್ರೂಷಕರು, ಇಬ್ಬರು ಲ್ಯಾಬ್‌ಟೆಕ್ನಿಷಿಯನ್‌ ಸೇರಿ 14 ಜನ ವೈದ್ಯಕೀಯ ಸಿಬ್ಬಂದಿಯನ್ನು ಕೆ.ಸಿ.ಜನರಲ್‌ ಆಸ್ಪತ್ರೆ ಮತ್ತು ಜಯನಗರಜನರಲ್‌ ಆಸ್ಪತ್ರೆಗೆ ನಿಯೋಜಿಸಲಾಗಿದೆ.

ಇದರಿಂದ ಸೋಂಕು ಹಾವಳಿ ಪೀಕ್‌ನಲ್ಲಿರುವಹಾಗೂ ಆಕ್ಸಿಜನ್‌ ಹಾಸಿಗೆಗಳಿಗೆ ತೀವ್ರ ಬೇಡಿಕೆ ಇರುವ ಸಂದರ್ಭದಲ್ಲೇ ವಾರ್ಡ್‌ನಲ್ಲಿ ವೈದ್ಯಕೀಯ ಸಿಬ್ಬಂದಿ ಇಲ್ಲದಂತಾಗಿದೆ. ಕೊರೊನಾ ಸೋಂಕಿನಿಂದ ದೇಹದಲ್ಲಿ ಆಮ್ಲಜನಕ ಕೊರತೆಯಿಂದ ನನ್ನ ಪತಿ ತೀವ್ರ ಒದ್ದಾಡುತ್ತಿದ್ದರು.ಆಕ್ಸಿಜನ್‌ ಬೆಡ್‌ಗಾಗಿ ಹೆಬ್ಟಾಳದ ಸುತ್ತಮುತ್ತ ಆರೆಂಟು ಆಸ್ಪತೆಗಳಿಗೆ ಅಲೆದಾಡಿದ್ದಾಯಿತು. ಕೊನೆಗೆ ವೈಟ್‌ಫೀಲ್ಡ್‌ನಲ್ಲಿ ಬೆಡ್‌ ದೊರಕಿತು. ನಿತ್ಯಸಾವಿರಾರು ರೂಪಾಯಿ ಬಿಲ್‌ ಆಗುತ್ತಿದೆ. ಒಂದುವೇಳೆ ಇಲ್ಲಿಯೇ ಕುಷ್ಠರೋಗ ಆಸ್ಪತ್ರೆಯಲ್ಲಿ ಸಿಕ್ಕಿದ್ದರೆ,ಎಷ್ಟೋ ಅನುಕೂಲ ಆಗುತ್ತಿತ್ತು ಎಂದು ಹೆಬ್ಟಾಳನಿವಾಸಿ ರಾಜೇಶ್ವರಿ ತಿಳಿಸಿದರು.

ಈ ಮಧ್ಯೆ ಆಕ್ಸಿಜನ್‌ ಹಾಸಿಗೆಗಳ ವಾರ್ಡ್‌ಸೌಲಭ್ಯದ ಸಮರ್ಪಕ ಬಳಕೆ ಆಗದಿರುವುದಕ್ಕೆಆರೋಗ್ಯ ಇಲಾಖೆಯದ್ದು ಮಾತ್ರವಲ್ಲ; ಸಾರ್ವಜನಿಕರ ತಪ್ಪುಕಲ್ಪನೆ ಕೂಡ ಕಾರಣ ಎನ್ನಲಾಗಿದೆ. ಇದಕ್ಕೂಮುನ್ನ ಕಳೆದ ಸೆಪ್ಟೆಂಬರ್‌- ಡಿಸೆಂಬರ್‌ ಅವಧಿಯಲ್ಲಿಇಲ್ಲಿನ ಆಕ್ಸಿಜನ್‌ಹಾಸಿಗೆಗಳ ವಾರ್ಡ್‌ಕಾರ್ಯನಿರ್ವಹಿಸಿದೆ. ಆಗ,ಕುಷ್ಠರೋಗ ಆಸ್ಪತ್ರೆ ಎಂಬಕಾರಣಕ್ಕೆಕೆಲ ಸೋಂಕಿತರು ಇಲ್ಲಿ ದಾಖಲಾಗಲು ಹಿಂದೇಟು ಹಾಕಿದ್ದಾರೆ.

ಇದೇ ಕಾರಣಕ್ಕೆ ಬಿಬಿಎಂಪಿ ವಾರ್‌ ರೂಂಪೋರ್ಟಲ್‌ನಲ್ಲಿ ಈ ಆಸ್ಪತ್ರೆಯನ್ನು ಮಾಗಡಿ ರಸ್ತೆಯಕೋವಿಡ್‌ ಕೇರ್‌ ಸೆಂಟರ್‌ ಎಂದು ನಮೂದಿಸಿದಉದಾಹರಣೆಯೂ ಇದೆ.ಪೋರ್ಟಲ್‌ನಲ್ಲಿ ಹಾಸಿಗೆ ಬುಕ್ಕಿಂಗ್‌ಮಾಡಿಸಿದ ರೋಗಿಗಳು ಅಥವಾ ಅವರಸಂಬಂಧಿಗಳು ಆ್ಯಂಬುಲೆನ್ಸ್‌ನಲ್ಲಿ ಕುಷ್ಠರೋಗಆಸ್ಪತ್ರೆ ಬಾಗಿಲಿಗೆ ಬರುತ್ತಿದ್ದಂತೆ, ಈ ಆಸ್ಪತ್ರೆಗೆ ದಯವಿಟ್ಟು ಬೇಡ. ಬೇರೆ ಕಡೆ ಕರೆದೊಯ್ಯಿರಿ ಎಂದು ಅಲವತ್ತುಕೊಂಡ ಉದಾಹರಣೆಗಳು ಇವೆ. ಆಗ ಆಸ್ಪತ್ರೆ ಸಿಬ್ಬಂದಿ, ಭಯಪಡುವ ಅಗತ್ಯವಿಲ್ಲ. ತಪ್ಪುಕಲ್ಪನೆ ಬದಿಗೊತ್ತಿ, ದಾಖಲಾಗಿಎಂದು ಬೇಡಿಕೊಂಡರೂ ಕೆಲವರು ವಾಪಸ್‌ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ಕಾರಣಕ್ಕೆ 2020ರ ಸೆಪ್ಟೆಂಬರ್‌- 2021ರಜನವರಿ ಮೊದಲ ವಾರದವರೆಗೆ ಈ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದುಕೊಂಡ ಸೋಂಕಿತರು ಕೇವಲ 40ಜನ. ನಂತರದಲ್ಲಿ ರೋಗಿಗಳ ಒತ್ತಡವೂ ಕಡಿಮೆಇದ್ದುದರಿಂದ ಬೇರೆಕಡೆಗೆ ಸಿಬ್ಬಂದಿಯನ್ನು ನಿಯೋಜಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

4

Karkala: ಅಸ್ವಸ್ಥಗೊಂಡು ವ್ಯಕ್ತಿ ಸಾವು

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

1-vasu

Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.