ರೂಪಾಂತರಕ್ಕೆ ನಲುಗಿದ ಪಾದರಾಯನಪುರ

1980ರ ಬಳಿಕ ಜನಸಂಖ್ಯೆಯಲ್ಲಿ ಬದಲಾವಣೆ

Team Udayavani, Apr 26, 2020, 10:36 AM IST

ರೂಪಾಂತರಕ್ಕೆ ನಲುಗಿದ ಪಾದರಾಯನಪುರ

ಬೆಂಗಳೂರು: ಕೋವಿಡ್ 19 ಸೋಂಕಿತರೊಂದಿಗೆ ಸಂಪರ್ಕವಿದ್ದ ಶಂಕಿರತನ್ನು ಕ್ವಾರೆಂಟೈನ್‌ಗೆ ಒಳಪಡಿಸುವ ಪ್ರಕ್ರಿಯೆಯಲ್ಲಿ ನಡೆದ ಸಂಘರ್ಷದಿಂದಾಗಿ ಪಾದರಾಯನಪುರ ರಾಜ್ಯ ಮಾತ್ರವಲ್ಲದೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಹಳ್ಳಿ ಸೊಗಡಿನ ಜತೆಗೆ ಸಾಂಸ್ಕೃತಿಕವಾಗಿಯೂ ಗಮನ ಸೆಳೆದಿದ್ದ ಪಾದರಾಯನಪುರ ಈಚಿನ ದಶಕಗಳಲ್ಲಿ ಸಾಕಷ್ಟು ರೂಪಾಂತರವಾಗಿದೆ.

ಜಗಜೀವನರಾಮ್‌ ನಗರಕ್ಕೆ ಹೊಂದಿಕೊಂಡಂತೆ ಪೊಲೀಸ್‌ ಠಾಣೆಯ ಸ್ವಲ್ಪ ದೂರದ ಸ್ಥಳದಿಂದ ಆರಂಭವಾಗುವ ಪಾದರಾಯನಪುರ ರೈಲ್ವೆ ಹಳಿವರೆಗೆ ಹಾಗೂ ಇನ್ನೊಂದೆಡೆ ಮೈಸೂರು ರಸ್ತೆವರೆಗೂ ವಿಸ್ತರಿಸಿದೆ. 1980ರ ದಶಕದವರೆಗೂ ಪಾದರಾಯನಪುರ ಹಳ್ಳಿ ಪ್ರದೇಶವಾಗೇ ಉಳಿದಿತ್ತು. ಸಾಕಷ್ಟು ಗೋಮಾಳ, ಹುಲ್ಲುಗಾವಲು ಇದ್ದ ಕಾರಣ ಹೈನುಗಾರಿಕೆ ಪ್ರಮುಖ ವೃತ್ತಿಯಾಗಿತ್ತು ಎಂದು ಸ್ಥಳೀಯ ಹಿರಿಯರು ನೆನಪಿಸಿಕೊಳ್ಳುತ್ತಾರೆ. ಸಂಕ್ರಾಂತಿ, ರಾಮನವಮಿ, ನವರಾತ್ರಿ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು.

ಕ್ರಮೇಣ ಹುಲ್ಲುಗಾವಲು, ಗೋಮಾಳ ಕಡಿಮೆಯಾಗುತ್ತಿದ್ದಂತೆ ಹೈನುಗಾರಿಕೆಯೂ ತಗ್ಗಿತು. ನಗರೀಕರಣ ಹೆಚ್ಚಾದಂತೆ ಅದನ್ನೇ ನೆಚ್ಚಿಕೊಂಡಿದ್ದ ಒಕ್ಕಲಿಗರು ಸೇರಿದಂತೆ ಇತರೆ ಸಮುದಾಯವರು ಇತರೆ ಪ್ರದೇಶಗಳತ್ತ ಮುಖ ಮಾಡಿದರು ಎಂದು ಹೇಳುತ್ತಾರೆ.

ಆಂಜನೇಯನ ಪಾದದ ಗುರುತಿನ ಐತಿಹ್ಯ: ಆಂಜನೇಯನ ಪಾದದ ಗುರುತಿನ ಕಾರಣಕ್ಕೆ ಈ ಪ್ರದೇಶಕ್ಕೆ ಪಾದರಾಯನಪುರ ಎಂಬ ಹೆಸರು ಬಂದಿತು ಎಂಬ ಮಾತಿದೆ. ಅದಕ್ಕೆ ಪುಷ್ಠಿàಕರಿಸುವಂತೆ ಪಾದದ ಗುರುತಿರುವ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೋದಂಡರಾಯ ದೇಗುಲವಿದೆ. ವರ್ಷಕ್ಕೊಮ್ಮೆ ಕಲ್ಯಾಣೋತ್ಸವ ಭರ್ಜರಿಯಾಗಿ ನಡೆಯುತ್ತಿತ್ತು. ದೇವಾಲಯದ ಸಮೀಪದಲ್ಲೇ ಕಲ್ಯಾಣೋತ್ಸವ ನಡೆಯುತ್ತಿದ್ದ ಸ್ಥಳ ಈಗಲೂ ಖಾಲಿ ಜಾಗವಾಗಿ ಉಳಿದಿರುವುದನ್ನು ಕಾಣಬಹುದು ಎನ್ನುತ್ತಾರೆ ಸ್ಥಳೀಯರಾದ ಎಂ.ಬಿ. ಆದಿನಾರಾಯಣ.

ಇನ್ನೊಂದೆಡೆ 1980ರಲ್ಲಿ ಚಾಮರಾಜಪೇಟೆ ಹಾಗೂ 1991ರಲ್ಲಿ ರಾಮನಗರದಲ್ಲಿ ನಡೆದ ಗಲಭೆಗೂ ಪಾದರಾಯನಪುರ ಜನಸಂಖ್ಯೆ ಏರುಪೇರಿಗೂ ನಂಟಿದೆ ಎಂಬ ಮಾತಿದೆ. ಜತೆಗೆ ಕೆಲ ಬೆಳವಣಿಗೆಗಳು ಆ ಪ್ರದೇಶದ ಸ್ವರೂಪವನ್ನೇ ಬದಲಿಸಿದವು ಎನ್ನಲಾಗಿದೆ. ಒಟ್ಟಾರೆ ನಾಲ್ಕೈದು ದಶಕಗಳಲ್ಲಿ ಪಾದರಾಯನಪುರದಲ್ಲಿ ನೆಲೆಸಿರುವ ಸಮುದಾಯಗಳ ಸಂಖ್ಯೆಯಲ್ಲಿ ಏರುಪೇರಾಗುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.

ನಾಲ್ಕೈದು ದಶಕದ ಹಿಂದೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಜತೆಗೆ ದಲಿತರು, ಇತರೆ ಸಮುದಾಯವರಿದ್ದರು ಎಂದು ಹಿರಿಯರು ಹೇಳುತ್ತಾರೆ. 1980ರ ದಶಕದಲ್ಲಿ ಚಾಮರಾಜಪೇಟೆ ಹಾಗೂ 1991ರಲ್ಲಿ ರಾಮನಗರದಲ್ಲಿ ನಡೆದ ಗಲಭೆ ಬಳಿಕ ಪಾದರಾಯನಪುರದ ಜನಸಂಖ್ಯೆಯಲ್ಲಿ ಏರುಪೇರಾಯಿತು. 1992ರ ಬಾಬರಿ ಮಸೀದಿ ಧ್ವಂಸ ಘಟನೆ, 1994ರಲ್ಲಿ ಉರ್ದು ವಾರ್ತೆ ಸಂಬಂಧ ಗಲಭೆಯಾಗಿತ್ತು. ಆನಂತರ ದೊಡ್ಡ ಪ್ರಮಾಣದಲ್ಲಿ ಗಲಭೆ ನಡೆದ ಉದಾಹರಣೆ ಇಲ್ಲ. ಈ ವರ್ಷಗಳಲ್ಲಿ ಒಂದಿಷ್ಟು ಬದಲಾವಣೆಯಾಗಿವೆ ಎಂದು ಹೇಳುತ್ತಾರೆ.

ಪಾದರಾಯನಪುರವನ್ನು ಹಿಂದೆ ಪಾದರಾಯನಗುಡ್ಡ ಎನ್ನಲಾಗುತ್ತಿತ್ತು. ಒಂದು ಕಲ್ಲಿನ ಮೇಲೆ ಆಂಜನೇಯನ ಪಾದದಗುರುತಿದೆ ಎಂಬುದು ನಂಬಿಕೆ. ಹಾಗಾಗಿ ಅರಳೀಕಟ್ಟೆಯಲ್ಲೇ ಸಣ್ಣ ಗುಡಿ ನಿರ್ಮಾಣವಾಗಿದೆ. ಹೀಗಾಗಿ ಪಾದರಾಯನ ಪುರ ಹೆಸರು ಬಂದಂತಿದೆ. ಆ ಪ್ರದೇಶದಲ್ಲಿ ಈಚಿನ ದಶಕಗಳಲ್ಲಿ ಹಿಂದುಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಜನಸಂಖ್ಯೆಯ ಏರುಪೇರಿನ ಅಧ್ಯಯನಕ್ಕೆ ಪಾದರಾಯನಪುರ ಒಂದು ಮಾದರಿ.  ವಾದಿರಾಜ, ಸಾಮಾಜಿಕ ಕಾರ್ಯಕರ್ತ

ಪಾದರಾಯನಪುರದ ಇತಿಹಾಸದ ಬಗ್ಗೆ ದಾಖಲೆಗಳಿಲ್ಲ. ಪಾದರಾಯನಪುರ, ಪಂತರಪಾಳ್ಯ, ದೀವಟಿಗೆ ರಾಮನಹಳ್ಳಿ ಸೇರಿದಂತೆ ಇತರೆ ಪ್ರದೇಶಗಳನ್ನು ಹಿಂದೆ ಮರಾಠ ಭಾಷಿಗರು ಖರೀದಿಸಿದ್ದರು ಎಂದು ದಾಖಲೆಯಲ್ಲಿದೆ. ಹಾಗಾಗಿ ಪಾದರಾಯನಪುರದಲ್ಲಿ ಶ್ರೀರಾಮ, ಆಂಜನೇಯಸ್ವಾಮಿಯ ಪಾದಗಳಿದ್ದ ಬಗ್ಗೆ ಮಾಹಿತಿ ಇಲ್ಲ. ದೇವರಕೊಂಡಾರೆಡ್ಡಿ, ಶಾಸನತಜ್ಞ

 

ಎಂ. ಕೀರ್ತಿಪ್ರಸಾದ್‌

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.