ಬೆಂಕಿ ರೋಗಕ್ಕೆ ಭತ್ತದ ಹೊಟ್ಟೇ ಮದ್ದು

Team Udayavani, Nov 12, 2017, 11:20 AM IST

Ban12111706M.jpg

ಬೆಂಗಳೂರು: ಭತ್ತದ ಬೆಳೆಯಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ, ಕೀಟಬಾಧೆ ಮತ್ತು ಕಾಂಡ ಕೊರೆತಕ್ಕೆ ಆಯಾ ಬೆಳೆಗಳಲ್ಲಿ ಸಿಲಿಕಾನ್‌ ಪೋಷಕಾಂಶ ಇಲ್ಲದೆ ಇರುವುದೇ ಮುಖ್ಯ ಕಾರಣ ಎನ್ನುವುದು ಇದೀಗ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ತಜ್ಞರ ತಂಡ ನಡೆಸಿರುವ ಸಂಶೋಧನೆಯಲ್ಲಿ ಬೆಳಕಿಗೆ ಬಂದಿದೆ.

ಅಲ್ಲದೆ ಭತ್ತ, ಕಬ್ಬು ಸೇರಿ ಇನ್ನಿತರ ಆಹಾರ ಧಾನ್ಯಗಳ ಕಡಿಮೆ ಇಳುವರಿಗೂ ಇದೇ ಮೂಲ ಕಾರಣ ಎಂಬ
ಅಂಶ ದೃಢಪಟ್ಟಿದೆ. 

ಅನ್ನದಾತರ ಭತ್ತದ ಬೆಳೆಗಳಲ್ಲಿ ಆಗಾಗ ಕಾಣಿಸಿಕೊಳ್ಳುವ ಬೆಂಕಿ ರೋಗ, ಕಾಂಡ ಕೊರೆತ ಮತ್ತು ಕೀಟ ಬಾಧೆ ರೋಗಗಳ ಸಂಬಂಧ ಕಳೆದ ನಾಲ್ಕೈದು ವರ್ಷಗಳಿಂದ ರೋಗಶಾಸಉಜ್ಞ ಗೋವಿಂದ ರಾಜು, ಕೀಟ ತಜ್ಞ ಎಸ್‌.ವಿ.ಪಾಟೀಲ್‌ ಮತ್ತು ಬೇಸಾಯ ತಜ್ಞ ಹನುಮಂತಪ್ಪ ಸಂಶೋಧನೆಯಲ್ಲಿ ತೊಡಗಿದ್ದರು. ಈ ತಜ್ಞರ ತಂಡ ನಡೆಸಿದ ಸಂಶೋಧನೆಯಲ್ಲಿ ಭತ್ತದ ಬೆಳೆಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ರೋಗ ಸೇರಿ ಇನ್ನಿತರ ಕೀಟಬಾಧೆಯ ಸಂಬಂಧಿತ ರೋಗಕ್ಕೆ ಆಯಾ ಬೆಳೆಗಳಲ್ಲಿ ಸಿಲಿಕಾನ್‌ ಪೋಷಕಾಂಶ ಇಲ್ಲದಿರುವುದೇ ಮೂಲ ಕಾರಣ ಎಂಬುದು ದೃಢಪಟ್ಟಿದೆ. ಪ್ರತಿ ಹೆಕ್ಟೇರ್‌ ಜಮೀನಿನಲ್ಲಿ 50 ಕ್ವಿಂಟಾಲ್‌ ಭತ್ತವನ್ನು ಬೆಳೆದಲ್ಲಿ ಸುಮಾರು 230 ರಿಂದ 470 ಕೆ.ಜಿ.ಸಿಲಿಕಾನ್‌ ಪೋಷಕಾಂಶವನ್ನು ಮಣ್ಣಿನಿಂದಲೇ ಭತ್ತದ ಬೆಳೆ ಉಪಯೋಗಿಸಿಕೊಳ್ಳುತ್ತದೆ.

ಸಿಲಿಕಾನ್‌ ಪೋಷಕಾಂಶವು ಭತ್ತ ಮತ್ತು ಕಬ್ಬು ಸೇರಿ ಇನ್ನಿತರ ಬೆಳೆಗಳಲ್ಲಿ ದ್ಯುತಿ ಸಂಶ್ಲೇಷಣೆ ಕ್ರಿಯೆ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಬಿರುಸಾದ ಮಳೆ-ಗಾಳಿಗೆ ಗಿಡಗಳು ಬಾಗುವುದನ್ನು ತಡೆಯುವಲ್ಲಿ ಸಿಲಿಕಾನ್‌ ಮಹತ್ವದ ಪಾತ್ರ
ನಿರ್ವಹಿಸಲಿದೆ. ಜಪಾನಿನಲ್ಲಿ ಬೆಳೆ ಇಳುವರಿ ಸಾಧಿಸಲು ಇದೇ ಕಾರಣವಾಗಿದೆ.

ಭತ್ತದ ಹೊಟ್ಟಿನ ಬೂದಿ ಮದ್ದು: ಭತ್ತದ ಮಿಲ್‌ಗ‌ಳು ಹೊರಹಾಕುವ ಹೊಟ್ಟಿನಲ್ಲಿ ಸಿಲಿಕಾನ್‌ ಅಂಶ ಇದ್ದು ಇದನ್ನು ಬೂದಿ ಮಾಡಿ, ಬೆಳೆಗಳಿಗೆ ಬಳಕೆ ಮಾಡಿದರೆ ಬೆಂಕಿ ರೋಗವನ್ನು ಹತೋಟಿಗೆ ತರಬಹುದು. ಹೀಗಾಗಿ ಬೆಂಕಿ ರೋಗಕ್ಕೆ ಭತ್ತದ ಬೂದಿಯೆ ಮದ್ದು. ಶಿವಮೊಗ್ಗದ ಕೃಷಿವಿದ್ಯಾಲಯ ಮತ್ತು ಕೃಷಿ ಸಂಶೋಧನಾ ಕೇಂದ್ರ, ಮಂಗಳೂರಿನ ಕಂಕನಾಡಿಯಲ್ಲಿ 2001-2002ರಲ್ಲಿ ಇದರ ಪ್ರಯೋಗ ಮಾಡಲಾಗಿದ್ದು, ಪ್ರಯೋಗ ಯಶಸ್ವಿಯಾಗಿದೆ ಎಂಬುದು ತಜ್ಞರ ಮಾತು.

ಸಿಲಿಕಾನ್‌ ಧಾತುವನ್ನು ಭತ್ತದ ಬೆಳೆಗೆ ಉಪಯೋಗಿಸುವ ಪದಟಛಿತಿ ಜಪಾನ್‌, ಥೈವಾನ್‌, ಚೀನಾ,
ಬ್ರೆಜಿಲ್‌, ಕೊರಿಯಾ, ಅಮೆರಿಕ ಮತ್ತು ಕೊಲಂಬಿಯಾದಲ್ಲಿ ಪ್ರಚಲಿತದಲ್ಲಿದೆ. ಹೀಗಾಗಿ ಈ ರಾಷ್ಟ್ರಗಳಲ್ಲಿ ರೈತರು ಹೆಚ್ಚಿನ ಇಳುವರಿ ಪಡೆಯುತ್ತಾರೆ. ನಮ್ಮ ದೇಶದ ರೈತರಿಗೆ ಸಿಲಿಕಾನ್‌ ಬಳಕೆ ಮಾಡುವ ಸಂಬಂಧ ಸೂಕ್ತ ಮಾಹಿತಿಯ ಕೊರತೆ ಇದೆ.

–  ಡಾ.ಎನ್‌.ಬಿ. ಪ್ರಕಾಶ್‌, ಬೆಂಗಳೂರು ಕೃಷಿ ವಿವಿ ಮಣ್ಣು ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕ

ಪ್ರಯೋಗ ಯಶಸ್ವಿ
2007, 2008 ಮತ್ತು 2009ರಲ್ಲಿ ಶಿವಮೊಗ್ಗ, ಭದ್ರಾವತಿ, ಮಂಗಳೂರು ಮತ್ತು ಬ್ರಹ್ಮಾವರದಲ್ಲಿ ತಜ್ಞರ ತಂಡ
ಪ್ರಯೋಗ ಮಾಡಿ ಇದರಲ್ಲಿ ಯಶಸ್ವಿಯಾಗಿತ್ತು. ಸಂಶೋಧನಾ ವರದಿ ಪ್ರಕಾರ ಕರಾವಳಿ ಮತ್ತು ಮಲೆನಾಡಿನ ಪ್ರದೇಶಗಳಲ್ಲಿ 2 ರಿಂದ 4 ಟನ್‌ಗಳಷ್ಟು ಬೂದಿಯನ್ನು ಪ್ರತಿ ಹೆಕ್ಟೇರ್‌ ಗದ್ದೆಗೆ ಬಳಸಿ ಶೇ.20 ರಿಂದ 30ರಷ್ಟು ಹೆಚ್ಚು ಇಳುವರಿ ಪಡೆದಿರುವುದು ಇದರಲ್ಲಿ ಸಾಬೀತಾಗಿದೆ.

– ದೇವೇಶ ಸೂರಗುಪ್ತ

ಟಾಪ್ ನ್ಯೂಸ್

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

“6 ತಿಂಗಳಲ್ಲಿ ಹೊಸ ತಾಲೂಕಿನಲ್ಲಿ ಪ್ರಜಾಸೌಧ ಕಟ್ಟಡ’: ಸಚಿವ ಕೃಷ್ಣ ಬೈರೇಗೌಡ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

Council Session: ಪವರ್‌ ಕಾರ್ಪೋರೇಷನ್‌ನ 260 ಕೋಟಿ ರೂ. ಅಕ್ರಮ: ನಿಲುವಳಿ ತಿರಸ್ಕಾರ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮೂಲಗೇಣಿದಾರರ ಅರ್ಜಿ ತತ್‌ಕ್ಷಣ ಇತ್ಯರ್ಥಗೊಳಿಸಲು ಐವನ್‌ ಮನವಿ

ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

Karnataka Govt.,: ಮಂಗಳೂರಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆಗೆ ಮನವಿ

BGV-CM

Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

money

Mangaluru: ಹಣ ದ್ವಿಗುಣ ಆಮಿಷ: 3.70 ಲ.ರೂ. ವಂಚನೆ

Arrest

Mangaluru: ಹೊಸ ವರ್ಷ ಪಾರ್ಟಿಗೆ ಡ್ರಗ್ಸ್‌: ಮೂವರ ಬಂಧನ

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.