ಪೈ ಇಂಟರ್‌ನ್ಯಾಷನಲ್‌ ಲಕ್ಕಿ ಡ್ರಾ: 1200 ಗ್ರಾಹಕರಿಗೆ ಉಡುಗೊರೆ


Team Udayavani, Jun 10, 2018, 8:00 AM IST

ban10061806medn.jpg

ಬೆಂಗಳೂರು: ಗೃಹೋಪಯೋಗಿ ವಸ್ತುಗಳ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಪ್ರತಿಷ್ಠಿತ ಪೈ ಇಂಟರ್‌ನ್ಯಾಷನಲ್‌ ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಕಳೆದ ಭಾನುವಾರ ಲಕ್ಕಿ ಡ್ರಾ “ಅದೃಷ್ಟ ಪರೀಕ್ಷೆ’ ಏರ್ಪಡಿಸಿತ್ತು. ಇದರಲ್ಲಿ 1,200 ಗ್ರಾಹಕರಿಗೆ ಕೊಡುಗೆ ದೊರೆಯಿತು.

ಎರಡು ಸಾವಿರ ರೂ.ಗಿಂತ ಅಧಿಕ ಮೊತ್ತದ ಖರೀದಿ ಮಾಡಿದ ಪ್ರತಿ ಗ್ರಾಹಕರಿಗೆ ಪೈ ಇಂಟರ್‌ನ್ಯಾಷನಲ್‌ ತಲಾ ಒಂದು ಕೂಪನ್‌ ಕೊಟ್ಟಿತ್ತು. ಇಂತಹ ಲಕ್ಷಾಂತರ ಮಂದಿಗಾಗಿ “ಲಕ್ಕಿ ಡ್ರಾ’ ಹಮ್ಮಿಕೊಂಡಿತ್ತು. ಆ ಅದೃಷ್ಟಶಾಲಿಗಳಿಗೆ ಕನಿಷ್ಠ 5 ಸಾವಿರದಿಂದ ಗರಿಷ್ಠ 1 ಲಕ್ಷ ರೂ.ವರೆಗೆ ನಗದು ಬಹುಮಾನ ಕೂಡ ಇಡಲಾಗಿತ್ತು.

ಜ್ಞಾನಜ್ಯೋತಿ ಸಭಾಂಗಣದಲ್ಲಿ ಲಕ್ಕಿ ಡ್ರಾ ನಡೆಯಿತು. ಕಾರ್ಯಕ್ರಮದಲ್ಲಿ ಗ್ರಾಹಕರ ಎದುರೇ ಲಕ್ಕಿ ನಂಬರ್‌ ಎತ್ತಲಾಯಿತು. 3288 ಸಂಖ್ಯೆಯ ಗ್ರಾಹಕರಿಗೆ ಒಂದು ಲಕ್ಷ ರೂ. ನಗದು ಬಹುಮಾನ ಒಲಿಯಿತು. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಎಲ್ಲ ಸೀಜನ್‌ಗಳಲ್ಲೂ ಲಕ್ಕಿ ಡ್ರಾ ಮಾಡುತ್ತಾರೆ. ಆದರೆ, ಅದರಲ್ಲಿ ಬಹುತೇಕ ಪಾರದರ್ಶಕವಾಗಿ ಇರುವುದೇ ಇಲ್ಲ. ಪೈ ಇಂಟರ್‌ನ್ಯಾಷನಲ್‌ ಅತ್ಯಂತ ಪಾರದರ್ಶಕವಾಗಿ ಇದನ್ನು ನಡೆಸಿಕೊಂಡು ಬರುತ್ತಿದೆ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸಿದರು.

“ಕಳೆದ ವರ್ಷವೂ ಗಿಫ್ಟ್ ಬಂದಿತ್ತು’
ತುಂಬಾ ಖುಷಿ ಆಗುತ್ತಿದೆ. ಕಳೆದ ಬಾರಿ ಪೈ ಇಂಟರ್‌ನ್ಯಾಷನಲ್‌ನಲ್ಲಿ ರೆಫ್ರಿಜರೇಟರ್‌ ಖರೀದಿಸಿದ್ದೆವು. ಆಗ ಸಾವಿರ ರೂ. ಗಿಫ್ಟ್ ಬಂದಿತ್ತು. ಈ ಬಾರಿ ಕೂಡ ಆಕರ್ಷಕ ಕೊಡುಗೆ ಬಂದಿದೆ. ಯಾವುದೇ ಮೋಸ-ವಂಚನೆ ಇಲ್ಲದೆ, ಲಕ್ಕಿ ಡ್ರಾ ನಡೆಸಿಕೊಂಡು ಬರಲಾಗುತ್ತಿದೆ. ಇದರ ಜತೆಗೆ ಮತ್ತಿತರ ಸಮಾಜ ಸೇವೆಯಲ್ಲೂ ಪೈ ಇಂಟರ್‌ನ್ಯಾಷನಲ್‌ ತೊಡಗಿಕೊಂಡಿದೆ. ಸಮಾಜದಿಂದ ಪಡೆದಿದ್ದನ್ನು ಸಮಾಜಕ್ಕೆ ಹಿಂತಿರುಗಿಸುವ ಈ ಕೆಲಸ ಶ್ಲಾಘನೀಯ ಎಂದು ಮಲ್ಲೇಶ್ವರ ನಿವಾಸಿ ವಿನಯ್‌ ತಿಳಿಸಿದರು.

ಫ‌ುಟ್‌ಪಾತ್‌ ವ್ಯಾಪಾರದ ಮೆಲುಕು…
ಈ ಸಂದರ್ಭದಲ್ಲಿ ಮಾತನಾಡಿದ ಪೈ ಇಂಟರ್‌ನ್ಯಾಷನಲ್‌ ಮಾಲೀಕ ರಾಜಕುಮಾರ್‌ ಪೈ, ನಾನು ಬಡ ಕುಟುಂಬದಿಂದ ಬಂದವನು. 8ನೇ ತರಗತಿಯಲ್ಲಿದ್ದಾಗ ಫ‌ುಟ್‌ಪಾತ್‌ನಲ್ಲಿ ತರಕಾರಿ ವ್ಯಾಪಾರ ಮಾಡಿದ್ದು, ತಾಯಿ ಮತ್ತು ಅಕ್ಕ ಕೆಲಸಕ್ಕಾಗಿ ಅಲೆದಾಡಿದ್ದು ನನಗೆ ಈಗಲೂ ನೆನಪಿದೆ. ಕಷ್ಟಪಟ್ಟು ದುಡಿದಿದ್ದಕ್ಕೆ ಇಂದು ನೂರು ಷೋರೂಂ ತೆರೆದಿದ್ದೇನೆ ಹಾಗೂ ನಾಲ್ಕು ಸಾವಿರ ಜನರಿಗೆ ಕೆಲಸ ನೀಡಲು ಸಾಧ್ಯವಾಗಿದೆ. ನಾನು ಪಡೆದಿದ್ದರಲ್ಲಿ ಸಾಧ್ಯವಾದಷ್ಟು ಸಮಾಜ ಸೇವೆಗೆ ವಿವಿಧ ರೂಪದಲ್ಲಿ ಮೀಸಲಿಡುತ್ತಿದ್ದೇನೆ ಎಂದು ಹೇಳಿದರು.

ಗ್ರಾಹಕರ ಖಾತೆಗೇ ಜಮಾ
ಪೈ ಇಂಟರ್‌ನ್ಯಾಷನಲ್‌ನಲ್ಲಿ ಗೆದ್ದ ಬಹುಮಾನದ ಮೊತ್ತ ಮುಂದಿನ ದಿನಗಳಲ್ಲಿ ಗ್ರಾಹಕರ ಖಾತೆಗೇ ಜಮಾ ಆಗಲಿದೆ ಎಂದು ರಾಜಕುಮಾರ್‌ ಪೈ ತಿಳಿಸಿದರು. ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಣ್ಣ-ಪುಟ್ಟ ಬಹುಮಾನಗಳು ಬಂದಾಗ, ಇನ್ಮುಂದೆ ಆ ಕೂಪನ್‌ ಹಿಡಿದುಕೊಂಡು ಗ್ರಾಹಕರು ಷೋರೂಂವರೆಗೆ ಬರುವ ಅವಶ್ಯಕತೆ ಇಲ್ಲ. ಆ ಬಹುಮಾನದ ಮೊತ್ತವನ್ನು ಗ್ರಾಹಕರ ಖಾತೆಗೇ ಜಮೆ ಮಾಡಲಾಗುವುದು ಎಂದು ಹೇಳಿದರು. ಅಷ್ಟೇ ಅಲ್ಲ, ಅತಿ ಹೆಚ್ಚು ಗ್ರಾಹಕರಿಗೆ ಬಹುಮಾನವನ್ನು ತಲುಪಿಸುವ ಪೈ ಇಂಟರ್‌ನ್ಯಾಷನಲ್‌ ಸಂಸ್ಥೆಯಲ್ಲಿ ಉದ್ಯೋಗಿಗೂ ಆಕರ್ಷಕ ಬಹುಮಾನ ನೀಡಲಾಗುವುದು. ಪ್ರಸ್ತುತ ನೂರು ಷೋರೂಂಗಳಿದ್ದು, ನಾಲ್ಕು ಸಾವಿರ ಜನ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಷೋರೂಂ ಸಂಖ್ಯೆಯನ್ನು ಸಾವಿರಕ್ಕೆ ಹೆಚ್ಚಿಸುವುದು ನಮ್ಮ ಗುರಿ ಎಂದು ಇದೇ ವೇಳೆ ಪೈ ತಿಳಿಸಿದರು.

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

sirsi

Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

JPC misused for drama in by-election: HK Patil

Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

Hubli: ಜೆಪಿಸಿ ಬಗ್ಗೆ ಆರೋಪ ಮಾಡುವವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ: ಬೊಮ್ಮಾಯಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.