ಪಾಕ್‌ನಿಂದ ಆರ್ಥಿಕ ಉಗ್ರವಾದಕ್ಕೆ ಯತ್ನ

Team Udayavani, Sep 23, 2018, 6:00 AM IST

pak-note.jpg

ಬೆಂಗಳೂರು: ಭಾರತದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಸಂಚು ರೂಪಿಸುವ ಪಾಕ್‌ ಉಗ್ರ ಸಂಘಟನೆಗಳು ಮುದ್ರಿಸುವ ಭಾರೀ ಪ್ರಮಾಣದ ಖೋಟಾನೋಟುಗಳು ಬೆಂಗಳೂರು ಸೇರಿದಂತೆ ರಾಜ್ಯಕ್ಕೆ ಬರುತ್ತಿರುವುದು ಬಹುತೇಕ ಖಚಿತವಾಗಿದೆ.

ಮಾರ್ಚ್‌ ತಿಂಗಳಲ್ಲಿ ಚಿಕ್ಕೋಡಿಯಲ್ಲಿ  ಮತ್ತು  ಆಗಸ್ಟ್‌ ತಿಂಗಳಲ್ಲಿ ಬೆಂಗಳೂರು ಗ್ರಾಮಾಂತರದಲ್ಲಿ ಪತ್ತೆಯಾದ ಎರಡು ಪ್ರತ್ಯೇಕ ಖೋಟಾ ನೋಟು ಜಾಲ ಪ್ರಕರಣಗಳ ಆರೋಪಿಗಳನ್ನು ರಾಷ್ಟ್ರೀಯ ತನಿಖಾದಳ (ಎನ್‌ಐಎ) ತೀವ್ರ ವಿಚಾರಣೆಗೆ ಒಳಪಡಿಸಿದ್ದು, ತನಿಖೆಯಲ್ಲಿ  ಪಾಕಿಸ್ತಾನದಿಂದ ಖೋಟಾನೋಟುಗಳು ಬೆಂಗಳೂರಿಗೆ ಸರಬರಾಜಾಗುತ್ತಿರುವುದು ಪತ್ತೆಯಾಗಿದೆ. ಬಾಂಗ್ಲಾ ಮಾತ್ರವಲ್ಲದೆ ಗುಜರಾತ್‌, ಕೇರಳ, ಮಂಗಳೂರು ಮೂಲಕವೂ ಖೋಟಾನೋಟುಗಳ ಚಲಾವಣೆ ನಡೆಸುತ್ತಿರುವುದು ತನಿಖೆಯಲ್ಲಿ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.

ಭಾರತದ ಮೇಲೆ ಆರ್ಥಿಕ ಭಯೋತ್ಪಾದನೆ ನಡೆಸುವ ಸಲುವಾಗಿಯೇ ಪಾಕ್‌ ಉಗ್ರ ಸಂಘಟನೆಗಳು ಈ ಕೃತ್ಯ ನಡೆಸುತ್ತಿದ್ದು, ಬಾಂಗ್ಲಾ ಗಡಿಯನ್ನು ಭಾರತಕ್ಕೆ ಖೋಟಾನೋಟು ಸರಬರಾಜು ಮಾರ್ಗವನ್ನಾಗಿ ಮಾಡಿಕೊಂಡಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಚಿಕ್ಕೋಡಿ ಹಾಗೂ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಜಪ್ತಿಪಡಿಸಿಕೊಂಡಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ರಾಜ್ಯಕ್ಕೆ ಬರುವ ಖೋಟಾನೋಟಿನ ಮೂಲ ಪಾಕಿಸ್ತಾನದ್ದೇ ಎಂದು ಪ್ರಬಲವಾಗಿ ಶಂಕಿಸಿದ್ದಾರೆ.  ಈ ನಿಟ್ಟಿನಲ್ಲಿ ತನಿಖೆಯನ್ನು ಹಲವು ಆಯಾಮಗಳಲ್ಲಿ ನಡೆಸುತ್ತಿದ್ದಾರೆ.

ಕೇಂದ್ರ ಗೃಹ ಇಲಾಖೆ ಅನ್ವಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದನಾಯಕನಹಳ್ಳಿಯಲ್ಲಿ ಮೂವರು ಆರೋಪಿಗಳು, ಬೆಂಗಳೂರಿನ ಶ್ರೀರಾಮಪುರದಲ್ಲಿ  ಓರ್ವ ಮಹಿಳೆಯನ್ನು ಮುಂಬೈ ಎನ್‌ಐಎ ಪೊಲೀಸರು ಬಂಧಿಸಿದ ಪ್ರಕರಣದ ತನಿಖೆಯನ್ನು ಹೈದ್ರಾಬಾದ್‌ ಎನ್‌ಐಎ ವಿಭಾಗದ ಬೆಂಗಳೂರು ಘಟಕದ ಅಧಿಕಾರಿಗಳಿಂದ ತನಿಖೆ ನಡೆಸಲಾಗುತ್ತಿದೆ. ಆರ್ಥಿಕ ಭಯೋತ್ಪಾದನೆ ವ್ಯಾಪ್ತಿಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದಲ್ಲಿ ಸಕ್ರಿಯಗೊಂಡಿರುವ ಜಾಲವನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ  ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ತನಿಖಾ ಅಂಶಗಳು:
ಪಾಕ್‌ನಲ್ಲಿ ಮುದ್ರಿತಗೊಂಡ ಖೋಟಾನೋಟುಗಳು ನೇಪಾಳದ ಮಾರ್ಗದಲ್ಲಿ ಬಾಂಗ್ಲಾ ತಲುಪುತ್ತವೆ. ಬಳಿಕ ಅಲ್ಲಿಂದ ನೇರವಾಗಿ ಗಡಿಯ ಮೂಲಕ ಪಶ್ಚಿಮ ಬಂಗಾಳಕ್ಕೆ ಸರಬರಾಜಾಗುತ್ತವೆ. ಕೊಲ್ಕತ್ತಾ, ಮಾಲ್ಡಾ ಜಿಲ್ಲೆಯ ಏಜೆಂಟರ ಮುಖೇನ ಮಹಾರಾಷ್ಟ್ರದಿಂದ  ಬೆಂಗಳೂರು ಸೇರಿ ರಾಜ್ಯಕ್ಕೆ ಬರುತ್ತವೆ.

ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಪ್ರಮುಖ ನ ಗರಗಳಲ್ಲಿ ರಾಜ್ಯಕ್ಕೆ ಬರುವ ಭಾರೀ ಪ್ರಮಾಣದ ಖೋಟಾನೋಟುಗಳನ್ನು ಚಲಾವಣೆ ಮಾಡಲು ತಂಡಗಳು ಹುಟ್ಟಿಕೊಂಡಿವೆ. ಪ್ರತಿ ತಂಡಕ್ಕೆ  ಪಶ್ಚಿಮ ಬಂಗಾಳ ಮೂಲದ ಓರ್ವ ವ್ಯಕ್ತಿ ಉಸ್ತುವಾರಿ ಮಾಡುತ್ತಾನೆ. ಆತನ ಸೂಚನೆ ಮೇರೆಗೆ ಸ್ಥಳೀಯ ಕೆಲವರು ಕಮಿಷನ್‌ ಆಸೆಗೆ ಈ ಜಾಲದಲ್ಲಿ ಸಕ್ರಿಯರಾಗಿದ್ದಾರೆ.

ಉಗ್ರ ಸಂಘಟನೆಗಳು ಸೇರಿ ಹಲವು ವಿಧ್ವಂಸಕ ಸಂಸ್ಥೆಗಳು ಭಾರತದ ಆರ್ಥಿಕ ವ್ಯವಸ್ಥೆಯ ಮೇಲೆ ಕಣ್ಣಿಟ್ಟಿದ್ದು ಮೊದಲಿನಿಂದಲೂ ಖೋಟಾನೋಟುಗಳನ್ನು ದೇಶಕ್ಕೆ ಸರಬರಾಜು ಮಾಡುತ್ತಿದ್ದು,ನೋಟು ಅಮಾನ್ಯಿàಕರಣ ಬಳಿಕವೂ ಈ  ಸರಬರಾಜು ಮುಂದುವರಿಸಿದೆ ಎಂದು ತಿಳಿದುಬಂದಿದೆ.

ಎಟಿಎಂ ಹಣ ವರ್ಗಾವಣೆ ಸಾಕ್ಷ್ಯ!
ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇದುವರೆಗೂ ಮಹಿಳೆ ಸೇರಿ ಏಳು ಮಂದಿ ಆರೋಪಿಗಳನ್ನು ಎನ್‌ಐಎ ಬಂಧಿಸಿದೆ. ಆರೋಪಿಗಳ ಬಂಧನದ ವೇಳೆ ಡೈರಿ ಹಾಗೂ ಪಶ್ಚಿಮ ಬಂಗಾಳದಲ್ಲಿರುವ ದಂಧೆಯ ಕಿಂಗ್‌ಪಿನ್‌ಗಳಿಗೆ ಎಟಿಎಂ ಮೂಲಕ ಹಣ ವರ್ಗಾವಣೆ ಮಾಡಿರುವ ರಸೀದಿಗಳು ಲಭ್ಯವಾಗಿವೆ. ಅವುಗಳ ಪರಿಶೀಲನೆ ವೇಳೆ ಆರೋಪಿಗಳು ನಿರಂತರವಾಗಿ ಈ ಜಾಲದಲ್ಲಿ ಸಕ್ರಿಯರಾಗಿದ್ದರು ಎಂದು ಗೊತ್ತಾಗಿದೆ.

ಕಳೆದ ತಿಂಗಳು ಬಂಧನಕ್ಕೊಳಗಾಗಿರುವ ಪಶ್ಚಿಮ ಬಂಗಾಳ ಮೂಲದ ಮೊಹಮದ್‌ ಸಾಜೀದ್‌ ಅಲಿ, ಬಾಗಲಕೋಟೆಯ ಗಂಗಾಧರ, ಎಂ.ಜೆ ರಾಜು ಪೊಲೀಸರಿಗೆ ಸಿಕ್ಕಿಹಾಕಿಕೊಲುÛವ ಉದ್ದೇಶದಿಂದ ಆಗಾಗ್ಗೆ ತಾವಿದ್ದ ಸ್ಥಳಗಳನ್ನು ಬದಲಾಯಿಸುತ್ತಿದ್ದರು. ರಾಜ್ಯದ ಜಾಲಕ್ಕೆ ಗಂಗಾಧರ ಕೋಲ್ಕರ ಹಾಗೂ ರಾಜೇಂದ್ರ ಕುಂಬಾರ್‌ ಪ್ರಮುಖ ಕಿಂಗ್‌ಪಿನ್‌ಗಳು ಆಗಿರಬಹುದು ಎಂದು ಎನ್‌ಐಎ ಅಧಿಕಾರಿಗಳು ಶಂಕಿಸಿದ್ದಾರೆ.

ಪ.ಬಂಗಾಳ ಮಾಲ್ಡಾ ಜಿಲ್ಲೆಯೇ ಸರಬರಾಜು ಕೇಂದ್ರ ಸ್ಥಾನ
ಮತ್ತೂಂದೆಡೆ ಬಾಂಗ್ಲಾ ಗಡಿಯ ಮೂಲಕ ಪಶ್ಚಿಮ ಬಂಗಾಳದ ಕೊಲ್ಕತ್ತಾ, ಮಾಲ್ಡಾ ಜಿಲ್ಲೆಗೆ ಹರಿದು ಬರುವ ಕೋಟ್ಯಾಂತರ ರೂ. ಖೋಟಾನೋಟುಗಳನ್ನು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಸೇರಿ ಇತರೆ ರಾಜ್ಯಗಳಿಗೆ ಅಲ್ಲಿಂದಲೇ ರವಾನೆಯಾಗುತ್ತಿವೆ. ರಾಜ್ಯದ  ಜಾಲಕ್ಕೆ ಕೊಲ್ಕತ್ತಾದ ಶಹನೋಯಾಜ್‌ ಕಸೂರಿ ಸೂತ್ರಧಾರ , ಆತ ಜೈಲು ಸೇರಿದ ಬಳಿಕ ನೈಫ‌ುಲ್ಲಾ ಇಸ್ಲಾಂ , ಇನ್ನಿತರೆ ಆರೋಪಿಗಳು  ಸರಬರಾಜು ದಂಧೆ ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದುವರೆಗೂ ಬಂಧಿತರಾಗಿರುವ ಆರೋಪಿಗಳು!
ಮಾರ್ಚ್‌ 12ರ ಚಿಕ್ಕೋಡಿ ಪ್ರಕರಣದಲ್ಲಿ  ದಲೀಮ್‌ ಮಿಯಾ, ರಾಜೇಂದ್ರ ಕುಂಬಾರ್‌, ರಾಜೇಂದ್ರ ಪಾಟೀಲ್‌ ಬಂಧನವಾಗಿದ್ದು ಅವರಿಂದ  ಎರಡು ಸಾವಿರ  ರೂ. ಮುಖಬೆಲೆಯ 82 ಸಾವಿರ ರೂ. ಜಪ್ತಿಯಾಗಿದೆ.

ಆಗಸ್ಟ್‌ 7ರಂದು ಮಾದನಾಯಕನಹಳ್ಳಿಯ ಆಲೂರು ಸಮೀಪ ಗಂಗಾಧರ ಕೋಲ್ಕರ, ಮೊಹಮದ್‌ ಸಾಜೀದ್‌ ಅಲಿ ಹಾಗೂ ಎಂ.ಜಿ ರಾಜು ಎಂಬಾತನ್ನು ಬಂಧಿಸಿ ಎರಡು ಸಾವಿರ ರೂ. ಮುಖಬೆಲೆಯ 4.34ಲಕ್ಷ ರೂ ವಶಪಡಿಸಿಕೊಂಡಿದ್ದರು, ಅದೇ ದಿನ ಶ್ರೀರಾಂಪುರದಲ್ಲಿ ವನಿತಾ ಅಲಿಯಾಸ್‌ ತಂಗಂ ಎಂಬಾಕೆಯನ್ನು ಬಂಧಿಸಿ 2.50 ಲಕ್ಷ ರೂ. ನಕಲಿ ನೋಟು ವಶಪಡಿಸಿಕೊಂಡಿದ್ದರು.

– ಮಂಜುನಾಥ್‌ ಲಘುಮೇನಹಳ್ಳಿ
 
ಟಾಪ್ ನ್ಯೂಸ್

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

14-bbk

Bigg Boss ಶೋ ಸ್ಥಗಿತಗೊಳಿಸಿ: ಬೆಂಗಳೂರು ಜಿಪಂ ಸಿಇಒ ಸೂಚನೆ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಕಂಬಳದಲ್ಲಿ ನಿಯಮಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ..? ಸಮಸ್ಯೆ ನೂರು- ಪರಿಹಾರ ಕೊಡುವವರು ಯಾರು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು

ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ

Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

Mangaluru: ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

CT Ravi attacks the state government

Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Viral: ಇದು ಇರುವೆಗಳ ಎಂಜಿನಿಯರಿಂಗ್‌ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ

Indian Cricket: Former RCB player said goodbye to cricket life

Indian Cricket: ಕ್ರಿಕೆಟ್‌ ಜೀವನಕ್ಕೆ ಗುಡ್‌ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ

17-uv-fusion

Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.