ಗಡಿಯಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ
Team Udayavani, Feb 12, 2018, 6:00 AM IST
ಬೆಂಗಳೂರು: ಇಂಡೋ-ಪಾಕ್ ಗಡಿರೇಖೆಯಲ್ಲಿ ಪಾಕ್ ಪ್ರಚೋದಿತ ಭಯೋತ್ಪಾದನೆ ಹೆಚ್ಚಾಗಿದು,ಇದರ ವಿರುದಟಛಿ ಸಂಘಟಿತ ಹೋರಾಟ ಅಗತ್ಯ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ಗುರೂಜಿ ಎಂ.ಎಸ್.ಗೋಳ್ವಾಲ್ಕರ್ ಅವರ 112ನೇ ದಿನಾಚರಣೆಯ ಅಂಗವಾಗಿ ಮಂಥನ ಬೆಂಗಳೂರು ಸಂಸ್ಥೆಯು ಜೆ.ಪಿ.ನಗರದ ಆರ್‌ವಿ ಡೆಂಟಲ್ ಕಾಲೇಜು ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ “ಸಮಗ್ರತೆ ಚಿಂತನೆ’ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಭಯೋ ತ್ಪಾದನೆಯನ್ನು ಸಹಿಸುವುದಿಲ್ಲ. ಉಗ್ರವಾ ದದ ವಿರುದಟಛಿ ಪ್ರಧಾನಿ ಮೋದಿ ಈಗಾಗಲೇ ವಿಶ್ವಮಟ್ಟ ದಲ್ಲಿ ದನಿ ಎತ್ತಿದ್ದಾರೆ. ಉಗ್ರರಿಗೆ ಭಾರತೀಯ ಸೇನೆ ಪ್ರತ್ಯುತ್ತರ ನೀಡುತ್ತಲೇ ಇದೆ. ಆದರೂ ಪಾಠ ಕಲಿಯದ ಪಾಕಿಸ್ತಾನ ಇಂಡೋ-ಪಾಕ್ ಗಡಿಯಲ್ಲಿ ಭಯೋತ್ಪಾದನೆಗೆ ನೀರೆರೆಯುತ್ತಿದೆ. ಇದಕ್ಕೆ ಬಗ್ಗುವುದಿಲ್ಲ. ಇಡೀ ಭಾರತೀಯರು ಕಾಶ್ಮೀರ ಜನತೆಯೊಂದಿಗೆ ಇದ್ದಾರೆ ಎಂಬುದನ್ನು ಪಾಕ್ ಮರೆಯ ಬಾರದು ಎಂದ ಅವರು, ಜಮ್ಮು-ಕಾಶ್ಮೀರ ವಿಧಾನ ಸಭೆಯಲ್ಲಿ ಪಾಕ್ ಪರ ಘೋಷಣೆ ಕೂಗಿರುವ ಮೊಹಮ್ಮದ್ ಅಕºರ್ ಲೋನ್ ಅವರ ವರ್ತನೆಯನ್ನು ಇದೇ ವೇಳೆ ಖಂಡಿಸಿದರು.
ರೋಹಿಂಗ್ಯಾ ವಲಸೆ ಪ್ರಕರಣವನ್ನು ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರ ಅಕ್ರಮ ವಲಸೆಯನ್ನು ಒಪ್ಪಿಕೊಳ್ಳುವುದಿಲ್ಲ. ಮಾನವೀಯತೆಯ ದೃಷ್ಟಿಯಿಂ ದ ರೋಹಿಂಗ್ಯಾಗಳನ್ನು ನೋಡಿಕೊಳ್ಳಲಾಗಿದೆ. ಅಕ್ರಮವಾಗಿ ಭಾರತವನ್ನು ಪ್ರವೇಶಿಸುವವರ ವಿರುದಟಛಿ ಕೇಂದ್ರ ಸರ್ಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದರು.
ಸ್ವದೇಶಿ ವಸ್ತುಗಳ ವ್ಯಾಮೋಹ ನಮ್ಮಲ್ಲಿ ಬೆಳೆ ಯಬೇಕು. ನಮ್ಮೂರಿನ ಪದಾರ್ಥಗಳ ಬಗ್ಗೆ ನಾವೇ ಪ್ರಚಾರ ಮಾಡಬೇಕು. ಈ ನಿಟ್ಟಿನಲ್ಲಿ ಬಾಬಾ ರಾಮ್ ದೇವ್ ಅವರ ಕಾರ್ಯ ಶ್ಲಾಘನೀಯ. ಪತಂಜಲಿ ಉತ್ಪನ್ನಗಳ ಮೂಲಕ ಅವರು ಮನೆ ಮಾತಾಗಿದ್ದಾರೆ ಎಂದರು.
ಗೋಳ್ವಾಲ್ಕರ್ ಗುಣಗಾನ: ಆರ್‌ಎಸ್‌ಎಸ್ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿರುವ ಗೋಳ್ವಾಲ್ಕರ್ ಅವರ ಸಾಧನೆಯ ಗುಣಗಾನ ಮಾಡಿದ ರಾಮ್ ಮಾಧವ್, ಗಾಂಧೀಜಿ ಅವರ ಹತ್ಯೆಯ ವೇಳೆ ಆರ್‌ಎಸ್‌ಎಸ್ ಅನ್ನು ನಿಷೇಧಿಸಬೇಕು ಎಂಬ ಒತ್ತಾಯವಿತ್ತು. ಇದರ ವಿರುದಟಛಿ ಗೋಳ್ವಾಲ್ಕರ್ ದನಿ ಎತ್ತಿದರು. ಆರ್‌ಎಸ್ ಎಸ್ ಶಾಖೆಗಳ ಬೆಳವಣಿಗೆಗೆ ಇವರ ಕೊಡುಗೆ ಅಪಾರ ಎಂದು ಬಣ್ಣಿಸಿದರು.
ಈ ಹಿಂದೆ ಉತ್ತರ ಪ್ರದೇಶದಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮುಲಾಯಂಸಿಂಗ್ ಯಾದವ್, ಆರ್‌ಎಸ್‌ಎಸ್‌ನವರು ಹಿಂದೂಗಳು ಅಲ್ಲ. ನಾವೇ ನಿಜವಾದ ಹಿಂದೂ ಎಂದಿದ್ದರು. ಇದೆಲ್ಲವೂ ಚುನಾವಣಾ ಗಿಮಿಕ್. ಆರ್‌ಎಸ್‌ಎಸ್ ಒಂದು ಧರ್ಮ, ಒಂದು ಜಾತಿಗೆ ಸಿಮೀತವಾಗಿಲ್ಲ. ಎಲ್ಲಾ ಧರ್ಮೀಯರನ್ನು ಒಳಗೊಂಡಿದೆ ಎಂದರು.
ರಾಹುಲ್ ಆರೋಪಗಳಿಗೆ
ಉತ್ತರ ನೀಡುವುದಿಲ್ಲ
ಜೈಲಿಗೆ ಹೋಗಿ ಬಂದವರು ಇದೀಗ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ ಎಂಬ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್
ಗಾಂಧಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ರಾಮ್ ಮಾಧವ್, ರಾಹುಲ್ ಗಾಂಧಿ ಮಾತುಗಳಿಗೆ ತಿರುಗೇಟು
ನೀಡುವ ಶಕ್ತಿ ರಾಜ್ಯ ಬಿಜೆಪಿ ಮುಖಂಡರಿಗೆ ಇದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Amit Shah ಹೇಳಿಕೆ ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ: ಬಿ.ಕೆ. ಹರಿಪ್ರಸಾದ್
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ambedkar Row: ಕಾಂಗ್ರೆಸ್ ಎಂದರೆ ಫೇಕ್ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ
Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!
ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ
Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು
Champions Trophy, ಭಾರತ ಪ್ರವಾಸಕ್ಕೆ ಇಂಗ್ಲೆಂಡ್ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.