ಶ್ರೀರಾಮನವಮಿ ಪ್ರಯುಕ್ತ ಪಲ್ಲಕ್ಕಿ ಉತ್ಸವ
Team Udayavani, Apr 22, 2019, 3:00 AM IST
ಮಹದೇವಪುರ: ಸಮೀಪದ ಗರುಡಾಚಾರ್‌ಪಾಳ್ಯದಲ್ಲಿ ಶ್ರೀರಾಮ ನವಮಿ ಪ್ರಯುಕ್ತ 25 ದೇವರುಗಳ ಪಲ್ಲಕ್ಕಿ ಉತ್ಸವ ವೈಭವದಿಂದ ನೆರವೇರಿತು.
ವಿನಾಯಕ, ಮಂಜುನಾಥ ಸ್ವಾಮಿ, ಆಂಜನೇಯ ಸ್ವಾಮಿ, ರಾಧಾ, ರುಕ್ಮಿಣಿ, ಶ್ರೀಕೃಷ್ಣ, ಮಹೇಶ್ವರಮ್ಮ, ಸಫಲಮ್ಮದೇವಿ, ಸತ್ಯನಾರಾಯ ಸ್ವಾಮಿ, ರಾಘವೇಂದ್ರ ಸ್ವಾಮಿ, ಗಟ್ಟಿಗಣಪತಿ, ವೆಂಕಟರಮಣ ಸ್ವಾಮಿ, ಶಿರಡಿ ಸಾಯಿಬಾಬಾ, ಭಕ್ತ ಕನಕದಾಸ, ರಾಮದೇವರು, ಅಯ್ಯಪ್ಪ ಸ್ವಾಮಿ, ಕಾವೇರಮ್ಮ ಸೇರಿದಂತೆ 25 ದೇವರಗಳ ಪಲ್ಲಕಕಿಗೆ ನಾನಾ ಬಗೆಯ ಹೂವು ಮತ್ತು ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗ್ರಾಮದ ಪ್ರಮುಖ ಭೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಸಾಗಿತು.
ಈ ವೇಳೆ ತುಮಕೂರಿನ ಶ್ರೀ ಕರಿಬಸವೇಶ್ವರ ಮಠದಿಂದ ಕರೆಸಲಾಗಿದ್ದ ಆನೆಯ ಮೇಲಿನ ಅಂಬಾರಿಯಲ್ಲಿ ಶ್ರೀ ಮಂಜುನಾಥ ಸ್ವಾಮಿಯ ಮೂರ್ತಿ ಇರಿಸಿ ಮೆರವಣಿಗೆ ಮಾಡಲಾಯಿತು. ಕೀಲುಕುದುರೆ, ಗಾರುಡಿ ಗೊಂಬೆ ಕುಣಿತ, ವೀರಗಾಸೆ, ತಮಟೆ ವಾದ್ಯ, ನಾದಸ್ವರ, ನಾಯಂಡಿ ನೃತ್ಯ, ಮರಗಾಲು ಮನುಷ್ಯ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದವು.
ಹುಲಿ ಕುಣಿತ ಹಾಕಿದ ಸಚಿವ ನಾಗರಾಜ್: ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದ ವಸತಿ ಸಚಿವ ಎಂ.ಟಿ.ಬಿ. ನಾಗರಾಜ್, ಉತ್ಸವ ಮೂರ್ತಿಗಳ ಎದುರಿದ್ದ ತಮಟೆ ವಾದ್ಯ ತಂಡದ ಬೀಟ್‌ಗೆ ತಕ್ಕಂತೆ ಹುಲಿ ಕುಣಿತ ಹಾಕುವ ಮೂಲಕ ನೆರೆದವರನ್ನು ರಂಜಿಸಿದರು. ಈ ಹಿಂದೆ ಲೋಕಸಭಾ ಚುನಾವಣೆ ಪ್ರಚಾರದ ವೇಳೆ ಹೋಸಕೊಟೆ ಕ್ಷೇತ್ರದಲ್ಲಿ ಸಚಿವ ನಾಗರಾಜ್ ಅವರು ನಾಗಿನಿ ನೃತ್ಯ ಮಾಡುವ ಮೂಲಕ ಗಮನಸೆಳೆದಿದ್ದರು.
ಮಹದೇವಪುರ, ಕಾವೇರಿನಗರ, ಬಿ.ನಾರಾಯಣಪುರ, ಕೆ.ಆರ್.ಪುರ, ಹೂಡಿ, ಆರ್‌ಬಿಎಚ್ ಕಾಲೋನಿ, ಲಕ್ಷ್ಮೀಸಾಗರ ಬಡವಾಣೆ, ಚಿಕ್ಕಣ ಬಡವಾಣೆ ಹಾಗೂ ಗರುಡಾಚಾರ್‌ಪಾಳ್ಯ ಸುತ್ತಮುತ್ತಲಿನ ಬಡವಾಣೆಗಳ ಸಾವಿರಾರು ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಪಾಲಿಕೆ ಸದಸ್ಯ ಬಿ.ಎನ್.ನಿತೀಶ್ ಪುರುಷೋತ್ತಮ್, ಜಿ.ಪಂ ಸದಸ್ಯ ಸಿ.ನಾಗರಾಜ್, ಮುಖಂಡರಾದ ಎ.ಯಲ್ಲಪ್ಪ, ರಾಜಶೇಖರ್, ರವಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Bengaluru; ಪಟಾಕಿ ಬಾಕ್ಸ್ ಮೇಲೆ ಕುಳ್ಳಿರಿಸಿ ಸ್ನೇಹಿತರ ಹುಚ್ಚಾಟ: ಯುವಕ ಸಾ*ವು
ತಂದೆ, ಮಗು ಸಾವು: ಬೆಸ್ಕಾಂ ಎಂಜಿನಿಯರ್ ವಿರುದ್ಧದ ಕೇಸು ರದ್ದತಿಗೆ ಹೈಕೋರ್ಟ್ ನಕಾರ
Arrested: ರಾಜಸ್ಥಾನದಿಂದ ಫ್ಲೈಟ್‌ನಲ್ಲಿ ಬಂದು ಕಾರು ಕದಿಯುತ್ತಿದ್ದವನ ಸೆರೆ; ಆರೋಪಿ ಬಂಧನ
Bengaluru: ಅತಿ ವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ: ಫುಡ್ ಡೆಲಿವರಿ ಬಾಯ್ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.