ಮಾನವ ಹಕ್ಕುಗಳ ಮೇಲೆ ಪರೇಡ್‌?

ಡಿಸಿಪಿ ಸೂಚನೆ ಮೇರೆಗೆ ರೌಡಿಯ ಮೀಸೆ ಹಿಡಿದು ಎಳೆ ತಂದ ಮಹಿಳಾ ಅಧಿಕಾರಿ!

Team Udayavani, Aug 9, 2019, 9:07 AM IST

bng-tdy-1

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಮತ್ತು ಬಕ್ರೀದ್‌ ಹಬ್ಬದ ಹಿನ್ನೆಲೆ ಹಾಗೂ ನಗರದಲ್ಲಿ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಉತ್ತರ ವಿಭಾಗದ ಪೊಲೀಸರು ಗುರುವಾರ 379 ರೌಡಿಶೀಟರ್‌ಗಳ ಪರೇಡ್‌ ನಡೆಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿ ಯಾಗದಂತೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮೀಸೆ ಬಿಟ್ಟಿರುವುದು, ಕ್ಷೌರ ಮಾಡಿಸದಿರುವುದು ಹಾಗೂ ರೌಡಿ ಶೀಟರ್‌ಗಳ ವೇಷ-ಭೂಷಣ, ವರ್ತನೆ ಬಗ್ಗೆ ಪೊಲೀಸ್‌ ಅಧಿ ಕಾರಿಗಳು ಹೀಯಾಳಿಸುವ ರೀತಿಯಲ್ಲಿ ಮಾತನಾಡಿ ದ್ದಾರೆ ಎನ್ನಲಾಗಿದ್ದು ಇದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ರೌಡಿಶೀಟರ್‌ಗಳ ಪರೇಡ್‌ ಹೆಸರಿನಲ್ಲಿ ಪೊಲೀಸರು ‘ಮಾನವ ಹಕ್ಕು ಉಲ್ಲಂಘನೆ’ ಮಾಡಿದ್ದಾರೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಅಲ್ಲದೆ, ಈ ರೀತಿಯ ಪರೇಡ್‌ಗೆ ಕೆಲ ನಿವೃತ್ತ ಪೊಲೀಸ್‌ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದು, ಪರೇಡ್‌ನ‌ಲ್ಲಿ ರೌಡಿಗಳಿಗೆ ಪರಿವರ್ತನೆ ಆಗುವಂತೆ ಎಚ್ಚರಿಕೆ ನೀಡಬೇಕೇ ಹೊರತು ಅವರನ್ನು ಪ್ರಚೋದಿಸಬಾರದು. ಇತ್ತೀಚೆಗೆ ಇದೊಂದು ‘ಶೋ ಅಪ್‌ ‘ ಕಾರ್ಯಕ್ರಮವಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಉತ್ತರ ವಿಭಾಗದ ಪೊಲೀಸರು ಬುಧವಾರ ತಡರಾತ್ರಿ ಡಿಸಿಪಿ ಎನ್‌.ಶಶಿಕುಮಾರ್‌ ನೇತೃತ್ವದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 779 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದು, ಗುರುವಾರ ಮಧ್ಯಾಹ್ನ ಮಲ್ಲೇಶ್ವರಂ ಆಟದ ಮೈದಾನದಲ್ಲಿ 379 ರೌಡಿಗಳ ಪರೇಡ್‌ ನಡೆಸಿದರು. ಈ ವೇಳೆ ಅವರ ಪೂರ್ವಪರ, ಪ್ರಸ್ತುತ ಕೆಲಸ, ಮನೆ ವಿಳಾಸ, ಸಂಬಂಧಿಕರ ವಿಳಾಸ, ಉದ್ಯೋಗ, ಮೊಬೈಲ್ ನಂಬರ್‌ ಹಾಗೂ ಇತರೆ ಮಾಹಿತಿ ಪಡೆದುಕೊಂಡರು. ಅವರ ವಿರುದ್ಧ ಇರುವ ಇತ್ತೀಚಿನ ಅಪರಾಧ ಕೃತ್ಯಗಳ ಬಗ್ಗೆಯೂ ಮಾಹಿತಿ ಪಡೆಯಲಾಯಿತು. ನಂತರ ಮತ್ತೂಮ್ಮೆ ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗದಂತೆ ಪೊಲೀಸರು ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ಉತ್ತರ ವಿಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ 93 ಕೊಲೆ ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ ಭಾಗಿಯಾಗಿದ್ದ 50 ಮಂದಿ ರೌಡಿಗಳು ಪರೇಡ್‌ನ‌ಲ್ಲಿ ಇದ್ದರು. 81 ಮಂದಿ ನ್ಯಾಯಾಂಗ ಬಂಧನದಲ್ಲಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಹಾಗೆಯೇ 313 ಕೊಲೆ ಯತ್ನ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳ 152 ಮಂದಿ ರೌಡಿಗಳು ಪರೇಡ್‌ನ‌ಲ್ಲಿದ್ದರು. ಕೊಲೆ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ 358 ಮಂದಿ ವಿರುದ್ಧ ರೌಡಿಪಟ್ಟಿ ತೆರೆಯಲಾಗಿದ್ದು, 368 ಮಂದಿ ವಿರುದ್ಧ ರೌಡಿ ಪಟ್ಟಿ ತೆರೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ಸ್ಥಳದಲ್ಲೇ ಶೇವಿಂಗ್‌, ಕಟಿಂಗ್‌: ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಪರೇಡ್‌ಗೆ ಆಗಮಿಸಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌, ರೌಡಿಗಳ ಪೂರ್ವಪರ ವಿಚಾರಣೆ ವೇಳೆ ರೌಡಿಗಳ ಹೇರ್‌ಸ್ಟೈಲ್, ಗಡ್ಡ, ಮೀಸೆ ಹಾಗೂ ಟ್ಯಾಟೂ ಕಂಡು ಆಕ್ರೋಶಕೊಂಡರು. ವಿಭಿನ್ನ ಹೇರ್‌ಸ್ಟೈಲ್ ಮಾಡಿಕೊಂಡ ರೌಡಿಗಳಿಗೆ ಸ್ಥಳದಲ್ಲೇ ಕಪಾಳಮೋಕ್ಷ ಹಾಗೂ ಲಾಠಿ ರುಚಿ ಕೂಡ ತೋರಿಸಿದರು. ನಂತರ ಕ್ಷೌರಿಕರನ್ನು ಕರೆಸಿ ಸ್ಥಳದಲ್ಲೇ ಕಟಿಂಗ್‌, ಶೇವಿಂಗ್‌ ಮಾಡಿಸಿ, ರೌಡಿಗಳಿಂದಲೇ ಹಣ ಕೊಡಿಸಿದರು. ಇನ್ನು ಟ್ಯಾಟೂ ಹಾಕಿಕೊಂಡವರಿಗೆ ಮುಂದಿನ ಪರೇಡ್‌ನ‌ಲ್ಲಿ ಈ ರೀತಿಯ ಟ್ಯಾಟೂಗಳು ಇರಬಾರದು ಎಚ್ಚರಿಕೆ ನೀಡಿದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮಾನವ ಹಕ್ಕು ಉಲ್ಲಂಘನೆ ಮಾಡುತ್ತಿದ್ದಾರಾ?: ರೌಡಿಗಳ ಪರೇಡ್‌ ಮಾಡುವ ಉದ್ದೇಶ, ಅವರನ್ನು ಮಖ್ಯವಾಹಿನಿಗೆ ತರುವುದು ಹಾಗೂ ಮತ್ತೂಮ್ಮೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಂತೆ ಎಚ್ಚರಿಕೆ ನೀಡುವುದು. ಆದರೆ, ಇತ್ತೀಚಿನ ರೌಡಿಗಳ ಪರೇಡ್‌ ಇದ್ಕಕೆ ಭಿನ್ನವಾಗಿವೆ.ಯಾಕೆಂದರೆ, ಪರೇಡ್‌ನ‌ಲ್ಲಿ ರೌಡಿಗಳ ಪೂರ್ವಾಪರ ವಿಚಾರಣೆ ಪಡೆಯುವುದರ ಜತೆಗೆ ಅವರ ಕೂದಲು, ಗಡ್ಡ, ಮೀಸೆ ಎಳೆಯುವುದು, ಟ್ಯಾಟೂ ಅಳಿಸುವುದು ಮಾಡುತ್ತಿದ್ದಾರೆ. ದೃಶ್ಯ ಮಾಧ್ಯಮಗಳಲ್ಲಿ ತಮ್ಮನ್ನು ‘ಸೂಪರ್‌ ಕಾಪ್‌’ ಎಂದು ಬಿಂಬಿಸಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಹೇಳಲಾದರೂ, ಸಾರ್ವಜನಿಕವಾಗಿ ಆತನಿಗೆ ಅವಮಾನ ಮಾಡುವ ಮೂಲಕ ಆತನನ್ನು ಪರೋಕ್ಷವಾಗಿ ಮತ್ತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಇದೊಂದು ಮಾನವ ಹಕ್ಕು ಉಲ್ಲಂಘನೆ ಎನ್ನಲಾಗಿದೆ.

ಇದು ಶೋ-ಅಫ್ ಕಾರ್ಯಕ್ರಮ: ನಿವೃತ್ತ ಅಧಿಕಾರಿಗಳ ಆಕ್ಷೇಪ

ರೌಡಿಗಳ ಪರೇಡ್‌ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ವ್ಯಕ್ತಿಗೆ ಎಚ್ಚರಿಕೆ ನೀಡುವ ಕಾರ್ಯಕ್ರಮ ಆಗಬೇಕು. ಆದರೆ, ಅಧಿಕಾರಿಯ ‘ಶೋ ಅಪ್‌’ ಕಾರ್ಯಕ್ರಮ ಆಗಬಾರದು ಎಂದು ಅಭಿಪ್ರಾಯವ್ಯಕ್ತಪಡಿಸುತ್ತಾರೆ ನಿವೃತ್ತ ಪೊಲೀಸ್‌ ಅಧಿಕಾರಿಗಳು. ‘ರೌಡಿಪರೇಡ್‌ ಎಂದರೇ ಅರ್ಥ ಆಗುವುದಿಲ್ಲ. ಯಾಕೆ ಮಾಡಬೇಕು? ಪ್ರಯೋಜನ ಏನು? ಅದು ಶೋ ಅಪ್‌?’ ಎಂದು ಪ್ರಶ್ನಿಸುತ್ತಾರೆ ಬೆಂಗಳೂರಿನ ನಿವೃತ್ತ ಪೊಲೀಸ್‌ ಆಯುಕ್ತ ಮತ್ತು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಎಸ್‌.ಮರಿಸ್ವಾಮಿ. ‘ರೌಡಿಗಳ ಪೂರ್ವಾಪರ ವಿಚಾರಣೆ ನಡೆಸಬೇಕು. ತಪ್ಪು ಮಾಡಿದಾಗ ಕಠಿಣ ಕಾನೂನು ಕ್ರಮಕೈಗೊಳ್ಳಬೇಕು. ರೌಡಿಗಳ ಮೇಲೆ ಹೆಚ್ಚು ನಿಗಾವಹಿಸಬೇಕು. ಆದರೆ, ಪರೇಡ್‌ ಮಾಡುವುದರಿಂದ ಯಾವುದೇ ಪ್ರಯೋಜನೆ ಇಲ್ಲ’ ಎಂದು ಅವರು ಅಭಿಪ್ರಾಯವ್ಯಕ್ತಪಡಿಸಿದರು. ‘ಇತ್ತೀಚೆಗೆ ರಿಯಲ್ ಪೊಲೀಸಿಂಗ್‌ ಇಲ್ಲ. ಪರೇಡ್‌ನ‌ಲ್ಲಿರುವ ರೌಡಿಯ ಮೂರರಿಂದ ಒಂದು ವರ್ಷದೊಳಗಿನ ಆತನ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಯಾರೊಂದಿಗೆ ಗುರುತಿಸಿಕೊಂಡಿದ್ದಾನೆ.
ಆತ ರೌಡಿ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡಿದ್ದಾನೆಯೇ? ಇಲ್ಲವೇ? ಎಂದು ಪರಿಶೀಲಿಸಬೇಕು. ಆತ ಅಕ್ರಮ ಚಟುವಟಿಕೆಯಿಂದ ದೂರವಾಗಿ ಹೊಸ ಬದುಕು ಕಟ್ಟಿಕೊಂಡಿದ್ದರೆ ಅದಕ್ಕೆ ಅವಕಾಶ ಕೊಡಬೇಕು. ಆದರೆ, ಈ ರೀತಿ ಕರೆತಂದು ಸಾರ್ವಜನಿಕವಾಗಿ ಅವಮಾನ ಮಾಡುವುದು ಹೇಯ ಕೃತ್ಯ.ಆತನಿಗೆ ಪ್ರಚೋದನೆ ನೀಡಿದಂತಾಗುತ್ತದೆ. ಆದರೆ, ಇತ್ತೀಚೆಗೆ ಅರ್ಥವೇ ಇಲ್ಲದಂತೆ ಪರೇಡ್‌ ಮಾಡುತ್ತಾರೆ’ ಎಂದು ಬೆಂಗಳೂರಿನ ನಿವೃತ್ತ ಪೊಲೀಸ್‌ ಆಯುಕ್ತ ಮತ್ತು ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ರೇವಣ್ಣ ಸಿದ್ದಯ್ಯ ಅಭಿಪ್ರಾಯವ್ಯಕ್ತಪಡಿಸಿದರು.
ಮಾನವ ಹಕ್ಕು ಉಲ್ಲಂಘನೆ: ರೌಡಿ ಪರೇಡ್‌ನ‌ಲ್ಲಿ ಸಾರ್ವಜನಿಕವಾಗಿ ರೌಡಿಗಳಿಗೆ ಹೊಡೆಯುವುದು, ಮೀಸೆ ಹಿಡಿದು ಎಳೆಯುವುದು ಮಾನವ ಹಕ್ಕು ಉಲ್ಲಂಘನೆ ಆಗುತ್ತದೆ. ರೌಡಿಗಳ ಮೇಲೆ ನಿಗಾವಹಿಸಬಹುದು. ಆದರೆ, ಅವರನ್ನು ಕರೆಸಿ ಅವರೊಂದಿಗೆ ಕಾನೂನು ಬಾಹಿರವಾಗಿ ನಡೆದುಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಈ ಸಂಬಂಧ ದೂರು ಬಂದರೆ ಸಂಬಂಧಿಸಿದ ಅಧಿಕಾರಿಯನ್ನು ಕರೆದು ವಿಚಾರಣೆ ನಡೆಸುತ್ತೇವೆ. ನಂತರ ಪೊಲೀಸ್‌ ಮ್ಯಾನ್ಯುವಲ್ ಅಥವಾ ಯಾವ ಕಾನೂನು ಪ್ರಕಾರ ಈ ರೀತಿ ಮಾಡುತ್ತಿರಾ ಎಂದು ಪ್ರಶ್ನಿಸಲಾಗುವುದು. ● ಆರ್‌.ಕೆ.ದತ್ತಾ, ಮಾನವ ಹಕ್ಕುಗಳ ಆಯೋಗದ ಸದಸ್ಯರು (ರಾಜ್ಯದ ನಿವೃತ್ತ ಪೊಲೀಸ್‌ ಮಹಾ ನಿರ್ದೇಶಕ)
● ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

Laxmi-Minister

ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ

6-aranthodu

Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು

SriLanka ನೌಕಾಪಡೆಯಿಂದ 17 ತಮಿಳುನಾಡಿನ ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ

SriLanka ನೌಕಾಪಡೆಯಿಂದ ತಮಿಳುನಾಡಿನ 17 ಮೀನುಗಾರರ ಬಂಧನ; ಬಿಡುಗಡೆಗೆ ಸ್ಟಾಲಿನ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Bengaluru: ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ

Bengaluru: ಕೌಟುಂಬಿಕ ಕಾರಣಕ್ಕೆ ಲಾರಿ ಉದ್ಯಮಿ ಆತ್ಮಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

Bareilly Court: ಪ್ಯಾಲೆಸ್ತೀನ್‌ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್‌

8-bntwl

Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು

7-dvg

Davangere:ಡಾ| ಬಿ.ಆರ್. ಅಂಬೇಡ್ಕರ್ ಅವಹೇಳನ; ಶಾ ರಾಜೀನಾಮೆಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.