Part Time Job: ಅರೆಕಾಲಿಕ ಹುದ್ದೆ ಕೊಡಿಸುವುದಾಗಿ ಮಹಿಳೆಗೆ 5.70 ಲಕ್ಷ ರೂ. ವಂಚನೆ
Team Udayavani, Oct 29, 2023, 12:34 PM IST
ಬೆಂಗಳೂರು: ಅರೆಕಾಲಿಕ ಹುದ್ದೆ ಕೊಡುವುದಾಗಿ ನಂಬಿಸಿ ಮಹಿಳೆಯರ ಖಾತೆಯಿಂದ ಸೈಬರ್ ವಂಚಕರು ಲಕ್ಷಾಂತರ ರೂ. ದೋಚಿರುವ ಘಟನೆ ನಡೆದಿದೆ. ಈ ಸಂಬಂಧ 33 ವರ್ಷದ ಗೃಹಿಣಿಯೊಬ್ಬರು ಕೇಂದ್ರ ವಿಭಾಗದ ಸೆನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ವಿಲ್ಸನ್ ಗಾರ್ಡನ್ ನಿವಾಸಿಯಾದ ಮಹಿಳೆಗೆ ಅ.25ರಂದು ವಾಟ್ಸ್ಆ್ಯಪ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಸಂಪರ್ಕಿಸಿ ಪಾರ್ಟ್ಟೈಮ್ ಜಾಬ್ ಕೊಡುವುದಾಗಿ ಹೇಳಿ, ತಾವು ಕಳುಹಿಸಿರುವ ವಿಡಿಯೋಗಳನ್ನು ಲೈಕ್, ಶೇರ್, ರಿವ್ಯೂವ್ ಕೊಟ್ಟರೆ ಹಣ ಕೊಡುವುದಾಗಿ ತಿಳಿಸಿದ್ದಾನೆ. ಅದನ್ನು ನಂಬಿದ ಮಹಿಳೆ ಅಪರಿಚಿರ ವ್ಯಕ್ತಿ ಕಳುಹಿಸಿದ ವಿಡಿಯೋಗಳನ್ನು ಲೈಕ್, ಶೇರ್ ಮಾಡಿದ್ದಾಗ ಮಹಿಳೆಯ ಖಾತೆಗೆ ಒಂದಿಷ್ಟು ಹಣ ಜಮೆ ಆಗುತ್ತದೆ. ನಂತರ ಟೆಲಿಗ್ರಾಮ್ ಗ್ರೂಪ್ಗೆ ಸೇರಿಸಿಕೊಳ್ಳಲು ತಿಳಿಸಿ ಹಣ ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ ಲಾಭ ನೀಡುತ್ತೇವೆ ಎಂದು ನಂಬಿಸಿ ಮಹಿಳೆಯ ಬೇರೆ ಮೂರು ಬ್ಯಾಂಕ್ ಖಾತೆಯಿಂದ ಒಟ್ಟು 5.70 ಲಕ್ಷ ರೂ.ಅನ್ನು ಯುಪಿಐ ಮೂಲಕ ಹಣ ವರ್ಗಾಯಿಸಿಕೊಂಡು ಸಂರ್ಪಕಕ್ಕೆ ಸಿಗದೆ ವಂಚಿಸಿದ್ದಾನೆ. ಆ ಬಳಿಕ ತಾನು ಮೋಸ ಹೋಗಿರುವುದಾಗಿ ತಿಳಿದ ಮಹಿಳೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.