ಜಿಎಸ್ಟಿಯಲ್ಲಿ ಪಾಲು ಕೋರಿ ಪಾಲಿಕೆ ನಿರ್ಣಯ
Team Udayavani, Sep 17, 2017, 11:09 AM IST
ಬೆಂಗಳೂರು: ನಗರ ವ್ಯಾಪ್ತಿಯಲ್ಲಿ ಜಿಎಸ್ಟಿ ಸಂಗ್ರಹವಾಗುವ ಆದಾಯದಲ್ಲಿ ಶೇ.25ರಷ್ಟನ್ನು ಬಿಬಿಎಂಪಿಗೆ ನೀಡುವ ಕುರಿತು ರಾಜ್ಯ ಸರ್ಕಾರ ಜಿಎಸ್ಟಿ ಕೌನ್ಸಿಲ್ ಸಭೆಗೆ ಶಿಫಾರಸ್ಸು ಮಾಡಬೇಕು ಎಂದು ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ನಿರ್ಣಯ ತೆಗೆದುಕೊಂಡಿದೆ.
ಜಿಎಸ್ಟಿ ಜಾರಿ ನಂತರ ಬಿಬಿಎಂಪಿಗೆ ಆದಾಯ ಪ್ರಮಾಣ ಕಡಿಮೆ ಯಾಗಿದೆ. ಪರಿಣಾಮ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜಿಎಸ್ಟಿಯಲ್ಲಿ ಪಾಲಿಕೆಗೆ ಶೇ.25ರಷ್ಟು ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬೇಕು ಎಂದು ಸಮಿತಿ ಮನವಿ ಮಾಡಿದೆ.
ಜಿಎಸ್ಟಿಯಿಂದ ಬರುವ ಆದಾಯ ದಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಶೇ.25ರಷ್ಟನ್ನು ನೀಡಬೇಕೆಂದು 2015ರಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವರು ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಇದರೊಂದಿಗೆ 14ನೇ ಹಣಕಾಸು ಆಯೋಗವು ಜಿಎಸ್ಟಿಯಲ್ಲಿ ಪಾಲು ನೀಡಬೇಕೆಂದು ಶಿಫಾರಸ್ಸು ಮಾಡಿದೆ.
ಆದರೆ, ಜಿಎಸ್ಟಿ ಅನುಮೋದನೆ ವೇಳೆ ಈ ಬಗ್ಗೆ ಪ್ರಸ್ತಾಪ ಅನುಮೋದನೆಯಾಗದ ಕಾರಣ, ಸ್ಥಳೀಯ ಸಂಸ್ಥೆಗಳು ನಷ್ಟ ಅನುಭವಿಸುವಿಸುತ್ತಿವೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ. ಜಿಎಸ್ಟಿ ಕೌನ್ಸಿಲ್ಗೆ ಪತ್ರ ಬರೆಯುವುದು ಅಥವಾ ಸೂಕ್ತ ಶಿಫಾರಸ್ಸು ಕಳಹಿ ಸಲು ಬಿಬಿಎಂಪಿ ಆಯುಕ್ತರು ಕೂಡಲೇ ಕ್ರಮವಕೈಗೊಳ್ಳಬೇಕು ಎಂದು ಸಮಿತಿ ಸೆ.15ರಂದು ನಿರ್ಣಯ ತೆಗೆದುಕೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.