ಪಾಸ್ ವಿಳಂಬ: ಮಕ್ಕಳಿಗೆ ಬರೆ, ಸರ್ಕಾರಕ್ಕೆ ಬಂಪರ್
Team Udayavani, Jul 2, 2018, 6:00 AM IST
ಬೆಂಗಳೂರು: ವಿದ್ಯಾರ್ಥಿಗಳಿಗೆ ಉಚಿತ ಪಾಸ್ ನೀಡುವ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಸರ್ಕಾರ ಪರೋಕ್ಷವಾಗಿ ಸರ್ಕಾರದ ಭರ್ಜರಿ ಉಳಿತಾಯ ಮಾಡಿಕೊಂಡಿದೆ..
ಹೌದು, ಉಚಿತ ಬಸ್ ಪಾಸ್‌ಗಳ ವಿತರಣೆಯಿಂದ ಸರ್ಕಾರದ ಮೇಲೆ ಸುಮಾರು 1,950 ಕೋಟಿ ರೂ. ವೆಚ್ಚವಾಗುತ್ತಿತ್ತು ಎಂದು ಅಂದಾಜಿಸಲಾಗಿದೆ. ಆದರೆ, ಈಗಾಗಲೇ ಶೇ. 40ರಷ್ಟು ವಿದ್ಯಾರ್ಥಿಗಳು ಪ್ರಸ್ತುತ ಲಭ್ಯ ಇರುವ ರಿಯಾಯಿತಿ ಪಾಸ್‌ಗಳನ್ನು ತೆಗೆದುಕೊಂಡಾಗಿದೆ. ಇದರಿಂದ ಸರಿಸುಮಾರು 600 ಕೋಟಿ ರೂ. ಉಳಿತಾಯ ಆದಂತಾಗಿದೆ.
ಸರ್ಕಾರ ಘೋಷಣೆ ಮಾಡುವ ಹೊತ್ತಿಗೆ ಇದರ ಪ್ರಮಾಣ ಮತ್ತಷ್ಟು ಹೆಚ್ಚಲಿದೆ.ಆದರೆ, ಈ ಉಳಿತಾಯದ ಲೆಕ್ಕಾಚಾರ ಸರ್ಕಾರ ಹೊರಡಿಸಲಿರುವ ಆದೇಶವನ್ನು ಅವಲಂಬಿಸಿದೆ. ಈಗಾಗಲೇ ಬಹುತೇಕರು ಪಾಸು ಪಡೆದಿರುವ
ಹಿನ್ನೆಲೆಯಲ್ಲಿ ಹಣ ಹಿಂಪಾವತಿ ಮಾಡಲಿದೆಯೇ ಅಥವಾ ಇನ್ಮುಂದೆ ಪಡೆಯುವವರಿಗೆ ಮಾತ್ರ “ಉಚಿತ ಪಾಸ್ ಭಾಗ್ಯ’ ದೊರೆಯಲಿದೆಯೇ ಕಾದುನೋಡಬೇಕು. ಆದರೆ, ಈ ಮೊದಲೇಸರ್ಕಾರಕ್ಕೆ ಆರ್ಥಿಕ ಹೊರೆಯಾಗಿದೆ ಎಂದು ಉಚಿತ ಪಾಸ್ ವಿತರಣೆಗೆ ಹಿಂದೇಟು ಹಾಕುತ್ತಿದೆ. ಹೀಗಿರುವಾಗ, ಈಗಾಗಲೇ ಪಾಸ್ ಪಡೆದವರಿಗೆ ಹಣ ಹಿಂಪಾವತಿ ಮಾಡುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ರಾಜ್ಯದಲ್ಲಿ ಸುಮಾರು 18 ಲಕ್ಷ ವಿದ್ಯಾರ್ಥಿಗಳು ಪಾಸ್ ನಿರೀಕ್ಷೆಯಲ್ಲಿದ್ದರು. ಆದರೆ, ಶಾಲಾ-ಕಾಲೇಜುಗಳು
ಆರಂಭಗೊಂಡು ತಿಂಗಳಾದರೂ ಸರ್ಕಾರ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಇದರಿಂದ ನಿತ್ಯ ಹಣ ಪಾವತಿಸಿ ಓಡಾಡುವ ಅನಿವಾರ್ಯತೆ ಇದೆ. ಇದರ ಮೊತ್ತ ಹೆಚ್ಚು-ಕಡಿಮೆ ವಾರ್ಷಿಕ ಪಾಸಿನ ಮೊತ್ತಕ್ಕೆ ಸಮವಾಗಿದೆ. ಆದ್ದರಿಂದ ಆ ಹಣದಲ್ಲೇ ಜೂನ್ ಅಂತ್ಯಕ್ಕೆ ಸುಮಾರು ಬಿಎಂಟಿಸಿ ಹೊರತುಪಡಿಸಿ ಉಳಿದ ಮೂರು ಸಾರಿಗೆ ನಿಗಮಗಳಲ್ಲಿ ಏಳು ಲಕ್ಷ ವಿದ್ಯಾರ್ಥಿಗಳು ಪಾಸ್ ಪಡೆದುಕೊಂಡಿದ್ದಾರೆ. ಇದರ ಮೊತ್ತ ಸುಮಾರು 600 ಕೋಟಿ ಆಗಲಿದೆ ಎಂದು ಆಗಲಿದೆ ಎಂದು ಹೆಸರು ಹೇಳಲಿಚ್ಛಿಸದ ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಹಿಂಪಾವತಿ ಮಾಡಲಾಗಿತ್ತು: ಆದರೆ, ಸುಮಾರು ಐದು ವರ್ಷಗಳ ಹಿಂದೆ ರಿಯಾಯ್ತಿ ಪಾಸಿನ ಶುಲ್ಕ ಹೆಚ್ಚಳ ಮಾಡಲಾಗಿತ್ತು. ಅದಕ್ಕೆ ಅಂದಿನ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿತ್ತು. ನಂತರದಲ್ಲಿ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಶುಲ್ಕ ಹೆಚ್ಚಳ ಆದೇಶ ಹಿಂಪಡೆಯಲಾಯಿತು. ಜತೆಗೆ ಹೆಚ್ಚುವರಿ ಹಣವನ್ನೂ ವಿದ್ಯಾರ್ಥಿಗಳಿಗೆ ಹಿಂಪಾವತಿಸಿದ್ದರು.
ಪೂರಕ ಸ್ಪಂದನೆ: ಈಚೆಗೆ ನಡೆದ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದ್ದು, ಈ ವಿಚಾರದಲ್ಲಿ ಪೂರಕ ಸ್ಪಂದನೆ ವ್ಯಕ್ತಪಡಿಸಿದೆ ಎಂದು ತಿಳಿದುಬಂದಿದೆ.
ವಿದ್ಯಾರ್ಥಿಗಳಿಗೆ ಹೊರೆ ಆಗ್ತಿತ್ತು: ಎಂಡಿ: ಉಚಿತ ಪಾಸಿನ ಬಗ್ಗೆ ಸರ್ಕಾರದ ಸ್ಪಷ್ಟ ಆದೇಶ ಬರುವವರೆಗೂ ಕಾಯಬಹುದಿತ್ತು. ಆದರೆ, ಈಗಾಗಲೇ ಶಾಲಾ-ಕಾಲೇಜುಗಳು ಶುರುವಾಗಿದ್ದರಿಂದ ವಿದ್ಯಾರ್ಥಿಗಳಿಗೆ ಹೊರೆ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಪಾಸು ವಿತರಣೆ ಮಾಡಲಾಗುತ್ತಿದೆ. ಅಷ್ಟಕ್ಕೂ ರಿಯಾಯ್ತಿ ಪಾಸಿನ ಬೆಲೆ ಕನಿಷ್ಠ 600ರಿಂದ ಗರಿಷ್ಠ 1,200 ರೂ. ಇರುವುದರಿಂದ ಹೊರೆ ಆಗಲಿಕ್ಕಿಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ದ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಉಮಾಶಂಕರ್ ತಿಳಿಸಿದರು.
ವಾಯವ್ಯ, ಈಶಾನ್ಯ ಮತ್ತು ಕೆಎಸ್‌ಆರ್‌ಟಿಸಿ ಸೇರಿ ಸುಮಾರು ಆರು ಲಕ್ಷ ಪಾಸುಗಳು ವಿತರಣೆ ಆಗಿವೆ. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗುವ ಉಚಿತ ಪಾಸುಗಳು ಕೂಡ ಸೇರಿವೆ ಎಂದೂ ಅವರು ಮಾಹಿತಿ ನೀಡಿದರು. ಇದರಲ್ಲಿ 2 ಲಕ್ಷಕ್ಕಿಂತ ಅಧಿಕ ಪಾಸುಗಳು ಕೆಎಸ್‌ಆರ್‌ಟಿಸಿ ವ್ಯಾಪ್ತಿ ಯಲ್ಲೇ ವಿತರಣೆ ಆಗಿವೆ.
– ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.