ಕೆಂಪು ಬಸ್‌ಗಳಿಲ್ಲದೇ ಪ್ರಯಾಣಿಕರ ಪರದಾಟ
Team Udayavani, May 12, 2018, 1:06 PM IST
ಬೆಂಗಳೂರು: ನಗರದ ಪ್ರಮುಖ ಕೆಎಸ್‌ಆರ್‌ಟಿಸಿ ನಿಲ್ದಾಣಗಳು ಪ್ರಯಾಣಿಕರಿಂದ ತುಂಬಿತುಳುಕುತ್ತಿವೆ. ಆದರೆ, ಆ ಪ್ರಯಾಣಿಕರನ್ನು ಕೊಂಡೊಯ್ಯಲು ಬಸ್‌ಗಳು ಮಾತ್ರ ಇಲ್ಲ!
ಚುನಾವಣಾ ಎಫೆಕ್ಟ್: ಮತದಾನದ ಜತೆಗೆ ವಾರಾಂತ್ಯದ ರಜಾ-ಮಜಾಕ್ಕೆ ತೆರಳುವ ಜನರಿಂದ ಮೆಜೆಸ್ಟಿಕ್, ಮೈಸೂರು ಸ್ಯಾಟಲೈಟ್, ನವರಂಗ್, ಯಶವಂತ ಪುರಗಳು ಭರ್ತಿ ಆಗಿದ್ದವು. ಆದರೆ, ಬಹುತೇಕ ಬಸ್‌ಗಳು ಚುನಾವಣಾ ಸೇವೆಗೆ ನಿಯೋಜನೆ ಗೊಂಡಿದ್ದರಿಂದ ಪ್ರಯಾಣಿಕರಿಗೆ ಬಸ್‌ಗಳ ಕೊರತೆ ಉಂಟಾಯಿತು. ಈ ಮಧ್ಯೆ ಮಳೆ ಅಬ್ಬರ ಕೂಡ ಇದ್ದುದ ರಿಂದ ಬರುವ ಬಸ್‌ಗಳೂ ತಡವಾಗಿ ಆಗಮಿಸಿದರು. ಪರಿಣಾಮ ಜನ ಪರದಾಡಿದರು.
ಅರ್ಧಕರ್ಧ ಬಸ್: ಕೆಎಸ್‌ಆರ್‌ಟಿಸಿ ವ್ಯಾಪ್ತಿ ಯಲ್ಲಿ ಸರಿಸುಮಾರು 8,796 ಬಸ್ ಗಳಿವೆ. ಈ ಪೈಕಿ ಅರ್ಧಕರ್ಧ ಬಸ್‌ಗಳು (4,000) ಚುನಾವಣಾ ಕಾರ್ಯಕ್ಕೆ ನಿಯೋಜನೆ ಗೊಂಡಿವೆ. ಅವೆಲ್ಲವೂ ಕೆಂಪು ಬಸ್‌ಗಳಾಗಿರುವುದರಿಂದ ಇದರ ಬಿಸಿ ಸಾಮಾನ್ಯ ವರ್ಗದ ಪ್ರಯಾಣಿಕರಿಗೆ ತಟ್ಟಿತು. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಪ್ರಯಾಣಿಕರೇ ಅಧಿಕ ಸಂಖ್ಯೆಯಲ್ಲಿ ಇದ್ದುದರಿಂದ ಸಹಜವಾಗಿಯೇ ಆ ಭಾಗದ ಜನರು ಹೆಚ್ಚು ತೊಂದರೆ ಅನುಭವಿಸುವಂತಾಯಿತು.
ಉತ್ತರ ಕರ್ನಾಟಕ ಭಾಗದ ಪುರುಷ ಮತ್ತು ಮಹಿಳಾ ಕೂಲಿಕಾರ್ಮಿಕರ ಕಂಕುಳಲ್ಲಿ ಮಕ್ಕಳು, ಕೈಯಲ್ಲಿ ಲಗೇಜು
ಹಿಡಿದು ಮಳೆಯಲ್ಲಿ ತೊಯ್ದುತೊ ಪ್ಪೆಯಾಗಿ ಬಸ್ ನಿಲ್ದಾಣಗಳ ಕಡೆ ಧಾವಿಸುತ್ತಿದ್ದರು. ಆದರೆ, ಅಲ್ಲಿ ನಿರಾಶೆಕಾದಿತ್ತು. ನಿಗದಿತ ಸಮಯಕ್ಕೆ ಬಸ್‌ಗಳು ಸಿಗದೆ ತಡರಾತ್ರಿವರೆಗೂ ಕಾದುಕುಳಿತ ದೃಶ್ಯ ಸಾಮಾನ್ಯವಾಗಿತ್ತು.
ಈ ನಡುವೆ ಬಸ್‌ಗಳು ಬಂದರೂ, ಕ್ಷಣಾರ್ಧದಲ್ಲಿ ಭರ್ತಿ ಆಗುತ್ತಿದ್ದವು. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಕಲಬುರ್ಗಿ, ಶಿವಮೊಗ್ಗ, ದಾವಣಗೆರೆ, ಹಾವೇರಿ ಕಡೆಗೆ ತೆರಳುವ ಬಸ್‌ಗಳಲ್ಲಿ ಈ ದೃಶ್ಯ ಕಂಡುಬಂತು. ಊರುಗಳಿಗೆ ತೆರಳಲು ಹೆಚ್ಚಿನ ಸಂಖ್ಯೆಯ ಬಸ್‌ಗಳು ಸಿಗದಿದ್ದರಿಂದ ಬಹುತೇಕರು ಚುನಾವಣೆಗೆ ಹಿಡಿಶಾಪ ಹಾಕುತ್ತಿದ್ದರು.
ಬಿಎಂಟಿಸಿ ಬಸ್‌ಗಳ ಬಳಕೆ: ಒಂದೆಡೆ ಚುನಾವಣೆ ಕಾರ್ಯಕ್ಕೆ ಬಸ್‌ಗಳನ್ನು ಕಳು ಹಿಸಲಾಗಿದೆ. ಮತ್ತೂಂದೆಡೆ ಪ್ರಯಾಣಿಕರ ಸಂಖ್ಯೆ ಸಾಕಷ್ಟು ಏರಿಕೆ ಆಗಿದೆ. ಇದರಿಂದ ಬಸ್‌ಗಳ ಕೊರತೆ ಉಂಟಾಗಿದೆ. ಆದಾಗ್ಯೂ ಕಡಿಮೆ ಸಂಖ್ಯೆಯಲ್ಲಿ ನಿಯೋಜನೆಗೊಂಡ ಬಸ್‌ಗಳನ್ನು ನಗರಕ್ಕೆ ತರಿಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, 50ಕ್ಕೂ ಹೆಚ್ಚು ಬಿಎಂಟಿಸಿ
ಬಸ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.