ಕಟ್ಟೆ-ಕುಂಟೆಯತ್ತಲೂ ಗಮನ ಕೊಡಿ ಸ್ವಾಮಿ


Team Udayavani, Jul 19, 2018, 12:47 PM IST

blore-7.jpg

ಬೆಂಗಳೂರು: ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಕೆರೆಗಳಿಗಿಂತ ದುಪ್ಪಟ್ಟು ಕಟ್ಟೆ-ಕುಂಟೆಗಳಿವೆ. ಹಾಗೇ ಅವುಗಳ ಸ್ಥಿತಿ ಕೂಡ ಕೆರೆಗಳಿಗಿಂತ ದುಪ್ಪಟ್ಟು ದುರ್ಬರವಾಗಿದೆ. ಬಹುತೇಕ ಕಟ್ಟೆ-ಕುಂಟೆಗಳು ಒಂದಿಲ್ಲೊಂದು ರೀತಿ ಒತ್ತುವರಿಯಾಗಿವೆ.

ಕೆರೆಗಳ ನಡುವೆ ಸಾಕಷ್ಟು ಅಂತರ ಇರುವ ಕಡೆಗಳಲ್ಲಿ ಸ್ಥಳೀಯ ಜನ-ಜಾನುವಾರುಗಳಿಗೆ ನೀರಿಗೆ ತೊಂದರೆ ಆಗದಿರಲು ನಗರದಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಯೇ ಕಟ್ಟೆ-ಕುಂಟೆಗಳು. ಇವುಗಳು ನೀರು ಇಂಗು ಗುಂಡಿಗಳಾಗಿ ಸಹ ಕಾರ್ಯನಿರ್ವಹಿಸುತ್ತವೆ.  ಅಂತರ್ಜಲ ಮಟ್ಟ ಹೆಚ್ಚಿಸುವ ಜತೆಗೆ ಸುತ್ತಲ ವಾತಾವರಣವನ್ನೂ ತಂಪಾಗಿಡುತ್ತವೆ.

ನಗರದ 1,460 ಹಾಗೂ ಗ್ರಾಮಾಂತರ ಜಿಲ್ಲೆಯ 1,811 ಸೇರಿ ಒಟ್ಟಾರೆ 3,271 ಕಟ್ಟೆ-ಕುಂಟೆಗಳಿದ್ದು, ಇವುಗಳ ವಿಸ್ತೀರ್ಣ 8,119 ಎಕರೆ. ಇದರಲ್ಲಿ 1,256.13 ಎಕರೆ ಒತ್ತುವರಿಯಾಗಿದ್ದು, ಈ ಪೈಕಿ 782 ಎಕರೆಯನ್ನು 2011 ಜನ ಕಬಳಿಸಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುವುದು ಒತ್ತಟ್ಟಿಗಿರಲಿ, ಒತ್ತುವರಿಯಿಂದ ಹೊರಗುಳಿದ 6,863 ಎಕರೆ ಜಾಗದ ರಕ್ಷಣೆಗೂ ಮುಂದಾಗಿಲ್ಲ ಎಂದು ಕೆರೆಗಳ ಒತ್ತುವರಿ ಕುರಿತ ಸದನ ಸಮಿತಿ ಅಧ್ಯಯನ ವರದಿಯಲ್ಲಿ ಬೇಸರ ವ್ಯಕ್ತಪಡಿಸಿದೆ. ಇದೇ ಧೋರಣೆ ಮುಂದುವರಿದರೆ, ಉಳಿದವು ಕೂಡ ಕಂಡವರ ಪಾಲಾಗುವ ಸಾಧ್ಯತೆ ಇದೆ.

ಅನುಭೋಗದ ಆಸ್ತಿ: ಬಹುತೇಕ ಕಟ್ಟೆ-ಕುಂಟೆಗಳು ಖಾಸಗಿ ಒಡೆತನದಲ್ಲಿದ್ದು, ಅವುಗಳನ್ನು ಸ್ವಂತ ಖರ್ಚಿನಿಂದ ನಿರ್ಮಿಸಲಾಗಿರುತ್ತದೆ. ಜಮೀನಿನ ಹಕ್ಕುದಾರಿಕೆ ಮೂಲ ಹಕ್ಕುದಾರರಿಗೇ ಇರುತ್ತದೆ. ಆದರೂ ಬಳಕೆಯ ಹಕ್ಕನ್ನು ಯಾರೂ ತಡೆಯುವಂತಿಲ್ಲ. ಆದ್ದರಿಂದ ಇವುಗಳು ಸಾರ್ವಜನಿಕ “ಅನುಭೋಗದ ಆಸ್ತಿ’ಗಳಾಗಿವೆ. ಈ ಆಸ್ತಿಗಳನ್ನು ಸಂರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ವರದಿ ಸ್ಪಷ್ಟಪಡಿಸಿದೆ. ಈಗಾಗಲೇ ಬೇಕಾಬಿಟ್ಟಿ ಕೊಳವೆಬಾವಿಗಳನ್ನು ಕೊರೆದಿದ್ದರಿಂದ ನಗರದ ಅಂತರ್ಜಲ ಮಟ್ಟ ಸಾವಿರ ಅಡಿಗೂ ಆಲಕ್ಕೆ ಕುಸಿದಿದೆ. ವಾರ್ಷಿಕ ಮಳೆ ಪ್ರಮಾಣ ಈಗಲೂ 833 ಮಿ.ಮೀ. ಇದೆ. ಮಳೆ ದಿನಗಳನ್ನು ಲೆಕ್ಕಹಾಕಿದರೆ, ಇಲ್ಲಿ ವಾರಕ್ಕೊಮ್ಮೆ ಮಳೆ ಬೀಳುತ್ತದೆ.

ಆದರೆ, ಹೀಗೆ ಬಿದ್ದ ನೀರು ಬಹುತೇಕ ರಾಜಕಾಲುವೆ ಮೂಲಕ ವ್ಯರ್ಥವಾಗಿ ಹರಿದುಹೋಗುತ್ತಿದೆ. ಈ ನಿಟ್ಟಿನಲ್ಲಿ ಕಟ್ಟೆ-ಕುಂಟೆಗಳನ್ನು ಮಳೆ ನೀರು ಇಂಗು ಗುಂಡಿಗಳಾಗಿ ಪರಿವರ್ತಿಸುವ ಅವಶ್ಯಕತೆ ಇದೆ.  ಅಭಿವೃದ್ಧಿಪಡಿಸಿದ ಪ್ರದೇಶಗಳಲ್ಲಿ ನಿರ್ಮಿಸುವ ಮಳೆನೀರುಗಾಲುವೆ ವ್ಯವಸ್ಥೆಯಿಂದ ಈ ಕಟ್ಟೆ-ಕುಂಟೆಗಳಿಗೆ ನೀರು ಹರಿಯುವಂತೆ ಯೋಜನೆ ವಿನ್ಯಾಸ ಮಾಡಬೇಕಿದೆ. ಇವುಗಳ ಸುತ್ತ ಕನಿಷ್ಠ ಒಂದು ಸಾಲು ಮರಗಳ ಹಸಿರು ವಲಯವನ್ನು ಸೃಷ್ಟಿಸುವುದು ಕಡ್ಡಾಯವಾಗಬೇಕು. ಒಂದು ಎಕರೆಗಿಂತ ಹೆಚ್ಚು ವಿಸ್ತೀರ್ಣ ಇರುವ ಕಟ್ಟೆ-ಕುಂಟೆಗಳಲ್ಲಿ ಮನರಂಜನೆಗೂ ಅವಕಾಶ ನೀಡಬಹುದು. ಆದರೆ, ಅವುಗಳ ರಕ್ಷಣೆಯು ಬಳಕೆ ಮಾಡುವ ಸಂಸ್ಥೆ/ ವ್ಯಕ್ತಿಯ ಹೊಣೆ ಆಗಿರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

ಅರ್ಧಕ್ಕರ್ಧ ರಾಜಕಾಲುವೆ ಒತ್ತುವರಿ!: ರಾಜಕಾಲುವೆಗಳು ಕೆರೆಗಳಿಗೆ ನೀರು ಹರಿಸುವ ಜಲಮಾರ್ಗಗಳು. ಆ ಮೂಲಕ ನಗರದಲ್ಲಿ ನೆರೆ ಉಂಟಾಗದಂತೆ ತಡೆಯುವಲ್ಲಿ ಪ್ರಮುಖ ಪಾತ್ರವನ್ನೂ ವಹಿಸುತ್ತವೆ.  ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 1,090.66 ಕಿ.ಮೀ. ಉದ್ದದ ರಾಜಕಾಲುವೆಗಳಿದ್ದು, 348 ಗ್ರಾಮಗಳಲ್ಲಿ ಹಾದುಹೋಗುತ್ತದೆ. ಇದರಲ್ಲಿ ಅರ್ಧಕ್ಕರ್ಧ ಅಂದರೆ 501.11 ಎಕರೆ  ರಾಜಕಾಲುವೆಯನ್ನು 2,083 ಜನ ಒತ್ತುವರಿ ಮಾಡಿದ್ದಾರೆ.

ದೊಡ್ಡ ಕೆರೆಗಳ 300 ಎಕರೆ ಒತ್ತುವರಿ: ನಗರದ ಅತಿ ದೊಡ್ಡ ಹಾಗೂ ಪ್ರಮುಖ 20ಕ್ಕೂ ಹೆಚ್ಚು ಕೆರೆಗಳನ್ನು ಸದನ ಸಮಿತಿ ಗುರುತಿಸಿದ್ದು, ಅವುಗಳ ಒತ್ತುವರಿ ಪ್ರಮಾಣವೇ ಅಂದಾಜು 300 ಎಕರೆ ಆಗಿದೆ! ಯಡಿಯೂರು ಕೆರೆ, ಪುಟ್ಟೇನಹಳ್ಳಿ,
ಹಲಗೆವಡೇರಹಳ್ಳಿ, ಪುಟ್ಟೇನಹಳ್ಳಿ, ಚನ್ನಸಂದ್ರ, ಸ್ಯಾಂಕಿ, ಕೌದೇನಹಳ್ಳಿ, ಸೀಲವಂತನ ಕೆರೆ, ಬೆಳ್ಳಂದೂರು, ಹುಳಿಮಾವು ಮತ್ತಿತರ ಕೆರೆಗಳು ಇದರಲ್ಲಿ ಸೇರಿವೆ. ಒತ್ತುವರಿಯಾದ ಜಾಗಗಳಲ್ಲಿ ಅಪಾರ್ಟ್‌ಮೆಂಟ್‌ಗಳು, ರಸ್ತೆಗಳು, ವಸತಿ ಸಮುತ್ಛಯ, ಮನೆಗಳು ತಲೆಯೆತ್ತಿವೆ.

ನಗರದಲ್ಲಿವೆ 1,060 ಉದ್ಯಾನ: ನಗರದಲ್ಲಿ ಸುಮಾರು 1,060 ಉದ್ಯಾನಗಳಿದ್ದು, ಇವುಗಳಿಗಾಗಿ ಮೀಸಲಿಟ್ಟ ಭೂಮಿ 770 ಹೆಕ್ಟೇರ್‌. ವರ್ಷದಲ್ಲಿ ಅಂದಾಜು 253 ಮಳೆ ಇಲ್ಲದ ದಿನಗಳಿಗೆ ಪ್ರತಿ ಚದರ ಮೀಟರ್‌ಗೆ 2 ಲೀ.ನಂತೆ ಈ ಉದ್ಯಾನಗಳಿಗೆ ಬೇಕಾಗುವ ಒಟ್ಟು ನೀರಿನ ಪ್ರಮಾಣ 3,896 ದಶಲಕ್ಷ ಲೀ.  

ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Parameshwar

Waqf issue; ಬಿಜೆಪಿಯಿಂದ ಕೋಮು ಗಲಭೆಗೆ ಯತ್ನ: ಕಾಂಗ್ರೆಸ್‌

Chaluvarayaswamy

Kumaraswamy ಅವರಿಗೆ ಜತೆಗಿರುವಾಗ ಕೊಚ್ಚೆ ವಾಸನೆ ಬರಲಿಲ್ಲವೇ?: ಚಲುವರಾಯಸ್ವಾಮಿ ತಿರುಗೇಟು

Mangaluru-Sahakara

Mangaluru: ಸಹಕಾರ ಆಂದೋಲನ ಜನರ ಆಂದೋಲನವಾಗಲಿ: ಸಚಿವ ಕೆ.ಎನ್‌.ರಾಜಣ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-darshan

Actor Darshan ವಿರುದ್ದ ಸುಪ್ರೀಂನಲ್ಲಿ ಮೇಲ್ಮನವಿ: ಬೆಂಗ್ಳೂರು ಕಮೀಷನರ್‌

11-KEA-exam

Bengaluru: 54 ಎಂಜಿನಿಯರಿಂಗ್‌ ಸೀಟ್‌ ಬ್ಲಾಕ್‌: ಕೆಇಎ ಶಂಕೆ

6

Bengaluru: ಕಸವನ್ನು ಗೊಬ್ಬರವಾಗಿಸುವ “ಕಪ್ಪು ಸೈನಿಕ ನೊಣ’!

3-beehive

Bengaluru: ಇನ್ಮುಂದೆ ಜೇನುಗೂಡು ಕಟ್ಟಬೇಕಿಲ್ಲ; 3ಡಿ ಗೂಡು ಆವಿಷ್ಕಾರ!

4-cock

Bengaluru: ಮಾಂಸದ ನಾಟಿ ಕೋಳಿಗೆ ಭರ್ಜರಿ ಡಿಮ್ಯಾಂಡ್‌!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

vidhana-soudha

CM office ನವೀಕರಣ: ಮತ್ತೊಂದು ವಿವಾದ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!

snehamayi krishna

Snehamayi Krishna ವಿರುದ್ಧ ಕಾಂಗ್ರೆಸ್‌ನಿಂದ ಪೊಲೀಸರಿಗೆ ಮತ್ತೊಂದು ದೂರು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.