ಬಿಎಂಟಿಸಿ ಟಿಕೆಟ್‌ಗೂ ಪೇಟಿಎಂ

Team Udayavani, May 8, 2018, 12:33 PM IST

bmtc.jpg

ಬೆಂಗಳೂರು: ತರಕಾರಿ, ಹಾಲು, ಶಾಪಿಂಗ್‌, ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳಲ್ಲಿರುವಂತೆ ಬಿಎಂಟಿಸಿ ಬಸ್‌ಗಳಲ್ಲೂ ಇನ್ನು ಪೇಟಿಎಂ ಬರಲಿದೆ!  ಅಂದರೆ ನಗದು ಇಲ್ಲದೆ, ಬಸ್‌ಗಳಲ್ಲೇ ಪೇಟಿಎಂ ಮೂಲಕ ಬಿಎಂಟಿಸಿಗೆ ನೇರವಾಗಿ ಹಣ ಪಾವತಿಸಿ ಟಿಕೆಟ್‌ ಪಡೆದು ಪ್ರಯಾಣಿಸಬಹುದು. ಶೀಘ್ರದಲ್ಲೇ ಈ ವಿನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಪ್ರಾಯೋಗಿಕವಾಗಿ ವೋಲ್ವೊ ಬಸ್‌ಗಳಲ್ಲಿ ಅದರಲ್ಲೂ ಹೆಚ್ಚು ಐಟಿ-ಬಿಟಿ ಉದ್ಯೋಗಿಗಳು ಓಡಾಡುವ ಮಾರ್ಗಗಳಲ್ಲಿ ಈ ಸೇವೆ ಪರಿಚಯಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಚಿಂತನೆ ನಡೆಸಿದೆ. 

ಇದರ ಮುಖ್ಯ ಉದ್ದೇಶ ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಎಲ್ಲವೂ ಡಿಜಿಟಲ್‌ ಪಾವತಿ ಆಗುವುದರಿಂದ ಹಣದ ನಿರ್ವಹಣೆ ಸುಲಭ ಮತ್ತು ಪಾರದರ್ಶಕವಾಗಲಿದೆ. ಜತೆಗೆ ಈ ಹಣ ನಿರ್ವಹಣೆಯ ಸಮಯ ಅರ್ಧಕ್ಕರ್ಧ ಉಳಿತಾಯ ಆಗಲಿದೆ ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸುತ್ತಾರೆ. 

ಕಾರ್ಯನಿರ್ವಹಣೆ ಹೇಗೆ?: ಕಂಡಕ್ಟರ್‌ ಟಿಕೆಟ್‌ ಕೊಡಲಿಲ್ಲ, ಚಿಲ್ಲರೆ ಇಲ್ಲದ ಕಾರಣ ಬಸ್‌ನಿಂದ ಕೆಳಗಿಳಿಸಿದರು, ಸಂಗ್ರಹವಾದ ಹಣ ಬ್ಯಾಂಕ್‌ಗೆ ಕಟ್ಟುವುದು ಸೇರಿದಂತೆ ಪೇಟಿಎಂ ವ್ಯವಸ್ಥೆಯಿಂದ ಇದಾವುದರ ಕಿರಿಕಿರಿಯೂ ಇಲ್ಲಿ ಇರುವುದಿಲ್ಲ. ಬಸ್‌ ಏರಿದ ತಕ್ಷಣ ಪ್ರಯಾಣಿಕರು ತಮ್ಮಲ್ಲಿರುವ ಪೇಟಿಎಂ ಓಪನ್‌ ಮಾಡುತ್ತಾರೆ. ಅದರಲ್ಲಿ ಬೆಸ್ಕಾಂ ಬಿಲ್ಲಿಂಗ್‌ ಮತ್ತಿತರ ಪಟ್ಟಿ ಬರುತ್ತದೆ. ಅದರಲ್ಲಿ ಬಿಎಂಟಿಸಿ ಕೂಡ ಇರಲಿದೆ. ಅದನ್ನು ಕ್ಲಿಕ್‌ ಮಾಡಿ, ಪ್ರಯಾಣದ ಮಾರ್ಗ (ಎಲ್ಲಿಂದ-ಎಲ್ಲಿಗೆ) ಸೂಚಿಸಿದರೆ ಸಾಕು, ಅಟೋಮೆಟಿಕ್‌ ಆಗಿ ಹಣ ಕಡಿತಗೊಂಡು ಇ-ಟಿಕೆಟ್‌ ಸೃಷ್ಟಿಯಾಗುತ್ತದೆ. 

ಕಂಡಕ್ಟರ್‌ಗೆ ಮೊಬೈಲ್‌ ಡಿವೈಸ್‌: ಪ್ರಯಾಣಿಕರು ಟಿಕೆಟ್‌ ಪಡೆದಿರುವುದನ್ನು ಖಾತ್ರಿಪಡಿಸಿಕೊಳ್ಳಲು ಓಲಾ-ಉಬರ್‌ ಚಾಲಕರಿಗೆ ನೀಡಿರುವಂತೆ ನಿರ್ವಾಹಕರಿಗೂ ಮೊಬೈಲ್‌ ಡಿವೈಸ್‌ಗಳನ್ನು ನೀಡಲಾಗಿರುತ್ತದೆ. ಅದನ್ನು ಪ್ರಯಾಣಿಕರ ಮೊಬೈಲ್‌ ಹತ್ತಿರ ತೆಗೆದುಕೊಂಡು ಹೋಗುತ್ತಿದ್ದಂತೆಯೇ ಕ್ಯುಆರ್‌ ಕೋಡ್‌ ಮೂಲಕ ಸ್ಕ್ಯಾನ್‌ ಆಗಿ ತಕ್ಷಣ ಟಿಕೆಟ್‌ ಬಣ್ಣ ಬದಲಾಗುತ್ತದೆ. ಹೀಗೆ ಬಣ್ಣ ಬದಲಾದ ಟಿಕೆಟ್‌ ಅನ್ನು ಪ್ರಯಾಣಿಕರು ಮತ್ತೆ ಬಳಸಲು ಅವಕಾಶ ಇರುವುದಿಲ್ಲ. ಜಿಯೊ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡಿದ್ದು, ನಿರ್ವಾಹಕರಿಗೆ ಈ ಕಂಪೆನಿಯು ಡಿವೈಸ್‌ಗಳನ್ನು ನೀಡಲಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು. 

ಎಲ್ಲೆಡೆ ಇ-ವ್ಯಾಲೆಟ್‌ ಟ್ರೆಂಡ್‌ ಶುರುವಾಗಿದೆ. ಹಾಲು-ತರಕಾರಿ ಅಂಗಡಿಗಳಲ್ಲೂ ಪೇಟಿಎಂ ಬಳಕೆ ಇದೆ. “ನಮ್ಮ ಮೆಟ್ರೋ’ ಡಿಜಿಟಲ್‌ ಆಗಿದೆ. ಹೀಗಿರುವಾಗ, ಐಟಿ ರಾಜಧಾನಿಯ “ಸಂಚಾರ ನಾಡಿ’ ಬಿಎಂಟಿಸಿಯಲ್ಲೂ ಈ ಪ್ರಯೋಗ ಮಾಡಲಾಗುತ್ತಿದೆ. ಆದರೆ, ಬಸ್‌ಗಳಲ್ಲಿ ನಿತ್ಯ 50 ಲಕ್ಷಕ್ಕೂ ಹೆಚ್ಚು ಜನ ಸಂಚರಿಸುತ್ತಾರೆ. ಹಾಗಾಗಿ, ಆರಂಭದಲ್ಲಿ ಕಷ್ಟ ಆಗಬಹುದು. ಆದರೆ, ಇಟಿಎಂ  (ಎಲೆಕ್ಟ್ರಾನಿಕ್‌ ಟಿಕೆಟ್‌ ಮಷಿನ್‌) ಬಂದಾಗಲೂ ಈ ರೀತಿಯ ಅಪಸ್ವರ ಕೇಳಿಬಂದಿತ್ತು. ಈಗ ಅದಕ್ಕೆ ಜನ ಹೊಂದಿಕೊಂಡಿದ್ದಾರೆ. ಅಷ್ಟಕ್ಕೂ ಭವಿಷ್ಯದಲ್ಲಿ ನಿರ್ವಾಹಕರ ಅವಶ್ಯಕತೆ ಇರುವುದಿಲ್ಲ. ಈ ನಿಟ್ಟಿನಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆ ಆಗಲಿದೆ ಎಂದೂ ಬಿಎಂಟಿಸಿ ಐಟಿ ವಿಭಾಗದ ಉನ್ನತ ಅಧಿಕಾರಿಯೊಬ್ಬರು ಹೆಳಿದರು. 

ಪ್ರಯಾಣಿಕರ ಮೇಲೆ “ಬೀ-ಕಾನ್‌’ ಕಣ್ಣು!: “ಟಿಕೆಟ್‌ ಪಡೆದು ಪ್ರಯಾಣಿಸುವಂತೆ ಬಸ್‌ಗಳಲ್ಲಿ ಫ‌ಲಕ ಹಾಕಲಾಗಿರುತ್ತದೆ. ನಿರ್ವಾಹಕರು ಪದೇ ಪದೇ ಟಿಕೆಟ್‌ ತೊಗೊಳ್ಳಿ ಎಂದು ಕೂಗುತ್ತಿರುತ್ತಾರೆ. ಆದಾಗ್ಯೂ ಟಿಕೆಟ್‌ ಪಡೆಯದ ಜನ, ಸ್ವಯಂಪ್ರೇರಿತವಾಗಿ ಪೇಟಿಎಂ ಮೂಲಕ ಟಿಕೆಟ್‌ ಪಡೆಯುತ್ತಾರೆಯೇ’ ಎಂದು ಕೇಳಬಹುದು. 

ಬಿಎಂಟಿಸಿ ಬಳಿ ಇದಕ್ಕೂ ಉತ್ತರ ಇದೆ. ಟಿಕೆಟ್‌ರಹಿತ ಪ್ರಯಾಣಿಕರ ಮೇಲೆ “ಬೀ-ಕಾನ್‌’ (ಬೀ ಅಂದರೆ ಜೇನುಹುಳು) ಎಂಬ ಸಾಫ್ಟ್ವೇರ್‌ ಕಣ್ಗಾವಲು ಇಡಲಿದೆ! ಸ್ಮಾರ್ಟ್‌ಫೋನ್‌ ಹೊಂದಿದ ಯಾವುದೇ ವ್ಯಕ್ತಿ ಬಸ್‌ ಏರುತ್ತಿದ್ದಂತೆ “ಬೀ-ಕಾನ್‌’ ಆ ಮೊಬೈಲ್‌ಅನ್ನು ಟ್ರ್ಯಾಕ್‌ ಮಾಡುತ್ತದೆ. ಸುಮಾರು 30 ಅಡಿ ದೂರದವರೆಗೂ ಟ್ರ್ಯಾಕ್‌ ಮಾಡುವ ಸಾಮರ್ಥ್ಯವನ್ನು ಇದು ಹೊಂದಿರುತ್ತದೆ.

ಇದರ ಸಹಾಯದಿಂದ ನಿಯಂತ್ರಣ ಕೊಠಡಿಯಲ್ಲಿ ಆ ಫೋನ್‌ ಮೇಲೆ ಕಣ್ಗಾವಲು ಇಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ವಾಸ್ತವವಾಗಿ ಟಿಕೆಟ್‌ರಹಿತ ಪ್ರಯಾಣಿಕರನ್ನು ಪತ್ತೆಹಚ್ಚುವ ಅತ್ಯುತ್ತಮ ವ್ಯವಸ್ಥೆ ಬಿಎಂಟಿಸಿಯಲ್ಲಿ ಇದುವರೆಗೂ ಇಲ್ಲ. ದೂರುಗಳ ಮೇರೆಗೆ ತಪಾಸಣಾ ಅಧಿಕಾರಿಗಳು ಕೆಲ ಬಸ್‌ಗಳನ್ನು ತಪಾಸಣೆಗೆ ಒಳಪಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ತಂತ್ರಜ್ಞಾನ ಆಧಾರಿತ ತಪಾಸಣೆ ಪರ್ಯಾಯ ವ್ಯವಸ್ಥೆ ಆಗಬಲ್ಲದು.

* ವಿಜಯಕುಮಾರ್‌ ಚಂದರಗಿ 

ಟಾಪ್ ನ್ಯೂಸ್

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

ಬೆಳ್ತಂಗಡಿ: ಗ್ರಾಪಂ 3ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ, ಕಾಂಗ್ರೆಸ್ ಬೆಂಬಲಿತ 3ಅಭ್ಯರ್ಥಿಗಳ ಜಯ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

Video: ಸಿಕ್ಕ ಸಿಕ್ಕವರನ್ನು ಎತ್ತಿ ಬಿಸಾಕಿದ ಗೂಳಿ… 3 ಗಂಟೆಗಳ ಕಾರ್ಯಾಚರಣೆ ಬಳಿಕ ಸೆರೆ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

Udaipur Palace: ಉತ್ತರಾಧಿಕಾರ ವಿಚಾರದಲ್ಲಿ ಉದಯಪುರ ಅರಮನೆಯಲ್ಲಿ ಸಂಘರ್ಷ: ಮೂವರಿಗೆ ಗಾಯ

Udaipur Palace: ರಾಜಮನೆತನದ ಎರಡು ಗುಂಪುಗಳ ನಡುವೆ ಘರ್ಷಣೆ: ಮೂವರಿಗೆ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

Drunk and Drive: ಮದ್ಯ ಸೇವಿಸಿ ಚಾಲನೆ: ವಾರದಲ್ಲಿ 71 ಲಕ್ಷ ದಂಡ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

CCB Police: ವಕೀಲೆ ಜೀವಾ ಆತ್ಮಹತ್ಯೆ ಕೇಸ್‌ ಸಿಸಿಬಿಗೆ ವರ್ಗಾವಣೆ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

Arrested: ಹೊಯ್ಸಳ ಪೊಲೀಸ್‌ ಮೇಲೆ ಹಲ್ಲೆ; ಬಂಧನ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು

By Election… ಕಮಲಕ್ಕೊಂದು ಕೈಗೊಂದು

By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Crime: ಶೀಲ ಶಂಕಿಸಿ ಪತ್ನಿಯ ಹತ್ಯೆಗೈದಿದ್ದ ಪತಿಯನ್ನು ವಶಕ್ಕೆ ಪಡೆದ ಪೊಲೀಸರು 

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Leopard: ನೆಲಮಂಗಲ ಸಮೀಪ ಚಿರತೆ ಸೆರೆ: ನರಭಕ್ಷಕ ಇದೇನಾ? ವರದಿ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.