ಪಿಡಿಎಗೆ ಸಾಲುತ್ತಿಲ್ಲ ಬ್ಯಾಟರಿ ಪವರ್‌


Team Udayavani, Apr 10, 2017, 11:39 AM IST

police-fine-story.jpg

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂ ಸುವವರ ವಿರುದ್ಧ ಕಣ್ಗಾವಲು ವ್ಯವಸ್ಥೆಗೆ ಸಂಚಾರ ಪೊಲೀಸರಿಗೆ ಬ್ಲ್ಯಾಕ್‌ಬೆರಿ ಬದಲು ವಿತರಿಸಿರುವ ಅತ್ಯಾಧುನಿಕ ತಂತ್ರಜ್ಞಾನವನ್ನೊಳಗೊಂಡ ಪರ್ಸನಲ್‌ ಡಿಜಿಟಲ್‌ ಅಸಿಸ್ಟೆಂಟ್‌(ಪಿಡಿಎ) ಯಂತ್ರದ ಬಗ್ಗೆ ಸಿಬ್ಬಂದಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆಯಾದರೂ “ಬ್ಯಾಟರಿ ಸಾಕಾಗುತ್ತಿಲ್ಲ’ ಎಂಬ ಮಾತು ಕೇಳಿಬರುತ್ತಿದೆ.

ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ಗಳ ಸ್ವೆ„ಪಿಂಗ್‌, ಕ್ಯಾಮೆರಾ, ಪ್ರಿಂಟಿಂಗ್‌, ಜಿಪಿಎಸ್‌ ಸೇರಿದಂತೆ ನಾಲ್ಕೈದು ಅನುಕೂಲಗಳು ಅಡಕವಾಗಿರುವ ಈ ಯಂತ್ರದ ಬ್ಯಾಟರಿ ಸಾಮರ್ಥ್ಯ ಇಡೀ ದಿನಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ಸಂಚಾರ ಪೊಲೀಸರಿಗೆ ಈ ಸಮಸ್ಯೆ ತಲೆನೋವಾಗಿ ಪರಿಣಮಿಸಿದೆ. ಮೊದಲು ಬಳಕೆ ಮಾಡುತ್ತಿದ್ದ ಬ್ಲ್ಯಾಕ್‌ಬೆರಿ ಯಂತ್ರದಲ್ಲಿ ಒಂದೇ ವ್ಯವಸ್ಥೆ ಇದ್ದುದ್ದರಿಂದ ಬ್ಯಾಟರಿ ಸಾಮರ್ಥ್ಯ ಇಡೀ ದಿನಕ್ಕೆ ಸಾಕಾಗುತ್ತಿತ್ತು.

ಇದೀಗ ನೀಡಿರುವ ಪಿಡಿಎನಲ್ಲಿ ಅಪ್ಲಿಕೇಷನ್‌ಗಳು ಅಕವಾಗಿದ್ದು, ಎಲ್ಲಾ ಅಪ್ಲಿಕೇಷನ್‌ಗಳು ಏಕಕಾಲದಲ್ಲಿ ಕಾರ್ಯನಿರ್ವಹಿಸಬೇಕಾಗಿದೆ. ಹಾಗಾಗಿ ಅವು ಹೆಚ್ಚು ಬ್ಯಾಟರಿ ತಿನ್ನುತ್ತಿದ್ದು, ಇಡೀ ದಿನಕ್ಕೆ ಬಾಳಿಕೆ ಬರುತ್ತಿಲ್ಲ. ಆದ್ದರಿಂದ ಬ್ಯಾಟರಿ ಸಾಮರ್ಥಯ ಹೆಚ್ಚು ಇರುವ ಯಂತ್ರ ಅಥವಾ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳಲು ಪ್ರತ್ಯೇಕ ಸಾಧನ(ಪವರ್‌ ಬ್ಯಾಂಕ್‌) ಒದಗಿಸಿದರೆ ಅನುಕೂಲವಾಗುತ್ತದೆ ಎಂಬುದು ಸಂಚಾರ ಪೊಲೀಸ್‌ ಸಿಬ್ಬಂದಿಯ ಮನವಿ.

ದಿನಕ್ಕೆ ಎರಡೆರಡು ಬಾರಿ ಜಾರ್ಜ್‌: ಕೆಲ ತಿಂಗಳ ಕಾಲ ವಿದೇಶದಲ್ಲಿ ತರಬೇತಿ ಪಡೆದ ಪೊಲೀಸ್‌ ಆಯುಕ್ತರು, ನಗರಾದ್ಯಂತ ಸಂಚಾರ ವ್ಯವಸ್ಥೆ ವಿದೇಶಿ ಮಾದರಿಯಲ್ಲೇ ಇರಬೇಕೆಂದು ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪಿಡಿಎ ಯಂತ್ರವನ್ನು ಸಂಚಾರ ಪೊಲೀಸರಿಗೆ ವಿತರಿಸಿದ್ದಾರೆ. ಆದರೆ, ಈ ಯಂತ್ರ ಒಂದು ಪಾಳಿಯ ಬ್ಯಾಟರಿ ಸಾಮರ್ಥಯ ಕೂಡ ಹೊಂದಿಲ್ಲ.

ಇದರಿಂದ ಸಂಚಾರ ಪೊಲೀಸರು ದಿನಕ್ಕೆರಡು ಬಾರಿ ಜಾರ್ಜ್‌ ಮಾಡಿಕೊಳ್ಳಬೇಕಿದೆ. ನಡುರಸ್ತೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಸಿಬ್ಬಂದಿಗೆ ಈ ಸಾಧನದ ಬ್ಯಾಟರಿ ಚಾರ್ಜ್‌ ಮಾಡಿಕೊಳ್ಳುವ ಕೆಲಸವೂ ಹೆಚ್ಚುವರಿಯಾಗಿದೆ. ಅಲ್ಲದೆ, ಇದನ್ನು ಚಾರ್ಜ್‌ ಮಾಡಿಕೊಳ್ಳಲು ಸಂಚಾರ ನಿರ್ವಹಣೆ ಕೆಲಸ ಬಿಟ್ಟು ಪಕ್ಕದ ಠಾಣೆ ಅಥವಾ ಮಳಿಗೆಗಳಿಗೆ ಹೋಗಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ.

ಹಿರಿಯ ಅಕಾರಿಗಳಿಗೆ ದೂರು: ನೂತನ ಬ್ಲ್ಯಾಕ್‌ಬೆರಿ ಸಾಧನದಲ್ಲಿ ಕಂಡು ಬರುತ್ತಿರುವ ಬ್ಯಾಟರಿ ದೋಷ ಪರಿಹರಿಸುವಂತೆ ಸಂಚಾರ ವಿಭಾಗದ ಹಿರಿಯ ಅಕಾರಿಗಳಿಗೆ ಸಿಬ್ಬಂದಿ ಮನವಿ ಮಾಡಿದ್ದಾರೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಅಕಾರಿಗಳು ಸದ್ಯದಲ್ಲೇ ಉತ್ತಮ ಬ್ಯಾಟರಿ ಸಾಮರ್ಥಯ ಹೊಂದಿರುವ ಯಂತ್ರ ಅಥವಾ ಬ್ಯಾಟರಿ ರಿಚಾರ್ಜ್‌ ಮಾಡಿಕೊಳ್ಳಲು ಪವರ್‌ ಬ್ಯಾಂಕ್‌ ವಿತರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

20 ಲಕ್ಷ ದಂಡ ವಸೂಲಿ: ಪರ್ಸನಲ್‌ ಡಿಜಿಟಲ್‌ ಅಸಿಸ್ಟೆಂಟ್‌(ಪಿಡಿಎ) ಸಾಧನವನ್ನು ಕೇಂದ್ರ ಉಪವಿಭಾಗದ ಕಬ್ಬನ್‌ ಪಾರ್ಕ್‌, ಹಲಸೂರು ಗೇಟ್‌, ಹೈಗ್ರೌಂಡ್ಸ್‌, ಅಶೋಕನಗರ, ವಿಲ್ಸನ್‌ ಗಾರ್ಡನ್‌, ಸದಾಶಿವನಗರ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಸುಮಾರು 114 ಕಡೆ ಮಾತ್ರ ವಿತರಿಸಲಾಗಿದೆ. ಈ ಯಂತ್ರದಿಂದ ಕಳೆದೊಂದು ವಾರದಲ್ಲಿ ಸುಮಾರು 27 ಸಾವಿರ ಸಂಚಾರ ನಿಯಮ ಉಲ್ಲಂ ಸಿದ ಪ್ರಕರಣಗಳನ್ನು ದಾಖಲಿಸಿದ್ದು, 20 ಲಕ್ಷ ರೂಪಾಯಿಗೂ ಅಕ ದಂಡ ವಸೂಲಿ ಮಾಡಲಾಗಿದೆ. ಈ ತಿಂಗಳ ಅಂತ್ಯದಲ್ಲಿ ನಗರದ ಎಲ್ಲಾ ಠಾಣೆಗಳಿಗೆ ವಿತರಿಸಲಾಗುತ್ತದೆ ಎಂದು ಅಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬ್ಬಂದಿಗೆ ತರಬೇತಿ: ಹಳೆಯ ಬ್ಲ್ಯಾಕ್‌ಬೆರಿ ಸಾಧನದಲ್ಲಿದ್ದ ತಂತ್ರಾಂಶವನ್ನು ಹೆಚ್ಚುವರಿಯಾಗಿ ಅಭಿವೃದ್ಪಡಿಸಿ ನೂತನ ಬ್ಲ್ಯಾಕ್‌ಬೆರಿ ಅಥವಾ ಪಿಡಿಎನಲ್ಲಿ ಅಳವಡಿಸಲಾಗಿದೆ. ಈ ಹೊಸ ಮಾದರಿಯ ತಂತ್ರಾಂಶದ ಬಗ್ಗೆ ಮಾಹಿತಿ ನೀಡಲು ಸಂಚಾರ ನಿರ್ವಾಹಣ ಕೇಂದ್ರದಲ್ಲಿ (ಟಿಎಂಸಿ) ಪ್ರತಿ ನಿತ್ಯ ಒಂದು ಗಂಟೆಗಳ ಕಾಲ ಠಾಣಾವಾರು ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಪ್ರಾತ್ಯಕ್ಷಿಕೆ ಮೂಲಕ ಬಳಕೆಯ ಬಗ್ಗೆ ಹೇಳಿಕೊಡಲಾಗುತ್ತದೆ ಎಂದು ಸಂಚಾರ ವಿಭಾಗದ ಅಕಾರಿಗಳು ತಿಳಿಸಿದ್ದಾರೆ.

ಕಿರಿಕಿರಿ ಇಲ್ಲ: ಈ ಮೊದಲು ಸಂಚಾರ ಸಿಬ್ಬಂದಿ ಎದೆ ಭಾಗದಲ್ಲಿ ಕ್ಯಾಮೆರಾ ಅಳವಡಿಸಿಕೊಂಡು ಸಂಚಾರ ನಿಯಮ ಉಲ್ಲಂ ಸಿದ ವಾಹನ ಸವಾರರ ಭಾವಚಿತ್ರ, ವಿಡಿಯೋ ಸೆರೆ ಹಿಡಿದು, ಈ ಸಾಕ್ಷ ಬಳಸಿ ದಂಡ ವಿಸುತ್ತಿದ್ದರು. ಅಲ್ಲದೆ, ಪ್ರಿಂಟರ್‌ಅನ್ನು ಪ್ರತ್ಯೇಕವಾಗಿ ನಿರ್ವಹಿಸಬೇಕಿತ್ತು. ಇದೀಗ ಹೊಸ ಯಂತ್ರದಿಂದ ಎಲ್ಲವನ್ನು ಒಂದೇ ಬಾರಿ ಉಪಯೋಗಿಸುವುದರಿಂದ ಸಮಯ ಉಳಿತಾಯವಾಗುವುದರೊಂದಿಗೆ ಸಾರ್ವಜನಿಕರು ಹಾಗೂ ಸಿಬ್ಬಂದಿ ನಡುವೆ ಉಂಟಾಗುತ್ತಿದ್ದ ಕಿರಿಕಿರಿ ತಪ್ಪಿದೆ ಎನ್ನುತ್ತಾರೆ ಸಾಧನ ಬಳಕೆ ಮಾಡುತ್ತಿರುವ ಸಿಬ್ಬಂದಿಯೊಬ್ಬರು.

ಪಿಡಿಎ ಯಂತ್ರಗಳನ್ನು ಬಳಸಲು ಆರಂಭಿಸಿದ ಬಳಿಕವೇ ಅದರ ಸಮಸ್ಯೆ ಏನೆಂದು ಗೊತ್ತಾಗುತ್ತದೆ. ಬ್ಯಾಟರಿ ಸಾಮರ್ಥ್ಯದ ಬಗ್ಗೆ ಸಂಚಾರ ಪೊಲೀಸರು ಗಮನಕ್ಕೆ ತಂದಿದ್ದಾರೆ. ಉಳಿದಂತೆ ಅದು ಅತ್ಯುತ್ತಮ ಎಂಬ ಅಂಶವನ್ನೂ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸಿ, ಬ್ಯಾಟರಿ ಸಾಮರ್ಥ್ಯ ಹೆಚ್ಚಾಗಿರುವ ಯಂತ್ರಗ ಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. 
-ಪ್ರವೀಣ್‌ ಸೂದ್‌, ನಗರ ಪೊಲೀಸ್‌ ಆಯುಕ್ತ

* ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengaluru: ರಾಜಕಾಲುವೆ ಒತ್ತುವರಿಯೇ ಅವಾಂತರಕ್ಕೆ ಕಾರಣ; ಆಯುಕ್ತ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

Bengalruru Rain: ಬಿಬಿಎಂಪಿ ಕಳಪೆ ಕಾಮಗಾರಿ ಬಿಚ್ಚಿಟ್ಟ ಮಳೆ

5

Bengaluru Rain: ಮಳೆಗೆ 4 ಬಡಾವಣೆ ನಿವಾಸಿಗಳ ಗುಳೆ!

3

Bengaluru Airport: ನಗರದಲ್ಲಿ ಶೀಘ್ರವೇ ಏರ್‌ಟ್ಯಾಕ್ಸಿ ಸೇವೆ

Renukaswamy Case: 5 ಆರೋಪಿಗಳ ಜಾಮೀನು ಅರ್ಜಿ ವಜಾ

Renukaswamy Case: 5 ಆರೋಪಿಗಳ ಜಾಮೀನು ಅರ್ಜಿ ವಜಾ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.