ಶಾಂತಿಯೇ ಬಾಹುಬಲಿ ಸಂದೇಶ
Team Udayavani, Jan 24, 2018, 11:58 AM IST
ಬೆಂಗಳೂರು: ಜಗತ್ತಿನಲ್ಲಿ ಶಾಂತಿ, ತ್ಯಾಗ ಮತ್ತು ಸಹಬಾಳ್ವೆಯೇ ಶಾಶ್ವತ. ವಿಶ್ವ ಶಾಂತಿಯೇ ಬಾಹುಬಲಿಯ ಸಂದೇಶ ಎಂದು ಶಾಸಕ ಅಭಯ್‌ಚಂದ್ರ ಜೈನ್ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ಲಲಿತಕಲಾ ಅಕಾಡೆಮಿ ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ತು ಸಹಯೋಗದಲ್ಲಿ ಮಹಾಮಸ್ತಕಾಭಿಷೇಕ ಅಂಗವಾಗಿ ಮಂಗಳವಾರ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದ್ದ ಶ್ರವಣಬೆಳಗೊಳದ ಭಿತ್ತಿಚಿತ್ರ ಪ್ರದರ್ಶನ ಉದ್ಘಾಟಿಸಿ ಶಾಸಕರು ಮಾತನಾಡಿದರು. ಈ ಪ್ರದರ್ಶನ 31ರವರೆಗೆ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ನಡೆಯಲಿದೆ ಎಂದರು.
ಹೊಸದು ಬಂದಾಗ ಹಳೆಯದನ್ನು ನಾವು ಮರೆತು ಬಿಡುತ್ತೇವೆ. ಅದೇ ರೀತಿ ಹೊಸ ಚಿತ್ರಗಳು ಬಂದಾಗ ಹಳೆ ಚಿತ್ರಗಳು ಮೂಲೆ ಸೇರುತ್ತವೆ. ಆದರೆ ಅವುಗಳನ್ನು ಸಂರಕ್ಷಿಸುವ ಮೂಲಕ ಯುವಜನರಿಗೆ ಇತಿಹಾಸದ ಅರಿವು ಮೂಡಿಸುವ ಕಾರ್ಯವಾಗಬೇಕು. ತಂತ್ರಜ್ಞಾನಕ್ಕೆ ಪೂರಕವಾಗಿ ಬೆಳೆಯಬೇಕು ಅನ್ನುವುದು ನಿಜ.
ಆದರೆ, ಈಗಿನ ಯುವಕರು ತಮ್ಮ ಜೀವನದ ಬಹುಪಾಲನ್ನು ಇಂಟರ್ನೆಟ್, ಮೊಬೈಲ್‌ಗಳ ಗೀಳಿಗೆ ಬಿದ್ದು, ಜೀವನೋತ್ಸಾಹವೇ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಭಿತ್ತಚಿತ್ರಗಳ ಮೂಲಕ ಜೈನ ಪರಂಪರೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಇತಿಹಾಸ ಜ್ಞಾಪಿಸುವ ಕೆಲಸ ಶ್ಲಾಘನೀಯ ಎಂದರು.
ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ. ಪದ್ಮಾಶೇಖರ್ ಮಾತನಾಡಿ, ನಮ್ಮ ಪೂರ್ವಜರು ಬಿಟ್ಟಿ ಹೋದ ಜ್ಞಾನಸಂಪತ್ತು ಇಡೀ ವಿಶ್ವವನ್ನೇ ಗೆಲ್ಲುವಷ್ಟಿದೆ. ಭಾರತೀಯ ಪರಂಪರೆ ಬಹುಮುಖದ್ದು. ಅದರಲ್ಲೂ ಕರ್ನಾಟಕ ಇತಿಹಾಸವೇ ಜೈನ ಇತಿಹಾಸವೆಂದರೆ ಅತಿಶಯೋಕ್ತಿಯಲ್ಲ.
ಜೈನ ಕವಿಗಳು, ಸಾಹಿತಿಗಳು, ಜೈನ ರಾಜರುಗಳ ಕೊಡುಗೆ ಸಾಕಷ್ಟಿದೆ. ಗತ ವೈಭವವನ್ನು ಯುವಕರು ಅರಿಯಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲಲಿತಕಲಾ ಅಕಾಡೆಮಿ ಅಧ್ಯಕ್ಷೆ ಎಂ.ಜೆ.ಕಮಲಾಕ್ಷಿ ಮಾತನಾಡಿ, ಫೆಬ್ರವರಿಯಲ್ಲಿ ಜರುಗಲಿರುವ ಶ್ರವಣಬೆಳಗೊಳ ಭಗವಾನ್ ಬಾಹುಬಲಿ ಮಹಾಮಸ್ತಕಾಭಿಷೇಕಕ್ಕೆ ಪೂರಕವಾಗಿ ಜೈನ ಧರ್ಮದ ಇತಿಹಾಸವನ್ನು ಕಲಾವಿದರು ತಮ್ಮ ಕಲಾಕುಂಚದಲ್ಲಿ ಅಚ್ಚುಮೂಡಿಸಿದ್ದರು.
ಅವುಗಳು ಲಲಿತಕಲಾ ಅಕಾಡೆಮಿ ಆಸ್ತಿಯಾಗಿದ್ದು, ಅಳಿದುಳಿದ ಕಲಾಕೃತಿಗಳನ್ನು ಸಂರಕ್ಷಿಸಿ ಇಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ ಎಂದು ಹೇಳಿದರು. ಅಕಾಡೆಮಿ ರಿಜಿಸ್ಟ್ರಾರ್ ಎಚ್.ವಿ.ಇಂದ್ರಮ್ಮ, ಚಿತ್ರಕಲಾ ಪರಿಷತ್ತು ಉಪಾಧ್ಯಕ್ಷ ರಾಮಕೃಷ್ಣ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.