ತ್ಯಾಜ್ಯ ದಂಡಕ್ಕೂ ಕ್ಯಾರೇ ಎನ್ನದ ಜನ
ಕೋಟಿ ಕೋಟಿ ದಂಡ ಸಂಗ್ರಹವಾದರೂ ವಿಲೇವಾರಿ ವ್ಯವಸ್ಥೆಯಲ್ಲಿ ಗೋಚರಿಸದ ಬದಲಾವಣೆ
Team Udayavani, Dec 8, 2020, 12:41 PM IST
ಬೆಂಗಳೂರು: ನಗರದಲ್ಲಿ ಕಸ ನಿಯಮ ಉಲ್ಲಂಘನೆ ಮಾಡುತ್ತಿರುವವರ ಮೇಲೆ ಪಾಲಿಕೆ ಬಳಸುತ್ತಿರುವ ದಂಡ ಅಸ್ತ್ರ ಪ್ರಯೋಗಕ್ಕೂ ಸಾರ್ವಜನಿಕರು ಮಣಿಯುತ್ತಿಲ್ಲ.
ದಂಡ ವಿಧಿಸಲು ಪ್ರಾರಂಭಿಸಿದ ಮೇಲೆ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗಬೇ ಕಿತ್ತು. ಆದರೆ, ನಿಯಮ ಉಲ್ಲಂಘನೆ ಮಾಡುವವರಸಂಖ್ಯೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ. ಅಲ್ಲದೆ, ದಿನದಿಂದ ದಿನಕ್ಕೆ ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
2019ರಸೆ.ತಿಂಗಳಿನಿಂದ ಮಾರ್ಷಲ್‌ಗ ಳಮೂಲಕ ದಂಡ ವಿಧಿಸಲಾಗುತ್ತಿದೆ.ಈಒಂದು ವರ್ಷದ ಅವಧಿ ಯಲ್ಲಿ ಕಸ ವಿಂಗಡಣೆ ಲೋಪ ಮತ್ತು ಎಲ್ಲೆಂದರಲ್ಲಿ ಕಸ ಎಸೆಯುವುದು ಸೇರಿದಂತೆ ಒಟ್ಟು 32,517 ಸಾವಿರ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗಿವೆ. ನಿಯಮ ಉಲ್ಲಂಘನೆ ಮಾಡಿದವರಿಂದ ಒಟ್ಟು 2.38 ಕೋಟಿ (2,38,84,193.5) ರೂ. ಸಂಗ್ರಹವಾಗಿದೆ.
ನಿಯಮ ಉಲ್ಲಂ ಸುವವರ ಮೇಲೆ ಪಾಲಿಕೆ ದಂಡ ವಿಧಿಸುತ್ತಿದ್ದರೂ, ಕೆಲವು ನಿರ್ದಿಷ್ಟ ಭಾಗದಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಸಾರ್ವಜನಿಕರು ನಿಯಮ ಉಲ್ಲಂಘನೆ ಮಾಡುತ್ತಿದ್ದಾರೆ ಎನ್ನುವುದು ಒಂದು ಕಡೆಯಾದರೆ ಇದೇ ಸಂದರ್ಭದಲ್ಲಿಪಾಲಿಕೆ ಕಸದ ಡಬ್ಬಿ ಇರಿಸುವುದು, ಕಸ ಸಂಗ್ರಹ ವೇಳಾಪಟ್ಟಿ ಮತ್ತಷ್ಟು ಜನ ಸ್ನೇಹಿ ಮಾಡಿಕೊಳ್ಳುವುದು ಮಾಡಿಲ್ಲ. ಹೀಗಾಗಿ, ನಿಯಮ ಉಲ್ಲಂಘನೆ ಪ್ರಕರಣಗಳು ಮುಂದುವರಿಯುತ್ತಲೇ ಇವೆ.
ಕಸ ನಿಯಮ ಉಲ್ಲಂಘನೆ ಮಾಡಿರುವ 25 ಸಾವಿರ ಜನ: ನಗರದಲ್ಲಿ ಕಸ ನಿಯಮ ಉಲ್ಲಂಘನೆ ಮಾಡುವವರ ಸಂಖ್ಯೆಯೇ ಅಧಿಕವಾಗಿದೆ. ಮಾರ್ಷಲ್‌ಗಳು ದಂಡ ವಿಧಿಸಲು ಪ್ರಾರಂಭಿಸಿದಾಗಿನಿಂದ ಡಿ.6ರ ವರೆಗೆ 24,919 ಜನ ಕಸ ನಿಯಮ ಉಲ್ಲಂಘನೆಮಾಡಿರುವುದು ವರದಿಯಾಗಿದೆ.
ನಗರದಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರು, ಪ್ಲಾಸ್ಟಿಕ್ ಬಳಕೆ, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರವಿಸ ರ್ಜನೆ ಹಾಗೂ ಧೂಮಪಾನ ಸೇರಿದಂತೆಕಸ ನಿರ್ವಹಣೆಯಲ್ಲಿ ನಿಯಮ ಉಲ್ಲಂಘನೆ ಮಾಡುವವರ ಮೇಲೆ ಮಾರ್ಷಲ್‌ಗಳ ಮೂಲಕ ಪಾಲಿಕೆ ಕಳೆದ ಸೆ.ನಿಂದ ದಂಡ ವಿಧಿಸುತ್ತಿದೆ.
ಇದನ್ನೂ ಓದಿ : ಭಾರತ್ ಬಂದ್ : ಚಿಕ್ಕಮಗಳೂರಿನಲ್ಲಿ ಪ್ರತಿಭಟನಾಕಾರರು ಮತ್ತು ವರ್ತಕರ ಮಾತಿನ ಚಕಮಕಿ
ಜನ ಮತ್ತು ವ್ಯವಸ್ಥೆ ಎರಡೂ ಬದಲಾಗಬೇಕು: ನಗ ರದಲ್ಲಿ ಕಸ ನಿಯಮ ಉಲ್ಲಂಘನೆ ತಡೆಗೆ ಸಾರ್ವಜನಿ ಕರು ಬದಲಾಗಬೇಕು. ಇದೇ ಸಂದರ್ಭದಲ್ಲಿ ಪಾಲಿಕೆ ಯಿಂದಲೂನೂತನಯೋಜನೆರೂಪಿಸಿಕೊಳ್ಳಬೇಕಿದೆ. ಅಲ್ಲಲ್ಲಿ ಕಸದ ಡಬ್ಬಿ, ರಾತ್ರಿ ಪಾಳಿ ಕಸ ಸಂಗ್ರಹ ಮತ್ತು ಕಸದ ಕಿಯೋಸ್ಕ್ ಮಾದರಿ ಅಳವಡಿಸಿಕೊಳ್ಳುವ ಸಂಬಂಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ ಎನ್ನುತ್ತಾರೆ ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಡಿ. ರಂದೀಪ್. ಕಸ ಎಸೆಯುವುದು ಕೆಲವರಿಗೆ ಜೀವನ ಶೈಲಿ ರೀತಿಯೂ ಬದಲಾಗುತ್ತಿದೆ. ಪಾಲಿಕೆಯಿಂದ ಸಾಕಷ್ಟು ಜಾಗೃತಿ ಮೂಡಿಸಿದ್ದೇವೆ. ಪಾಲಿಕೆಯಿಂದಲ್ಲೂ ಮತ್ತಷ್ಟು ಸಿದ್ಧತೆ ಮಾಡಿಕೊಳ್ಳಬೇಕಿದೆ. ರಾತ್ರಿಪಾಳಿ ಕಸ ಸಂಗ್ರದಂತಹ ಸಲಹೆಗಳೂ ಕೇಳಿಬಂದಿವೆ.ಈ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ. ಪಾಲಿಕೆಯೊಂದಿಗೆ ಸಾರ್ವಜನಿಕರೂ ಸಹಕಾರ ನೀಡಬೇಕು ಎಂದರು.
ಹೊಸ ವರ್ಷದಿಂದ ಘನತ್ಯಾಜ್ಯ ಸೇವಾ ಶುಲ್ಕ ಅಂತಿಮ ? :
ನಗರದಲ್ಲಿ ಮುಂದಿನ ಜನವರಿಯಿಂದ ಮಾಸಿಕ200 ರೂ. ಘನತ್ಯಾಜ್ಯ ಸೇವಾ ಶುಲ್ಕ ವಿಧಿಸಲು ಪಾಲಿಕೆ ಮುಂದಾಗಿದ್ದು, ಮಾಸಿಕ 200 ರೂ.ಗಿಂತಕಡಿಮೆ ವಿದ್ಯುತ್ ಬಿಲ್ ಪಾವತಿದಾರರಿಗೆ ಶೇ.50 ಶುಲ್ಕ ರಿಯಾಯಿತಿ ನೀಡಲು ಉದ್ದೇಶಿಸಿದೆ. ಸಾರ್ವಜನಿಕರು ಸೇರಿದಂತೆ ಹೊಟೇಲ್, ಕಲ್ಯಾಣಮಂಟಪ, ಆಸ್ಪತ್ರೆ, ಶಾಪಿಂಗ್ ಮಾಲ್‌ಗಳ ಮಾಲೀಕರಿಗೆಪ್ರತಿ ತಿಂಗಳುಘನತ್ಯಾಜ್ಯ ಸೇವಾ ಶುಲ್ಕ ವಿಧಿಸಲಿದ್ದು, ಬಿಬಿಎಂಪಿಯ ಕಸ ನಿರ್ವಹಣೆ ಉಪ ನಿಯಮ- 2020ರ ಅನ್ವಯ ವಸತಿ ಕಟ್ಟಡಗಳಿಂದ ಗರಿಷ್ಠ200 ರೂ. ಹಾಗೂ ವಾಣಿಜ್ಯ ಬಳಕೆದಾರರಿಂದ500 ರೂ. ಶುಲ್ಕ ಸಂಗ್ರಹಿಸಲು ತೀರ್ಮಾನಿಸಿದೆ. ಮಾಸಿಕ200 ರೂ. ವಿದ್ಯುತ್ ಬಿಲ್‌ಗೆ ಶೇ.50 ರಿಯಾಯ್ತಿ ಬಡವರಿಗೆ ಹಾಗೂ ಮಧ್ಯಮ ವರ್ಗ ದವರಿಗೆ ಹೊರೆಯಾಗಬಾರದೆಂಬ ಕಾರಣಕ್ಕೆ ಮಾಸಿಕ 200 ರೂ. ಗಿಂತ ವಿದ್ಯುತ್ ಬಿಲ್ ಪಾವತಿದಾರರಿಗೆ 100 ರೂ., ಮಾಸಿಕ 500 ರೂ. ಗಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿದಾರರಿಗೆ 200 ರೂ. ಶುಲ್ಕ ವಿಧಿಸಲು ಉದ್ದೇಶಿಸಲಾಗಿದೆ. ಈ ರೀತಿ ಕಸ ವಿಲೇವಾರಿಗೆ ಸೇವಾ ಶುಲ್ಕ ವಿಧಿಸುವುದರಿಂದ ಬಿಬಿಎಂಪಿಗೆ ಮಾಸಿಕ50ಕೋಟಿ ರೂ. ಸಂಗ್ರಹವಾಗುವ ಗುರಿ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ವಿಭಾಗದಲ್ಲಿ ನಿಯಮ ಉಲ್ಲಂಘನೆ : ನಗರದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಸ್ವಚ್ಛತೆ ಹಾಳು ಮಾಡುವವರು ಹಾಗೂ ನಿಯಮ ಪಾಲನೆ ಮಾಡದೆ ಇರುವವರ ಮೇಲೆ ದಂಡ ವಿಧಿಸಲಾಗುತ್ತಿದ್ದು,ಕಳೆದ ಸೆ.ನಿಂದ (ಡಿ.6) ರ ವರೆಗೆಕಸ ವಿಲೇವಾರಿ ನಿಯಮ ಉಲ್ಲಂಘನೆಯಲ್ಲಿ 24,919 ಪ್ರಕರಣ, ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟಕ್ಕೆ ಸಂಬಂಧಿಸಿದಂತೆ 6024 ಎಲ್ಲೆಂದರಲ್ಲಿ ಉಗುಳುವುದು 141, ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರ ವಿಸರ್ಜನೆ122, ಧೂಮಪಾನ36, ಇತರೆ 1,267 ಹಾಗೂ ಬಹಿಲುಬಹಿರ್ದೆಸೆಗೆ ಸಂಬಂಧಿಸಿದಂತೆ 8 ಪ್ರಕರಣಗಳು ಸೇರಿದಂತೆ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 32,517 ಸಾವಿರ ವಿವಿಧ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಮಾರ್ಷಲ್‌ಗಳು ದಂಡ ವಿಧಿಸಿದ್ದಾರೆ.
–ಹಿತೇಶ್‌ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.