ಫಲಪುಷ್ಪ ಪ್ರದರ್ಶನಕ್ಕೆ ಜನಸಾಗರ
Team Udayavani, Aug 10, 2018, 12:14 PM IST
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನವನ್ನು ಆರು ದಿನಗಳಲ್ಲಿ 1.20 ಲಕ್ಷ ಜನ ಕಣ್ತುಂಬಿಕೊಂಡಿದ್ದಾರೆ. ಗುರುವಾರ 12 ಸಾವಿರ ಮಂದಿ ಸಸ್ಯಕಾಶಿಗೆ ಭೇಟಿ ನೀಡಿದ್ದು, ಫಲಪುಷ್ಪ ಪ್ರದರ್ಶನದ ಆಕರ್ಷಣೆಯಾಗಿರುವ ಹೂವಿನಲ್ಲಿ ಅನಾವರಣಗೊಂಡ ಭಾರತೀಯ ಸೇನೆ, ವಾಯುಪಡೆ ಹಾಗೂ ನೌಕಪಡೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರದರ್ಶನದಲ್ಲಿರುವ ಸಿಯಾಚಿನ್ ಪ್ರವರ್ತ ಶ್ರೇಣಿ ಪ್ರತಿಕೃತಿ, ಯುದ್ಧ ವಿಮಾನ, ನೌಕೆಗಳ ಮಾದರಿ, ನೌಕಪಡೆ, ಭೂಸೇನೆಗಳ ಮಾದರಿ ವಿದ್ಯಾರ್ಥಿಗಳನ್ನು ಹೆಚ್ಚು ಆಕರ್ಷಿಸುತ್ತಿದೆ. ಕೆೆಂಪುತೋಟದಲ್ಲಿ ಅರಳಿನಿಂತ ಚಂದನವನ (ಕನ್ನಡ ಚಿತ್ರರಂಗ) ಕಣ್ತುಂಬಿಕೊಳ್ಳಲು ವಾರದ ದಿನಗಳಿಗಿಂತ ವಾರಾಂತ್ಯದಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಸ್ಯಕಾಶಿಗೆ ಆಗಮಿಸುತ್ತಿದ್ದಾರೆ. ಆರು ದಿನಗಳಲ್ಲಿ ಪ್ರವೇಶದರ ಶುಲ್ಕದಿಂದ 64.16 ಲಕ್ಷ ರೂ. ಸಂಗ್ರಹವಾಗಿದೆ. ಆ.15ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ ಎಂದು ತೋಟಗಾರಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಫಲಪುಷ್ಪ ಪ್ರದರ್ಶನ ಅಂಗವಾಗಿ ನಿತ್ಯ ಬಿಎಸ್‌ಎಫ್, ಎಂಇಜಿ ಮತ್ತು ಕೆಎಸ್‌ಆರ್‌ಪಿ ತಂಡದ ಬ್ಯಾಂಡ್ ವಾದನ ಆಲಿಸಲು ಹೆಚ್ಚಿನ ಸಂಖ್ಯೆಯ ಜನ ಬರುತ್ತಿದ್ದು, ಬಂಡೆಗಲ್ಲುಗಳ ಮೇಲೆ ಕುಳಿತು ಬ್ಯಾಂಡ್ ವಾದನ ಆಲಿಸುತ್ತಾರೆ. ಅಲ್ಲದೆ ಬ್ಯಾಂಡ್‌ಸ್ಟಾಂಡ್‌ನಲ್ಲಿ ಗಾನಬಜಾನ ಕಾರ್ಯಕ್ರಮ ನಡೆಯುತ್ತಿದ್ದು, ಗಾಯಕರಿಗೆ ವೇದಿಕೆ ಸೃಷ್ಟಿಸಲಾಗಿದೆ.
ಹಾಡಲು ಆಸಕ್ತಿ ಇರುವ ಮಂದಿ ಲಾಲ್‌ಬಾಗ್‌ನ ಬ್ಯಾಂಡ್‌ಸ್ಟಾಂಡ್‌ಕ್ಕೆ ಭೇಟಿ ನೀಡಿದರೆ ತಮ್ಮೊಳಗಿನ ಪ್ರತಿಭೆ ಪ್ರದರ್ಶಿಸಲು ವೇದಿಕೆ ದೊರೆಯಲಿದೆ. ಶುಕ್ರವಾರ, ಸೋಮವಾರ ಮತ್ತು ಮಂಗಳವಾರ ಶಾಲಾ ವಿದ್ಯಾರ್ಥಿಗಳಿಗೆ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಉಚಿತ ಪ್ರವೇಶ ಕಲ್ಪಿಸಲಾಗಿದೆ.
ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾದ ಮೊದಲ ದಿನ 15 ಸಾವಿರ ಜನ ಭೇಟಿ ನೀಡಿದ್ದರು. ಒಟ್ಟು 8.29 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಭಾನುವಾರ ವಾರಾಂತ್ಯವಷ್ಟೇ ಅಲ್ಲದೆ ಸ್ನೇಹಿತರ ದಿನಾಚರಣೆಯ ವಿಶೇಷವೂ ಇದ್ದರಿಂದ ಲಾಲ್‌ಬಾಗ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿತ್ತು. ಭಾನುವಾರ ಒಟ್ಟು 55 ಸಾವಿರ ಜನ ಫಲಪುಷ್ಪ ಪ್ರದದರ್ಶನ ವೀಕ್ಷಿಸಿದ್ದು, ಟಿಕೇಟ್ ಶುಲ್ಕದಿಂದ ಒಟ್ಟು 29.24 ಲಕ್ಷ ರೂ.ಸಂಗ್ರಹವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮಾಂಬಾಡಿ ಸುಬ್ರಹ್ಮಣ್ಯ ಭಟ್ ಗೆ ಕರ್ನಾಟಕ ಯಕ್ಷಗಾನ ಅಕಾಡಮಿಯ ಪಾರ್ತಿಸುಬ್ಬ ಪ್ರಶಸ್ತಿ ಘೋಷಣೆ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.