ಜನರ ಮೆದುಳು ಸೇರುತ್ತಿವೆಅಪಾಯಕಾರಿ ಧೂಳಿನ ಕಣ


Team Udayavani, Sep 1, 2018, 11:24 AM IST

blore-1.jpg

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ವಾತಾವರಣದ ಮೂಲಕ ನೇರವಾಗಿ ಮಾನವನ ಮೆದುಳು ಸೇರಿ ಆರೋಗ್ಯದ ಮೇಲೆ ಪರಿಣಾಮ ಬೀರುವ ಅತಿ ಸೂಕ್ಷ್ಮಧೂಳಿನ ಕಣ ಪಿಎಂ-1 ಆತಂಕ ಸೃಷ್ಟಿಸಿದೆ. ವಾತಾವರಣದಲ್ಲಿ ಈ ಕಣಗಳ ಪ್ರಮಾಣ ಅಧಿಕ ಮಾಲಿನ್ಯದಿಂದ ಹೆಚ್ಚಾಗುತ್ತಿದ್ದು ಇವುಗಳು ನೇರವಾಗಿ ರಕ್ತಕ್ಕೆ ಸೇರಿ ಮೆದುಳಿನ ಮೇಲೆ ಪರಿಣಾಮ ಬೀರಿ ಹಲವು ಮಾರಣಾಂತಿಕ ಕಾಯಿಲೆಗಳನ್ನು ಉಂಟು ಮಾಡುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.ಆದರೆ, ಇಂತಹ ಧೂಳಿನ ಕಣ ಪಿಎಂ-1 ಪತ್ತೆ ಮಾಡುವ ತಂತ್ರಜ್ಞಾನ ಮಾಲಿನ್ಯ ನಿಯಂತ್ರಣ ಮಂಡಳಿಯಲ್ಲಿ ಇಲ್ಲ.

ಹೌದು, ಸ್ವತಃ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿಯೇ ಇದನ್ನು ಒಪ್ಪಿಕೊಂಡಿದ್ದಾರೆ. ನಗರದಲ್ಲಿ
ಶುಕ್ರವಾರ ಭಾರತೀಯ ವಾಯುಮಾಲಿನ್ಯ ನಿಯಂತ್ರಣ ಸಂಘದ (ಐಪಿಸಿಎ) ಆಶ್ರಯದಲ್ಲಿ ಆಯೋಜಿಸಿಲಾಗಿದ್ದ “ಏರ್‌
ಓ ಥಾನ್‌’ ಕಾರ್ಯಾಗಾರದಲ್ಲಿ ಮಾತನಾಡಿದ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಮಹೇಶ್‌
ತಿಮ್ಮಯ್ಯ, ಮಂಡಳಿಯು ನಗರದಲ್ಲಿ ಸ್ಥಾಪಿಸಿರುವ ಮಾಲಿನ್ಯ ಪರೀಕ್ಷಾ ಕೇಂದ್ರಗಳಲ್ಲಿ ವಾತಾವರಣದ ಸೂಕ್ಷ್ಮಧೂಳಿನ ಕಣಗಳ ಪ್ರಮಾಣ ಪಿಎಂ-10ರಿಂದ ಪಿಎಂ-2.5 ವರೆಗೂ ಪತ್ತೆ ಮಾಡುವ ಸೌಲಭ್ಯಗಳಿವೆ. ಅವುಗಳ ಸಹಾಯದಿಂದ ಪಿಎಂ-2.5 ಪ್ರಮಾಣದ ಧೂಳಿನ ಕಣಗಳನ್ನು ಪತ್ತೆ ಮಾಡಿ ಅಗತ್ಯ ಕ್ರಮಕೈಗೊಳ್ಳುತ್ತವೆ. ಆದರೆ, ಪಿಎಂ 2.5 ಗಿಂತಲೂ ಅತ್ಯಂತ ಸೂಕ್ಷ್ಮವಾಗಿರುವ ಪಿಎಂ-1 ಧೂಳಿನ ಕಣವನ್ನು ಕಂಡುಹಿಡಿಯಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ
ತಂತ್ರಜ್ಞಾನದ ಕೊರತೆಯೇ ಆಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಾರಕವಾದ ಹಾಗೂ ನೇರವಾಗಿ ಮಾನವ ದೇಹವನ್ನು ಸೇರುವಂತಹ ಪಿಎಂ-1 ಧೂಳಿನ ಕಣ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರ ಪತ್ತೆ ಮಾಡಲು ವಿದೇಶದಲ್ಲಿ ಉಪಕರಣಗಳು ಲಭ್ಯವಿದ್ದು, ನಮ್ಮ ದೇಶದಲ್ಲಿ ಮಾತ್ರ ಈ ತಂತ್ರಜ್ಞಾನ ಲಭ್ಯವಿಲ್ಲ. ಈ ಹಿಂದೆ 2009ರಲ್ಲಿ ನ್ಯಾಷನಲ್‌ ಆ್ಯಂಬಿಯೆಂಟ್‌ ಏರ್‌ ಕ್ವಾಲಿಟಿ ಸ್ಟಾಂಡರ್ಡ್ಸ್‌ ನಿಯಮದಲ್ಲಿ ಪಿಎಂ-10, ಪಿಎಂ-2.5 ಪ್ರಮಾಣದ ಧೂಳಿನ ಕಣಗಳನ್ನು ಸೇರಿಸಲಾಗಿತ್ತು. ಅದರೂ ಅನೇಕ ರಾಜ್ಯಗಳಲ್ಲಿ ಕಳೆದ ವರ್ಷದವರೆಗೆ ಅದನ್ನು ಪತ್ತೆ ಮಾಡುವ ಉಪಕರಣಗಳು ಲಭ್ಯವಿರಲಿಲ್ಲ. ಪ್ರಸ್ತುತ ಎಲ್ಲ ರಾಜ್ಯಗಳು ಈ ಎರಡು ಮಾಲಿನ್ಯಕಾರಕಗಳನ್ನು ಪರೀಕ್ಷಿಸುವ ತಂತ್ರಜ್ಞಾನ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಪಿಎಂ-1 ಧೂಳಿನ ಕಣವನ್ನು ಕಂಡುಹಿಡಿಯುವ ತಂತ್ರಜ್ಞಾನ ಹಾಗೂ ಉಪಕರಣವನ್ನು ಭಾರತಕ್ಕೆ ತರಲಿದ್ದೇವೆ ಎಂದು ಹೇಳಿದರು.

ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಮಹೇಶ್‌ ಕಶ್ಯಪ್‌ ಮಾತನಾಡಿ, ಧೂಳಿನ ಕಣಗಳು ಸೂಕ್ಷ್ಮವಾದಷ್ಟೂ ಶರೀರವನ್ನು ಸುಲಭವಾಗಿ ಪ್ರವೇಶಿಸುತ್ತವೆ. ಅದರಲ್ಲೂ ಇತ್ತೀಚಿನ ಸಂಶೋಧನೆ ಪ್ರಕಾರ ಪಿಎಂ-10 ಧೂಳಿನ ಕಣವು ಮಾನವನ ಮೆದುಳಿಗೆ ಸೇರಿ ತೊಂದರೆ ಉಂಟುಮಾಡುತ್ತದೆ ಎಂದು ತಿಳಿದು ಬಂದಿದೆ. ಹಾಗಾಗಿ ಪಿಎಂ-10 ಧೂಳಿನ ಕಣವನ್ನು ಕಂಡುಹಿಡಿಯುವ ತಂತ್ರಜ್ಞಾನ ಅಳವಡಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಐಪಿಸಿಎ ಉಪ ನಿರ್ದೇಶಕಿ ಡಾ.ರಾಧಾ ಗೋಯಲ್‌ ಮಾತನಾಡಿ, ಹೊರಗಿನ ವಾಯುಮಾಲಿನ್ಯಕ್ಕಿಂತ ಮನೆಯ
ಒಳಗಿನ ಮಾಲಿನ್ಯ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮ ಬೀರುತ್ತಿದೆ. ಮನೆಯ ಒಳಗಿನ ವಾತಾವರಣವನ್ನು
ಸ್ವತ್ಛವಾಗಿಡಲು ಏಷ್ಯನ್‌ ಪೇಯಿಂಟ್ಸ್‌ ತನ್ನ ಉತ್ಪನ್ನಗಳಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಜತೆಗೆ ಹಲವು ಜಾಗೃತಿ ಕಾರ್ಯಕ್ರಮಗಳು ನಡೆಸಿಕೊಡುತ್ತಿದೆ ಎಂದರು.

ಐಐಎಸ್‌ಸಿ ವಿಜ್ಞಾನಿ ಪ್ರೊ. ನವಕಾಂತ ಭಟ್‌, ವಿಪ್ರಾಸ್ಪರ್ ಕಂಪನಿಯ ಮುಖ್ಯಸ್ಥ ಪ್ರದೀಪ್‌ ಮೈಥನಿ ಸೇರಿದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ತಜ್ಞರು, ವೈದ್ಯರು ಕಾರ್ಯಗಾರದಲ್ಲಿ ಭಾಗವಹಿಸಿದ್ದರು.

ಏನಿದು ಪಿಎಂ-1?
ವಾತಾವರಣದಲ್ಲಿ ವಿವಿಧ ಮೂಲಗಳಿಂದ ಉತ್ಪತ್ತಿಯಾಗುವ ಧೂಳಿನ ಕಣಗಳನ್ನು ಗಾತ್ರದ ಮೇಲೆ ಎರಡು ರೀತಿಯಲ್ಲಿ ವಿಭಾಗಿಸಲಾಗುತ್ತದೆ. ಮಾಸ್ಕ್ ಧರಿಸುವುದರಿಂದ ದೇಹದೊಳಗೆ ಪ್ರವೇಶಿಸದಂತೆ ತಡೆಯಬಹುದಾದ ಇಂತಹ ಧೂಳಿನ ಕಣಗಳನ್ನು ಪಿಎಂ 10 ಎಂದು ಗುರುತಿಸಲಾಗಿದೆ. ಇನ್ನು ಯಾವುದೇ ರೀತಿಯ ಮಾಸ್ಕ್ ಧರಿಸಿದರೂ ಸಹ ನೇರವಾಗಿ ಶ್ವಾಸಕೋಶ ಸೇರುವಷ್ಟು ಸಣ್ಣ ಗಾತ್ರದ ಕಣಗಳನ್ನು ಪಿಎಂ 2.5 ಎಂದು ಗುರುತಿದ್ದು, ಇಂತಹ ಕಣಗಳು ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತವೆ. ಅವೆರಡಕ್ಕಿಂತಲೂ ಕಡಿಮೆ ಗಾತ್ರದ ಅತೀ ಸೂಕ್ಷ್ಮ ಕಣಗಳೇ ಪಿಎಂ 1.

ತಂತ್ರಜ್ಞಾನ ಅಳವಡಿಕೆ ಪ್ರಯೋಜನ ಏನು? ನಗರದಲ್ಲಿ ಪಿಎಂ-1 ಗುರುತಿಸುವ ತಂತ್ರಜ್ಞಾನ ಅಳವಡಿಕೆಯಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ಅಂತಹ ಕಣಗಳಿರುವ ಪ್ರದೇಶವನ್ನು ಗುರುತಿಸಬಹುದಾಗಿದೆ. ಇದರಿಂದಾಗಿ ಅಂತಹ ಪ್ರದೇಶದಲ್ಲಿ ಮಾಲಿನ್ಯ ಪ್ರಮಾಣ ಕಡಿಮೆ ಮಾಡಲು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಜತೆಗೆ ಯಾವುದರಿಂದ ಪಿಎಂ -1 ಕಣಗಳು ಉತ್ಪತ್ತಿಯಾಗುತ್ತಿವೆ ಎಂಬುದನ್ನು ಪತ್ತೆ ಹಚ್ಚಲು ತಂತ್ರಜ್ಞಾನ ಸಹಕಾರಿಯಾಗಲಿದೆ.

ಟಾಪ್ ನ್ಯೂಸ್

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

1-wqewq

UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation: ಸಾವಿನ ನಂತರವೂ ನೆರವಾದ ಜೀವ

Organ Donation: ಸಾವಿನ ನಂತರವೂ ನೆರವಾದ ಜೀವ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

4

Udupi: ಮೀನುಗಾರಿಕೆ ಕಾರ್ಮಿಕ ಸಾವು; ಪ್ರಕರಣ ದಾಖಲು

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.