ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5-8ರಷ್ಟು ಕುಸಿತ
Team Udayavani, Aug 28, 2019, 3:05 AM IST
ಬೆಂಗಳೂರು: ಕಳೆದ ನಾಲ್ಕೈದು ವರ್ಷಗಳಲ್ಲಿ ರಫ್ತು ಕ್ಷೇತ್ರದಲ್ಲಿ ರಾಜ್ಯದ ಪ್ರದರ್ಶನ ನಿರ್ದಿಷ್ಟ ಇಳಿಮುಖವಾಗಿದ್ದು, ಅದರಲ್ಲೂ ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5ರಿಂದ 8 ರಷ್ಟು ಕುಸಿತವಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದರು.
ನಗರದ ಅಶೋಕ ಹೋಟೆಲ್‌ನಲ್ಲಿ ಭಾರತೀಯ ರಫ್ತು ಸಂಘಟನೆಗಳ ಒಕ್ಕೂಟ (ಎಫ್ಐಇಒ) ಮಂಗಳವಾರ ಲಕ್ಷ್ಮೀ ವಿಲಾಸ್ ಬ್ಯಾಂಕ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಕರ್ನಾಟಕದಿಂದ ರಫ್ತು; ಅವಕಾಶಗಳು ಮತ್ತು ಸವಾಲುಗಳು’ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕಳೆದ ನಾಲ್ಕೈದು ವರ್ಷಗಳಲ್ಲಿ ಚಿಲ್ಲರೆ ಸರಕುಗಳ ರಫ್ತಿನಲ್ಲಿ ಶೇ. 5ರಿಂದ 8ರಷ್ಟು ಕುಸಿತ ಕಂಡುಬಂದಿದ್ದು, ಮುಖ್ಯವಾಗಿ ಜೆಮ್ಸ್ ಆಂಡ್ ಜ್ಯುವೆಲರಿ ಕ್ಷೇತ್ರದಲ್ಲಿ ಈ ಇಳಿಮುಖ ಆಗಿದೆ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮುಂದಿನ ದಿನಗಳಲ್ಲಿ ಚೇತರಿಕೆ ಕಂಡುಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಉಳಿದಂತೆ ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಆರೋಗ್ಯ, ಅಟೋಮೊಬೈಲ್ ಕ್ಷೇತ್ರದಲ್ಲಿ ನಾವು ಮುಂದಿದ್ದೇವೆ. ಈ ನಿಟ್ಟಿನಲ್ಲಿ ರಫ್ತಿಗೆ ಸಾಕಷ್ಟು ಅವಕಾಶಗಳಿವೆ ಎಂದ ಅವರು, ಡಿಸೈನಿಂಗ್ (ವಿನ್ಯಾಸ)ನಲ್ಲಿ ಕೂಡ ರಾಜ್ಯದ ಪ್ರದರ್ಶನ ಉತ್ತಮವಾಗಿದೆ. ಮರ್ಸಿಡೀಸ್ ಬೆಂಜ್ ಕಾರು ಮತ್ತು ಅದರ ಉಪಕರಣಗಳು ಇಲ್ಲಿ ತಯಾರಾಗದಿರಬಹುದು. ಆದರೆ, ಅದರ ಡಿಸೈನ್ ಇಲ್ಲಿ ಸಿದ್ಧಗೊಳ್ಳುತ್ತದೆ. ಅಷ್ಟೇ ಅಲ್ಲ, ಸಿಡ್ನಿ ಮೆಟ್ರೋ ರೈಲಿನ ವಿನ್ಯಾಸ ಕೂಡ ಇಲ್ಲಿಯೇ ರೂಪುಗೊಂಡಿದೆ ಎಂದರು.
ಕೆಂಪೇಗೌಡ ಅಂ.ರಾ. ವಿಮಾನ ನಿಲ್ದಾಣವು ಕಾರ್ಗೊ ಹಬ್ ಆಗಿ ಪರಿವರ್ತನೆ ಆಗುತ್ತಿದೆ. ಇತ್ತೀಚೆಗೆ ಬೇಗ ಹಾಳಾಗುವಂತಹ ಉತ್ಪನ್ನಗಳ ರಫ್ತಿಗೆ ಅಗತ್ಯ ಶೈತ್ಯಾಗಾರ ಘಟಕ ನಿರ್ಮಿಸಲಾಗಿದೆ. ಇದರಿಂದ ಕೃಷಿ ಉತ್ಪನ್ನಗಳು, ಮಾಂಸ ರಫ್ತಿಗೆ ಸಾಕಷ್ಟು ನೆರವಾಗಿದೆ. ಅಲ್ಲದೆ, ಮಂಗಳೂರು, ಅಂಕೋಲಾ ಸೇರಿದಂತೆ ವಾಯವ್ಯ ಕರಾವಳಿ ಭಾಗದಲ್ಲಿ ಗೋಡಂಬಿ ಮತ್ತು ಸಮುದ್ರದ ಉತ್ಪನ್ನಗಳನ್ನು ರಫ್ತು ಮಾಡಲು ಅಗತ್ಯ ಮೂಲಸೌಕರ್ಯ ಒದಗಿಸಲು ಉದ್ದೇಶಿಸಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇದಕ್ಕೂ ಮುನ್ನ ಮಾತನಾಡಿದ ಎಫ್ಐಇಒ ದಕ್ಷಿಣ ಪ್ರಾದೇಶಿಕ ಅಧ್ಯಕ್ಷ ಇಸ್ರಾರ್ ಅಹ್ಮದ್, ರಫ್ತು ಕ್ಷೇತ್ರದಲ್ಲಿ ಚೀನಾ ಸೇರಿದಂತೆ ಪ್ರಮುಖ ದೇಶಗಳ ನಕಾರಾತ್ಮಕ ಪ್ರದರ್ಶನದ ನಡುವೆಯೂ ಭಾರತದ ಪ್ರದರ್ಶನ ಸಕಾರಾತ್ಮಕವಾಗಿದೆ. 2019ರ ಜುಲೈ ಅಂತ್ಯಕ್ಕೆ 26.33 ಬಿಲಿಯನ್ ಅಮೆರಿಕನ್ ಡಾಲರ್‌ನಷ್ಟು ರಫ್ತು ಆಗಿದೆ. 2018ರ ಇದೇ ಅವಧಿಯಲ್ಲಿ 25.75 ಬಿಲಿಯನ್ ಡಾಲರ್ ಇತ್ತು ಅಂದರೆ ಶೇ. 2.25ರಷ್ಟು ವೃದ್ಧಿ ಕಂಡುಬಂದಿದೆ.
ದೇಶದ 30 ಪ್ರಮುಖ ರಫ್ತು ಉತ್ಪನ್ನಗಳಲ್ಲಿ 17 ಉತ್ಪನ್ನಗಳ ರಫ್ತು ಸಕಾರಾತ್ಮಕ ರೀತಿಯಲ್ಲಿದೆ ಎಂದು ಮಾಹಿತಿ ನೀಡಿದರು. ತೆರಿಗೆ ಮತ್ತು ಸೀಮಾ ಸುಂಕ (ಬೆಂಗಳೂರು ವಲಯ) ಮುಖ್ಯ ಆಯುಕ್ತ ಎ.ಕೆ. ಜೋತಿಷಿ, ಲಕ್ಷ್ಮೀ ವಿಲಾಸ್ ಬ್ಯಾಂಕ್ ಲಿ., ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥಸಾರಥಿ ಮುಖರ್ಜಿ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.