ಪಿಇಎಸ್ ತಾಂತ್ರಿಕ ವಿವಿಯಲ್ಲಿ ವಾರ್ಷಿಕ ಪದವಿ ಪ್ರದಾನ
Team Udayavani, Sep 19, 2017, 11:48 AM IST
ಬೆಂಗಳೂರು: ಜಗತ್ತು ಈಗ ಸಂಪರ್ಕ ಜಾಲದೊಂದಿಗೆ ಸಮಗ್ರವಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತು ಪದವೀಧರರಿಗೆ ಅನ್ವೇಷಿಸಲು ಸಾಕಷ್ಟು ವಿಷಯಗಳು ಕಾಯುತ್ತಿವೆ. ಕ್ಷಿಪ್ರ ಬದಲಾವಣೆಗೆ ಜಗತ್ತಿನಲ್ಲಿ ವಿಫುಲ ಅವಕಾಶಗಳು ಹುಟ್ಟಿಕೊಂಡಿವೆ ಎಂದು ಐಟಿ-ಬಿಟಿ ಕ್ಷೇತ್ರದ ಕೌಶಲ್ಯ ಸಮಿತಿ ಮತ್ತು ನಾಸ್ಕಾಮ್ ಉಪಾಧ್ಯಕ್ಷೆ ಡಾ. ಸಂಧ್ಯಾ ಚಿಂತಲ ಅಭಿಪ್ರಾಯಪಟ್ಟರು.
ಇತೀ¤ಚೆಗೆ ನಗರದ ಪಿಇಎಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಡಾ. ಸಂಧ್ಯಾ ಚಿಂತಲ ಅವರು ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಪದಕ ಮತ್ತು ಪ್ರಶಸ್ತಿ ಪತ್ರ ನೀಡಿ ತಮ್ಮ ಅನುಭವ ಹಂಚಿಕೊಂಡರು.
ಪೆಸಿಟ್ ವಿವಿ ಕುಲಪತಿ ಡಾ. ಎಂ.ಆರ್.ದೊರೆಸ್ವಾಮಿ ಮಾತನಾಡಿ, ಪಿಇಎಸ್ ಸದಾ ಉತ್ತಮ ಫಲಿತಾಂಶ ಹಾಗೂ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಉತ್ಸುಕವಾಗಿದೆ. ಮಕ್ಕಳು ಪಿಇಎಸ್ ಸಂಸ್ಥೆಗಳನ್ನು ಸೇರಲು ಬಯಸುವುದನ್ನು ಗಮನಿಸಿದಾಗ ಸಂಸ್ಥೆಯ ಸಾಧನೆಯ ಅರಿವಾಗುತ್ತದೆ. ಪದವಿ ಪ್ರದಾನ ಸಮಾರಂಭಗಳು ನಮಗೆ ಪವಿತ್ರ ಕಾರ್ಯಕ್ರಮಗಳಿದ್ದಂತೆ. ಪದವಿ ಪಡೆದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿ ಎಂದು ಹರಸಿದರು.
ಈ ಸಂದರ್ಭದಲ್ಲಿ ರ್‍ಯಾಂಕ್ ಗಳಿಸಿದ 94 ವಿದ್ಯಾರ್ಥಿಗಳಿಗೆ ಸ್ವರ್ಣ ಪದಕ ಮತ್ತು ಪ್ರಮಾಣ ಪತ್ರ ನೀಡಲಾಯಿತು ಹಾಗೂ 1132 ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪದವಿ ಪತ್ರಗಳನ್ನು ವಿತರಿಸಲಾಯಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಕರಿಸಿದ್ದಪ್ಪ, ಪ್ರೊ. ಡಿ. ಜವಾಹರ್, ಪಿಆರ್‌ಒ ಚಾನ್ಸೆಲರ್, ಪಿಇಎಸ್ ವಿವಿ ಮತ್ತು ಸಿಇಒ ಪಿಇಎಸ್ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ
Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್ ಎಚ್ಚರಿಕೆ
ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.