Arrested: ದರೋಡೆಗೆ ಸಂಚು: 9 ವರ್ಷ ಬಳಿಕ ಸೆರೆ


Team Udayavani, Nov 11, 2023, 10:59 AM IST

tdy-6

ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ ಪ್ರಕರಣದಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೊಬ್ಬ 9 ವರ್ಷಗಳ ಬಳಿಕ ಎಂ-ಸಿಸಿಟಿಎನ್‌ಎಸ್‌ ಆ್ಯಪ್‌ ಮೂಲಕ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಹಾಸನ ಮೂಲದ ಲಕ್ಷ್ಮಣ್‌ (47) ಬಂಧಿತ.

2014ನೇ ಸಾಲಿನಲ್ಲಿ ದರೋಡೆಗೆ ಸಂಚು ಆರೋಪದಡಿ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಬಳಿಕ ಜಾಮೀನು ಪಡೆದು ಹೊರಗೆ ಬಂದಿದ್ದ ಆರೋಪಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಹೀಗಾಗಿ ನ್ಯಾಯಾಲಯ ಈತನ ವಿರುದ್ಧ ಹಲವು ಬಾರಿ ವಾರೆಂಟ್‌ ಹೊರಡಿಸಿತ್ತು.

ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲಿಸಲು ನಗರದ ಎಲ್ಲಾ ಪೊಲೀಸ್‌ ಠಾಣೆಗಳಿಗೆ ಎಂ ಸಿಸಿಟಿಎನ್‌ಎಸ್‌ ಮೊಬೈಲ್‌ ಆ್ಯಪ್‌ ನೀಡಲಾಗಿದ್ದು, ಬೆರಳು ಮುದ್ರೆ ಮೂಲಕ ಪರಿಶೀಲನೆಗಾಗಿ ಡಿವೈಸ್‌ ವಿತರಿಸಲಾಗಿದೆ. ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅವರ ಬೆರಳು ಮುದ್ರೆಯನ್ನು ಈ ಡಿವೈಎಸ್‌ ಮೇಲೆ ಒತ್ತಿದರೆ, ಆ ವ್ಯಕ್ತಿ ಈ ಹಿಂದೆ ಯಾವುದಾದರೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನೆ ಎಂಬ ಮಾಹಿತಿ ಲಭ್ಯವಾಗುತ್ತದೆ.

ಅದೇ ರೀತಿ ನ.8ರಂದು ರಾತ್ರಿ ರಾಜಗೋ ಪಾಲನಗರ ಠಾಣೆ ಎಎಸ್‌ಐ ಕೃಷ್ಣಮೂರ್ತಿ, ಹೆಡ್‌ಕಾನ್‌ಸ್ಟೇಬಲ್‌ ಹಾಗೂ ಕಾನ್‌ಸ್ಟೇಬಲ್‌ ಪೀಣ್ಯ 2ನೇ ಹಂತದ ಗ್ಯಾಸ್‌ ಬಂಕ್‌ ಬಳಿ ಹೊಯ್ಸಳ ವಾಹನದಲ್ಲಿ ಗಸ್ತು ಕರ್ತವ್ಯದಲ್ಲಿದ್ದರು. ಈ ವೇಳೆ ಅನುಮಾನಾಸ್ಪದವಾಗಿ ವ್ಯಕ್ತಿಯೊಬ್ಬ ಓಡಾಡುತ್ತಿರುವುದು ಕಂಡು ಬಂದಿದೆ.

ಕೂಡಲೇ ಆತನನ್ನು ವಶಕ್ಕೆ ಪಡೆದು ಎಂ-ಸಿಸಿ ಟಿಎನ್‌ಎಸ್‌ ಮೊಬೈಲ್‌ ಆ್ಯಪ್‌ ಡಿವೈಸ್‌ ನಲ್ಲಿ ಆತನ ಬೆರಳು ಮುದ್ರೆ ಪರಿಶೀಲಿಸಿದಾಗ ಪೊಲೀಸರ ದತ್ತಾಂಶದಲ್ಲಿ ಆ ಬೆರಳು ಮುದ್ರೆ ಇರುವುದು ಕಂಡು ಬಂದಿದೆ.

ಬಳಿಕ ಆತನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆತ ತನ್ನ ಹೆಸರು ಲಕ್ಷ್ಮಣ್‌, ಪೀಣ್ಯ 2ನೇ ಹಂತದ ಬೇಕರಿವೊಂದರಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ಹೇಳಿದ್ದಾನೆ.ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ 9 ವರ್ಷಗಳ ಹಿಂದೆ ದರೋಡೆಗೆ ಸಂಚು ಪ್ರಕರಣ ದಲ್ಲಿ ಬಂಧನಕ್ಕೊಳಗಾಗಿ ಜಾಮೀನು ಪಡೆದು ಹೊರಗೆ ಬಂದು ಬಳಿಕ ವಿಚಾರಣೆಗೆ ಹಾಜರಾಗದೆ ತಲೆಮರೆಸಿ ಕೊಂಡಿರುವ ವಿಚಾರ ಗೊತ್ತಾಗಿದೆ.

ಬಳಿಕ ಆರೋಪಿಯನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನೀಡಿ, ಆರೋಪಿ  ಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

1-qewqe

Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

1-aaa

US ಅಧಿಕಾರಶಾಹಿ ಸ್ವಚ್ಛಗೊಳಿಸಲು ಮಸ್ಕ್, ವಿವೇಕ್ ರಾಮಸ್ವಾಮಿ ಆಯ್ಕೆ ಮಾಡಿದ ಟ್ರಂಪ್

BJP-JDS-congress-Party

Vote: ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆ: ಇಂದು ಮತದಾನ

Chalavadi-Ashok

Controversy: ಅಂಬೇಡ್ಕರ್‌ ಇಸ್ಲಾಂ ಸ್ವೀಕಾರ ವಿಚಾರ: ಖಾದ್ರಿ ಹೇಳಿಕೆಗೆ ಬಿಜೆಪಿ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ

ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ

8(1

Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ

Bengaluru: ನಗರದ ಐಬಿಸ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ; ಗ್ರಾಹಕರ ಆತಂಕ

Bengaluru: ನಗರದ ಐಬಿಸ್‌ ಹೋಟೆಲ್‌ಗೆ ಬಾಂಬ್‌ ಬೆದರಿಕೆ; ಗ್ರಾಹಕರ ಆತಂಕ

Bengaluru: ಕುಡಿದು ಸ್ಕೂಲ್‌ ಬಸ್‌ ಓಡಿಸಿದ ಚಾಲಕರ ಲೈಸೆನ್ಸ್‌ ಅಮಾನತು

Bengaluru: ಕುಡಿದು ಸ್ಕೂಲ್‌ ಬಸ್‌ ಓಡಿಸಿದ ಚಾಲಕರ ಲೈಸೆನ್ಸ್‌ ಅಮಾನತು

Bengaluru: ಬಸ್‌ ಚೇಸ್‌ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ

Bengaluru: ಬಸ್‌ ಚೇಸ್‌ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ

MUST WATCH

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

ಹೊಸ ಸೇರ್ಪಡೆ

1-qewqe

Ayodhya; ಖಲಿಸ್ಥಾನ್ ನಾಯಕನಿಂದ ಬೆದರಿಕೆ: ರಾಮ ಮಂದಿರದ ಭದ್ರತೆ ಇನ್ನಷ್ಟು ಹೆಚ್ಚಳ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

Pakshikere-1

Kinnigoli: ಶೌಚಾಲಯದ ಕಮೋಡ್‌ನ‌ಲ್ಲಿ ಮೊಬೈಲ್‌ ಪತ್ತೆ!, ಅಡವಿಟ್ಟ ಚಿನ್ನಾಭರಣ ಎಲ್ಲಿ ಹೋಯಿತು?

Mangaluru-VV

Mangalore University: ಪದವಿ ವಿದ್ಯಾರ್ಥಿಗಳಿಗೆ ಶುಲ್ಕ ಏರಿಕೆಯ ಹೊರೆ!

Loka-raid

Corrupts Hunt: ಏಕಕಾಲಕ್ಕೆ 37 ಕಡೆ ಲೋಕಾಯುಕ್ತ ದಾಳಿ; 22 ಕೋಟಿ ರೂ. ಅಕ್ರಮ ಆಸ್ತಿ ಪತ್ತೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.