ಲಾಲಿಪಾಪ್‌ ಕೈ; ಕಾಂಗ್ರೆಸ್‌ ವಿರುದ್ಧ ಪ್ರಧಾನಿ ಮೋದಿ ವಾಗ್ಧಾಳಿ


Team Udayavani, Apr 27, 2018, 6:00 AM IST

Modi-J-800.jpg

ಬೆಂಗಳೂರು: ಜಾತಿ, ಪಂಥ, ಸಂಪ್ರದಾಯದ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿರುವ ಕಾಂಗ್ರೆಸ್‌, ಪ್ರತಿ ಚುನಾವಣೆ ಸಂದರ್ಭದಲ್ಲಿ ಒಂದು ಜಾತಿಯವರಿಗೆ ಲಾಲಿಪಾಪ್‌ ನೀಡಿ ಓಲೈಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಅಭ್ಯರ್ಥಿಗಳು, ಶಾಸಕರು, ಪದಾಧಿಕಾರಿಗಳು, ಪ್ರಮುಖರೊಂದಿಗೆ ಗುರುವಾರ ಬೆಳಗ್ಗೆ 9 ಗಂಟೆಯಿಂದ 40 ನಿಮಿಷಗಳ ಕಾಲ ವಿಡಿಯೋ ಸಂವಾದ ನಡೆಸಿದ ಮೋದಿ ಅವರು, ಚುನಾವಣಾ ಸಿದ್ಧತೆ ಬಗ್ಗೆ ಹಲವು ಸಲಹೆ, ಸೂಚನೆ ನೀಡಿದರು.

ಒಂದಿಲ್ಲೊಂದು ಆಮಿಷ ನೀಡುವ ಮೂಲಕ ಜನರನ್ನು ಭಾವನಾತ್ಮಕವಾಗಿ ಹಿಡಿದಿಡುವುದು ಕಾಂಗ್ರೆಸ್‌ನ ತಂತ್ರ. ಮತ್ತೂಂದು ಚುನಾವಣೆ ವೇಳೆಯಲ್ಲಿ ಮತ್ತೂಂದು ಜಾತಿಯವರಿಗೆ ಲಾಲಿಪಾಪ್‌ ನೀಡಿ ಸೆಳೆಯುತ್ತಾರೆ. ಹಿಂದಿನ 5- 10 ಚುನಾವಣೆಗಳನ್ನು ಗಮನಿಸಿದರೆ ಪ್ರತಿ ಬಾರಿಯೂ ಒಂದು ಸಮುದಾಯಕ್ಕೆ ಸುಳ್ಳು ಭರವಸೆ ನೀಡಿ ಚುನಾವಣೆ ಗೆದ್ದ ಬಳಿಕ ಅವರನ್ನು ಮರೆತಿದ್ದಾರೆ. ಮತದಾರರ ಸಮೂಹ ಬದಲಿಸುತ್ತಾ, ಹೊಸ ಲಾಲಿಪಪ್‌ ನೀಡುತ್ತಾ ರಾಜನೀತಿ ನಡೆಸುತ್ತಾರೆ ಎಂದು ಮೋದಿ ಅವರು ವಾಗ್ಧಾಳಿ ನಡೆಸಿದರು.

ಭಾರತದ ರಾಜಕೀಯ ಸಂಸ್ಕೃತಿಯ ಮುಖ್ಯಧಾರೆಯು ಕಾಂಗ್ರೆಸ್‌ನ ಕುಕರ್ಮ, ಪಾಪದೊಂದಿಗೆ ಜೋಡಣೆಯಾಗಿದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ದೇಶದ ರಾಜಕಾರಣಕ್ಕೆ ಕೆಟ್ಟ ಹೆಸರು ಬಂದಿದ್ದರೆ ಅದಕ್ಕೆ ಕಾಂಗ್ರೆಸ್‌ ಕಾರಣ. ಕಾಂಗ್ರೆಸ್‌ನ ರಾಜಕೀಯ ಸಂಸ್ಕೃತಿಗೆ ಮುಖ್ಯಧಾರೆಯಿಂದ ಮುಕ್ತಿ ನೀಡದಿದ್ದರೆ ರಾಜಕಾರಣ ಶುದ್ಧಿಯಾಗುವುದಿಲ್ಲ ಎಂದು ಹೇಳಿದರು.

ವಿಕಾಸದ ಮೇಲೆ ಚುನಾವಣೆ: ಬಿಜೆಪಿಯು ಕರ್ನಾಟಕದ ವಿಕಾಸಕ್ಕೆ ಅಭಿವೃದ್ಧಿ, ತ್ವರಿತ ಅಭಿವೃದ್ಧಿ ಹಾಗೂ ಸಮಗ್ರ ಅಭಿವೃದ್ಧಿಯ ಮೂರು ಸೂತ್ರದ ಅಜೆಂಡಾ ಹೊಂದಿದ್ದು, ಅಭಿವೃದ್ಧಿ ವಿಷಯವಾಗಿಯೇ ಚುನಾವಣೆ ಎದುರಿಸೋಣ ಎಂದೂ ಅವರು ಕರೆ ನೀಡಿದರು. ಮೇ 12ರವರೆಗೆ ಕಾರ್ಯಕರ್ತರಾಧಿಯಾಗಿ ಎಲ್ಲರೂ ವೈಯಕ್ತಿಕ ಕೆಲಸ ಕಾರ್ಯ ಬದಿಗಿಟ್ಟು ಮತದಾರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮತಗಳಾಗಿ ಪರಿವರ್ತಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಮತಗಟ್ಟೆ ಗೆದ್ದರೆ ಚುನಾವಣೆ ಗೆದ್ದಂತೆ ಎಂಬುದನ್ನು ನೆನಪಿಡಿ ಎಂದು ಕಿವಿಮಾತು ಹೇಳಿದರು.

ಹಿಂದೆ ಸೂರ್ಯ ಬೆಳಗುತ್ತಿರಲಿಲ್ಲವೇ?
ಯುಪಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕದಲ್ಲಿ 31 ಮೆಗಾವ್ಯಾಟ್‌ ಸಾಮರ್ಥಯದ ಸೌರಶಕ್ತಿ ಯೋಜನೆ ಜಾರಿಯಾದರೆ ಎನ್‌ಡಿಎ ಅವಧಿಯಲ್ಲಿ 4,800 ಮೆಗಾವ್ಯಾಟ್‌ ಸೌರವಿದ್ಯುತ್‌ ಯೋಜನೆಗೆ ಚಾಲನೆ ದೊರಕಿದೆ. ಅಂದರೆ ಈ ಹಿಂದೆ ಕರ್ನಾಟಕದಲ್ಲಿ ಸೂರ್ಯ ಬೆಳಗುತ್ತಿರಲಿಲ್ಲವೇ. ಜಾತಿ ರಾಜಕಾರಣದಲ್ಲಿ ನಿರತರಾದವರಿಗೆ ಸೂರ್ಯ ಕಂಡಿರಲಿಕ್ಕಿಲ್ಲ. ಇದನ್ನು ಬುದ್ದಿಜೀವಿಗಳು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್‌ ಉದಾಸೀನ ಇದಕ್ಕೆ ಕಾರಣ. ನಮ್ಮ ಅವಧಿಯ ಸಾಧನೆಗೆ ಹೋಲಿಸಿದರೆ ಹಿಂದಿನ ಅವಧಿಯಲ್ಲಿ ಅಭಿವೃದ್ಧಿಯ ಕುರುಹುಗಳು ಕಾಣುತ್ತಿಲ್ಲ ಎಂದು ತಿಳಿಸಿದರು.

ಯುಪಿಎ ಅವಧಿಯಲ್ಲಿ 20 ಲಕ್ಷ ಶೌಚಾಲಯ ನಿರ್ಮಿಸಿದರೆ, ಎನ್‌ಡಿಎ ಅವಧಿಯಲ್ಲಿ 34 ಲಕ್ಷ ಶೌಚಾಲಯಗಳು ನಿರ್ಮಾಣವಾಗಿವೆ. ಅನುದಾನದ ಬಗ್ಗೆ ಹೇಳುವುದಾದರೆ ಯಪಿಎ ಅವಧಿಯಲ್ಲಿ 350 ಕೋಟಿ ರೂ. ವೆಚ್ಚವಾಗಿದ್ದರೆ, ಎನ್‌ಡಿಎ ಅವಧಿಯಲ್ಲಿ 2,100 ಕೋಟಿ ರೂ. ವೆಚ್ಚವಾಗಿದೆ. ಈ ಶೌಚಾಲಯಗಳನ್ನು ಬಂಡವಾಳಶಾಹಿಗಳಿಗೆ ನಿರ್ಮಿಸಿದ್ದೇವೆಯೇ? ಬಂಡವಾಳಶಾಹಿಗಳಿಗೆ ನೆರವು ನೀಡಲಾಗುತ್ತಿದೆ ಎಂದು ಬೊಬ್ಬೆ ಹೊಡೆಯುತ್ತೀರಲ್ಲ. ನಾಲ್ಕು ವರ್ಷ ಶೌಚಾಲಯ ನಿರ್ಮಿಸದಂತೆ ನಿಮ್ಮನ್ನು ತಡೆದವರು ಯಾರು. ಎಲ್ಲಿಯವರೆಗೆ ಸುಳ್ಳು ಹೇಳಿ ಜನರಿಗೆ ಭಾಗ್ಯಗಳು ಸಿಗದಂತೆ ತಡೆಯಲು ಯತ್ನಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಯಕರ್ತರಿಗೆ ಕಿವಿಮಾತು
–  ಅಭಿವೃದ್ಧಿ ಹೆಸರಿನಲ್ಲೇ ಸಂಘಟನೆ ಶಕ್ತಿಯ ಮೇಲೆ ಚುನಾವಣೆ ಎದುರಿಸೋಣ. ಜನರ ವಿಶ್ವಾಸ ಗಳಿಸಿ ಗೆಲ್ಲೋಣ.
– ಹಿಂದಿನ 2- 3 ಚುನಾವಣೆಗಳಲ್ಲಿ ಕಾಂಗ್ರೆಸ್‌ ಹೇಳುವ 50 ಮಾತಿನಲ್ಲಿ ಐದು ಸುಳ್ಳುಗಳಿರುತ್ತಿದ್ದವು. ಕ್ರಮೇಣ ಕಾಂಗ್ರೆಸ್‌ ಹೇಳುವ 50 ಮಾತುಗಳಲ್ಲಿ 45 ಸುಳ್ಳುಗಳಿರುತ್ತವೆ.
– ವಿದೇಶಿ ಸಂಸ್ಥೆಗಳ ನೆರವು ಪಡೆದು ಪಕ್ಷಕ್ಕೆ ಹಿನ್ನಡೆ ಉಂಟು ಮಾಡುವ ಷಡ್ಯಂತ್ರ ಪ್ರತಿನಿತ್ಯ ನಡೆದಿದೆ. ಕಾರ್ಯಕರ್ತರು ಸುಳ್ಳಿಗೆ ಹೆದರಬೇಕಿಲ್ಲ.
– ಯಾವುದೇ ಶಕ್ತಿ ಎಷ್ಟೇ ಪ್ರಯತ್ನ ನಡೆಸಿದರೂ ಸಂಘಟನೆಯ ಶಕ್ತಿಯಲ್ಲಿ ನಮ್ಮನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ. ಬೂತ್‌ಮಟ್ಟದ ಕಾರ್ಯಕರ್ತರ ಪ್ರಯತ್ನದ ಆಧಾರದ ಮೇಲೆ ಚುನಾವಣಾ ರಣನೀತಿ ರೂಪುಗೊಳ್ಳುತ್ತದೆ.
– ಕೆಲವರು ಹಣ, ಸುಳ್ಳು, ವಂಶವಾದ, ಜಾತಿ ಆಧಾರದ ಮೇಲೆ ಚುನಾವಣೆ ನಡೆಸುತ್ತಾರೆ. ನಾವು ಏಕತೆ ಸಾರುತ್ತಾ ಸರ್ವರೊಂದಿಗೆ ಸರ್ವರ ಅಭಿವೃದ್ಧಿ ಪರಿಕಲ್ಪನೆಯಂತೆ ಕಾರ್ಯನಿರ್ವಹಿಸೋಣ.
– ಕಾರ್ಯಕರ್ತರ ಶಕ್ತಿಯ ಆಧರಿಸಿ ಹಾಗೂ ವಿಶ್ವಾಸದ ಮೇಲೆ ಚುನಾವಣೆ ಗೆಲ್ಲಬೇಕಿದೆ.
– ಮೇ 12ರವರೆಗೆ ಒಂದು ಕ್ಷಣವೂ ಬೇರೆ ಗಮನ ಹರಿಸದೆ ಮತದಾರರನ್ನು ಸೆಳೆಯುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು.
– ಈ ಹೊತ್ತಿನಲ್ಲಿ ಕಾರ್ಯಕರ್ತರೊಂದಿಗೆ ಇರುವುದು ಮುಖ್ಯವಲ್ಲ. ಮತದಾರರೊಂದಿಗಿದ್ದು, ಅವರನ್ನು ಮತಗಟ್ಟೆವರೆಗೆ ಕರೆದೊಯ್ದು, ಮತಗಳನ್ನಾಗಿ ಪರಿವರ್ತನೆ ಮಾಡುವುದು ಮುಖ್ಯ. ಈ ಬಗ್ಗೆ ಮುಂದೆ ವಿಸ್ತೃತವಾಗಿ ಮಾತನಾಡುತ್ತೇನೆ.
– ಎಲ್ಲರಿಗೂ ಟಿಕೆಟ್‌ ಸಿಗುವುದಿಲ್ಲ. ಪಕ್ಷದ ಗೆಲುವಿಗೆ ಕರ್ನಾಟಕದ ಭಾಗ್ಯ ಬದಲಿಸಲು ಪ್ರಯತ್ನಿಸಬೇಕು. ವಿಶ್ವಾಸದಿಂದ ಕೆಲಸ ಮಾಡಿ. ಅಪಪ್ರಚಾರದ ನಡುವೆ ಸತ್ಯ ಪ್ರತಿಪಾದಿಸುತ್ತಾ ನಡೆಯಬೇಕಿದೆ.

ಕರ್ನಾಟಕಕ್ಕೆ ಯುಪಿಎ- ಎನ್‌ಡಿಎ ಕೊಡುಗೆ ಹೋಲಿಕೆ
(ನಾಲ್ಕು ವರ್ಷದ ಆಡಳಿತ)
ಹೆದ್ದಾರಿ ನಿರ್ಮಾಣ

ಯುಪಿಎ ಅವಧಿಯಲ್ಲಿ 8,700 ಕೋಟಿ ರೂ. ಅನುದಾನ. ಎನ್‌ಡಿಎ ಅವಧಿಯಲ್ಲಿ 27,000 ಕೋಟಿ ರೂ. ಅನುದಾನ

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ
ಯುಪಿಎ ಅವಧಿಯಲ್ಲಿ 950 ಕಿ.ಮೀ. ಹೆದ್ದಾರಿ ನಿರ್ಮಾಣ. ಎನ್‌ಡಿಎ ಅವಧಿಯಲ್ಲಿ 1750 ಕಿ.ಮೀ. ಹೆದ್ದಾರಿ ನಿರ್ಮಾಣ

ನಗರಾಭಿವೃದ್ಧಿ
ಯುಪಿಎ ಅವಧಿಯಲ್ಲಿ 380 ಕೋಟಿ ರೂ. ಅನುದಾನ. ಎನ್‌ಡಿಎ ಅವಧಿಯಲ್ಲಿ 1,600 ಕೋಟಿ ರೂ. ಅನುದಾನ

ನವೀಕರಿಸಬಹುದಾದ ಇಂಧನ
ಯುಪಿಎ ಅವಧಿಯಲ್ಲಿ 2000 ಮೆಗಾವ್ಯಾಟ್‌ ಉತ್ಪಾದನಾ ಯೋಜನೆ. ಎನ್‌ಡಿಎ ಅವಧಿಯಲ್ಲಿ 7,800 ಮೆಗಾವ್ಯಾಟ್‌ ಉತ್ಪಾದನಾ ಯೋಜನೆ
ಯುಪಿಎ ಅವಧಿಯಲ್ಲಿ 31 ಮೆಗಾವ್ಯಾಟ್‌ ಸೌರವಿದ್ಯುತ್‌ ಯೋಜನೆ. ಎನ್‌ಡಿಎ ಅವಧಿಯಲ್ಲಿ 4,800 ಮೆಗಾವ್ಯಾಟ್‌ ಸೌರವಿದ್ಯುತ್‌ ಯೋಜನೆ

ಅಡುಗೆ ಅನಿಲ ಸಂಪರ್ಕ
ಯುಪಿಎ ಅವಧಿಯಲ್ಲಿ 30 ಲಕ್ಷ ಸಂಪರ್ಕ. ಎನ್‌ಡಿಎ ಅವಧಿಯಲ್ಲಿ 50 ಲಕ್ಷ ಸಂಪರ್ಕ (“ಉಜ್ವಲ’ ಯೋಜನೆಯಡಿ 9 ಲಕ್ಷ ಬಡವರಿಗೆ ಉಚಿತ ಸಂಪರ್ಕ)

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.