ಖಾಸಗಿ ಶಾಲೆಗಳ ದುಬಾರಿ ಶುಲ್ಕಕ್ಕೆ ಅಂಕುಶ
Team Udayavani, Feb 10, 2018, 6:15 AM IST
ವಿಧಾನಪರಿಷತ್ತು: ರಾಜ್ಯದ ಖಾಸಗಿ ಶಾಲೆಗಳ ಪ್ರವೇಶ ಹಾಗೂ ಶುಲ್ಕ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತರುವ ಪ್ರಕ್ರಿಯೆ ನಡೆದಿದೆ ಎಂದು ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಪಿ.ಆರ್. ರಮೇಶ್ ಪ್ರಶ್ನೆಗೆ ಉತ್ತರಿಸಿದ ಅವರು, ಕೆಲ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಇದಕ್ಕೆ ಕಡಿವಾಣ ಹಾಕಲು ಮುಂದಾದಾಗ ನ್ಯಾಯಾಲಯದಲ್ಲಿ ಪ್ರಕರಣ ಬಿದ್ದು ಹೋಗಿದೆ. ರಾಜ್ಯದಲ್ಲೂ ಒಂದು ವ್ಯಾಜ್ಯ ನ್ಯಾಯಾಲಯದಲ್ಲಿದೆ. ಆ ಹಿನ್ನೆಲೆಯಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದೆ ಎಂದು ತಿಳಿಸಿದರು.
“ರಾಜ್ಯದಲ್ಲಿ 77,000 ಖಾಸಗಿ ಶಾಲೆಗಳಿದ್ದು, 1ರಿಂದ 10ನೇ ತರಗತಿವರೆಗೆ 1.10 ಕೋಟಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಪಡೆಯುತ್ತಿರುವ ದೂರುಗಳಿಗೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿ ಕ್ರಮ ಜರುಗಿಸಲು ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರವಿದೆ. ಈ ಪ್ರಾಧಿಕಾರಕ್ಕೆ ಹೆಚ್ಚು ಅಧಿಕಾರ ನೀಡಲು ಕರ್ನಾಟಕ ಶಿಕ್ಷಣ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ತಪ್ಪಿತಸ್ಥ ಶಾಲೆಗಳ ವಿರುದಟಛಿ ಗರಿಷ್ಠ 10 ಲಕ್ಷ ರೂ.ವರೆಗೆ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು.
ಮಕ್ಕಳ ಕಲಿಕಾ ಮಾಧ್ಯಮ ಮತ್ತು ಶಾಲೆ ಆಯ್ಕೆ ಪೋಷಕರ ಇಚ್ಛೆಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ಆಕರ್ಷಣೆಗೆಒಳಗಾಗುತ್ತಿದ್ದಾರೆ ಎಂದು ತಿಳಿಸಿದರು.
ಸಕಾಲದಲ್ಲಿ ಪಠ್ಯಪುಸ್ತಕ ವಿತರಣೆಗೆ ಕ್ರಮ: ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಕಾಲದಲ್ಲಿ ಮುದ್ರಣ ದೋಷವಿಲ್ಲದಂತೆ
ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಸಚಿವರು ಭರವಸೆ ನೀಡಿದರು.
ಬಿಜೆಪಿಯ ತಾರಾ ಅನುರಾಧ ಪ್ರಶ್ನೆಗೆ ಉತ್ತರಿಸಿದ ಅವರು, “ಕಳೆದ ಬಾರಿ ವಿತರಿಸಿದ ಪಠ್ಯಪುಸ್ತಕಗಳಲ್ಲಿ 240 ಕಾಗುಣಿತ
ದೋಷಗಳಿತ್ತು ಅವುಗಳನ್ನು ಸರಿಪಡಿಸಿ ದೋಷವಿಲ್ಲದೆ ಮುದ್ರಿಸುವಂತೆ ಸೂಚಿಸಲಾಗಿದೆ. ಈಗಾಗಲೇ ಎನ್‌ಸಿಇಆರ್‌ಟಿ ಪಠ್ಯಕ್ರಮದಂತೆ 9ನೇ ತರಗತಿಯ ಗಣಿತ, ವಿಜ್ಞಾನ ಪಠ್ಯ ಪೂರೈಸಲಾಗಿದೆ. ಮುಂದಿನ ಬಾರಿ 10ನೇ ತರಗತಿಗೂ ಎನ್‌ಸಿಇಆರ್‌ಟಿ ಪಠ್ಯ ವಿತರಿಸಲಾಗುವುದು. 74 ಆದರ್ಶ ಶಾಲೆಗಳಲ್ಲಿ 6ನೇ ತರಗತಿಯಿಂದಲೇ ಎನ್‌ಸಿಇಆರ್‌ಟಿ ಪಠ್ಯ ಬಳಕೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳ ಜ್ಞಾನ ವೃದಿಟಛಿಗೆ ಪೂರಕವಾಗಿ ಪಠ್ಯ ಪುಸ್ತಕದಲ್ಲಿ ಇನ್ನಷ್ಟು ಪರಿಷ್ಕರಣೆ ಅಗತ್ಯವೆಂದು ಎನ್‌ಸಿಇಆರ್‌ಟಿ ತಿಳಿಸಿರುವುದು ನಿಜ. ಅದರಂತೆ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಸಲಹೆ ಪಡೆಯಲು ಸದನ ಸಮಿತಿ ರಚಿಸಲಾಗಿದೆ. ಜತೆಗೆ ಈ ವರ್ಷದಿಂದ “ಪ್ರಾಕ್ಟೀಸ್ ಕಮ್ ಆ್ಯಕ್ಟಿವಿಟಿ’ ಪುಸ್ತಕವನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಹುದ್ದೆ ಭರ್ತಿಗೆ
ಪ್ರಸ್ತಾವ ಸಲ್ಲಿಕೆ 2017ರ ಡಿ.31ರವರೆಗೆ ಅನುದಾನಿತ ಪ್ರೌಢ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ನಿವೃತ್ತಿ, ಮರಣ,
ರಾಜೀನಾಮೆಯಿಂದ ತೆರವಾದ ಹುದ್ದೆ ಭರ್ತಿಗೆ ಅನುಮೋದನೆ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತನ್ವೀರ್ ಸೇಠ್ ತಿಳಿಸಿದರು.
ಬಿಜೆಪಿಯ ಭಾನುಪ್ರಕಾಶ್ ಪರವಾಗಿ ಗಣೇಶ್ ಕಾರ್ಣಿಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 2007ರ ಸುತ್ತೋಲೆ ಪ್ರಕಾರ ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿನ ಹೆಚ್ಚುವರಿ ಶಿಕ್ಷಕರನ್ನು ಖಾಲಿ ಹುದ್ದೆಗಳಿಗೆ ಮರುವಿನ್ಯಾಸಗೊಳಿಸಲು ಇಲಾಖೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 2014ರ ಡಿ.31 ಹಾಗೂ ಪಪೂ ಶಿಕ್ಷಣ ಇಲಾಖೆಯಲ್ಲಿ 2015ರ ಡಿ.31ರವರೆಗೆ ತೆರವಾದ ಹುದ್ದೆ ಭರ್ತಿ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಪ್ರೌಢಶಾಲೆಗಳಲ್ಲಿ 2657 ಹುದ್ದೆ ಖಾಲಿಯಿದ್ದು, ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು.
ಅನುದಾನಿತ ಶಿಕ್ಷಣ ನೀತಿಯಲ್ಲಿ ಕೆಲ ನ್ಯೂನತೆಗಳಿದ್ದು, ಅದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಪಪೂ ಕಾಲೇಜು ಉಪನ್ಯಾಸಕರು ವಾರಕ್ಕೆ 16 ಗಂಟೆ ಬದಲಿಗೆ 20 ಗಂಟೆ ಬೋಧನೆ ಮಾಡಲು ನಿಯಮ ರೂಪಿಸಲಾಗಿದೆ. ವಾರದಲ್ಲಿ 20 ಗಂಟೆ ಬೋಧನೆಯು ಹೊರೆಯಾಗಲಿದೆ ಎಂದು ಹೇಳುವುದು ಸರಿಯಲ್ಲ ಎಂದು ಹೇಳಿದರು.
ಶಾದಿಭಾಗ್ಯ: 12,715 ಅರ್ಜಿ ಬಾಕಿ
ರಾಜ್ಯದಲ್ಲಿ ಕಳೆದ ನಾಲ್ಕೂವರೆ ವರ್ಷದಲ್ಲಿ 66,010 ಮಂದಿ “ಶಾದಿಭಾಗ್ಯ’ ಯೋಜನೆಯಡಿ ಸಹಾಯಧನ ಪಡೆದಿದ್ದು, ಸದ್ಯ 12,715 ಅರ್ಜಿಗಳು ಬಾಕಿ ಉಳಿದಿವೆ ಎಂದು ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ.
ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿವರ್ಷ “ಶಾದಿಭಾಗ್ಯ’ ಯೋಜನೆಯಡಿ ಸಹಾಯ ಧನಕ್ಕಾಗಿ 27,000ದಿಂದ 29,000 ಅರ್ಜಿಗಳು ಸಲ್ಲಿಕೆಯಾಗುತ್ತವೆ. ಅವುಗಳನ್ನು ಪರಿಶೀಲಿಸಿ ಅರ್ಹರಿಗೆ ಸಹಾಯಧನ ನೀಡಲಾಗುತ್ತಿದೆ. ಜಿಲ್ಲಾವಾರು ಯಾವುದೇ ಗುರಿ ನಿಗದಿಪಡಿಸಿಲ್ಲ. 2017-18ನೇ ಸಾಲಿನಲ್ಲಿ 159.26 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಹೇಳಿದರು.
ಎಲ್ಲ ಬಸ್‌ನಿಲ್ದಾಣಗಳಲ್ಲೂ
ಶುದಟಛಿ ಕುಡಿಯುವ ನೀರು
ವಿಧಾನಪರಿಷತ್ತು: ರಾಜ್ಯದ ಎಲ್ಲ ಬಸ್‌ನಿಲ್ದಾಣಗಳಲ್ಲಿ ಸಾರಿಗೆ ನಿಗಮದ ವತಿಯಿಂದ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಶೀಘ್ರವೇ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಸದಸ್ಯ ಎಂ.ಕೆ.ಪ್ರಾಣೇಶ್ ಚಿಕ್ಕಮಗಳೂರು ಜಿಲ್ಲೆಯ ಬಸ್‌ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಅದು ಆಗುವುದು ಯಾವಾಗ? ಎಂದು ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವರ ಪರವಾಗಿ ಉತ್ತರಿಸಿದ ಅವರು, ಚಿಕ್ಕಮಗಳೂರು ಮಾತ್ರವಲ್ಲದೇ ರಾಜ್ಯದ ಎಲ್ಲ ಬಸ್ ನಿಲ್ದಾಣಗಳಲ್ಲೂ ಶುದಟಛಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ನಿಲ್ದಾಣಗಳ ಶೌಚಾಲಯಗಳಿಗೆ ಒಳಚರಂಡಿ ವ್ಯವಸ್ಥೆ ಇಲ್ಲದ ಕಾರಣ “ಪಿಟ್’ಗಳನ್ನು ಯಂತ್ರೋಪಕರಣಗಳಿಂದ ಸ್ವತ್ಛಗೊಳಿಸುವ ಕಾರ್ಯಕ್ಕೂ ಒತ್ತು ನೀಡಲಾಗಿದೆ ಎಂದು ಹೇಳಿದರು. ಬಸ್ ನಿಲ್ದಾಣಗಳಲ್ಲಿ ಧೂಮಪಾನ ನಿಷೇಧವಿದ್ದು, ನಿಯಮ ಉಲ್ಲಂಘಿಸಿದವರಿಗೆ ದಂಡ ಪ್ರಯೋಗವೂ ನಡೆದಿದೆ. ಒಟ್ಟಾರೆ ಪ್ರಯಾಣಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
36,000 ಶಾಲಾ ಕೊಠಡಿ ಶಿಥಿಲ
ರಾಜ್ಯದಲ್ಲಿ 36,000 ಶಾಲಾ ಕೊಠಡಿಗಳು ಶಿಥಿಲಗೊಂಡಿದ್ದರೆ, 31,000 ಕೊಠಡಿಗಳಿಗೆ ಸಣ್ಣ, ದೊಡ್ಡ ರಿಪೇರಿ ಅಗತ್ಯವಿದೆ. 19,000 ಹೆಚ್ಚುವರಿ ಕೊಠಡಿಗಳಿಗೆ ಬೇಡಿಕೆಯಿದೆ ಎಂದು ಸಚಿವ ತನ್ವೀರ್ ಸೇಠ್ ತಿಳಿಸಿದರು.
ಜೆಡಿಎಸ್‌ನ ಕೆ.ಟಿ.ಶ್ರೀಕಂಠೇಗೌಡ ಪ್ರಶ್ನೆಗೆ ಉತ್ತರ ನೀಡಿದ ಅವರು, 2002 ರಿಂದ 2012ರವರೆಗೆ ಶಾಸಕರ ಪ್ರದೇಶಾಭಿವೃದಿಟಛಿ ಅನುದಾನದಲ್ಲಿ ಬಳಕೆಯಾಗದ 243 ಕೋಟಿ ರೂ. ಹಣವನ್ನು ಸರ್ಕಾರ ಒದಗಿಸಿದ್ದು, ಅದರಲ್ಲಿ ಕೊಠಡಿ ನಿರ್ಮಿಸಲಾಗುವುದು. ಈ ವರ್ಷ 566 ಕೋಟಿ ರೂ. ಕಾಯ್ದಿರಿಸಲಾಗಿದೆ ಎಂದು ಸದನಕ್ಕೆ ಹೇಳಿದರು. ಮಂಡ್ಯ ಜಿಲ್ಲೆ ವ್ಯಾಪ್ತಿಯಲ್ಲಿ 799 ಕೊಠಡಿಗಳು ಶಿಥಿಲಗೊಂಡಿದ್ದು, ಪ್ರಸಕ್ತ ವರ್ಷದಲ್ಲಿ 115 ಕೊಠಡಿ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.