ಪೆಟ್ ಫೆಡ್‌ನಲ್ಲಿ ಪೊಲೀಸ್ ಶ್ವಾನಗಳ ಸಾಹಸ
Team Udayavani, Nov 18, 2019, 3:06 AM IST
ಬೆಂಗಳೂರು: ನಗರದ ಜಯಮಹಲ್ ಪ್ಯಾಲೇಸ್ ಆವರಣದಲ್ಲಿ ಆಯೋಜಿಸಿದ್ದ ಎರಡನೇ ಆವೃತ್ತಿಯ ಭಾರತದ ಅತಿದೊಡ್ಡ ಪೆಟ್‌ಫೆಡ್ ಉತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಸಾವಿರರು ಪ್ರಾಣಿಪ್ರಿಯರಿಗೆ ಮೋಜು ಮಸ್ತಿ ನೀಡುವ ಜೊತೆಗೆ ಸಾಕುಪ್ರಾಣಿಗಳ ಮಹತ್ವವನ್ನು ತಿಳಿಸುವಲ್ಲಿ ಈ ಉತ್ಸವವು ಯಶ್ವಸಿಯಾಯಿತು.
ಭಾನುವಾರ ಬೆಳಗ್ಗೆ 11 ಗಂಟೆಯಿಂದಲೇ ನೂರಾರು ಶ್ವಾನ ಹಾಗೂ ಬೆಕ್ಕುಗಳನ್ನು ಪೋಷಕರು ಕರೆ ತಂದಿದ್ದರು. ಒಮ್ಮೆಗೆ ನೂರಾರು ಚಂದದ ಶ್ವಾನಗಳೊಟ್ಟಿಗೆ ಮುದ್ದಾದ ಬೆಕ್ಕುಗಳನ್ನು ಕಣ್ತುಂಬಿಕೊಂಡು ಅವುಗಳೊಟ್ಟಿಗೆ ಒಂದಿಷ್ಟು ಸಮಯ ಕಳೆಯಲು ನಗರದ ಪ್ರಾಣಿಪ್ರಿಯರು ಸಹಸ್ರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಚಿಕ್ಕ ದೊಡ್ಡ ಗಾತ್ರದ ವಿವಿಧ ತಳಿಗಳನ್ನು ಹಿಡಿದ ಶ್ವಾನ ಪೋಷಕರು ಉತ್ಸವವನ್ನು ಒಂದು ಸುತ್ತು ಹಾಕಿ ಆ ಬಳಿಕ ಶ್ವಾನಗಳಿಗೆ ಯೋಜಿಸಿದ್ದ ಕ್ರೀಡೆ, ಫ್ಯಾಷನ್ ಶೋನಲ್ಲಿ ಭಾಗವಹಿಸಿದರು. ಮಧ್ಯಾಹ್ನ ಕರ್ನಾಟಕ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನಗರ ಸಶಸ್ತ್ರ ಸೇವಾ ದಳ ಹಾಗೂ ಕರ್ನಾಟಕ ಪೋಲಿಸ್ ಶ್ವಾನ ದಳದ ಪ್ರದರ್ಶನ ನಡೆಯಿತು.
ಈ ಪ್ರದರ್ಶನದಲ್ಲಿ ಪೊಲೀಸ್ ಶ್ವಾನಗಳು ಅಪರಾಧಿಯನ್ನು ಪತ್ತೆ ಮಾಡುವ ರೀತಿ, ಅವುಗಳ ಓಟ, ಜಿಗಿತ, ಪೋಷಕರೊಟ್ಟಿಗಿನ ಒಡನಾಟ, ವಿವಿಧ ಕಸರತ್ತುಗಳು ನೆರೆದಿದ್ದವರ ಮೈರೋಮಾಂಚವುಂಟು ಮಾಡಿತು. ಪೆಟ್‌ಫೆಡ್‌ನ ಸಂಸ್ಥಾಪಕ ಅಕ್ಷಯ್ ಗುಪ್ತಾ, ಬಾಲಿವುಡ್ ನಟ ಡಿನೋ ಮೊರೆಯಾ ಭಾಗವಹಿಸಿದ್ದರು.
ಮನೆಯಲ್ಲಿಯೇ ಇದ್ದು ಶ್ವಾನ ಹಾಗೂ ಬೆಕ್ಕುಗಳು ಮಂಕಾಗಿರುತ್ತವೆ. ಇಂತಹ ಉತ್ಸವವು ಅವುಗಳನ್ನು ಚುರುಕಾಗಿಸುತ್ತವೆ. ಮುದ್ದಾಗಿ ಸಾಕಿದ ಪ್ರಾಣಿಯನ್ನು ಪ್ರದರ್ಶಿಸಿ ಎಲ್ಲರಿಂದಲೂ ಪ್ರಶಂಸೆ ಪಡೆದಾಗ ಖುಷಿ ಹೆಚ್ಚಾಗುತ್ತದೆ.
-ವಿಕ್ರಮ್, ಬೆಕ್ಕು ಪೋಷಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Nijjar ಹ*ತ್ಯೆಗೆ ಮೋದಿ ನಂಟು ವರದಿ: “ಗುಪ್ತಚರರ’ ವಿರುದ್ಧ ಟ್ರಾಡೊ ಗರಂ
Maharashtra BJP ಗೃಹಲಕ್ಷ್ಮಿ ನಕಲು ಮಾಡಿ ಗೆದ್ದಿದೆ: ಡಿ.ಕೆ.ಶಿವಕುಮಾರ್
New Scheme: ಶೀಘ್ರವೇ ಗೃಹಲಕ್ಷ್ಮೀ ಸಂಘ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Ola Scooter; ರಿಪೇರಿಗೆ 90000 ರೂ.ಬಿಲ್: ಸ್ಕೂಟರ್ ಒಡೆದು ಹಾಕಿದ ಗ್ರಾಹಕ
Karkala: ಎಸ್‌ಪಿ ಕಚೇರಿ ಮುತ್ತಿಗೆ ಹೇಳಿಕೆ ಆರೋಪ: ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.