ಪೊಲೀಸರ ಮೇಲೆ ದಾಳಿ:ಮಗು ಕಿಡ್ನ್ಯಾಪರ್ ಕಾಲಿಗೆ ಗುಂಡು
Team Udayavani, Oct 13, 2017, 11:48 AM IST
ಬೆಂಗಳೂರು: ನಗರದ ಬಾಗಲೂರಿನ ನಿರ್ಜನ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಮುಗವಿನ ಅಪಹರಣಕಾರನೊಬ್ಬ ಕಾರ್ಯಾಚರಣೆಗೆ ತೆರಳಿದ ಪೊಲೀಸರ ಮೇಲೆ ಮಾರಾಕಾಯುಧಗಳಿಂದ ಇರಿಯಲು ಯತ್ನಿಸಿದ್ದು ,ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.
ನೂರುಲ್ಲಾ ಎಂಬ ದುಷ್ಕರ್ಮಿಯ ಎಡಗಾಲಿಗೆ ಪೊಲೀಸರು ಗುಂಡು ಹಾರಿಸಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಏನಿದು ಘಟನೆ ?
ಅಕ್ಟೋಬರ್ 5 ರಂದು ಬಡ ಕೂಲಿ ಕಾರ್ಮಿಕ ಮುಸ್ಲಿಂ ದಂಪತಿಯ 1 ವರ್ಷದ ಅಭಿರಾಮ್ ಎಂಬ ಮಗುವನ್ನು ಮೂವರು ಬೈಕ್‌ನಲ್ಲಿ ಬಂದು ಅಪಹರಿಸಿ ಇಂದಿರಾನಗರದ ಶಹನಾಜ್ ಖಾನಮ್‌ಗೆ ನೀಡಿದ್ದರು.
ಶಹನಾಜ್‌ಎಂಬಾಕೆ ಗಂಡು ಮಗು ಬೇಕೆಂದು ನೂರುಲ್ಲಾ, ಇಜಾಕ್ ಖಾನ್ ಮತ್ತು ವಾಹಿದ್ ಎನ್ನುವವರಿಗೆ 15 ಸಾವಿರ ಅಡ್ವಾನ್ಸ್ ನೀಡಿದ್ದಳು. ಅಡ್ವಾನ್ಸ್ ಪಡೆದ ಕೂಡಲೇ ಮುಗವನ್ನು ಅಪಹರಿಸಿದ್ದರು. ಈ ಬಗ್ಗೆ ಕೊತ್ತನೂರು ಠಾಣೆಯಲ್ಲಿ ಅಭಿರಾಮ್ ಪೋಷಕರು ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ನಿನ್ನೆ ಗುರುವಾರ ಶಿವಾಜಿನಗರದಲ್ಲಿ ಶಹನಾಜ್ ಬಳಿ ಮಗುವನ್ನು ಪತ್ತೆ ಮಾಡಿದ್ದರು. ಕೂಡಲೇ ಶಹನಾಜ್‌ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಕೆ ನೀಡಿದ ಮಾಹಿತಿಯನ್ನಾಧರಿಸಿ ಪ್ರಮುಖ ಆರೋಪಿಗಳಾದ ಇಜಾಕ್ ಮತ್ತು ವಾಹಿದ್‌ನನ್ನು ತಕ್ಷಣ ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಆದರೆ ನೂರುಲ್ಲಾ ತಪ್ಪಿಸಿಕೊಂಡಿದ್ದ.
ಕೊತ್ತೂರು ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಪಿಎಸ್‌ಐ ಮತ್ತು ಸಿಬಂದಿಗಳು ಇಂದು ಬೆಳಗ್ಗೆ ಕಾರ್ಯಾಚರಣೆ ನಡೆಸಿ ನೂರುಲ್ಲಾನನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ ದಾಳಿ ನಡೆಸಲು ಮುಂದಾದಾಗ ಗುಂಡು ಹಾರಿಸಲಾಗಿದೆ ಎಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.