ರಾಜಕೀಯ ಕ್ಷೇತ್ರ ಬಚ್ಚಲು ಮನೆ ಇದ್ದ ಹಾಗೆ…
Team Udayavani, Jan 6, 2018, 6:00 AM IST
ಬೆಂಗಳೂರು: “”ರಾಜಕೀಯ ಕ್ಷೇತ್ರ ಬಚ್ಚಲು ಮನೆ ಇದ್ದ ಹಾಗೆ. ಸದಾ ಪಾಚಿ ಕಟ್ಟುತ್ತಲೇ ಸ್ವತ್ಛಗೊಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಕೆಲವೊಮ್ಮೆ ಸ್ವತ್ಛಗೊಳಿಸುವ ಭರದಲ್ಲಿ ಜಾರುವ ಸಂದರ್ಭ ಉಂಟಾಗುತ್ತದೆ. ಕಳೆದ ಒಂದು ವಾರದ ವಿದ್ಯಮಾನ ಇದನ್ನು ಇನ್ನಷ್ಟು ಪುಷ್ಠಿಗೊಳಿಸಿದೆ’.
ವಾರದ ಹಿಂದೆ ಸಂವಿಧಾನ ಬದಲಾವಣೆ ಬಗ್ಗೆ ಹಾಗೂ ಜಾತ್ಯತೀತರ ಕುರಿತಾಗಿ ತಾವು ನೀಡಿದ ಹೇಳಿಕೆಗೆ ವ್ಯಾಪಕ ವಿರೋಧ, ಆಕ್ರೋಶ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು ಹೀಗೆ. ತಮ್ಮ ಹೇಳಿಕೆ ವಿರುದ್ಧ ವ್ಯಕ್ತವಾದ ಟೀಕೆಗಳಿಗೆ ಸಂಬಂಧಿಸಿ ಅನಂತಕುಮಾರ್ ಹೆಗಡೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಲೇಖನದ ಯಥಾವತ್ ಪಾಠ ಹೀಗಿದೆ…
“”ಕಳೆದ ವಾರದಿಂದ ಗೂಗಲ್‌ನಲ್ಲಿ ಸಂವಿಧಾನ, ಜಾತ್ಯತೀತತೆ ಮತ್ತು ಅದಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ದೇಶಾದ್ಯಂತ ನಮ್ಮ ಜನ ಜಾಲಾಡಿದ ಬಗೆ ಮಾತ್ರ ಅವಿಸ್ಮರಣೀಯ!
ಎಂದೂ ಕಾಣದ ಧಾವಂತ, ಅಸಂಖ್ಯಾತ ಡಿಜಿಟಲ್ ಫೂಟ್‌ಪ್ರಿಂಟ್ ದಾಖಲಿಸಲು ಈ ಸಂದರ್ಭ ಸಾಕ್ಷಿಯಾಯಿತು. ನನ್ನ ಹೇಳಿಕೆಯ ಹಿನ್ನೆಲೆಯಲ್ಲಿ ಸಂವಿಧಾನ ಮತ್ತು ಜಾತ್ಯತೀತತೆ ಬಗ್ಗೆ ತಿಳಿದುಕೊಳ್ಳಲು ದೇಶದ ಹಲವಾರು ಮಂದಿ ಪ್ರಯತ್ನಿಸಿದ್ದು ನನ್ನನ್ನು ಚಕಿತಗೊಳಿಸಿತು. ಎಂದಿನಂತೆ ಸಂಸತ್ತಿನ ವಾಚನಾಲಯದ ಮೇಜಿನ ಮೇಲೆ ಮ್ಯಾಗಜೀನ್ ಬದಲಿಗೆ ಮೇಕಿಂಗ್ ಆಫ್ ಕಾನ್‌ಸ್ಟಿಟ್ಯೂಷನ್ ಹಾಗೂ ಸಂವಿಧಾನದ ಬಗ್ಗೆ ಇರುವ ಇತರ ಹಲವಾರು ಪುಸ್ತಕಗಳು ಹೆಚ್ಚಾಗಿ ಕಾಣಿಸಿಕೊಂಡವು. ನನ್ನ ಹೇಳಿಕೆ ಈ ಅಷ್ಟೂ ಬೆಳೆವಣಿಗೆಗಳನ್ನು ರೂಪಿಸಿದ್ದೇ ಆದಲ್ಲಿ ಇದಕ್ಕಿಂತ ಬೇರಾವ ಸಂತಸವಿದೆ!!
ಇನ್ನು.., ದೇಶದ ಸಂವಿಧಾನ ಅತ್ಯಂತ ಪವಿತ್ರವಾದ ಗ್ರಂಥ. ಈ ಗ್ರಂಥವನ್ನು ರಚಿಸಿದ ಭಾರತರತ್ನ ಬಾಬಾಸಾಹೇಬ್ ಅಂಬೇಡ್ಕರ್ ನಮ್ಮ ದೇಶ ಕಂಡ ಪರಮೋತ್ಛ ರಾಷ್ಟ್ರ ಋಷಿ. ಹಾಗೂ ನನ್ನ ಪಾಲಿಗೆ ಅವರು ಪ್ರಾತಃ ಸ್ಮರಣೀಯ ಮತ್ತು ಅತ್ಯುನ್ನತ ಆದರಣೀಯ ಸ್ಫೂರ್ತಿಯ ಚೇತನ. ಈ ಮಹಾನ್ ಚೇತನವನ್ನು ಅಂದಿನ ಕಾಂಗ್ರೆಸ್ ಹೇಗೆ ನಡೆಸಿಕೊಂಡಿತು ಎನ್ನುವುದು ಇಂದಿನ ತಲೆಮಾರಿನ ಹಲವರಿಗೆ ತಿಳಿಯದಾಗಿದೆ. ಬಾಬಾಸಾಹೇಬ್‌ರನ್ನು ಅವರ ಜೀವಿತಾವಧಿಯಲ್ಲಿ ನೆಹರು ಮತ್ತು ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸಂಪೂರ್ಣವಾಗಿ ತಿರಸ್ಕಾರದಿಂದ ವರ್ತಿಸಿ ಅವರ ರಾಜಕೀಯ ತೇಜೋವಧೆ ಮಾಡಿತು.
ಚುನಾವಣೆಯಲ್ಲಿ ಅವರನ್ನು ಮೋಸದಿಂದ ಸೋಲಿಸಿ, ಅವರ ರಾಜಕಾರಣದ ಅವಕಾಶಗಳನ್ನು ಕಿತ್ತುಕೊಂಡರು. ಆ ದಿನಗಳಲ್ಲಿ ದಲಿತ ಸಂಘಟನೆ ಅಥವಾ ದೇಶದ ನಿಜವಾದ ಬೌದ್ಧಿಕ ಶಕ್ತಿಗಳು ಸಹ ಎಚ್ಚೆತ್ತುಕೊಳ್ಳದೆ ಹಾಗೂ ಬಲಿಷ್ಠವಾಗಿರದೆ ಅಂಬೇಡ್ಕರ್‌ರ ನೆರವಿಗೆ ಕೂಡ ಧಾವಿಸಲಿಲ್ಲ. ಅವರ ರಾಜಕಾರಣವನ್ನು ಅಂದಿನ ನೆಹರು ಹಾಗೂ ಕಮ್ಯುನಿÓr… ಸೋಗಲಾಡಿಗಳು ಜಂಟಿಯಾಗಿ ನಿರ್ನಾಮ ಮಾಡಿದವು. ಮುಂದೆ ಇಂದಿರಾಗಾಂಧಿ, ಬಾಬು ಜಗಜೀವನ್‌ರಾಮ… ಅವರನ್ನು ಹದ್ದುಬಸ್ತಿನಲ್ಲಿಡಲು ಇತಿಹಾಸದ ಕಪಾಟಿನಿಂದ ಅಂಬೇಡ್ಕರ್ ಅವರನ್ನು ಹೊರತಂದು ದೇಶದ ಜನತೆಗೆ ಅವರ ಪರಂಪರೆಯ ವಾರಸುದಾರರು ತಾವೆಂದು ಬಿಂಬಿಸಿದರು.
ಈ ಮೋಸದ ಪರಂಪರೆ ಹಲವು ತಲೆಮಾರುಗಳನ್ನು ದಾರಿ ತಪ್ಪಿಸಿ ಇಂದಿಗೂ ಅದನ್ನು ಚಾಲ್ತಿಯಲ್ಲೇ ಇಟ್ಟಿರುವ ಕಾಂಗ್ರೆಸ್‌ನವರ ಸೋಗಲಾಡಿತನ ಮಾತ್ರ ಇತ್ತೀಚಿನ ದಿನಗಳಲ್ಲಿ ಬಟಾಬಯಲಾಗುತ್ತಿದೆ. ಡಾ.ಅಂಬೇಡ್ಕರ್ ಅವರನ್ನು ಸಂಪೂರ್ಣವಾಗಿ ಗುತ್ತಿಗೆ ಪಡೆದವರಂತೆ ವರ್ತಿಸುವ ಇಂದಿನ ಮೂರು ಕಾಸಿನ ಚಿಲ್ಲರೆ ನಾಯಕರಿಗೆ ತಮ್ಮ ನೆಲ ಕುಸಿಯುತ್ತಿರುವ ಅನುಭವವಾಗಿದ್ದರಿಂದಲೇ ಕಳೆದ 3-4 ದಿನಗಳ ಆರ್ಭಟ-ಚೀರಾಟ-ನರ್ತನ ನಡೆದದ್ದು!
ಡಾ.ಅಂಬೇಡ್ಕರ್ ಸಂವಿಧಾನದಲ್ಲಿ ಸಮಾಜವಾದ ಮತ್ತು ಜಾತ್ಯತೀತತೆ ಎಂದು ವರ್ಣಿಸದಿರುವ ಬಗ್ಗೆ ಎದ್ದ ಆಕ್ಷೇಪಕ್ಕೆ ಉತ್ತರಿಸಿದ್ದು ಹೀಗೆ…
“ಸಾಮಾಜಿಕ ವ್ಯವಸ್ಥೆ ಒಂದು ನಿರ್ದಿಷ್ಟ ರೂಪವನ್ನು ತೆಗೆದುಕೊಳ್ಳಬೇಕೆಂದು ನೀವು ಸಂವಿಧಾನದಲ್ಲಿ ಹೇಳಿದರೆ ನನ್ನ ಪ್ರಕಾರ, ಜನರು ಬದುಕಲು ಬಯಸುವ ಸಾಮಾಜಿಕ ವ್ಯವಸ್ಥೆ ಏನಾಗಿರಬೇಕು ಎಂಬುದನ್ನು ನಿರ್ಧರಿಸುವ ಪ್ರಜೆಗಳ ಸ್ವಾತಂತ್ರÂವನ್ನು ಕಸಿದುಕೊಂಡ ಹಾಗೆ ಆಗುತ್ತದೆ. ಇಂದು ಸಮಾಜದ ಬಹುಪಾಲು ಜನರು ಸಮಾಜವಾದ ವ್ಯವಸ್ಥೆಯನ್ನು ಬಂಡವಾಳಶಾಹಿ ವ್ಯವಸ್ಥೆಗಿಂತಲೂ ಉತ್ತಮವೆಂದು ಪ್ರಸ್ತುತ ಸಮಯದಲ್ಲಿ ಪರಿಗಣಿಸಿರುವುದು ಸರಿಯಷ್ಟೆ. ಆದರೆ ಮುಂದಿನ ದಿನಗಳಲ್ಲಿ ಸಮಾಜವಾದಿ ವ್ಯವಸ್ಥೆಗಿಂತ ಉತ್ತಮವಾದ ಸಾಮಾಜಿಕ ರೂಪದ ಇತರ ವ್ಯವಸ್ಥೆಗಳನ್ನು ಜನರು ಯೋಚಿಸುವಂತೆ ಮಾಡುವುದು ಸಾಧ್ಯವಿದೆ. ಹಾಗಾಗಿ ಒಂದು ನಿರ್ದಿಷ್ಟ ರೂಪದಲ್ಲಿ ಜನರು ಬದುಕಲು ಸಂವಿಧಾನವನ್ನು ಏಕೆ ಕಟ್ಟಿಹಾಕಬೇಕು ಮತ್ತು ಅದನ್ನು ಸ್ವತಃ ಅಂದಿನ ಜನರೇ ಅಂದಿನ ಕಾಲಮಾನಕ್ಕೆ ನಿರ್ಧರಿಸಲು ಆ ಜನರಿಗೆ ಏಕೆ ಬಿಡಬಾರದು? ಈ ದೃಷ್ಟಿಕೋನದಲ್ಲಿ ನಾವು ಈ ತಿದ್ದುಪಡಿ ಪ್ರಸ್ತಾಪವನ್ನು ವಿರೋಧಿಸುತ್ತಿದ್ದೇವೆ’.
ತಿದ್ದುಪಡಿಯು ಸಂಪೂರ್ಣವಾಗಿ ನಿರುಪದ್ರವ ಮತ್ತು ಅನಗತ್ಯ ಎಂಬುದು ಅವರ ಎರಡನೆಯ ಆಕ್ಷೇಪಣೆ. ಏಕೆಂದರೆ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನೀತಿಯ ನಿರ್ದಿಷ್ಟ ತತ್ವಗಳ ಮೂಲಕ ನಮ್ಮ ಸಂವಿಧಾನದಲ್ಲಿ ಸಮಾಜವಾದಿ ತಣ್ತೀಗಳನ್ನು ಈಗಾಗಲೇ ಒಳಪಡಿಸಲಾಗಿದೆ. ನಿರ್ದಿಷ್ಟ ತತ್ವಗಳನ್ನು ಉಲ್ಲೇಖೀಸುತ್ತಾ, ಅವರು ಗಮನ ಸೆಳೆಯುವ ಈ ನಿರ್ದಿಷ್ಟ ತತ್ವಗಳು ಅವರ ದಿಕ್ಕಿನಲ್ಲಿ ಮತ್ತು ಅವರ ವಿಷಯದಲ್ಲಿ ಸಮಾಜವಾದವಾಗದಿದ್ದಲ್ಲಿ, ಇನ್ನು ಹೆಚ್ಚಿನ ಸಮಾಜವಾದವು ಏನೆಂಬುದನ್ನು ನಾನು ಅರಿಯೆ ಎಂದು ಶಾ ಅವರಿಗೆ ತಿಳಿಸಿದರು. ಶಾ ಅವರ ತಿದ್ದುಪಡಿಯು ಜಾರಿಯಾಗುವಲ್ಲಿ ಅಂದು ವಿಫಲವಾಯಿತು ಮತ್ತು 42ನೇ ತಿದ್ದುಪಡಿ ತನಕ ಈ ಪೀಠಿಕೆ ಪ್ರಸ್ತಾವವು ಬದಲಾಗದೇ ಉಳಿಯಿತು.
ಸ್ವತಃ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರೇ ಮುಂದಿನ ಪೀಳಿಗೆಯ ಆಶೋತ್ತರಗಳಿಗೆ, ದೇಶ ತನ್ನ ವ್ಯವಸ್ಥೆಯನ್ನು ಬದಲಿಸಿಕೊಳ್ಳಲು ಮುಂಬರುವ ಪೀಳಿಗೆಯವರಿಗೆ ಅವಕಾಶ ಒದಗಿಸಿ ತಾವು ಎಷ್ಟು ಪ್ರಜಾಪ್ರಭುತ್ವವಾದಿ ಎಂದು ನಿರೂಪಿಸಿ¨ªಾರೆ. ಇವರಿಗಿಂತ ಹೆಚ್ಚಿನ ಪ್ರಜಾಪ್ರಭುತ್ವವನ್ನು ಅರಗಿಸಿಕೊಂಡ ಇನ್ನೊಬ್ಬ ಮೇಧಾವಿಯನ್ನು ಈ ಜಗತ್ತು ಇಂದಿಗೂ ಕಂಡಿಲ್ಲ ಹಾಗೂ ಇನ್ನೂ ಸಹ ಕಾಯುತ್ತಲಿದೆ. ಇಂತಹ ಮಹಾನ್ ಆರಾಧ್ಯ ಪುರುಷನನ್ನು ಕೇವಲ ಅಲಂಕಾರಿಕವಾಗಿ ತಮ್ಮ ವೋಟ್‌ಬ್ಯಾಂಕ್ ರಾಜಕೀಯಕ್ಕೆ ಬಳಸಿಕೊಳ್ಳುವ, ಮತಿಗೆಟ್ಟ ರಾಜಕಾರಣಿಗಳಿಗೆ ಹಾಗೂ ಬುದ್ಧಿಜೀವಿಯೆನಿಸಿಕೊಳ್ಳುವ ಸೋಗಲಾಡಿ ಗಂಜಿ ಗಿರಾಕಿಗಳಿಗೆ ಮುಂದಿನ ದಿನಗಳಲ್ಲಿ ನನ್ನ ನಿಲುವನ್ನೇ ಇದೇ ಸಮಾಜ ಗಟ್ಟಿಯಾಗಿ ಪ್ರತಿಧ್ವನಿಗೊಳಿಸುವುದು ಪ್ರತಿಶತ ಸತ್ಯ. ಕೇವಲ ನನ್ನಂಥವನ ಒಂದು ಭಾಷಣದಲ್ಲಿ ಆಡಿದ ಆಲೋಚನೆಯನ್ನು ಜೀರ್ಣಿಸಿಕೊಳ್ಳಲಾಗದ ಈ ವಿಕೃತ ಮಂದಿಗೆ ಇಂದಿನ ಯುವಜನತೆ ಮತ್ತು ಮುಂದಿನ ತಲೆಮಾರಿನ ಆಲೋಚನೆಗಳನ್ನೂ ಕಟ್ಟಿಹಾಕಲು ಎಂದಿಗೂ ಸಾಧ್ಯವಿಲ್ಲ. ಈ ಸಮಾಜ ಎಚ್ಚತ್ತುಗೊಂಡಿದೆ. ನಾಯಕರೆನಿಸಿಕೊಂಡವರು ಈ ಕಾಲಮಾನದ ಕರೆಗೆ ಓಗೊಟ್ಟು ಸರಿಯಾದ ದಿಕ್ಕಿನಲ್ಲಿ ಮಾರ್ಗದರ್ಶನ ಮಾಡದಿದ್ದಲ್ಲಿ ಅಂಥವರೆಲ್ಲರೂ ಇತಿಹಾಸದ ಕಸದ ಬುಟ್ಟಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ವಿಷಯ ಪ್ರಸ್ತಾಪ, ಪ್ರಸಕ್ತ ಕಾಲಮಾನದಲ್ಲಿ ಒಂದು ದಿಕ್ಸೂಚಿಯೆಂದು ತಿಳಿದು, ಪ್ರಸ್ತುತ (ಢೋಂಗಿ) ಜಾತ್ಯತೀತ(?) ರೆಂದು ಕರೆಸಿಕೊಳ್ಳುವವರಿಗೆ ಖಂಡಿತ ಕಾದಿದೆ ವಿಶೇಷ ನಿರಾಶ್ರಿತ ಶಿಬಿರಗಳು!!
ಮಾಧ್ಯಮದಲ್ಲಿ ನನ್ನನ್ನು ಯಾರೂ ಬೆಂಬಲಿಸಲಿಲ್ಲವೆಂದು ಬಿಂಬಿಸಿದರು ಸಹ ನನಗೆ ಮಾತ್ರ ಈ ವಿದ್ಯಮಾನದ ನಂತರ ಎಂದೂ ಒಬ್ಬಂಟಿಯೆನಿಸಲೇ ಇಲ್ಲ. ನಮ್ಮ ಜನರ ಪ್ರತಿಕ್ರಿಯೆ ಎಷ್ಟು ಉತ್ತಮವಾಗಿತ್ತು ಎಂದರೆ ನನ್ನನ್ನು ಇಂದಿನ ವಿದ್ಯಮಾನಗಳು ಇನ್ನಷ್ಟು ಹುರುಪುಗೊಳಿಸಿ, ಶಕ್ತಿ ನೀಡಿ ಹೆಚ್ಚಿನ ವಿಶ್ವಾಸ ಮೂಡಿಸಿದೆ.
ಯಾವುದೋ ಅವಿವೇಕಿ, ಹಿಂದೂ ಧರ್ಮಕ್ಕೆ ಅಪ್ಪ-ಅಮ್ಮವಿಲ್ಲವೆಂದಿದ್ದಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೊದಿಕೆಯಲ್ಲಿ ಈ ಸಮಾಜದ ವಿವಿಧ ಸ್ತರದ ನಾಯಕರೆಲ್ಲ ನಾಚಿಕೆಗೆಟ್ಟು ವಿಜೃಂಭಿಸಿದರು. ಆದರೆ, ವಿಚಾರ ಪ್ರಚೋದನೆ ಮಾಡಿದ ನನಗೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗ್ಯವಿಲ್ಲ. ನನ್ನ ನಾಲಿಗೆ ಕತ್ತರಿಸಿ ತಂದು ಕೊಡುವವರಿಗೆ ಬಹುಮಾನ ನೀಡುತ್ತೇವೆ ಎನ್ನುವವರ ಬಗ್ಗೆ ಇದೇ ನಮ್ಮ ರಾಜಕೀಯ ನಾಯಕರಾಗಲಿ, ಸಮಾಜದ ಬುದ್ಧಿಜೀವಿಯೆನಿಸಿಕೊಂಡವರಾಗಲಿ ಅಥವಾ ಮಾಧ್ಯಮದ ಮಂದಿಯಾಗಲಿ ಧ್ವನಿ ಎತ್ತದಿದ್ದುದು ಪ್ರಸಕ್ತ ವಿದ್ಯಮಾನದ ಕಟು ವಾಸ್ತವವೂ ಹೌದು. ಆದರೆ, ವಾಸ್ತವ ನೆಲಗಟ್ಟಿನಲ್ಲಿ ಜನ ಮಾನಸದಲ್ಲಿ ರೂಪಗೊಂಡ ಅಭಿಪ್ರಾಯ ಮಾತ್ರ ವ್ಯತಿರಿಕ್ತವಾಗಿತ್ತು. ನನಗಂತೂ ಹಲವು ನೇರ ಪ್ರತಿಕ್ರಿಯೆಗಳು ಬಂದವು. ನನ್ನ ನಿಲುವಿಗೆ ಹಲವರು ಬೆಂಬಲಿಸಿ ತಮ್ಮ ಅನಿಸಿಕೆಗಳನ್ನೂ ವಿವಿಧ ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ. ಅವರೆಲ್ಲರೂ ನನ್ನ ವಿಚಾರವನ್ನು ಶ್ಲಾ ಸಿ ವಿಚಾರದ ಬಗ್ಗೆ ಧೀರ್ಘವಾಗಿ ಚರ್ಚಿಸಿ ಮತ್ತು ಇಂತಹ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಅಭಿನಂದಿಸಿದ್ದಾರೆ. ಅವರೆಲ್ಲರ ಪ್ರತಿಕ್ರಿಯೆ ನನ್ನನ್ನು ಇನ್ನಷ್ಟು ಗಟ್ಟಿಗೊಳಿಸಿದೆ. ಅವರೆಲ್ಲರಿಗೂ ನನ್ನ ಅನಂತ ವಂದನೆಗಳು.”
“”ಬಾಬಾಸಾಹೇಬ್‌ರನ್ನು ಅವರ ಜೀವಿತಾವಧಿಯಲ್ಲಿ ನೆಹರು ಮತ್ತು ಗಾಂಧಿಯವರ ನೇತೃತ್ವದ ಕಾಂಗ್ರೆಸ್ ಸಂಪೂರ್ಣವಾಗಿ ತಿರಸ್ಕಾರದಿಂದ ವರ್ತಿಸಿ ಅವರ ರಾಜಕೀಯ ತೇಜೋವಧೆ ಮಾಡಿತು. ಚುನಾವಣೆಯಲ್ಲಿ ಅವರನ್ನು ಮೋಸದಿಂದ ಸೋಲಿಸಿ, ಅವರ ರಾಜಕಾರಣದ ಅವಕಾಶಗಳನ್ನು ಕಿತ್ತುಕೊಂಡರು. ಆ ದಿನಗಳಲ್ಲಿ ದಲಿತ ಸಂಘಟನೆ ಅಥವಾ ದೇಶದ ನಿಜವಾದ ಬೌದ್ಧಿಕ ಶಕ್ತಿಗಳು ಸಹ ಎಚ್ಚೆತ್ತುಕೊಳ್ಳದೆ ಹಾಗೂ ಬಲಿಷ್ಠವಾಗಿರದೆ ಅಂಬೇಡ್ಕರ್‌ರ ನೆರವಿಗೆ ಕೂಡ ಧಾವಿಸಲಿಲ್ಲ.”
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಬಿಮ್ಸ್ ಆಸ್ಪತ್ರೆಯಲ್ಲಿ ಮತ್ತೊರ್ವ ಬಾಣಂತಿ ಮೃತ್ಯು; ಕುಟುಂಬಸ್ಥರ ಆಕ್ರಂದನ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.