OP Ganesh Murti: ಪಿಒಪಿ ಗಣೇಶ ಮೂರ್ತಿ ಮೇಲೆ ಹದ್ದಿನ ಕಣ್ಣು!

Team Udayavani, Sep 11, 2023, 2:29 PM IST

TDY-10

ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ದಿನಗಣನೆ ಇರುವಾಗಲೇ ಸಿಲಿಕಾನ್‌ ಸಿಟಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಮತ್ತೂಂದೆಡೆ ಪರಿಸರಕ್ಕೆ ಹಾನಿಯಾಗುವಂತಹ ಪಿಒಪಿ ಗಣೇಶ ಮೂರ್ತಿ ತಯಾರಿಕೆ, ಖರೀದಿ ಮೇಲೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಹದ್ದಿನ ಕಣ್ಣಿಟಿದೆ. ಹಬ್ಬದ ಸಂದರ್ಭದಲ್ಲಿ ಮಾಲಿನ್ಯಕಾರಕ ಸಿಡಿ ಮದ್ದು ಪಟಾಕಿ, ಎಲ್ಲೆಂದರಲ್ಲಿ ಗಣೇಶ ಮೂರ್ತಿ ವಿಸರ್ಜನೆ, ತ್ಯಾಜ್ಯ ಎಸೆಯುವುದು ಪತ್ತೆಯಾದರೆ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.

ಪ್ರತಿ ವರ್ಷವೂ ಗಣೇಶ ಚತುದರ್ಶಿ ಸಂದರ್ಭಗಳಲ್ಲಿ ಪ್ಲಾಸ್ಟರ್‌ ಆಫ್ ಪ್ಯಾರೀಸ್‌ (ಪಿಒಪಿ) ಹಾಗೂ ಬಣ್ಣದ ಗಣೇಶ ಮೂರ್ತಿ ನಿಷೇಧಿಸಿದರೂ ಜನ ಈ ಬಗ್ಗೆ ತಲೆಕೆಡಿಸಿ ಕೊಳ್ಳುತ್ತಿರಲಿಲ್ಲ. ಆದರೆ, ಈ ಬಾರಿ ಕೆಎಸ್‌ಪಿಸಿಬಿಯು ರಾಜ್ಯಾದ್ಯಂತ ತನ್ನ ಪ್ರಾದೇಶಿಕ ಕಚೇರಿಗಳ ವ್ಯಾಪ್ತಿಗಳಲ್ಲಿ ಪಿಒಪಿ ತಯಾರಿಸದಂತೆ ಅಭಿಯಾನ ಶುರು ಮಾಡಿದೆ. ಗಣೇಶ ಮೂರ್ತಿ ಉತ್ಪಾದನೆ, ವಿಸರ್ಜನೆ ಹಾಗೂ ಪಿಒಪಿ ಮೂರ್ತಿಗಳಿಂದ ಪರಿಸರಕ್ಕೆ ಆಗುವ ಹಾನಿಯ ಬಗ್ಗೆ ತಿಳಿವಳಿಕೆ ಮೂಡಿಸಲಾಗುತ್ತಿದೆ. ಇನ್ನು ಹಲವು ಕಡೆ ಪಿಒಪಿ ಮೂರ್ತಿ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಸಾವಿರಾರು ಮೂರ್ತಿ ಜಪ್ತಿ ಮಾಡಲಾಗಿದೆ.

ಕೋಟ್ಯಂತರ ವಹಿವಾಟಿಗೆ ಬ್ರೇಕ್‌: ಕುಂಬಳಗೋಡಿನ ಗುಡಿಮಾವು ಬಳಿಯ ನಿರ್ಜನ ಪ್ರದೇಶಗಳಲ್ಲಿ ದೊಡ್ಡ ಶೆಡ್‌ ನಿರ್ಮಿಸಿ ಅಕ್ರಮವಾಗಿ ಬೃಹತ್‌ ಗಾತ್ರದ ಪಿಒಪಿ ಗಣೇಶನ ಮೂರ್ತಿ ತಯಾರಿಸುತ್ತಿರುವುದು ಇತ್ತೀಚೆಗೆ ಮಂಡಳಿಯ ಗಮನಕ್ಕೆ ಬಂದಿತ್ತು. ಅಲ್ಲಿಗೆ ದಾಳಿ ಮಾಡಿದಾಗ ಕೋಟ್ಯಂತರ ರೂ. ಮೌಲ್ಯದ ಸಾವಿ ರಾರು ಪಿಒಪಿ ಗಣೇಶನ ಮೂರ್ತಿ ಪತ್ತೆಯಾಗಿದ್ದು, ಇವುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಮಾರ್ಷಲ್‌ಗ‌ನೇಮಕ: ಆರೋಪಿಗಳು ಮುಂಬೈ ಸೇರಿ ಹೊರ ರಾಜ್ಯಗಳಿಗೂ ಇಲ್ಲಿಂದ ನೂರಾರು ಪಿಒಪಿ ಗಣೇಶ ಮೂರ್ತಿ ಪೂರೈಸಿ ಕೋಟ್ಯಂತರ ರೂ. ವಹಿವಾಟು ನಡೆಸಲು ಯೋಜನೆ ಹಾಕಿಕೊಂಡಿರುವುದು ಗೊತ್ತಾಗಿದೆ. ಇದನ್ನು ನಡೆಸುತ್ತಿದ್ದ ಶ್ರೀನಿವಾಸ್‌ ಎಂಬಾತನ ಮೇಲೆ ಮಂಡಳಿ ಕೇಸ್‌ ಹಾಕಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಮಂಡಳಿಯೇ ದಿನದ 24 ಗಂಟೆಯೂ ಇಲ್ಲಿ ಮಾರ್ಷಲ್‌ಗ‌ಳನ್ನು ನೇಮಿಸಿ ಹದ್ದಿನ ಕಣ್ಣಿಟ್ಟಿದೆ. ಇನ್ನು ಥಣಿಸಂದ್ರ ಹಾಗೂ ಮೈಸೂರಿನ ಕೆಲ ಪ್ರದೇಶಗಳಲ್ಲೂ ದಾಳಿ ನಡೆಸಿ ನೂರಾರು ಪಿಒಪಿ ಮೂರ್ತಿ ಜಪ್ತಿ ಮಾಡಲಾಗಿದೆ.

ಶೇ.70 ಜನ ಮಣ್ಣಿನ ಗಣೇಶನತ್ತ ಆಕರ್ಷಣೆ: ಪ್ರಕೃತಿಗೆ ಹಾನಿಯಾಗದ ರೀತಿಯಲ್ಲಿ ಗಣೇಶ ಹಬ್ಬ ಆಚರಿಸುವಂತೆ ಪ್ರತಿ ಪುರಸಭೆ ವ್ಯಾಪ್ತಿಗಳಲ್ಲಿ ಮೈಕ್‌ಗಳಲ್ಲಿ ಮಣ್ಣಿನ ಗಣೇಶ ಉಪಯೋಗಿಸಿ, ಮೂರ್ತಿ ಗಳನ್ನು ಸೂಕ್ತ ರೀತಿಯಲ್ಲಿ ವಿಸರ್ಜನೆ ಮಾಡಿ ಎಂಬಿ ತ್ಯಾದಿ ಘೋಷಣೆಗಳ ಮೂಲಕ ಜಾಗೃತಿ ಮೂಡಿ ಸಲಾಗುತ್ತಿದೆ. ಪರಿಣಾಮ ಈ ವರ್ಷ ಶೇ.70 ಮಂದಿ ಮಣ್ಣಿನ ಗಣೇಶ ಮೂರ್ತಿಗಳತ್ತ ಆಕರ್ಷಿತರಾಗಿದ್ದಾರೆ ಎಂದು ಕೆಎಸ್‌ಪಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಪಿಒಪಿ ಗಣೇಶ ಮೂರ್ತಿಗೆ ಪ್ರಭಾವಿಗಳ ಶ್ರೀರಕ್ಷೆ:

ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಿಸಿ ದೇಶದ ವಿವಿಧೆಡೆಗೆ ಪೂರೈಸುವ ವ್ಯವಸ್ಥಿತ ಜಾಲವಿದೆ. ಆದರೆ, ಇದುವರೆಗೆ ಪ್ರಭಾವಿಗಳ ಶ್ರೀರಕ್ಷೆಯಿಂದ ಪರಿಸರ ಅಧಿಕಾರಿಗಳು ಕ್ರಮ ಕೈಗೊಳ್ಳದೇ ಕೈ ಕಟ್ಟಿ ಕುಳಿತುಕೊಳ್ಳಬೇಕಿತ್ತು. ಇನ್ನು ಮುಂದೆ ಪಿಒಪಿ ಗಣೇಶ ಮೂರ್ತಿ ಕೂರಿಸುವುದು, ಪ್ರಕೃತಿಗೆ ಹಾನಿ ಮಾಡುವುದು ಗಮನಕ್ಕೆ ಬಂದರೆ ಪುರಸಭೆಯ ಸಿಬ್ಬಂದಿ, ಸಂಬಂಧಿಸಿದ ಅಧಿಕಾರಿಗಳ ಜೊತೆಗೆ ಆ ಜಾಗಕ್ಕೆ ದಾಳಿ ನಡೆಸಿ ಅಲ್ಲಿರುವ ಮೂರ್ತಿಗಳನ್ನು ಜಪ್ತಿ ಮಾಡಲು ಮಂಡಳಿ ನಿರ್ಧರಿಸಿದೆ. ಕೆಎಸ್‌ಪಿಸಿಬಿಯು ತನ್ನ ಅಧಿಕಾರ ಚಲಾಯಿಸಿ ಖಾಸಗಿ ಕ್ರಿಮಿನಲ್‌ ಕೇಸ್‌ ದಾಖಲಿಸಲಿದೆ. ನಂತರ ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದೆ. ಕೋರ್ಟ್‌ನಲ್ಲಿ ತಪ್ಪಿತಸ್ಥರು ಕಾನೂನು ಉಲ್ಲಂ ಸಿರುವುದು ದೃಢಪಟ್ಟರೆ ಒಂದೂವರೆ ವರ್ಷದಿಂದ 6 ವರ್ಷದವರೆಗೂ ಸಜೆ ನೀಡಲು ಅವಕಾಶವಿದೆ. ಈಗಾಗಲೇ 4 ಕೇಸ್‌ ದಾಖಲಾಗಿದೆ.

ಪರಿಸರ ಸ್ನೇಹಿ ಗಣಪ ತಯಾರಿ ತರಬೇತಿ:

ಬೆಂಗಳೂರು: ಬಿ.ಪ್ಯಾಕ್‌ ಹಾಗೂ ಬಿ.ಕ್ಲಿಪ್‌ ಅಲ್ಯೂಮ್ನಿ ಅಸೋಸಿಯೇಷನ್‌ನಿಂದ ಹಲಸೂರು ಕೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ಸ್ನೇಹಿ ಮಣ್ಣಿನ ಗಣಪ ತಯಾರಿಸುವ ಕಾರ್ಯಾಗಾರದಲ್ಲಿ 500ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡರು.

ಶಾಸಕ ರಿಜ್ವಾನ್‌ ಅರ್ಷಾದ್‌ ಮಾತನಾಡಿ, ಇಲ್ಲಿ ಸೇರಿರುವ ಜನಮೂಹದ ಪರಿಸರ ಪ್ರಜ್ಞೆ ಕಂಡು ಅತೀವ ಸಂತಸವಾಗುತ್ತಿದೆ. ಪಿಒಪಿ ಗಣಪತಿ ಮೂರ್ತಿಗಳಿಂದಾಗಿ ಜಲಮೂಲಗಳ ಮಾಲಿನ್ಯವಾಗುತ್ತಿದೆ. ಎಲ್ಲರೂ ಪಿಒಪಿ ಗಣಪತಿ ಮೂರ್ತಿಗಳ ಬದಲಾಗಿ ಮಣ್ಣಿನಲ್ಲಿ ಮಾಡಿದ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಬೇಕು. ಇಂತಹ ಕಾರ್ಯಕ್ರಮಗಳು ನಗರದಲ್ಲಿ ಇನ್ನೂ ಹೆಚ್ಚು ನಡೆಯಬೇಕು ಎಂದರು.

ಕಾರ್ಯಾಗಾರದಲ್ಲಿ ಮಣ್ಣಿನ ಗಣಪ ತಯಾರಿ ಸುವುದನ್ನು ಮಕ್ಕಳಿಗೆ ತಿಳಿಸಿಕೊಡಲಾಯಿತು. ಸ್ಥಳೀಯರು, ವಿದ್ಯಾರ್ಥಿಗಳು ಮಣ್ಣಿನ ಗಣಪನನ್ನು ಹೇಗೆ ಮಾಡಬೇಕೆಂದು ಕಲಿತು, ತಮ್ಮ ಸ್ವಕ್ಷೇತ್ರಗಳಲ್ಲಿ ಮಣ್ಣಿನ ಗಣಪ ಕಾರ್ಯಗಾರ ಹಮ್ಮಿಕೊಳ್ಳುವುದು ಇದರ ಮುಖ್ಯ ಉದ್ದೇಶವಾಗಿದೆ. ನಗರದಲ್ಲಿ 100ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಪ್ರದೇಶಗಳಲ್ಲಿ ಇಂತಹ ಕಾರ್ಯಾಗಾರಗಳು ನಡೆಸಲು ಉದ್ದೇಶಿಸಲಾಗಿದೆ. ಸಂಸದ ಪಿ.ಸಿ.ಮೋಹನ್‌, ಎಸ್‌ಐಟಿಕೆ ಉಪಾಧ್ಯಕ್ಷ ರಾಜೀವ್‌ಗೌಡ, ಬಿ.ಪ್ಯಾಕ್‌ ಸಿಇಒ ರೆವತಿ ಅಶೋಕ್‌ ಮತ್ತಿತರರು ಉಪಸ್ಥಿತರಿದ್ದರು.

ಅನುಮತಿ ನೀಡಲು 63 ಏಕಗವಾಕ್ಷಿ ಕೇಂದ್ರ:

ಬೆಂಗಳೂರು: ಶಾಂತಿಯುತ ಗಣೇಶ ಹಬ್ಬ ಆಚರಣೆಗೆ ಬಿಬಿಎಂಪಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಜತೆಗೆ ಗಣೇಶ ಪೆಂಡಾಲ್‌ಗ‌ಳಿಗೆ ಅನುಮತಿ ನೀಡಲು 63 ಏಕಗವಾಕ್ಷಿ ಕೇಂದ್ರಗಳನ್ನು ಸ್ಥಾಪಿಸಿದೆ. ಹಾಗೆಯೇ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕಾಗಿ ವಲಯ ಅಧಿಕಾರಿ ಗಳು ಮುಂಜಾಗ್ರತಾ ಕ್ರಮ ಕೈಗೊಳ್ಳು ವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೂಚನೆ ನೀಡಿದ್ದಾರೆ. ಗಣೇಶ ಮೂರ್ತಿಯ ತಯಾರಿಕೆಗಾಗಿ ಬಳಸುವ ರಾಸಾಯನಿಕ ಬಣ್ಣಗಳು, ಥರ್ಮಾಕೋಲ್‌ ಹಾಗೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ಗಳ ಬಳಕೆ ಸಂಪೂರ್ಣವಾಗಿ ನಿಲ್ಲಿಸಿ, ನಿರ್ಬಂಧಿಸುವುದರ ಕುರಿತು ಹಾಗೂ ಈ ರೀತಿಯ ವಸ್ತುಗಳನ್ನು ಬಳಸಿ ತಯಾರಿಕೆಯಾಗುವ ಗಣೇಶ ಮೂರ್ತಿಗಳನ್ನು ವಶಪಡಿಸಿಕೊಂಡು ನಿಯಾಮಾ ನು ಸಾರ ವಿಲೇವಾರಿ ಮಾಡುವ ಕುರಿ ತಂತೆ ಕ್ರಮ ಕೈಗೊಳ್ಳಿ ಎಂದು ಹಿರಿಯ ಅಧಿಕಾರಿಗಳಿಗೆ ತಾಕೀತು ಮಾಡಿ ದ್ದಾರೆ. ಪಾಲಿಕೆ ವ್ಯಾಪ್ತಿಯಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ಕಾರ್ಯಕ್ರಮ ಆಯೋಜಿಸುವ ಸಂಬಂ ಧ, ಬಿಬಿಎಂಪಿ, ಬೆಸ್ಕಾಂ, ಪೊಲೀಸ್‌ ಹಾಗೂ ಆಗ್ನಿಶಾಮಕ ಇಲಾಖೆಗಳನ್ನು ಒಳಗೊಂಡಂತೆ 63 ಉಪ ವಿಭಾಗಗಳಲ್ಲಿ ಏಕಗವಾಕ್ಷಿ ಕೇಂದ್ರಗಳ ಮೂಲಕ ಪೂರ್ವಾನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದಿದ್ದಾರೆ.

ಮಂಡಳಿಯ ಸಿಬ್ಬಂದಿಗೆ ಸಾಥ್‌ ನೀಡುವಂತೆ ಬೆಂಗಳೂರು ಪೊಲೀಸ್‌ ಆಯುಕ್ತರು, ರಾಜ್ಯ ಡಿಜಿಪಿಗೆ ಪತ್ರ ಬರೆಯಲಾಗಿದೆ. ಪರಿಸರಕ್ಕೆ ಹಾನಿಯಾಗುವ ಮಾದರಿಯಲ್ಲಿ ಪಟಾಕಿ ಹೊಡೆಯಲು, ಪಿಓಪಿ ಗಣೇಶ ಕೂರಿಸಲು, ಹೆಚ್ಚಿನ ಶಬ್ದಮಾಲಿನ್ಯ ಉಂಟಾಗುವಂತಹ ಧ್ವನಿವಧ‌ìಕ ಹಾಕಲು ಅವಕಾಶ ಕೊಡಬೇಡಿ ಎಂದು ಪೊಲೀಸರಿಗೆ ಮಂಡಳಿ ಕೋರಿಕೊಂಡಿದೆ.-ಯತೀಶ್‌, ಹಿರಿಯ ಪರಿಸರ ಅಧಿಕಾರಿ. ಕೆಎಸ್‌ಪಿಸಿಬಿ.

– ಅವಿನಾಶ ಮೂಡಂಬಿಕಾನ

ಟಾಪ್ ನ್ಯೂಸ್

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

Nagpur: ʼಪುಷ್ಪ-2ʼ ನೋಡುತ್ತಿದ್ದಾಗಲೇ ಥಿಯೇಟರ್‌ಗೆ ಪೊಲೀಸರ ಎಂಟ್ರಿ; ಸ್ಮಗ್ಲರ್ ಬಂಧನ

9

Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

7

Malpe: ಮನೆ ಮನೆಗಳಲ್ಲಿ ಕ್ಯಾರೋಲ್‌ ಗಾಯನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.