ಬಾಡಿಗೆಗೆ ಸಿಗಲಿದೆ ಪಿಒಪಿ ಗಣೇಶ!


Team Udayavani, Aug 20, 2019, 3:07 AM IST

baadigege

ಬೆಂಗಳೂರು: ಬೈಸಿಕಲ್‌ಗ‌ಳು, ಬೈಕ್‌ಗಳು, ಅಷ್ಟೇ ಯಾಕೆ ಐಷಾರಾಮಿ ಕಾರುಗಳೂ ಬಾಡಿಗೆ ಸಿಗುವುದು ಸರ್ವೇಸಾಮಾನ್ಯ. ಆದರೆ, ಈಗ ದೇವರು ಅದರಲ್ಲೂ ಗಣೇಶ ಕೂಡ ಬಾಡಿಗೆಗೆ ಸಿಗುತ್ತಾನೆ! ನಿಮಗಿಷ್ಟವಾದ ಗಣೇಶನ ಮೂರ್ತಿಗಳನ್ನು ಬೇಕಾದಷ್ಟು ದಿನ ಬಾಡಿಗೆ ಪಡೆದು, ನಂತರ ಆಯಾ ಮೂರ್ತಿಗಳ ಮಾಲಿಕರಿಗೆ ವಾಪಸ್‌ ನೀಡಬಹುದು.

ಹೀಗೆ ದೇವರನ್ನು ಬಾಡಿಗೆ ಪಡೆಯಲು ಸಾಕಷ್ಟು ಬೇಡಿಕೆಗಳೂ ಬರುತ್ತಿದ್ದು, ಈಗಾಗಲೇ ಮುಂಗಡ ಪಾವತಿಸಿ ಬುಕಿಂಗ್‌ ಮಾಡುವ ಪ್ರಕ್ರಿಯೆ ಶುರುವಾಗಿದೆ. ಆದರೆ, ಬಾಡಿಗೆ ದರ ದಿನಕ್ಕೆ ಕನಿಷ್ಠ ಐದು ಸಾವಿರ ರೂ. ಇಂತಹದ್ದೊಂದು ಟ್ರೆಂಡ್‌ ಈಗ ಸಿಲಿಕಾನ್‌ ಸಿಟಿಯಲ್ಲಿ ಶುರುವಾಗಿದೆ. ಪಿಒಪಿ ಗಣೇಶ ಮೂರ್ತಿಗಳಿಂದ ಕೆರೆಗಳು ಹಾಳಾಗುತ್ತಿದ್ದು, ಈ ಪ್ರಕಾರದ ಮೂರ್ತಿಗಳನ್ನು ನಿಷೇಧಿಸಬೇಕು ಎಂಬ ಕೂಗು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಪಿಒಪಿ ಗಣೇಶನ ತಯಾರಕರು ರಂಗೋಲಿ ಕೆಳಗೆ ತೂರುವ ಐಡಿಯಾ ಮಾಡಿದ್ದಾರೆ.

ಪಿಒಪಿ ಗಣೇಶ ಮೂರ್ತಿಗಳಿಗೆ ಹೆಚ್ಚು ಬೇಡಿಕೆಯಿದ್ದು, ಇವುಗಳ ಮಾರಾಟ ಮತ್ತು ಪೂರೈಕೆ ಸದ್ಯಕ್ಕೆ ನಿಲ್ಲಿಸಲಾಗಿದೆ. ಹಾಗಾಗಿ, ಪಿಒಪಿ ಗಣೇಶ ಮೂರ್ತಿಗಳನ್ನು ಗ್ರಾಹಕರಿಗೆ ಬಾಡಿಗೆಗೆ ನೀಡುತಿದ್ದು, ಉತ್ಸವದ ಬಳಿಕ ಮತ್ತೆ ತಯಾರಿಕರೇ ವಾಪಸು ಪಡೆದು ಮರುಬಳಕೆ ಮಾಡುವ ಪದ್ಧತಿ ಪರಿಚಯಿಸಲಾಗಿದೆ. ಕಳೆದ ವರ್ಷದಿಂದ ಬಾಡಿಗೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ದಿನವೊಂದಕ್ಕೆ ಕನಿಷ್ಠ ಐದು ಸಾವಿರದಿಂದ ಶುರುವಾಗುವ ಬಾಡಿಗೆ ದರ 10 ಸಾವಿರದ ತನಕ ಇದೆ ಎನ್ನಲಾಗಿದೆ.

ಮಾರುಕಟ್ಟೆಯಲ್ಲಿ ಪಿಒಪಿ ಮತ್ತು ಫೈಬರ್‌ನಿಂದ ತಯಾರಿಸುವ ದೊಡ್ಡ ಮೂರ್ತಿಗಳು ಬಾಡಿಗೆಗೆ ಲಭ್ಯವಿದ್ದು, 16 ಅಡಿ ಪಿಒಪಿ ಗಣೇಶ ಮೂರ್ತಿಯ ಮಾರುಕಟ್ಟೆ ಬೆಲೆ 70-80 ಸಾವಿರ ರೂ.ಗಳಾದರೆ, ಇದೇ ಗಾತ್ರದ ಫೈಬರ್‌ ಗಣೇಶ ಮೂರ್ತಿ 5 ಲಕ್ಷಕ್ಕೆ ಮಾರಾಟ ಮಾಡಲಾಗುತ್ತದೆ. ಇಷ್ಟು ದುಬಾರಿ ಗಣೇಶ ಮೂರ್ತಿಗಳನ್ನು ಖರೀದಿಸುವುದು ಕಷ್ಟವಾಗಿದ್ದು, ಇವುಗಳನ್ನು ಕನಿಷ್ಠ ಮೂರು ದಿನಗಳ ಕಾಲ ತಯಾರಕರಿಂದ ಗ್ರಾಹಕರು ಬಾಡಿಗೆಗೆ ಪಡೆಯುತ್ತಾರೆ.

ಬಾಡಿಗೆ ಪಡೆಯುವವರು ತಯಾರಿಕಾ ಘಟಕಗಳಲ್ಲಿ ಮೂರ್ತಿಯ ಅಸಲು ಮೊತ್ತವನ್ನು ಠೇವಣಿಯಿಟ್ಟು, ಸಂಚಾರ ವೆಚ್ಚವನ್ನು ಗ್ರಾಹಕರೇ ನೀಡಬೇಕು. ದಿನವೊಂದಕ್ಕೆ ಕನಿಷ್ಠ 5 ಸಾವಿರ ಬಾಡಿಗೆ ನೀಡಿದರೆ ಐದು ದಿನಗಳಿಗೆ 25 ಸಾವಿರ ರೂ. ಬಾಡಿಗೆ ಮತ್ತು 5 ಸಾವಿರ ರೂ. ಸಾಗಾಣಿಕ ವೆಚ್ಚ ಸೇರಿ 30 ಸಾವಿರ ಖರ್ಚಾಗಲಿದೆ. ಕೆಲವರು ಮೂರು ದಿನ, ಐದು ದಿನ ಗರಿಷ್ಠ ಏಳು ದಿನಗಳ ಕಾಲ ಈ ಬಾಡಿಗೆ ಮೂರ್ತಿಗಳನ್ನು ಪಡೆಯುತ್ತಾರೆ.

ಈ ಮೂಲಕ ಕಡಿಮೆ ಬಜೆಟ್‌ನಲ್ಲಿ ಅದ್ದೂರಿ ಗಣೇಶ ಉತ್ಸವ ಮಾಡುವ ಸಾವಿರಾರು ಗಣೇಶ ಉತ್ಸವ ಸಮಿತಿಗಳು ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಪಡೆಯಲು ಬಯಸುತ್ತವೆ ಎಂದು ಗಣೇಶ ಮೂರ್ತಿ ಮಾರಾಟಗಾರ ಶ್ರೀನಿವಾಸ್‌ ಮಾಹಿತಿ ನೀಡಿದರು. ಸಾಮಾನ್ಯವಾಗಿ ಉತ್ಸವಗಳಿಗೆ ದೊಡ್ಡ ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನೇ ಬಳಸುವುದು ವಾಡಿಕೆಯಾಗಿದ್ದು, ಪ್ರತಿ ಉತ್ಸವ ಗಣಪತಿ ಕನಿಷ್ಠ 10 ರಿಂದ 18 ಅಡಿ ಎತ್ತರ ಹೊಂದಿರುತ್ತದೆ.

ಇಷ್ಟು ಗಾತ್ರದ ಮೂರ್ತಿಯನ್ನು ಒಂದು ಸ್ಥಳದಿಂದ ಮತ್ತೂಂದು ಸ್ಥಳಕ್ಕೆ ಹೊತ್ತೂಯ್ಯಲು ಮತ್ತು ಮಣ್ಣಿನಲ್ಲಿ ತಯಾರಿಸುವುದು ಕಷ್ಟವಾಗುತ್ತದೆ. ಮಣ್ಣಿನ ಮೂರ್ತಿಗಳು ಹೆಚ್ಚು ಆಕರ್ಷಕವಾಗಿ ತಯಾರಿಸಲು ಆಗುವುದಿಲ್ಲ. ಹಾಗಾಗಿ, ದೊಡ್ಡ ಗಾತ್ರದ ಗಣೇಶ ಮೂರ್ತಿಗಳನ್ನು ಪಿಒಪಿ ಅಥವಾ ಫೈಬರ್‌ನಿಂದ ತಯಾರಿಸಲಾಗುತ್ತದೆ ಎನ್ನುತ್ತಾರೆ ಪಿಒಪಿ ಗಣೇಶ ತಯಾರಕರು.

ಪಿಒಪಿ ಜತೆ ಮಣ್ಣಿನ ಗಣಪ ಫ್ರೀ: ಪಿಒಪಿ ಅಥವಾ ಫೈಬರ್‌ ಗಣೇಶ ಮೂರ್ತಿಯನ್ನು ಬಾಡಿಗೆಗೆ ಪಡೆದರೆ, ಪೂಜೆಗಾಗಿ ಮಣ್ಣಿನ ಗಣೇಶನನ್ನು ಉಚಿತವಾಗಿ ನೀಡಲಾಗುವುದು. ಅಲಂಕಾರ, ಸಂಭ್ರಮ ಮತ್ತು ಉತ್ಸವಗಳಿಗೆ ಪಿಒಪಿ ಅಥವಾ ಫೈಬರ್‌ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡುವುದರ ಜತೆಗೆ ಪೂಜೆ ಮತ್ತು ನೀರಿನಲ್ಲಿ ವಿಸರ್ಜಿಸಲು ಸಾಮಾನ್ಯ ಗಾತ್ರದ ಮಣ್ಣಿನ ಗಣೇಶ ಮೂರ್ತಿಯನ್ನು ತಯಾರಕರು ಉಚಿತವಾಗಿ ನೀಡುತಿದ್ದಾರೆ.

ಗಣೇಶ ಮೂರ್ತಿಗಳನ್ನು ಬಾಡಿಗೆಗೆ ಪಡೆಯುವುದು ಟ್ರೆಂಡ್‌ ಆಗಿದ್ದು, ಹಬ್ಬ ಸಮೀಪಿಸುತಿದ್ದಂತೆ ದೊಡ್ಡ ಗಣೇಶ ಮೂರ್ತಿಗಳ ಖರೀದಿಗೆ ಬರುವವರ ಪೈಕಿ ಶೇ.10 ಮಂದಿ ಬಾಡಿಗೆಗೆ ಪಡೆಯಲು ಇಚ್ಛಿಸುತ್ತಾರೆ. ಇದೇ ಮೂರ್ತಿಗಳನ್ನು ಸಿನಿಮಾ ಶೂಟಿಂಗ್‌, ವಸ್ತು ಪ್ರದರ್ಶನ ಮತ್ತು ಮದುವೆ ಸಮಾರಂಭಗಳಿಗೆ ನೀಡುತ್ತೇವೆ. ಈಗಾಗಲೇ 30ಕ್ಕೂ ಹೆಚ್ಚು ಮೂರ್ತಿಗಳು ಬುಕ್‌ ಆಗಿವೆ.
-ಪಿ.ಗುರುದೇವ್‌, ಪಿಒಪಿ ಗಣೇಶ ಮಾರಾಟಗಾರ

ಪಿಒಪಿ ಗಣೇಶನನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಪಾಲಿಕೆಗೆ ಸೂಚಿಸಿದೆ. ಗಣೇಶನನ್ನು ಬಾಡಿಗೆಗೆ ನೀಡುವ, ತಯಾರಿಸಿ ಮಾರಾಟ ಮಾಡುವ ಯಾವುದೇ ಪ್ರಸ್ತಾವನೆ ಇದ್ದರೂ ಮಂಡಳಿಗೆ ಸಲ್ಲಿಸಬೇಕು ಪಾಲಿಕೆ ಯಾವುದೇ ತೀರ್ಮಾನ ಕೈಗೊಳ್ಳಲು ಬರುವುದಿಲ್ಲ.
-ಗಂಗಾಂಬಿಕೆ, ಮೇಯರ್‌

ಮಂಗಳವಾರದಿಂದ ಪಾಲಿಕೆ ಅಧಿಕಾರಿಗಳು ಟ್ರಕ್‌ಗಳ ಜತೆ ನಗರದೆಲ್ಲೆಡೆ ಸಂಚರಿಸಬೇಕು, ಎಲ್ಲೇ ಪಿಒಪಿ ಗಣೇಶ ಕಂಡುಬಂದರೂ ಮೂರ್ತಿಗಳನ್ನು ವಶಕ್ಕೆ ಪಡೆಯಬೇಕು. ವಶಕ್ಕೆ ಪಡೆದ ಗಣೇಶ ಮೂರ್ತಿಗಳನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದ ಹಾಗೆ ವೈಜ್ಞಾನಿಕವಾಗಿ ವಿಸರ್ಜಿಸುವ ಹೊಣೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ವಹಿಸಿಕೊಳ್ಳಲು ಈಗಾಗಲೇ ಸೂಚನೆ ನೀಡಲಾಗಿದೆ.
-ಡಾ.ಕೆ.ಸುಧಾಕರ್‌, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ

ಟಾಪ್ ನ್ಯೂಸ್

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

Dog Attack: 2 ವರ್ಷದ ಮಗುವಿನ ಮೇಲೆ ನಾಯಿ ದಾಳಿ

Dog Attack: 2 ವರ್ಷದ ಮಗುವಿನ ಮೇಲೆ ನಾಯಿ ದಾಳಿ

Metro line will pass over 314 houses

Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ

Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ

Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್‌ ಆರೋಪಿ ಶ್ವೇತಾ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-eena

ವಚನ ಸಾಹಿತ್ಯದಲ್ಲಿ ಶ್ರೀಕೃಷ್ಣನ ಮಾತು: ಬೃಹತ್‌ ಗೀತೋತ್ಸವ ಕಾರ್ಯಕ್ರಮದಲ್ಲಿ ವೀಣಾ ಬನ್ನಂಜೆ

1-cocco

230 ರೂ. ಗಡಿ ದಾಟಿದ ಹಸಿ ಕೊಕ್ಕೊ ಧಾರಣೆ

1-sid-male

Udupi; ಸಿದ್ದಾಪುರ ಪರಿಸರದಲ್ಲಿ ಮಳೆ

1-adaa

ಕೃಷಿ ಬೆಲೆ ಆಯೋಗದ ಅಧ್ಯಕ್ಷರಾಗಿ ಅಶೋಕ ದಳವಾಯಿ ನೇಮಕ

1-shadaa

ರಾಜ್ಯ ಸರಕಾರಿ ನೌಕರರ ಸಂಘ ಅಧ್ಯಕ್ಷ ಷಡಾಕ್ಷರಿ ಮರು ಆಯ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.