ಮನೆಯಲ್ಲೇ ಪ್ರತ್ಯೇಕವಾಗುಳಿದೆ, ಪೂರ್ಣ ಎಚ್ಚರಿಕೆಯಿಂದ ಹೋರಾಡಿ ಗೆದ್ದೆ

Team Udayavani, May 29, 2021, 2:53 PM IST

positive story

ನನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರುತುಂಬಿದ ಆತ್ಮಸ್ಥೈರ್ಯ ಹಾಗೂ ಧೈರ್ಯದಿಂದಕೊರೊನಾ ಗೆದೆ.ಮೇ 1ಕ್ಕೆ ನನಗೆ ಕೊರೊನಾ ಖಾತ್ರಿಯಾಯಿತು. ಈ ಇಡೀ ಅನುಭವವೇ ಒಂದು ವಿಚಿತ್ರವಾಗಿತ್ತು. ಏ.26ಕ್ಕೆ ಸಣ್ಣಗೆ ತಲೆನೋವು,ಕೆಮ್ಮು ಶುರುವಾಯಿತು. ಏನೋ ಮಾಮೂಲಿಅಂದುಕೊಂಡು ಸುಮ್ಮನಾದೆ. ಆದರೂ ಏ.28ಕ್ಕೆಪರೀಕ್ಷೆ ಮಾಡಿಸಿದೆ.

ಆದಿನ ಸಂಜೆಯಷ್ಟೊತ್ತಿಗೆ ದಿಢೀರನೆ ಮೈಕೈಯೆಲ್ಲನೋವು, ಕಾಲಲ್ಲಿ ಶಕ್ತಿಯಿಲ್ಲ. ಮೆಟ್ಟಿಲು ಹತ್ತಿ ಮನೆಯಎರಡನೇ ಮಹಡಿಗೆ ಹೋಗಲಿಕ್ಕೆ ಸಾಧ್ಯವೇಆಗುತ್ತಿಲ್ಲ. ಮೇ 1ಕ್ಕೆ ನಿಮಗೆ ಕೊರೊನಾ ಇದೆ ಎಂದುಬಾಗಲುಗುಂಟೆ ಪ್ರಯೋಗಾಲಯದ ವೈದ್ಯಕೀಯಸಿಬ್ಬಂದಿ ತಿಳಿಸಿದರು. ಆ ವೇಳೆ ಪತ್ನಿ ಗರ್ಭಿಣಿಯಾಗಿದ್ದರಿಂದ ತರೀಕೆರೆಗೆ ಹೋಗಿದ್ದರು. ಹಾಗಾಗಿ ಬೆಂಗಳೂರಿನ ಮನೆಯಲ್ಲಿ ಒಬ್ಬನೇ ಇರುವುದಕ್ಕೆಸುಲಭವಾಯಿತು.

ಹೇಗೋ ಮಾಡಬಹುದುಎನಿಸಿ, ಮನೆಯಲ್ಲೇ ಧೈರ್ಯವಾಗಿದ್ದೆ. ಅಷ್ಟರಲ್ಲಿಎಲ್ಲರಿಂದ ಕರೆ, ಮೊಬೈಲ್‌ನಲ್ಲಿ ಮಾತನಾಡಲೂಆಗುತ್ತಿಲ್ಲ, ಅಷ್ಟೊಂದು ಸುಸ್ತು. ಟೀವಿ ನೋಡಲಿಕ್ಕೆಧೈರ್ಯವಿಲ್ಲ, ಸಮಯಹೋಗುತ್ತಿಲ್ಲ. ಮೇ 4 ಅನ್ನುವಾಗ ರುಚಿ, ವಾಸನೆ ಎರಡೂಹೊರಟುಹೋಯಿತು. ಬೆಳ್ಳುಳ್ಳಿತಿಂದು ಪರೀಕ್ಷಿಸಿದರೆ ನಾಲಗೆ ಉರಿಯಿತೇ ಹೊರತು,ರುಚಿಯ ಅನುಭವವೇ ಇಲ್ಲ.ಅಡುಗೆ ಮಾಡಿಕೊಳ್ಳಲಾಗದೇ ಒದ್ದಾಡುತ್ತಿದ್ದೆ,

ಸುಸ್ತಿನಜೊತೆಗೆ ಊಟವೂ ಸೇರುತ್ತಿರಲಿಲ್ಲ. ಕೊರೊನಾಅಂತಾ ಖಾತ್ರಿಯಾದ ಮೇಲೆ ಅದೇನೋ ಆತಂಕ,ದುಗುಡ.ಕಡೆಗೆ ತರೀಕೆರೆಯಲ್ಲಿದ್ದ ನನ್ನ ಮನೆಗೆ ಹೋಗಲುನಿರ್ಧರಿಸಿದೆ. ಹೇಗೋ ಅಲ್ಲಿಗೆ ತಲುಪಿ ಮನೆಯಮೇಲಿನ ಮಹಡಿಯ ಕೋಣೆಯಲ್ಲಿಪ್ರತ್ಯೇಕವಾಗುಳಿದೆ. ವೈದ್ಯರು ಕೊಟ್ಟ ಮಾತ್ರೆಗಳನ್ನುತೆಗೆದುಕೊಳ್ಳುತ್ತಿದ್ದೆ. ಮನೆಯವರು ಊಟವನ್ನುಹೊರಗೆ ತಂದಿಡುತ್ತಿದ್ದರು. ಊಟವಾದ ಆಪಾತ್ರೆಯನ್ನು ಬಿಸಿನೀರಿನಲ್ಲಿ ತೊಳೆದು, ಸ್ಯಾನಿಟೈಸ್‌ ಮಾಡಿ ಹಿಂತಿರುಗಿಸುತ್ತಿದ್ದೆ.

ಈ ಹೊತ್ತಿನಲ್ಲಿ ನೀಲಗಿರಿಎಲೆಗಳನ್ನು ಬೇಯಿಸಿ, ಅದರ ಹಬೆತೆಗೆದುಕೊಳ್ಳುತ್ತಿದ್ದೆ. ಕೆಲವು ಮನೆಔಷಧಗಳನ್ನೂಮಾಡಿದೆ.ಎಂಟುದಿನಗಳ ಕಾಲ ಅದೇ ಕೋಣೆಯಲ್ಲಿದ್ದೆ.ಅಷ್ಟೂ ದಿನ ಮನೆಯವರ ಮುಖವನ್ನೇ ನೋಡಲಿಲ್ಲ.ಒಂದೇ ಮನೆಯಲ್ಲಿದ್ದರೂ ಫೋನ್‌ನಲ್ಲೇ ಸಂಪರ್ಕ.ರಾತ್ರಿ ಎಚ್ಚರವಾದಾಗಲೆಲ್ಲ ಸ್ವಲ್ಪ ಗಾಬರಿಯಿಂದಲೇಆಕ್ಸಿಮೀಟರ್‌ನಲ್ಲಿ ಆಮ್ಲಜನಕ ಪ್ರಮಾಣವನ್ನುಪರೀಕ್ಷಿಸುತ್ತಿದ್ದೆ; 89, 90ರಲ್ಲಿತ್ತು. ಮೇ 10,11ರಷ್ಟೊತ್ತಿಗೆ ಸಹಜ ಅನುಭವವಾಗತೊಡಗಿತು.ವಿಪರೀತ ಹಸಿವೂ ಶುರುವಾಯಿತು.

ಒಂದಕ್ಕೆಮೂರುಪಟ್ಟು ತಿನ್ನುವಂತಾಗಿತ್ತು! ಮೇ 16ಕ್ಕೆಮತ್ತೂಮ್ಮೆ ಪರೀಕ್ಷಿಸಿದಾಗ ನೆಗೆಟಿವ್‌ ವರದಿ ಬಂತು.ಆದರೂ ಮೇ 19ರವರೆಗೆ ಪೂರ್ಣ ಎಚ್ಚರಿಕೆವಹಿಸಿದೆ.ಧನ್ಯವಾದಗಳು: ನನ್ನ ಕುಟುಂಬ ಸದಸ್ಯರು, ಅಣ್ಣಮಹೇಶ್ವರಪ್ಪ ಪದೇ ಪದೆ ಕರೆ ಮಾಡಿ ಧೈರ್ಯಹೇಳುತ್ತಿದ್ದರು. ಗೆಳೆಯ ನಟರಾಜ್‌, ಸುಪ್ರಿಯಾ ಕಾಳಜಿ ವಹಿಸಿದ್ದರು.

ನನ್ನ ಮೆಟ್ರೋ ಕಚೇರಿಯವಿಭಾಗ ಮುಖ್ಯಸ್ಥರಾದ ವಿಜಯ್‌ ಗೌತಮ್‌, ಇತರೆಸಹೋದ್ಯೋಗಿಗಳು ಎಲ್ಲ ರೀತಿಯ ನೆರವುನೀಡಿದರು. ಆ ಸಹಕಾರವನ್ನು ಎಂದೂ ಮರೆಯಲುಸಾಧ್ಯವಿಲ್ಲ, ಅವರೆಲ್ಲರಿಗೂ ಧನ್ಯವಾದಗಳು.

ಕೆ.ಜಿ.ರವಿ,ಬೆಂಗಳೂರು

ಮೆಟ್ರೋದಲ್ಲಿ ಸೆಕ್ಷನ್‌ಎಂಜಿನಿಯರ್‌,

ಕಿರ್ಲೋಸ್ಕರ್‌ ಲೇಔಟ್‌

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.