ಪ್ರತಿಭಾ ಪುರಸ್ಕಾರ ವೇದಿಕೆಯಿಂದ ಸನ್ಮಾನ
Team Udayavani, Aug 4, 2017, 1:26 PM IST
ಬೆಂಗಳೂರು: ಪ್ರತಿಭಾ ಪುರಸ್ಕಾರ ವೇದಿಕೆಯು ಈ ಬಾರಿ ನರರೋಗ ತಜ್ಞ ಹಾಗೂ ಬ್ರೈನ್ಸ್ (ಬಿಆರ್‌ಎಐಎನ್‌ಎಸ್) ಸಂಸ್ಥಾಪಕ ಡಾ.ಎನ್.ಕೆ. ವೆಂಕಟರಮಣ ಅವರನ್ನು ಪುರಸ್ಕರಿಸಲು ನಿರ್ಧರಿಸಿದೆ.
ಆಗಸ್ಟ್ 5ರಂದು ಸಂಜೆ 5ಕ್ಕೆ ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಡಾ.ವೆಂಕಟರಮಣ ಅವರನ್ನು ಪುರಸ್ಕರಿಸಲಾಗುವುದು. ಮಾಜಿ ಕೇಂದ್ರ ಸಚಿವೆ ಡಿ. ಪುರಂದೇಶ್ವರಿ ಕಾರ್ಯಕ್ರಮ ಉದ್ಘಾಟಿಸವರು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಇಸ್ರೋ ಅಧ್ಯಕ್ಷ ಎ.ಎಸ್. ಕಿರಣ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ವೇದಿಕೆಯ ಸದಸ್ಯ ಗಂಗರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ದೇಶದಲ್ಲಿಯೇ ಮೊಟ್ಟಮೊದಲ ಬಾರಿಗೆ ಅಪಘಾತದ ಸಂದರ್ಭದಲ್ಲಿ ತುರ್ತು ಸ್ಪಂದನೆಗಾಗಿ 1062 ಜಿಪಿಎಸ್ ಆಧಾರಿತ ಮೊಬೈಲ್ ತುರ್ತು ಸ್ಪಂದನೆಯ ವ್ಯವಸ್ಥೆ ಜಾರಿಗೊಳಿಸಿದ ಅಗ್ಗಳಿಕೆ ಡಾ.ವೆಂಕಟರಮಣ ಅವರಿಗೆ ಸಲ್ಲುತ್ತದೆ. ಈ ಹೊಸ ಪ್ರಯೋಗದಿಂದ ಬೆಂಗಳೂರಿನಲ್ಲಿ
ಅಪಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಶೇ. 22ರಿಂದ ಶೇ. 5ಕ್ಕೆ ಇಳಿಯಿತು. ಮುಂದೆ ಈ ವ್ಯವಸ್ಥೆಯನ್ನು ರಾಜ್ಯ ಸರ್ಕಾರ “108 ತುರ್ತು ಸೇವೆ’ ಅಡಿ ಜಾರಿಗೊಳಿಸಲಾಯಿತು.
ಇದರ ಮುಂದುವರಿದ ಭಾಗವಾಗಿ ಈಗ “ಗೋಲ್ಡನ್ ಅವರ್’ ಎಂಬ ಹೊಸ ಯೋಜನೆ ಅನುಷ್ಠಾನಕ್ಕೆ ಡಾ.ವೆಂಕಟರಮಣ ನಿರ್ಧರಿಸಿದ್ದಾರೆ. ಅಂದರೆ ಅಪಘಾತ ನಡೆದ ತಕ್ಷಣದಲ್ಲೇ ಅಪಘಾತಕ್ಕೀಡಾದವರಿಗೆ ಪ್ರಾಥಮಿಕ ಚಿಕಿತ್ಸೆ ದೊರೆತರೆ, ಜೀವ ಉಳಿಯುವ ಸಾಧ್ಯತೆಗಳು ಹೆಚ್ಚು. ಇದರಿಂದ ಸಾವಿನ ಪ್ರಮಾಣ ಮತ್ತಷ್ಟು ತಗ್ಗಿಸಬಹುದು. ಈ ಹಿನ್ನೆಲೆಯಲ್ಲಿ ನಗರದಲ್ಲಿ ವಾರ್ಡ್‌ಗೊಂದು “ಗೋಲ್ಡನ್ ಅವರ್’ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ.
ಮೊದಲ ಹಂತದಲ್ಲಿ ನೂರು ಕೇಂದ್ರಗಳನ್ನು ಆರಂಭಿಸಲು ನರರೋಗ ತಜ್ಞ ನಿರ್ಧರಿಸಿದ್ದಾರೆ. ಈ ಸೇವೆಯನ್ನು ಪರಿಗಣಿಸಿ ಪುರಸ್ಕರಿಸಲಾಗುತ್ತಿದೆ. ಈ ಸೇವೆಗೆ ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗುವುದು ಎಂದೂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸದಸ್ಯ ಮೋಹನರಾಜು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.