ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ವಾಹನ ಬಳಕೆಗೆ ಆದ್ಯತೆ

Team Udayavani, Feb 20, 2018, 11:45 AM IST

parisara.jpg

ಬೆಂಗಳೂರು: “ದೇಶದ ಎಲೆಕ್ಟ್ರಿಕ್‌ ವಾಹನಗಳ ರಾಜಧಾನಿ’ ಎಂಬ ಹೆಗ್ಗಳಿಕೆ ಪಡೆಯಲು ರಾಜ್ಯ ಸರ್ಕಾರ ಈಗಾಗಲೇ ಎಲೆಕ್ಟ್ರಿಕ್‌ ವಾಹನ ನೀತಿ ಜಾರಿಗೊಳಿಸಿರುವ ಬೆನ್ನಲ್ಲೇ ಬೆಸ್ಕಾಂ ಕಾರ್ಪೋರೇಟ್‌ ಕಚೇರಿ ಆವರಣದಲ್ಲಿ ರಿಚಾರ್ಜ್‌ ಕೇಂದ್ರವನ್ನು ಸೋಮವಾರ ಆರಂಭಿಸಿದೆ.

ನಗರದ ಕೆ.ಆರ್‌.ವೃತ್ತದಲ್ಲಿನ ಬೆಸ್ಕಾಂ ಕಾರ್ಪೋರೇಟ್‌ ಕಚೇರಿಯಲ್ಲಿ ಎರಡು ಚಾರ್ಜಿಂಗ್‌ ಸಾಧನವಿರುವ ಕೇಂದ್ರವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಉದ್ಘಾಟಿಸಿದರು. ಕೇಂದ್ರ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿದ ಅವರು, ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಕೇಂದ್ರದಲ್ಲಿ ಸಾರ್ವಜನಿಕರು ತಮ್ಮ ಎಲೆಕ್ಟ್ರಿಕ್‌ ವಾಹನವನ್ನು ಕಡಿಮೆ ದರದಲ್ಲಿ ರಿಚಾರ್ಜ್‌ ಮಾಡಿಕೊಳ್ಳಬಹುದಾಗಿದೆ.

ಬೆಸ್ಕಾಂ ಕಚೇರಿ ಆವರಣದಲ್ಲೇ ರಿಚಾರ್ಜ್‌ ಕೇಂದ್ರ ಆರಂಭಿಸಿರುವುದರಿಂದ ರಿಯಾಯ್ತಿ ದರದಲ್ಲಿ ಚಾರ್ಜಿಂಗ್‌ ಸೇವೆ ಸಿಗಲಿದೆ. ಇನ್ನೂ ರಿಯಾಯ್ತಿ ನೀಡುವಂತೆ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗವನ್ನು ಕೋರಲಾಗುವುದು ಎಂದರು.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌, ಬೆಸ್ಕಾಂ ವ್ಯಾಪ್ತಿಯಲ್ಲಿ ಸದ್ಯ 1,500 ಪೆಟ್ರೋಲ್‌, ಡೀಸೆಲ್‌ ಕಾರು ಬಳಸಲಾಗುತ್ತಿದೆ. ಈ ಕಾರುಗಳನ್ನು ಎಲೆಕ್ಟ್ರಿಕ್‌ ವಾಹನಗಳಿಗೆ ಬದಲಾಯಿಸಲು ಚಿಂತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಾಮರ್ಥ್ಯ: ಸೆಮಾ ಕನೆಕ್ಟ್ ಹಾಗೂ ಆರ್‌ಆರ್‌ಟಿ ಎಲೆಕ್ಟ್ರೊ ಪವರ್‌ ಕಂಪನಿಗಳು ಎರಡು ಕಡೆ ಅಳವಡಿಸಿರುವ ಯಂತ್ರಗಳು 15 ಕೆ.ವಿ. ಸಾಮರ್ಥಯ ಹೊಂದಿವೆ. ಎಲೆಕ್ಟ್ರಿಕ್‌ ಕಾರು ನಿರಂತರ 1 ಗಂಟೆ 20 ನಿಮಿಷ ಚಾರ್ಜ್‌ ಮಾಡಿದರೆ 125 ಕಿ.ಮೀ. ಕ್ರಮಿಸಬಹುದು. ಈ ರೀತಿ ನಿತ್ಯ 20 ಕಾರು ಚಾರ್ಜ್‌ ಮಾಡಬಹುದು.

ಎಲೆಕ್ಟ್ರಿಕ್‌ ವಾಹನವಿರುವವರು ಮನೆಯಲ್ಲಿ ಚಾರ್ಜ್‌ ಮಾಡಿದರೆ ಪ್ರತಿ ಯೂನಿಟ್‌ಗೆ 6ರಿಂದ 7 ರೂ. ಭರಿಸಬೇಕಾಗುತ್ತದೆ. ಆದರೆ ಈ ಕೇಂದ್ರದಲ್ಲಿ ಬೆಳಗ್ಗೆ 6ರಿಂದ ರಾತ್ರಿ 10ರವರೆವರೆಗೆ ಚಾರ್ಚ್‌ ಮಾಡಿಕೊಂಡರೆ ಪ್ರತಿ ಯೂನಿಟ್‌ಗೆ 4.85 ರೂ. ಹಾಗೂ ರಾತ್ರಿ 10ರಿಂದ ಬೆಳಗ್ಗೆ 6ರವರೆಗೆ ಚಾರ್ಜ್‌ ಮಾಡಿದರೆ 3.85 ರೂ. ಪಾವತಿಸಿದರೆ ಸಾಕು. ಒಂದು ಯಂತ್ರ ಅಳವಡಿಕೆಗೆ 5 ಲಕ್ಷ ರೂ. ವೆಚ್ಚವಾಗಲಿದೆ.

ಹೊರ ಗುತ್ತಿಗೆ ಆಧಾರದಲ್ಲಿ ಎಲೆಕ್ಟ್ರಿಕ್‌ ಕಾರು: ಬೆಸ್ಕಾಂ ಸದ್ಯ ತನ್ನ ದಿನನಿತ್ಯದ ಕಾರ್ಯ ನಿರ್ವಹಣೆ, ಸೇವೆಗೆ ಬಳಸುತ್ತಿರುವ 1,500 ಕಾರುಗಳಿಗೆ ಬದಲಾಗಿ ಎಲೆಕ್ಟ್ರಿಕ್‌ ಕಾರು ಬಳಸಲು ಗಂಭೀರ ಚಿಂತನೆ ನಡೆಸಿದೆ. ಅದರ ಭಾಗವಾಗಿ ಐದು ಕಾರು ಪಡೆಯಲಾಗಿದೆ. ಭಾಗೀರಥಿ ಕಂಪನಿಯು ಹೊರಗುತ್ತಿಗೆಯಡಿ ಎಲೆಕ್ಟ್ರಿಕ್‌ ಕಾರು ಸೇವೆ ಒದಗಿಸಲಿದೆ.

ಕೆಲವೇ ತಿಂಗಳಲ್ಲಿ 100 ಕಾರುಗಳನ್ನು ಎಲೆಕ್ಟ್ರಿಕ್‌ ಕಾರುಗಳಿಗೆ ಬದಲಾಯಿಸಲು ಸಿದ್ಧತೆ ನಡೆಸಿದೆ. ಡೀಸೆಲ್‌ ಕಾರಿನಲ್ಲಿ ಒಂದು ಕಿ.ಮೀ. ಕ್ರಮಿಸಲು 4 ರೂ. ಮೌಲ್ಯದ ಡೀಸೆಲ್‌ ಬಳಕೆಯಾಗುತ್ತದೆ. ಎಲೆಕ್ಟ್ರಿಕ್‌ ಕಾರಿನಲ್ಲಿ ಒಂದು ಕಿ.ಮೀ. ಕ್ರಮಿಸಲು ಬಳಕೆಯಾಗುವ ವಿದ್ಯುತ್‌ಗೆ 1 ರೂ. ಮಾತ್ರ ಖರ್ಚಾಗುತ್ತದೆ. 125 ಕಿ.ಮೀ. ದೂರ ಕ್ರಮಿಸಲು 75 ರೂ. ಖರ್ಚಾಗಲಿದೆ.

ಬೆಸ್ಕಾಂ ಹೊರ ಗುತ್ತಿಗೆಯಡಿ ಪಡೆಯುತ್ತಿರುವ ಐದು ಕಾರುಗಳಲ್ಲಿ ಮಹಿಳಾ ಚಾಲಕಿಯರೂ ಇದ್ದಾರೆ. ಭಾಗೀರಥಿ ಕಂಪನಿಯಲ್ಲಿ 500 ಮಹಿಳಾ ಚಾಲಕಿಯರಿದ್ದು, ಬೆಸ್ಕಾಂ ಕಂಪನಿಯ ಕಾರುಗಳ ಚಾಲನೆಗೆ 50 ಮಂದಿಗೆ ತರಬೇತಿ ನೀಡಿದೆ.

15 ವರ್ಷದಿಂದ ಕಾರು ಚಾಲಕಿಯಾಗಿದ್ದೇನೆ. ಈ ಹಿಂದೆ ಕೆಲ ಕಂಪನಿಗಳ ಟ್ಯಾಕ್ಸಿ, ಶಾಲಾ ಬಸ್‌ ಚಾಲಕಿಯಾಗಿ ಕಾರ್ಯ ನಿರ್ವಹಿಸಿದ್ದೆ. ಎಲೆಕ್ಟ್ರಿಕ್‌ ಕಾರಿನಲ್ಲಿ ಪೆಟ್ರೋಲ್‌ ಕಾರು ಚಾಲನೆಗಿಂತ ಹೆಚ್ಚು ಸುಲಭವೆನಿಸುವ ಲಕ್ಷಣಗಳಿವೆ. ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ಕೆಲಸ ಮಾಡಲಿದ್ದೇನೆ 
-ಮಂಜುಳಾ, ಹೆಬ್ಟಾಳ ನಿವಾಸಿ 

ಬೆಸ್ಕಾಂನ 10 ಕಚೇರಿಯಲ್ಲಿ ಸ್ಥಾಪನೆ: ನಗರ ವ್ಯಾಪ್ತಿಯ 10 ಕಚೇರಿಗಳಲ್ಲಿ ಇದೇ ರೀತಿಯ ಚಾರ್ಜಿಂಗ್‌ ಕೇಂದ್ರ ತೆರೆಯಲು ಬೆಸ್ಕಾಂ ನಿರ್ಧರಿಸಿದೆ. ಯಲಹಂಕದ ದೊಡ್ಡಬಳ್ಳಾಪುರ ರಸ್ತೆ, ಜಾಲಹಳ್ಳಿ ಬಳಿಯ ಗೆಳೆಯರ ಬಳಗ ಲೇಔಟ್‌, ಬನಶಂಕರಿ 2ನೇ ಹಂತದ 22ನೇ ಮುಖ್ಯರಸ್ತೆ, ಕುಮಾರಸ್ವಾಮಿ ಲೇಔಟ್‌ 1ನೇ ಹಂತ, ಜೆ.ಪಿ.ನಗರ 1ನೇ ಹಂತ, ಪಾಂಡುರಂಗ ನಗರ,

ವೈಟ್‌ಫೀಲ್ಡ್‌ ಸಮೀಪದ ಇಮ್ಮಡಿಹಳ್ಳಿ, ಎಚ್‌ಎಎಲ್‌ 2ನೇ ಹಂತದ 2ನೇ ಅಡ್ಡರಸ್ತೆ, ಪಿಳ್ಳಣ್ಣ ಗಾರ್ಡನ್‌ ರಸ್ತೆ, ಎಚ್‌ಆರ್‌ಬಿಆರ್‌ ಲೇಔಟ್‌ನಲ್ಲಿ ಎರಡು ಕೇಂದ್ರ ತೆರೆಯಲು ಬೆಸ್ಕಾಂ ಸಿದ್ಧತೆ ನಡೆಸಿದೆ. ಬಿಎಂಆರ್‌ಸಿಎಲ್‌ ಹಾಗೂ ಬಿಬಿಎಂಪಿಗೆ ಸೇರಿದ ಸುಮಾರು 300 ಸ್ಥಳಗಳನ್ನು ಗುರುತಿಸಲಾಗಿದ್ದು, ಅಲ್ಲಿಯೂ ಈ ರೀತಿಯ ಚಾರ್ಜಿಂಗ್‌ ಕೇಂದ್ರ ತೆರೆಯಲು ಚರ್ಚೆ ನಡೆದಿದೆ ಎಂದು ಬೆಸ್ಕಾಂ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ: ಗಂಗೂಲಿ

Sourav Ganguly: ಮುಂದಿನ ವಿಮಾನದಲ್ಲೇ ಶಮಿ ಆಸ್ಟ್ರೇಲಿಯಕ್ಕೆ ತೆರಳಲಿ

Sahakara-saptha

Cooperation: ನಬಾರ್ಡ್‌ ನೆರವು ಕಡಿತದಿಂದ ರಾಜ್ಯದ ರೈತರಿಗೆ ದೊಡ್ಡ ಅನ್ಯಾಯ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agriculture: ಏಕಕಾಲದಲ್ಲಿ ಮೀನು, ತರಕಾರಿ ಬೆಳೆಯುವ ಅಕ್ವಾಫೋನಿಕ್ಸ್‌ ಕೃಷಿ

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Agricultural fair: ಕೃಷಿ ಮೇಳಕ್ಕೆ ನಿನ್ನೆ ಸುಮಾರು 10.25 ಲಕ್ಷ ಜನರ ಭೇಟಿ!

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Arrested: 15 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಫ‌ರ್ಹಾನ್‌ ಸೆರೆ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Bengaluru Airport: ಏರ್ ಪೋರ್ಟ್‌ನಲ್ಲಿ ಆಮೆ, ಮೊಸಳೆ ಸಾಗಣೆ ಯತ್ನ

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

Crime: ಮೊಬೈಲ್‌ಗಾಗಿ ಜಗಳ; ಪುತ್ರನ ಕೊಂದ ಅಪ್ಪ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

Syed Mushtaq Ali Trophy: ಮುಂಬಯಿಗೆ ಅಯ್ಯರ್‌ ನಾಯಕ

rai

BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

Hockey: ವನಿತಾ ಏಷ್ಯನ್‌ ಚಾಂಪಿಯನ್ಸ್‌ ಹಾಕಿ: ಭಾರತದ ಅಜೇಯ ಓಟ

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

WI vs ENG: 219 ರನ್‌ ಬೆನ್ನಟ್ಟಿ ಗೆದ್ದ ವಿಂಡೀಸ್‌

yadiyurappa

40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.