ದೇಶದ ಪ್ರಗತಿಗೆ ಯುವಶಕ್ತಿ ಸಜ್ಜುಗೊಳಿಸಿ
Team Udayavani, Jan 13, 2018, 11:50 AM IST
ಬೆಂಗಳೂರು: ಭಾರತದ ಯುವ ಶಕ್ತಿಯನ್ನು ದೇಶದ ಅಭಿವೃದ್ಧಿಗಾಗಿ ಸಜ್ಜುಗೊಳಿಸುವ ಮಹತ್ತರ ಜವಾಬ್ದಾರಿ ಶಿಕ್ಷಕ, ಉಪನ್ಯಾಸಕರ ಮೇಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ.ಕೆ.ರಾಧಾಕೃಷ್ಣನ್ ಹೇಳಿದರು.
ಸಮರ್ಥ ಭಾರತ ಟ್ರಸ್ಟ್ ಹಾಗೂ ಆರ್.ವಿ.ಟೀಚರ್ ಕಾಲೇಜು ಸಹಯೋಗದಲ್ಲಿ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಜನ್ಮದಿನಾಚರಣೆ, ರಾಷ್ಟ್ರೀಯ ಯುವ ದಿನ ಹಾಗೂ ವಿವೇಕ್ ಬ್ಯಾಂಡ್-2018ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿಶ್ವದಲ್ಲೇ ಅತಿ ಹೆಚ್ಚು ಸಂಖ್ಯೆಯ ಯುವ ಶಕ್ತಿ ಭಾರತದಲ್ಲಿದೆ. ದೇಶದ ಯುವ ಜನತೆ ಸ್ವಾಮಿ ವಿವೇಕಾನಂದರನ್ನು ಆದರ್ಶವಾಗಿಟ್ಟುಕೊಂಡು ದೇಶದ ಉನ್ನತಿಗೆ ಶ್ರಮಿಸಬೇಕು. ಯುವ ಜನತೆಯಲ್ಲಿ ರಾಷ್ಟ್ರೀಯ ಚಿಂತನೆ ಹಾಗೂ ವಿವೇಕಾನಂದ ಆದರ್ಶ ತುಂಬುವ ಕೆಲಸವನ್ನು ಶಿಕ್ಷಕ, ಉಪನ್ಯಾಸಕರು ಜವಾಬ್ದಾರಿಯುತವಾಗಿ ಮಾಡಬೇಕು ಎಂದರು.
ಸ್ವಾಮಿ ವಿವೇಕಾನಂದರು ತಮ್ಮ 39ನೇ ವಯಸ್ಸಿನಲ್ಲೇ ಸ್ವರ್ಗಸ್ಥರಾಗಿದ್ದರು. ಆದರೆ, ಅವರ ತತ್ವ, ಸಿದ್ಧಾಂತ ಮತ್ತು ಚಿಂತನೆ ಇಂದಿಗೂ ಅಮರವಾಗಿದೆ. ಶಿಕ್ಷಕ ಮತ್ತು ಆಚಾರ್ಯರ ನಡುವಿನ ವ್ಯತ್ಯಾಸವನ್ನು ಬಲ್ಲವರಾಗಿದ್ದರು. ಭಾರತೀಯ ಗುರು ಪರಂಪರೆಯ ಬಗ್ಗೆ ಆಳವಾದ ಜ್ಞಾನ ಹೊಂದಿದ್ದರು. ಜೀವನದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಸಮಷ್ಠಿ ಪ್ರಜ್ಞೆಯನ್ನು ಗುರು ಕಲಿಸುತ್ತಾನೆ ಎಂದು ಬಣ್ಣಿಸಿದರು.
ಪುರಂದರ ದಾಸರು, ತ್ಯಾಗರಾಜರು ಗುರುವಿನ ಮಹತ್ವನ್ನು ತಿಳಿಸಿದ್ದಾರೆ. ಶಿಕ್ಷಕನ ವೃತ್ತಿ ಅತ್ಯಂತ ಗೌರವಯುತ ಹುದ್ದೆ. ಯಾವುದೇ ತಾರತಮ್ಯ ಇಲ್ಲದೇ ಎಲ್ಲರ ಅಭಿವೃದ್ಧಿಗೆ ಶಿಕ್ಷಕ ಮಾತ್ರ ಶ್ರಮಿಸಲು ಸಾಧ್ಯ. ಸ್ವಾಮಿ ವಿವೇಕಾನಂದರ ಕಲ್ಪನೆಯ ಶಿಕ್ಷಕರು ನೀವಾಗಬೇಕು ಎಂದು ಶಿಕ್ಷಕರ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮರ್ಥ ಭಾರತದ ಸಂಸ್ಥಾಪಕ ಟ್ರಸ್ಟಿ ರಾಜೇಶ್ ಪದ್ಮಾರ್ ಮಾತನಾಡಿ, ಹಿಂದೂ ಹಾಗೂ ಭಾರತೀಯ ಎಂಬ ಪದವನ್ನು ಸ್ವಾಮಿ ವಿವೇಕಾನಂದರು ಜಗತ್ತಿಗೆ ಪರಿಚಯಿಸಿದರು. ಈಗ ಹಿಂದೂ ಎಂಬ ಪದ ರಾಜಕೀಯ ಪರಿಭಾಷೆಗೆ ತುತ್ತಾಗಿದೆ.
ಭಾರತದ ಸಹಿಷ್ಣುತೆ, ಅಗಾಧತೆ ಹಾಗೂ ಮಾನವತೆಯ ತತ್ವಗಳನ್ನು ವಿಶ್ವಕ್ಕೆ ಪರಿಚಯಿಸಿದ ಮಹನ್ ಸಂತ ಸ್ವಾಮಿ ವಿವೇಕಾನಂದ ಎಂದು ಹೇಳಿದರು. ಆರ್.ವಿ.ಟೀಚರ್ ಕಾಲೇಜಿನ ಪ್ರಾಂಶುಪಾಲ್ ಡಾ.ಕೃಷ್ಣಯ್ಯ, ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನ ಗೌರವ ಕಾರ್ಯದರ್ಶಿ ಎವಿಎಸ್ ಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.
ಭಾರತವು ವಿಶ್ವದಲ್ಲೇ ಕ್ರಿಯಾತ್ಮಕ ಹಾಗೂ ಪುಟಿದೇಳುವ ಆರ್ಥಿಕ ವ್ಯವಸ್ಥೆ ಹೊಂದಿದೆ. ಬೇರೆ ಬೇರೆ ದೇಶಗಳು ಭಾರತವನ್ನು ಕುತೂಹಲದಿಂದ ನೋಡುತ್ತಿವೆ. ಭಾರತದ ಜಿಡಿಪಿ ಮುಂದಿನ 10-15 ವರ್ಷದಲ್ಲಿ ಶೇ.9ಕ್ಕೆ ಏರಿಕೆಯಾದರೆ ವಿಶ್ವದಲ್ಲೇ ಎರಡು ಅಥವಾ ಮೂರನೇ ಸ್ಥಾನ ಪಡೆಯಲಿದ್ದೇವೆ.
-ಡಾ.ಕೆ.ರಾಧಾಕೃಷ್ಣನ್, ಇಸ್ರೋ ಮಾಜಿ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.