ಎಲೆಕ್ಟ್ರಿಕ್ ವಾಹನಗಳ ನೀತಿರೂಪಿಸಲು ಸಿದ್ಧತೆ: ರೇವಣ್ಣ
Team Udayavani, Jan 18, 2018, 12:24 PM IST
ಬೆಂಗಳೂರು: “ಭವಿಷ್ಯದಲ್ಲಿ ಭಾರತವು ಬ್ಯಾಟರಿ ಚಾಲಿತ ವಾಹನಗಳ ತಯಾರಿಕಾ ಕೇಂದ್ರವಾಗಲಿದ್ದು, ಇದಕ್ಕೆ ಪೂರಕವಾದ ನೀತಿ ರೂಪಿಸಲು ಸರ್ಕಾರ ಸಿದ್ಧತೆ ನಡೆಸಿದೆ’ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ನಗರದ ಹೋಟೆಲ್ ಲಿ ಮೆರಿಡಿಯನ್‌ನಲ್ಲಿ ಬುಧವಾರ ಅಸೋಚಾಮ್ (ಅಸೋಸಿಯೇಟೆಡ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಆಫ್ ಇಂಡಿಯಾ) ಹಮ್ಮಿಕೊಂಡಿದ್ದ ಎಲೆಕ್ಟ್ರಿಕ್ ವಾಹನಗಳ ಕುರಿತ “ಎಲೆಕ್ಟ್ರಿಕ್ ಮೊಬಿಲಿಟಿ’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸ್ಥಳೀಯವಾಗಿಯೇ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ, ಬ್ಯಾಟರಿಗಳ ಕೊರತೆ ಆಗದಂತೆ ದಾಸ್ತಾನು ಮಾಡುವ ವಿಧಾನಗಳ ಸುಧಾರಣೆ, ಬ್ಯಾಟರಿಗಳಿಗಾಗಿ ಅವಲಂಬನೆಯಾಗದೆ ದೇಶೀಯವಾಗಿಯೇ ನಿರ್ಮಿಸುವುದು ಸೇರಿದಂತೆ ಹಲವು ಅಂಶಗಳ ಬಗ್ಗೆ ತಯಾರಕರೊಂದಿಗೆ ಒಂದು Óುತ್ತಿನ ಮಾತುಕತೆ ಮಾಡಲಾಗಿದೆ ಎಂದು ಹೇಳಿದರು.
ಈಗಾಗಲೇ “ಕರ್ನಾಟಕ ಎಲೆಕ್ಟ್ರಿಕ್ ವೇಹಿಕಲ್ ಆಂಡ್ ನರ್ಜಿ ಸ್ಟೋರೇಜ್ ಪಾಲಿಸಿ-2017′ ರೂಪಿಸಲಾಗಿದ್ದು, ಇದರಡಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿನಾಯ್ತಿ ನೀಡಲಾಗಿದೆ. ಇಂತಹ ಹಲವು ಕ್ರಮಗಳಿಂದ ಮುಂದಿನ ದಿನಗಳಲ್ಲಿ
ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಲಿದೆ. ಇದರ ಬೆನ್ನಲ್ಲೇ ವಿದ್ಯುತ್ ಜಾಲವನ್ನೂ ವಿಸ್ತರಿಸುವ ಅವಶ್ಯಕತೆ ಇದೆ ಎಂದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್.ವಿ. ದೇಶಪಾಂಡೆ ಮಾತನಾಡಿ, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಸೇರಿದಂತೆ ಕೇಂದ್ರ ಸರ್ಕಾರದ ಯಾವುದೇ ಪ್ರಮುಖ ಯೋಜನೆಗಳನ್ನು ರಾಜ್ಯ ಸರ್ಕಾರ ಆದ್ಯತೆ ಮೇರೆಗೆ ಕೈಗೆತ್ತಿಕೊಂಡಿದೆ. ಎಲೆಕ್ಟ್ರಿಕ್ ವಾಹನಗಳ ವಿಚಾರದಲ್ಲೂ ರಾಜ್ಯ ಹಿಂದೆಬೀಳುವುದಿಲ್ಲ ಎಂದು ಭರವಸೆ ನೀಡಿದರು. ಎಸ್. ಸಂಪತ್‌ರಾಮನ್, ಮಹೇಶ್ ಬಾಬು ಉಪಸ್ಥಿತರಿದ್ದರು.
2020ಕ್ಕೆ 60 ಲಕ್ಷ ಇ-ವಾಹನಗಳು?
2020ರ ವೇಳೆಗೆ ದೇಶದಲ್ಲಿ 60 ಲಕ್ಷ ಎಲೆಕ್ಟ್ರಿಕ್ ವಾಹನಗಳು ರಸ್ತೆಗಿಳಿಯಲಿದ್ದು, 2022ರ ವೇಳೆಗೆ ದೇಶದ ಅಟೋಮೋಟಿವ್ ಉದ್ಯಮದ ಒಟ್ಟಾರೆ ವೃದ್ಧಿ ದರ (ಜಿಡಿಪಿ) ಶೇ. 15ರಿಂದ ಶೇ. 25ಕ್ಕೆ ಏರಿಕೆ ಆಗಲಿದೆ. ಕೇಂದ್ರ ಸರ್ಕಾರವು 2030ರ ವೇಳೆಗೆ ಬಹುತೇಕ ಎಲ್ಲ ವಾಹನಗಳನ್ನು ಬ್ಯಾಟರಿಚಾಲಿತವಾಗಿ ಮಾರ್ಪಡಿ ಸುವ ಗುರಿ ಹೊಂದಿದೆ. ಇದರಿಂದ ಒಂದು ಗಿಗಾ ಟನ್ ಹೊಗೆಯನ್ನು ತಗ್ಗಿಸುವುದರ ಜತೆಗೆ 60 ಬಿಲಿಯನ್ ಅಮೆರಿಕ ಡಾಲರ್‌ನಷ್ಟು ಇಂಧನ ಉಳಿತಾಯ ಆಗಲಿದೆ ಎಂದು ಅಸೋಚಾಮ್‌ನ ಅಟೋ ಮೋಟಿವ್ ಉದ್ಯಮದ ತಜ್ಞರು ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Rahul Gandhi; ಕಾಪ್ಟರ್ ಟೇಕಾಫ್ ವಿಳಂಬ: ಕಾಂಗ್ರೆಸ್‌ನಿಂದ ಆಕ್ಷೇಪ
Pro Kabaddi League: ಪಾಟ್ನಾ ಪೈರೆಟ್ಸ್ ಪರಾಕ್ರಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.