ಸಂಗೀತಾ ಮೊಬೈಲ್ಸ್‌ನಿಂದ “ಪ್ರೈಸ್‌ ಚಾಲೆಂಜ್‌ ಮಾರಾಟ’


Team Udayavani, Jan 9, 2018, 6:30 AM IST

SAngeetha.jpg

ಬೆಂಗಳೂರು: ಮೊಬೈಲ್‌ ಫೋನ್‌ಗಳ ಮಾರಾಟ ಕ್ಷೇತ್ರದ ದಕ್ಷಿಣ ಭಾರತದ ಖ್ಯಾತ ಸಂಗೀತಾ ಮೊಬೈಲ್ಸ್‌ ಪ್ರೈ. ಲಿ., 2018ರ ಹೊಸ ವರ್ಷದ ಕೊಡುಗೆಯಾಗಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರುಕಟ್ಟೆ ವಿರುದ್ಧ “ಸಂಗೀತಾ ಪ್ರೈಸ್‌ ಚಾಲೆಂಜ್‌’ ಯೋಜನೆಯನ್ನು ರೂಪಿಸಿದೆ.

ಸಂಗೀತಾ ಸಂಸ್ಥೆ ಮೊಟ್ಟ ಮೊದಲ ಬಾರಿಗೆ ದೇಶಾದ್ಯಂತ ಎಲ್ಲ 430 ಸಂಗೀತಾ ಸ್ಟೋರ್‌ಗಳಲ್ಲಿ ಹಾಗೂ ರಾಜ್ಯದ 210ಕ್ಕೂ ಹೆಚ್ಚು ಮಳಿಗೆಗಳಲ್ಲಿ ಆನ್‌ಲೈನ್‌ ಬೆಲೆಗೆ ಸವಾಲೆಸೆಯುವ ಈ ಮಾರಾಟ ಯೋಜನೆಯನ್ನು ಹಮ್ಮಿಕೊಂಡಿದೆ.

ಸಂಗೀತಾ ಮೊಬೈಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್‌. ಸುಭಾಷ್‌ಚಂದ್ರ ಅವರು ಸೋಮವಾರ ಮೈಸೂರಿನ ಫೋರಂ ಮಾಲ್‌ನಲ್ಲಿ ತೆರೆಯಲಿರುವ ಶೋರೂಮ್‌ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಮುನ್ನ ಉದಯವಾಣಿ ಜತೆ ಮಾತನಾಡಿದರು. ಯಾರೇ ಆಗಲಿ ಮೊಬೈಲ್‌ ಫೋನ್‌ ಕೊಳ್ಳುವ ಮುನ್ನ ನೇರವಾಗಿ ಮಳಿಗೆಗಳಿಗೆ ಹೋಗಿ ತಮಗಿಷ್ಟವಾದ ಫೋನ್‌ ಅನ್ನು ಆಯ್ಕೆ ಮಾಡಿಕೊಂಡು, ಪರಿಶೀಲಿಸಿ ಅದರ ಉಪಯೋಗ ಮತ್ತು ಸಾಧಕ-ಬಾಧಕಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಆನ್‌ಲೈನ್‌ನಲ್ಲಿ ಕಡಿಮೆ ದರಕ್ಕೆ ಸಿಗುತ್ತದೆಂದು ಬೇಕಾದ ಉತ್ಪನ್ನಗಳನ್ನು ಬುಕ್‌ ಮಾಡಿ, ಪಾರ್ಸೆಲ್‌ ಬಂದ ಮೇಲೆ ಮೋಸ ಹೋಗಿರುವ ಪ್ರಸಂಗಗಳನ್ನು ಕಂಡಿದ್ದೇವೆ. ಆ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಅದೇ ಆನ್‌ಲೈನ್‌ ದರಕ್ಕೆ ನಮ್ಮಲ್ಲಿ ಫೋನ್‌ಗಳು ದೊರೆಯುತ್ತವೆ ಎನ್ನುವುದನ್ನು ತೋರಿಸಲು ಸಂಗೀತಾ ಪ್ರೈಸ್‌ ಚಾಲೆಂಜ್‌ ಯೋಜನೆಯನ್ನು ಪರಿಚಯಿಸಿದೆ. ನಮಗೆ ಇದೊಂದು ದೊಡ್ಡ ಸವಾಲೆನಿಸಿದರೂ ಗ್ರಾಹಕರ ಹಿತದೃಷ್ಟಿಯಲ್ಲಿ ಇದನ್ನು ಡಿ.22 ರಿಂದ ಹಮ್ಮಿಕೊಂಡಿದ್ದೇವೆ ಎಂದರು.

ನಮ್ಮದು ಗ್ರಾಹಕ ಸ್ನೇಹಿ ಸಂಸ್ಥೆ. ನಮ್ಮಲ್ಲಿ ಬರುವ ಗ್ರಾಹಕರಿಗೆ ವರ್ಷಪೂರ್ತಿ ಒಂದಿಲ್ಲೊಂದು ಕೊಡುಗೆ, ಯೋಜನೆಗಳನ್ನು ನೀಡುತ್ತಾ ಬಂದಿದ್ದೇವೆ. ಸಂಗೀತಾ ಪ್ರೈಸ್‌ ಡ್ರಾಪ್‌ ಪ್ರೊಟೆಕ್ಷನ್‌, ಸಂಗೀತಾ ಡ್ಯಾಮೇಜ್‌ ಪ್ರೊಟೆಕ್ಷನ್‌, ಕ್ಯಾಷ್‌ ಬ್ಯಾಕ್‌ ಆಫರ್‌, ಒಂದು ವರ್ಷ ಉಚಿತ ಏರ್‌ ಆ್ಯಂಬುಲೆನ್ಸ್‌ ಸೇವೆ, 250 ರೂ. ಮೌಲ್ಯದ ಬಿಟ್‌ಕಾಯಿನ್‌, ಶೇ.80 ರವರೆಗೆ ಖಚಿತ ಫೋನ್‌ ಬೈ ಬ್ಯಾಕ್‌, ಉಚಿತ ಜಿಯೋ ಸಿಮ್‌ (100ಜಿಬಿ ವರೆಗೆ ಡಾಟಾ), ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ನಲ್ಲಿ ಮೊಬೈಲ್‌ ಕೊಂಡಲ್ಲಿ ಎಕ್ಸ್‌ಟ್ರಾ ಶೇ.5 ರಷ್ಟು ಕ್ಯಾಷ್‌ ಬ್ಯಾಕ್‌ ಮುಂತಾದ ಕೊಡುಗೆಗಳಿರುತ್ತವೆ.

10 ಕೋಟಿ + 5 ಕೋಟಿ ಪರಿಹಾರ: ಸಂಗೀತಾ ಮೊಬೈಲ್ಸ್‌ನ ವಿಶೇಷ ಸಂಗತಿಯೆಂದರೆ ಇದುವರೆಗೆ ಪ್ರೈಸ್‌ ಡ್ರಾಪ್‌ ಪ್ರೊಟೆಕ್ಷನ್‌ನಲ್ಲಿ 10 ಕೋಟಿ ರೂ. ಹಾಗೂ ಡ್ಯಾಮೇಜ್‌ ಪ್ರೊಟೆಕ್ಷನ್‌ನಲ್ಲಿ 5 ಕೋಟಿ ರೂ.ಗಳನ್ನು 1 ಲಕ್ಷ 15 ಸಾವಿರ ಗ್ರಾಹಕರು ಪಡೆದಿರುವುದು ಒಂದು ಮೈಲಿಗಲ್ಲಾಗಿದೆ. ಅಲ್ಲದೆ, ದೇಶದಲ್ಲಿ ಅತಿಹೆಚ್ಚು ಮೊಬೈಲ್‌ ಫೋನ್‌ ಮಾರಾಟ ಮಳಿಗೆಗಳನ್ನು ಹೊಂದಿರುವ ಸಂಗೀತಾ ಮೊಬೈಲ್ಸ್‌ ಈ ಮಾಸಾಂತ್ಯದಲ್ಲಿ ವಾರಣಾಸಿಯಲ್ಲಿ 10 ಶೋರೂಮ್‌ಗಳನ್ನು ತೆರೆಯುವ ಯೋಜನೆಯನ್ನೂ ಹಾಕಿಕೊಂಡಿದೆ ಎಂದು ಅವರು ತಿಳಿಸಿದರು.

ಉಚಿತ ಏರ್‌ ಆ್ಯಂಬುಲೆನ್ಸ್‌ ಸೇವೆ
ಮೊಬೈಲ್‌ ಫೋನ್‌ ಖರೀದಿಸಿದರೆ ಜೀವ ಉಳಿಸಿಕೊಳ್ಳಬಹುದಾದ ವಿನೂತನ ಕೊಡುಗೆ ಏರ್‌ ಆ್ಯಂಬುಲೆನ್ಸ್‌ ಸೇವೆ. ದಕ್ಷಿಣ ಭಾರತದ ಯಾವುದೇ ಮೂಲೆಯ ಸಂಗೀತಾ ಶೋರೂಮ್‌ನಲ್ಲಿ ಮೊಬೈಲ್‌ ಖರೀದಿಸಿದ ಗ್ರಾಹಕರಿಗೆ ತುರ್ತು ಸಂದರ್ಭದಲ್ಲಿ ಆರೋಗ್ಯ ಸೇವೆ ಒದಗಿಸಲು ಉಚಿತ ಏರ್‌ ಆ್ಯಂಬುಲೆನ್ಸ್‌ ವ್ಯವಸ್ಥೆ ಕಲ್ಪಿಸಲಾಗಿದೆ. ನಮ್ಮ ಸಂಸ್ಥೆಯ ಅಸಂಖ್ಯಾತ ಗ್ರಾಹಕರ ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ತೋರಲು ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹ ಸೇವೆ ಆರಂಭಿಸಿದ್ದೇವೆ. ಈ ಸೌಲಭ್ಯವನ್ನು ಒಂದು ವರ್ಷ ಕಾಲ ಉಚಿತವಾಗಿ ನೀಡಲಾಗುವುದು. ಸ್ಮಾರ್ಟ್‌ಫೋನ್‌ ಖರೀದಿಗೆ ಪ್ರತಿಯಾಗಿ ಆರೋಗ್ಯ ಸೇವೆಯ ಪ್ರತ್ಯೇಕ ಕಾರ್ಡ್‌ ವಿತರಿಸ‌ಲಾಗುವುದು.
– ಎಲ್‌. ಸುಭಾಷ್‌ಚಂದ್ರ, ವ್ಯವಸ್ಥಾಪಕ ನಿರ್ದೇಶಕ

ಟಾಪ್ ನ್ಯೂಸ್

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

Santhosh-lad

Dharawad: ಬಿಜೆಪಿಯವರಿಗೆ ವಕ್ಫ್ ಬಿಟ್ಟು ಬೇರೆ ವಿಷಯವೇ ಇಲ್ಲ: ಸಚಿವ ಸಂತೋಷ್‌ ಲಾಡ್‌

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Lokayukta

MUDA ಮಾಜಿ ಆಯುಕ್ತ ನಟೇಶ್‌ಗೆ ಲೋಕಾ ನೋಟಿಸ್‌

1-reee

BJP; 50 ಅಲ್ಲ ,100 ಕೋಟಿ ರೂ. ಆಮಿಷ: ಶಾಸಕ ರವಿ ಗಣಿಗ!

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

PKL 2024 : ಬುಲ್ಸ್‌ : 8ನೇ ಸೋಲಿನ ನಂಟು

19

Hockey: ಚೀನ ವಿರುದ್ಧ ಜಯಭೇರಿ; ಸೆಮಿಫೈನಲ್‌ಗೆ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.