ಗಗನಕ್ಕೇರಿದೆ ಖಾದ್ಯ ತೈಲಗಳ ಬೆಲೆ

Team Udayavani, Mar 8, 2022, 1:43 PM IST

ಗಗನಕ್ಕೇರಿದೆ ಖಾದ್ಯ ತೈಲಗಳ ಬೆಲೆ

ಬೆಂಗಳೂರು/ಗದಗ: ರಷ್ಯಾ-ಉಕ್ರೇನ್‌ ಯುದ್ಧದ ಪರಿಣಾಮ ಪರೋಕ್ಷವಾಗಿ ದೇಶದ ಖಾದ್ಯ ತೈಲಮಾರುಕಟ್ಟೆ ಮೇಲೆ ಬೀರುತ್ತಿದೆ. ಅಡುಗೆ ಎಣ್ಣೆ ಬೆಲೆ ಗಗನಮುಖಿಯಾಗುತ್ತಿದ್ದು, ಅಡುಗೆ ಮನೆಗೂ ಯುದ್ಧದ ಬಿಸಿ ತಟ್ಟಲಾರಂಭಿಸಿದೆ.

ಸೂರ್ಯಕಾಂತಿ ರಷ್ಯಾ ಮತ್ತು ಉಕ್ರೇನ್‌ ದೇಶದ ಪ್ರಮುಖ ಬೆಳೆ. ಜಾಗತಿಕ ಮಾರುಕಟ್ಟೆಯಖಾದ್ಯ ತೈಲ ಪೂರೈಕೆಯಲ್ಲಿ ಪ್ರಮುಖದೇಶಗಳೆನಿಸಿವೆ. ಭಾರತದ ಮಾರುಕಟ್ಟೆಗೆ ಅಧಿಕಪ್ರಮಾಣದಲ್ಲಿ ಗುಣಮಟ್ಟದ ಸೂರ್ಯಕಾಂತಿ ಎಣ್ಣೆ ಉಕ್ರೇನ್‌, ರಷ್ಯಾದಿಂದ ಆಮದಾಗುತ್ತದೆ.ಯುದ್ಧದಿಂದಾಗಿ ಮಾರುಕಟ್ಟೆಗೆ ಅಡುಗೆ ಎಣ್ಣೆಆವಕ ಕಡಿಮೆಯಾಗುತ್ತಿದೆ. ಪರಿಣಾಮ ಬೆಲೆಏರಿಕೆಯಾಗುತ್ತಿದ್ದು, ಚಿಲ್ಲರೆ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಸುತ್ತಿದೆ.

ಈ ಹಿಂದೆ ವಿವಿಧ ಮಾದರಿಯ ಸೂರ್ಯಕಾಂತಿ ಅಡುಗೆ ಎಣ್ಣೆ ಪ್ರತಿ ಲೀಟರ್‌ 129 ರೂ.ನಿಂದ 130ರೂ.ವರೆಗೂ ಮಾರಾಟವಾಗುತ್ತಿತ್ತು. ಯುದ್ಧಆರಂಭವಾದ ನಂತರ ಲೀ.ಗೆ 130 ರಿಂದ 180 ರೂ.ವರೆಗೂ ತಲುಪಿದೆ. ಪ್ರತಿ ಲೀಟರ್‌ ಬೆಲೆಯಲ್ಲಿಸುಮಾರು 40ರೂ. ಏರಿಕೆಯಾಗಿದೆ. ಪರಿಸ್ಥಿತಿ ಹೀಗೆಮುಂದುವರಿದರೆ ಪ್ರತಿ ಲೀ. 200 ರೂ. ದಾಟುವನಿರೀಕ್ಷೆಯಿದೆ ಎಂದು ಹೋಲ್‌ಸೇಲ್‌ ಅಡುಗೆ ಎಣ್ಣೆ ಮಾರಾಟಗಾರರು ಹೇಳುತ್ತಾರೆ.

40 ಸಾವಿರ ಮೆಟ್ರಿಕ್‌ ಟನ್‌: ಅಂದಾಜಿನ ಪ್ರಕಾರ ಕರ್ನಾಟಕಕ್ಕೆ ಪ್ರತಿ ತಿಂಗಳು ಸುಮಾರು 40 ಸಾವಿರಮೆಟ್ರಿಕ್‌ ಟನ್‌ ಸೂರ್ಯಕಾಂತಿ ಎಣ್ಣೆ ಉಕ್ರೇನ್‌ಸೇರಿ ಮತ್ತಿತರೆ ಕಡೆಗಳಿಂದ ಆಮದಾಗುತ್ತಿದೆ.ಇದರಲ್ಲಿ ಸನ್‌ಫ್ಯೂರ್‌ ಆಯಿಲ್‌ ಸುಮಾರು 15ಸಾವಿರ ಮೆಟ್ರಿಕ್‌ ಟನ್‌, ಗೋಲ್ಡ್‌ ವಿನ್ನರ್‌ 6ಸಾವಿರ ಮೆಟ್ರಿಕ್‌ ಟನ್‌ ಮತ್ತು ಫ್ರೀಡಂ ಆಯಿಲ್‌ಸುಮಾರು 5 ಸಾವಿರ ಮೆ.ಟ. ಖರೀದಿಯಾಗುತ್ತಿದೆಎಂದು ಬೆಂಗಳೂರಿನ ಅಡುಗೆ ಎಣ್ಣೆ ಹೋಲ್‌ಸೇಲ್‌ ವ್ಯಾಪಾರಿ ಬಿ.ಆರ್‌.ಅಶೋಕ್‌ಹೇಳುತ್ತಾರೆ.

ಬೆಂಗಳೂರಿನಲ್ಲೇ ಪ್ರತಿ ತಿಂಗಳು 12 ರಿಂದ 15ಸಾವಿರ ಮೆಟ್ರಿಕ್‌ ಟನ್‌ ಸೂರ್ಯಕಾಂತಿ ಎಣ್ಣೆ ಮಾರಾಟವಾಗುತ್ತಿದೆ. ಸೂರ್ಯಕಾಂತಿ ಎಣ್ಣೆಖರೀದಿ ಮಾಡುತ್ತಿದ್ದವರು ಇದೀಗ ಫಾಮ್‌ಆಯಿಲ್‌ ಖರೀದಿಗೆ ಇಳಿದಿದ್ದಾರೆ. ಇದರಿಂದ ಪ್ರತಿಲೀಟರ್‌ಗೆ 110 ರೂ.ಗೆ ಮಾರಾಟವಾಗುತ್ತಿದ್ದಫಾಮ್‌ ಆಯಿಲ್‌ ಕೂಡ 150 ರೂ.ಗೆ ಜಿಗಿತಕಂಡಿದೆ ಎಂದು ತಿಳಿಸುತ್ತಾರೆ. ಸೂರ್ಯಕಾಂತಿಎಣ್ಣೆ ಹೆಚ್ಚಳದಿಂದ ಮಾರಾಟದ ಮೇಲೂ ಸಾಕಷ್ಟು ಹೊಡೆತ ಬಿದ್ದಿದೆ ಎಂದು ಬೆಂಗಳೂರಿನ ಶ್ರೀರಾಮಾಂಜನೇಯ ಟ್ರೇಡರ್ಸ್‌ನ ಕೋದಂಡರಾಮಸ್ವಾಮಿ ಹೇಳುತ್ತಾರೆ.

ಪೇಚಿಗೆ ಸಿಲುಕಿದ ಗ್ರಾಹಕರು: ಇನ್ನು ಗದಗದ ಸಗಟು ಮಾರುಕಟ್ಟೆಯೊಂದರಲ್ಲೇ ಎರಡುವಾರದ ಹಿಂದೆ 15 ಲೀ.ನ ಫಾಮ್‌ ಎಣ್ಣೆ 1900ರೂ. ಇದ್ದು, ಈಗ 2400 ರೂ. ತಲುಪಿದೆ. 1480ರೂ. ಇದ್ದ 10 ಲೀಟರ್‌ ಸನ್‌ ಫ್ಲವರ್‌ ಈಗ 1760ರೂ. ಏರಿಕೆಯಾಗಿದೆ. ಸ್ವಲ್ಪ ದುಬಾರಿ ಎನಿಸಿದ ಜೆಮಿನಿ, ಸನ್‌ರಿಚ್‌, ಫ್ರೀಡಂ ಬೆಲೆಗಳಲ್ಲಿ 5-10 ರೂ. ಏರಿಕೆ ಕಂಡಿದೆ. ಪರಿಣಾಮ ಚಿಲ್ಲರೆಮಾರುಕಟ್ಟೆಯಲ್ಲೂ ಪ್ರತಿ ಲೀಟರ್‌ಗೆ 30 ರಿಂದ45 ರೂ. ವರೆಗೆ ಏರಿಕೆಯಾಗಿರುವುದು ಗ್ರಾಹಕರನ್ನು ಪೇಚಿಗೆ ಸಿಲುಕಿಸಿದೆ. ಈ ಬೆಳವಣಿಗೆಸಗಟು ಮತ್ತು ಚಿಲ್ಲರ ವ್ಯಾಪಾರಸ್ಥರನ್ನೂ ಇಕ್ಕಟ್ಟಿಗೆಸಿಲುಕಿಸಿದೆ. ಎಲ್ಲೆಡೆಯೂ ಇದೇ ಪರಿಸ್ಥಿತಿಎನ್ನುತ್ತಾರೆ ಗದುಗಿನ ಖಾದ್ಯ ತೈಲಗಳ ಡಿಸ್ಟ್ರಿಬ್ಯೂಟರ್‌  ಧೀರಜ್‌.

ಸೂರ್ಯಕಾಂತಿ ಅಡುಗೆ ಎಣ್ಣೆ ಪ್ರತಿ ಲೀ. ಬೆಲೆ ವ್ಯತ್ಯಾಸ :

ವಿವಿಧ ಮಾದರಿ ಎಣ್ಣೆ 15 ದಿನದ ಹಿಂದಿನ ದರ ಸೋಮವಾರದ ದರ

ಸನ್‌ ಫ್ಯೂರ್‌ ಆಯಿಲ್‌ 129 ರೂ. 170 ರೂ.

ಫ್ರೀಡಂ ಆಯಿಲ್‌ 129 ರೂ. 160 ರೂ.

ಗೋಲ್ಡ್‌ ವಿನ್ನರ್‌ 131 ರೂ. 170 ರೂ.

ಫಾರ್‌ಚ್ಯೂನ್‌ ಆಯಿಲ್‌ 130 ರೂ. 185 ರೂ.

ಜೆಮಿನಿ ಆಯಿಲ್‌ 130 ರೂ. 174 ರೂ.

ಇತ್ತೀಚೆಗೆ ಕಡಿಮೆಯಾಗಿದ್ದ ಅಡುಗೆ ಎಣ್ಣೆ ಬೆಲೆಗಳು ಮತ್ತೆ ಲೀಟರ್‌ಗೆ 30 ರೂ.ಏರಿಕೆಯಾಗಿದೆ. ಈ ಹಿಂದೆ 135 ರೂ.ಗೆದೊರೆಯುತ್ತಿದ್ದ ಸನ್‌ರಿಚ್‌ ಎಣ್ಣೆ ಇದೀಗ 179 ರೂ.ಗೆ ಖರೀದಿಸಿದ್ದೇವೆ. ಹೀಗಾದರೆ, ಜೀವನ ಸಾಗಿಸುವುದು ಹೇಗೆ ಎಂಬುದೇ ಚಿಂತೆಯಾಗಿದೆ. ಸೌಭಾಗ್ಯ ವಿ.ಎಸ್‌, ಗ್ರಾಹಕಿ, ಗದಗ

-ದೇವೇಶ ಸೂರಗುಪ್ಪ / ವೀರೇಂದ್ರ ನಾಗಲದಿನ್ನಿ

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.