ಆದ್ಯತಾ ಪಥದ ಗುತ್ತಿಗೆ ಸೇವೆ ದುಪ್ಪಟ್ಟು!
Team Udayavani, Dec 2, 2019, 11:24 AM IST
ಬೆಂಗಳೂರು: ಮಹತ್ವಾಕಾಂಕ್ಷಿ “ಬಸ್ ಆದ್ಯತಾ ಪಥ‘ವುಕೇವಲ ಪ್ರಯಾಣದ ಸಮಯ ತಗ್ಗಿಸುತ್ತಿಲ್ಲ; ಆ ಮಾರ್ಗದಲ್ಲಿ ಸಂಚರಿಸುವ ಖಾಸಗಿ ವಾಹನಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲೂ ಮುನ್ನಡಿ ಬರೆಯುತ್ತಿದೆ.ಉದ್ದೇಶಿತ ಪಥದಲ್ಲಿ ಬಿಎಂಟಿಸಿಯ “ಚಾರ್ಟರ್‌ಸರ್ವಿಸ್‘ (ಗುತ್ತಿಗೆ ರೂಪದಲ್ಲಿ ಸೇವೆ) ಗಳ ಸಂಖ್ಯೆ ಕೇವಲ ತಿಂಗಳ ಅಂತರದಲ್ಲಿ ದುಪ್ಪಟ್ಟಾಗಿದ್ದು, ಇದರ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆ ಆಗುವ ನಿರೀಕ್ಷೆ ಇದೆ. ಸಹಜವಾಗಿ ಇದು ಇತರೆ ಖಾಸಗಿವಾಹನಗಳ ಕಡಿವಾಣಕ್ಕೆ ನೆರವಾಗಲಿದೆ. ಅಲ್ಲದೆ, ಸಂಸ್ಥೆಯ ಆದಾಯ ಕೂಡ ಹೆಚ್ಚಳವಾಗಲು ಕಾರಣವಾಗಲಿದೆ.
ಕಳೆದ ಒಂದು ತಿಂಗಳಲ್ಲಿ ಬಸ್‌ಗಳ ವೇಗ ತುಸು ಹೆಚ್ಚಿದ್ದು, ಬಿಎಂಟಿಸಿಯ ಪ್ರಾಥಮಿಕ ಅಧ್ಯಯನದಪ್ರಕಾರ ಸುಮಾರು 15 ನಿಮಿಷಗಳಷ್ಟು ಪ್ರಯಾಣದ ಸಮಯದಲ್ಲಿ ಉಳಿತಾಯ ಆಗುತ್ತಿದೆ. ಇದರ ಫಲವಾಗಿ ನಾಲ್ಕೈದು ಕಂಪನಿಗಳು ಗುತ್ತಿಗೆ ರೂಪದಲ್ಲಿಬಸ್ ಸೇವೆ ಪಡೆಯಲು ಆಸಕ್ತಿ ತೋರಿಸಿದ್ದು, ತಲಾ ಒಂದು ಕಂಪೆನಿಯು ಕನಿಷ್ಠ 40ರಿಂದ 50 ಬಸ್‌ಗಳ ಬೇಡಿಕೆ ಇಟ್ಟಿವೆ. ಅಂದರೆ, 200ರಿಂದ 250 ಬಸ್‌ಗಳಿಗೆ ಬೇಡಿಕೆ ಬಂದಿದೆ. ಪ್ರಸ್ತುತ ಈ ಮಾರ್ಗದಲ್ಲಿ ಬಿಎಂಟಿಸಿಯ 140 ಬಸ್‌ಗಳು ಗುತ್ತಿಗೆ ರೂಪದಲ್ಲಿ ಸೇವೆ ಸಲ್ಲಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.
ಈ ಮೊದಲು ಆಯಾ ಕಂಪೆನಿಗಳ ಬಹುತೇಕಉದ್ಯೋಗಿಗಳು ಸ್ವಂತ ಅಥವಾ ಖಾಸಗಿ ವಾಹನಗಳಲ್ಲಿ ಆಗಮಿಸುತ್ತಿದ್ದರು. ಒಂದು ವೇಳೆ ಅವರೆಲ್ಲರೂ ಬಸ್‌ಗಳಿಗೆ “ಶಿಫ್ಟ್‘ ಆದರೆ, ಹೆಚ್ಚು–ಕಡಿಮೆ 1,200ರಿಂದ 1,500 ವಾಹನಗಳ ಸಂಚಾರ ಆ ಮಾರ್ಗದಲ್ಲಿ ತಗ್ಗಿದಂತಾಗುತ್ತದೆ. ಇದು ಪರೋಕ್ಷವಾಗಿ ಬಸ್‌ಗಳಸಂಚಾರ ವೇಗ ಹೆಚ್ಚಲಿಕ್ಕೂ ಅನುಕೂಲ ಆಗಲಿದೆ.
ಅಲ್ಲದೆ, ಈಗಾಗಲೇ 12 ಐಟಿ ಪಾರ್ಕ್‌ಗಳಿಗೆ ಸಂಸ್ಥೆ ಅಧಿಕಾರಿಗಳು ಭೇಟಿ ನೀಡಿದ್ದು, ಕೆಲವರಿಂದ ಪೂರಕ ಸ್ಪಂದನೆ ದೊರಕಿದೆ. 20ಕ್ಕೂ ಅಧಿಕ ಕಂಪೆನಿಗಳು ಈಗಾಗಲೇ ಸಂಪರ್ಕದಲ್ಲಿವೆ ಎಂದು ಬಿಎಂಟಿಸಿ ಅಧಿಕಾರಿಗಳು ವಿಶ್ಲೇಷಿಸುತ್ತಾರೆ.
“ಹತ್ತಕ್ಕೂ ಹೆಚ್ಚು ಸೀಟುಗಳಿರುವ ಐಟಿ ಉದ್ಯೋಗಿಗಳನ್ನು ಕೊಂಡೊಯ್ಯುವ ಖಾಸಗಿ ವಾಹನಗಳಿಗೂ ಉದ್ದೇಶಿತ ಆದ್ಯತಾ ಪಥದಲ್ಲಿ ಅವಕಾಶ ನೀಡಿ‘ ಎಂದು ಕೆಲ ಕಂಪೆನಿಗಳು ಆರಂಭದಲ್ಲಿ ಕೇಳಿದ್ದವು. ಆದರೆ, ಇದರ ಬದಲಿಗೆ ನಾವೇ ಕಂಪೆನಿಗಳಿಗೆ ಸಾರಿಗೆ ಸೇವೆ ನೀಡುತ್ತೇವೆ. ಇದಕ್ಕೆ ಪೂರಕವಾಗಿ ಉದ್ಯೋಗಿಗಳಿಗೆ ಹತ್ತಿರದಲ್ಲಿ ಬಸ್ ನಿಲುಗಡೆ, ಕಂಪೆನಿಯ ಬಾಗಿಲಿಗೇ ಕೊಂಡೊಯ್ಯುವುದು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದ್ದೇವೆ. ಈ ಕುರಿತಂತೆಹೊರವರ್ತುಲ ರಸ್ತೆಯಲ್ಲಿನ ಸುಮಾರು 50ಕ್ಕೂ ಹೆಚ್ಚುಐಟಿ ಕಂಪೆನಿಗಳನ್ನು ಇದುವರೆಗೆ ಸಂಪರ್ಕಿಸಿದ್ದೇವೆ. ಪೂರಕ ಸ್ಪಂದನೆ ದೊರಕಿದೆ ಎಂದು ಬಿಎಂಟಿಸಿ ವಕ್ತಾರರು “ಉದಯವಾಣಿ‘ಗೆ ತಿಳಿಸಿದರು.
ಲೆಕ್ಕಾಚಾರ ಹೀಗೆ: ಸಾಮಾನ್ಯವಾಗಿ ಹೊರವರ್ತುಲದಲ್ಲಿ ಅದರಲ್ಲೂ ಸೆಂಟ್ರಲ್ ಸಿಲ್ಕ್ಬೋರ್ಡ್‌ನಿಂದ ಕೆ.ಆರ್.ಪುರ ನಡುವೆ ಹೆಚ್ಚಾಗಿ ಸಂಚರಿಸುವವರು ಐಟಿ ಉದ್ಯೋಗಿಗಳು. ಕೆಲ ಕಂಪೆನಿಗಳು ಖಾಸಗಿ ವಾಹನಗಳನ್ನು ಗುತ್ತಿಗೆ ಪಡೆದುಕೊಂಡಿದ್ದರೆ, ಉಳಿದವರು ಸ್ವಂತ ವಾಹನಗಳಲ್ಲಿ ಬರುತ್ತವೆ. ಆ್ಯಪ್‌ಆಧಾರಿತ ಕ್ಯಾಬ್‌ಗಳಲ್ಲೂ ಆಗಮಿಸುತ್ತಾರೆ. ಒಂದು ಬಸ್ ಗುತ್ತಿಗೆ ಪಡೆದರೆ, ಅದು ಕನಿಷ್ಠ 40 ಜನರನ್ನು ಕೊಂಡೊಯ್ಯುತ್ತದೆ. ಇನ್ನು ಒಂದು ಕಾರಿನಲ್ಲಿ ಸರಾಸರಿಇಬ್ಬರು ಸಂಚರಿಸುತ್ತಾರೆ ಎಂದು ಲೆಕ್ಕಹಾಕಿದರೂ, ಕನಿಷ್ಠ 20 ವಾಹನಗಳು ಕಡಿಮೆ ಆಗುತ್ತವೆ.
ಪ್ರಸ್ತುತ ಬಂದ ಬೇಡಿಕೆ ಪ್ರಕಾರವೇ 200 ಬಸ್ ಗಳಿಗೆ ಇದನ್ನುಲೆಕ್ಕಹಾಕಿದರೆ, 1,500 ಖಾಸಗಿ ವಾಹನಗಳಿಗೆಅನಾಯಾಸವಾಗಿ ಬ್ರೇಕ್ ಬಿದ್ದಂತಾಗುತ್ತದೆ. ಜತೆಗೆ ಇದರಿಂದ ಪ್ರಯಾಣಿಕರ ಸಂಖ್ಯೆ ಏರಿಕೆ ಮಾತ್ರವಲ್ಲ; ಸಂಸ್ಥೆಯ ಆದಾಯವೂ ಹೆಚ್ಚಲಿದೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸುತ್ತಾರೆ. ತಿಂಗಳ ಹಿಂದೆ ಪರಿಚಯಿಸಿದ ಪಥದಲ್ಲಿ ಬಸ್‌ಗಳ ಸಂಚಾರ ಸಮಯ ಕಡಿಮೆ ಆಗಿರುವುದು ಕಂಡುಬಂದಿದೆ.
ಮುಂದಿನ ದಿನಗಳಲ್ಲಿ ವ್ಯವಸ್ಥಿತವಾಗಿ ಜಾರಿಗೊಳಿಸುವ ಮೂಲಕ ಇದು ಇನ್ನಷ್ಟು ಅಂದರೆ 40ನಿಮಿಷಗಳಷ್ಟು ಸಮಯ ಉಳಿತಾಯ ಮಾಡುವ ಗುರಿ ಬಿಎಂಟಿಸಿ ಹೊಂದಿದೆ. ಈ ನಿಟ್ಟಿನಲ್ಲಿ ಎಲ್ಲ ಸರ್ಕಾರಿ ಸಂಸ್ಥೆಗಳು ಇದಕ್ಕೆ ಆದ್ಯತೆ ನೀಡುತ್ತಿವೆ. ಇನ್ನೂ 12 ಕಡೆಗಳಲ್ಲಿ ಜಾರಿಗೊಳಿಸುವ ಉದ್ದೇಶವೂ ಇದೆ. ಆದ್ದರಿಂದ ಐಟಿ ಕಂಪೆನಿಗಳು ಮನಸ್ಸು ಮಾಡುತ್ತಿವೆ.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf: ರೈತರಿಗೆ ನೀಡಿರುವ ನೋಟಿಸ್ ತಕ್ಷಣ ವಾಪಸ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ
Kannada Rajyotsava: ಪಾಲಿಕೆ ಆಡಳಿತದಲ್ಲಿ ಸಂಪೂರ್ಣ ಕನ್ನಡ: ತುಷಾರ್
Bengaluru: ಅಕ್ರಮವಾಗಿ ಪಟಾಕಿ ಮಾರಾಟ; 2 ದಿನಗಳಲ್ಲಿ 56 ಕೇಸು ದಾಖಲು
Deepavali: ಐಟಿ ಸಿಟಿಯಲ್ಲಿ ಬೆಳಕಿನ ಹಬ್ಬದ ರಂಗು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣ ಸಿಬ್ಬಂದಿಗೆ ಬೆದರಿಕೆ: ಕೇಸ್
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.