ಜೈನ ಮಂದಿರದ ಚಿನ್ನಾಭರಣ ದೋಚಿದ್ದ 5 ಆರೋಪಿಗಳ ಸೆರೆ


Team Udayavani, Jun 20, 2017, 12:34 PM IST

temple-thefts.jpg

ಬೆಂಗಳೂರು: ಎರಡು ತಿಂಗಳ ಹಿಂದೆ ಭಾರತಿನಗರದ ಮನಿಸುರತ್‌ ಸ್ವಾಮಿ ಜೈನ ಮಂದಿರಯಲ್ಲಿ ಲಕ್ಷಾಂತರ ರೂ.  ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದ ಐವರು ಅಂತಾರಾಜ್ಯ ದೋರಡೆ ಕೋರರನ್ನು ಬಂಧಿಸುವಲ್ಲಿ ವಿವೇಕನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ರಾಜಸ್ಥಾನ ಮೂಲದ ಭರತ್‌ಶರ್ಮಾ (34), ಹರಜೀರಾಮ್‌ ಅಲಿಯಾಸ್‌ ಹರೀಶ್‌ (23), ಶರವಣ ಸಿಂಗ್‌ (25), ಈಶ್ವರ್‌ ಲಾಲ್‌ (26) ಹಾಗೂ ಪ್ರವೀಣ್‌ ಕುಮಾರ್‌ (27) ಬಂಧಿತರು. ಇವರಿಂದ 22 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಕೊಂಡಿದ್ದು, ಮತ್ತೂಬ್ಬ ಆರೋಪಿ ಮುಂಬೈ ಮೂಲದ ಜಿತೇಂದರ್‌ ಅಲಿಯಾಸ್‌ ಲಲಿತ್‌ಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಆರೋಪಿಗಳು  ಸತತ ಒಂದು ತಿಂಗಳ ಕಾಲ ದರೋಡೆಗೆ ಸಂಚು ರೂಪಿಸಿದ್ದರು. ಅದರಂತೆ ದೇವಾಲಯದಲ್ಲಿ ಕೆಲಸ ಮಾಡುತ್ತಿದ್ದ ಶರವಣ ಸಿಂಗ್‌ನ ಸಹಾಯದಿಂದ ನಕಲಿ ಕೀಲಿಗಳನ್ನು ಬಳಸಿ ಏ.16ರ ತಡರಾತ್ರಿ ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಇದನ್ನು ಮುಂಬೈನ ಚಿನ್ನಾಭರಣ ಅಂಗಡಿಯಲ್ಲಿ ಮಾರಾಟ ಮಾಡಲು ಯತ್ನಿಸಿದ್ದರು ಎಂದು ಕೇಂದ್ರ ವಿಭಾಗದ ಡಿಸಿಪಿ ಡಾ ಚಂದ್ರಗುಪ್ತಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಆರೋಪಿಗಳ ಪೈಕಿ ಶರವಣ್‌ಸಿಂಗ್‌ ಕಳೆದ ಎರಡು ವರ್ಷಗಳಿಂದ ಜೈನ ಮಂದಿರದಲ್ಲೇ ಟೈಲ್ಸ್‌ ಹಾಕುವ ಕೆಲಸ ಮಾಡಿಕೊಂಡಿದ್ದಾನೆ. ಈ ಮಧ್ಯೆ ದೇವಾಲಯದ ವಿಗ್ರಹದ ಮೇಲೆ ಹಾಕಿದ್ದ ಚಿನ್ನ, ಬೆಳ್ಳಿಯ ಆಭರಣಗಳು, ಮುಖವಾಡ, ಕವಚಗಳನ್ನು ಕಂಡು ದರೋಡೆಗೆ ನಿರ್ಧರಿಸಿದ್ದ. ನಂತರ ತನ್ನ ಸ್ನೇಹಿತ ಹರಜೀರಾಮ್‌ ಅಲಿಯಾಸ್‌ ಹರೀಶ್‌ನನ್ನು ಸಂಪರ್ಕಿಸಿ ನಗರಕ್ಕೆ ಬರುವಂತೆ ಸೂಚಿಸಿದ್ದ. 

ನಗರಕ್ಕೆ ಬಂದ ಆರೋಪಿ, ದೇವಾಲಯದ ನಕಲಿ ಕೀಗಳನ್ನು ಮಾಡಿಸಿಕೊಳ್ಳುವಂತೆ ಸೂಚಿಸಿದ್ದ. ಅದರಂತೆ ಮಾರ್ಚ್‌ನಲ್ಲಿ ದೇವಾಲಯದ ಕೀಗಳನ್ನು ಶರವಣ್‌ ಸಿಂಗ್‌ ಕಳವು ಮಾಡಿ, ನಕಲಿ ಕೀಗಳನ್ನು ಮಾಡಿಸಿಕೊಂಡಿದ್ದ. ಬಳಿಕ ಹರೀಶ್‌ ಮೂಲಕ ಇತರೆ ಆರೋಪಿಗಳನ್ನು ಕರೆಸಿಕೊಂಡು ಏ.16ರ ತಡರಾತ್ರಿ 2 ಗಂಟೆ ಸುಮಾರಿಗೆ ದೇವಾಲಯಕ್ಕೆ ನುಗ್ಗಿ ದರೋಡೆ ಮಾಡಿ ರಾಜಸ್ಥಾನಕ್ಕೆ ಪರಾರಿಯಾಗಿದ್ದರು.

ಈ ಪೈಕಿ ಶರವಣ್‌ ಸಿಂಗ್‌ ಮಾತ್ರ ಇಲ್ಲಿಯೇ ಇದ್ದು ಎಂದಿನಂತೆ ಕೆಲಸ ಕಾರ್ಯದಲ್ಲಿ ತೊಡಗಿದ್ದ ಎಂದು ಅವರು ವಿವರಿಸಿದರು. ದರೋಡೆ ನಡೆದ ಕೆಲ ದಿನಗಳ ಬಳಿಕವೂ ನಗರದಲ್ಲೇ ಇದ್ದ ಶರವಣ್‌ ಸಿಂಗ್‌, ನಂತರ ಕಾರ್ಯ ನಿಮಿತ್ತ ರಾಜಸ್ಥಾನಕ್ಕೆ ಹೋಗಿದ್ದ. ಅಲ್ಲಿ ಆರೋಪಿಗಳೆಲ್ಲರೂ ಒಂದೆಡೆ ಸೇರಿ ಮುಂಬೈನ ಪರಿಚಯಸ್ಥ ಚಿನ್ನಾಭರಣ ಮಳಿಗೆ ಮಾಲೀಕನಿಗೆ ಚಿನ್ನಾಭರಣ ಮಾರಾಟ ಮಾಡಲು  ಮಾತುಕತೆ ನಡೆಸಿದ್ದರು.

ಅನುಮಾನಸ್ಪದವಾಗಿ ಓಡಾಟ: ಕೆಲವು ದಿನಗಳ ಹಿಂದೆ ಶರವಣ್‌ಸಿಂಗ್‌ ವಿವೇಕನಗರದ ಬಿಡಿಎ ಕಾಂಪ್ಲೆಕ್ಸ್‌ ಬಳಿ ಅಪರಿಚಿತ ವ್ಯಕ್ತಿಯ ಜತೆ ಅನುಮಾನಸ್ಪದವಾಗಿ ಮಾತನಾಡುತ್ತ ನಿಂತಿದ್ದ. ಇದನ್ನು ಗಮನಿಸಿದ ಪೇದೆಯೊಬ್ಬರು, ಆತನನ್ನು ಹಿಡಿದು ವಿಚಾರಣೆ ನಡೆಸಿದಾಗ ದರೋಡೆ ಪ್ರಕರಣ ಬಾಯಿಬಿಟ್ಟಿದ್ದಾನೆ. ಅಲ್ಲದೇ ಆರೋಪಿಯ ಸಿಡಿಆರ್‌(ಕಾಲ್‌ ಡಿಟೆಲ್ಸ್‌) ಪರಿಶೀಲಿಸಿದಾಗ ದರೋಡೆ ನಡೆಯುವ ಕೆಲ ದಿನಗಳ ಹಿಂದೆ ಹರೀಶ್‌ ಹಾಗೂ ಇತರೆ ಆರೋಪಿಗಳಿಗೆ ಕರೆ ಮಾಡಿರುವುದು ಪತ್ತೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆಯೂ ವಿಚಾರಣೆ: ದೇವಾಲಯದಲ್ಲಿ ಸುಮಾರು 30 ಮಂದಿ ಟೈಲ್ಸ್‌ ಕೆಲಸ ಮಾಡುತ್ತಿದ್ದು, ದರೋಡೆ ನಡೆದ ಬಳಿಕ ಭಾರತೀನಗರ ಠಾಣೆ ಪೊಲೀಸರು ಶರವಣ್‌ ಸಿಂಗ್‌ ಸೇರಿದಂತೆ ಎಲ್ಲ ಕಾರ್ಮಿಕರನ್ನು ಒಂದು ಸುತ್ತು ವಿಚಾರಣೆ ನಡೆಸಿದ್ದರು. ಆಗ ಶರವಣ್‌ ಸಿಂಗ್‌ ಯಾವುದೇ ಮಾಹಿತಿ ನೀಡಿರಲಿಲ್ಲ. ಜತೆಗೆ ಅನುಮಾನ ಬಾರದಂತೆ ವರ್ತಿಸಿದ್ದ. ದೇವಾಲಯದಲ್ಲೂ ಅದೇ ರೀತಿ ನಡೆದುಕೊಳ್ಳುತ್ತಿದ್ದ. ಆದ್ದರಿಂದ ಆರೋಪಿಯನ್ನು ವಶಕ್ಕೆ ಪಡೆದಿರಲಿಲ್ಲ ಎಂದು ಪೊಲೀಸರು ಹೇಳಿದರು.

ಕೀ ಹುಡುಕಿ ಕೊಟ್ಟ ಆರೋಪಿ: ಪ್ರಕರಣದ ಮಾಸ್ಟರ್‌ ಮೈಂಡ್‌ ಶರವಣ್‌ ಸಿಂಗ್‌ ದರೋಡೆ ಮಾಡಲು ನಿರ್ಧರಿಸುತ್ತಿದ್ದಂತೆ, ಹರೀಶ್‌ನ ಸಲಹೆಯಂತೆ ದೇವಾಲಯದ ಮುಖ್ಯದ್ವಾರ ಹಾಗೂ ಗರ್ಭಗುಡಿ ಸೇರಿದಂತೆ ಎಲ್ಲ ಕೀಗಳನ್ನು ಕಳವು ಮಾಡಿದ್ದ. ಈ ಬಗ್ಗೆ ದೇವಾಲಯದ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾಗ, ತಾನೂ ಕೂಡ ಹುಡುಕಾಟಕ್ಕೆ ಸಹಕಾರ ನೀಡಿದ್ದ. ಒಂದು ದಿನ ಬಳಿಕ ದೇವಾಲಯದ ಟೈಲ್ಸ್‌ ಜೋಡಿಸಿಟ್ಟಿದ್ದ ಸ್ಥಳದಲ್ಲಿ ಕೀ ಸಿಕ್ಕಿದೆ ಎಂದು ತಾನೇ ಆಡಳಿತಾಧಿಕಾರಿಗಳಿಗೆ ತಂದುಕೊಟ್ಟಿದ್ದ. ಈ ಮಧ್ಯೆ ನಕಲಿ ಕೀ ಮಾಡಿಸಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಮಧು ಮಗ: ಮೊದಲೇ ಸಂಚು ರೂಪಿಸಿದ್ದಂತೆ ಶರವಣ್‌ ಸಿಂಗ್‌ ದರೋಡೆಯಾದ ಬಳಿಕ ದೇವಾಲಯದಲ್ಲೇ ಉಳಿದುಕೊಂಡಿದ್ದ. ಕೃತ್ಯ ಎಸಗಿದ ಹತ್ತು ದಿನಗಳ ಬಳಿಕ, ದೇವಾಲಯದ ಆಡಳಿತ ಮಂಡಳಿ ಸದಸ್ಯರಿಗೆ ತನ್ನ ಮದುವೆಯ ಆಹ್ವಾನ ಪತ್ರಿಕೆ ನೀಡಿ, ಮದುವೆಗಾಗಿ ರಜೆ ಹಾಕುತ್ತಿದ್ದೇನೆ. ಮದುವೆಗೆ ಹಣದ ಸಹಾಯ ಮಾಡುವಂತೆ ಕೇಳಿಕೊಂಡಿದ್ದು, ಈ ಹಣವನ್ನು ಸಂಬಳದಲ್ಲಿ ಕಡಿತ ಮಾಡಿಕೊಳ್ಳುವಂತೆ ಮನವಿ ಮಾಡಿದ್ದ. ಇದಕ್ಕೆ ಸ್ಪಂದಿಸಿದ ಆಡಳಿತ ಮಂಡಳಿಯವರು ಆತನಿಗೆ ಸುಮಾರು 30 ಸಾವಿರ ರೂಪಾಯಿ ಕೊಟ್ಟು ಸಹಾಯ ಮಾಡಿದ್ದರು ಎಂದು ಪೊಲೀಸ್‌ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಜೈಲು ಸೇರಿದ್ದ ಆರೋಪಿಗಳು: ಬಂಧಿತ ಐವರ ಪೈಕಿ ಭರತ್‌ ಶರ್ಮಾ, ಪ್ರವೀಣ್‌ ಕುಮಾರ್‌, ಜಿತೇಂದರ್‌(ನಾಪತ್ತೆಯಾಗಿದ್ದಾನೆ) ಮತ್ತು ಈಶ್ವರ್‌ ಲಾಲ್‌, ರಾಜಸ್ಥಾನದ ಬಲೋತ್ರಾ ನಗರದ ಮೋತಿ ಮಾರ್ಕೆಟ್‌ನ ಎಂ.ಜಿ.ಗೋಲ್ಡ್‌ ಅಂಗಡಿಗೆ ಗ್ರಾಹಕರಂತೆ ನುಗ್ಗಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಲೋತ್ರಾ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದರು. ನಂತರ ಜಾಮೀನು ಪಡೆದು ಹೊರ ಬಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಟಾಪ್ ನ್ಯೂಸ್

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

ASHA_WORKERs

Protest Happy Ending: “ಆಶಾ’ ಕಾರ್ಯಕರ್ತೆಯರ ಗೌರವಧನ 2 ಸಾವಿರ ರೂ. ಏರಿಕೆ

1-horoscope

Daily Horoscope: ಬಹುದಿನದ ಅಪೇಕ್ಷೆಯೊಂದು ಕೈಗೂಡಿದ ಆನಂದ, ಶುಭ ಸಮಾಚಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Frud

Police Nabs: 930 “ಡಿಜಿಟಲ್‌ ಅರೆಸ್ಟ್‌’ ಪ್ರಕರಣಗಳ ರೂವಾರಿ ಬೆಂಗಳೂರಿನಲ್ಲಿ ಬಂಧನ!

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

3-road-mishap

Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು

2-katapady

Katapady: ಭೀಕರ ಅಪಘಾತ… ಹೊತ್ತಿ ಉರಿದ ಲಾರಿ, ದ್ವಿಚಕ್ರ ವಾಹನ; ಓರ್ವ ಗಂಭೀರ

BJP-SPL-Meet

BJP Politics: ಬಿ.ಎಸ್‌.ಯಡಿಯೂರಪ್ಪ ಅಖಾಡಕ್ಕೆ!; ಒಳಜಗಳ ಬಿಟ್ಟು ಒಗ್ಗಟ್ಟಿನ ಹೆಜ್ಜೆ ಹಾಕೋಣ

CM-DCM

Dinner Politics: ಸಿದ್ದರಾಮಯ್ಯ ಬಣದಿಂದ ಡಿ.ಕೆ.ಶಿವಕುಮಾರ್‌ರತ್ತ  “ಗುರಿ’!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.