ಭ್ರಷ್ಟಾಚಾರ ದೃಢೀಕರಿಸಿದ ಬಿಎಸ್‌ವೈ-ರೆಡ್ಡಿ ಸಖ್ಯ

Team Udayavani, Apr 23, 2018, 6:10 AM IST

priyanka-chaturvedi-congres.jpg

ಎಲ್ಲ ಪಕ್ಷಗಳು ತಂತ್ರ, ಪ್ರತಿತಂತ್ರ ಹೆಣೆಯುವುದರಲ್ಲಿ ನಿರತವಾಗಿವೆ. ಕಾಂಗ್ರೆಸ್‌ ತನ್ನ ಅಭಿವೃದ್ಧಿ ಕಾರ್ಯ, ಬಿಜೆಪಿಯ ಕಳಂಕಿತ ಅಭ್ಯರ್ಥಿಗಳು, ರೆಡ್ಡಿ ಪ್ರಚಾರ ವಿಷಯಗಳನ್ನೇ ಕೇಂದ್ರವಾಗಿಟ್ಟುಕೊಂಡು ಜನರನ್ನು ಸೆಳೆಯಲು ಕಾರ್ಯತಂತ್ರ ರೂಪಿಸಿದೆ. ಈ ಬಗ್ಗೆ ಎಐಸಿಸಿ ರಾಷ್ಟ್ರೀಯ ಸಂವಹನ ಸಂಚಾಲಕಿ ಪ್ರಿಯಾಂಕಾ ಚತುರ್ವೇದಿ  ಜತೆ ಸಂದರ್ಶನ.

ಜನರ ಬಳಿಗೆ ಒಯ್ಯುವ ವಿಷಯಗಳೇನು?
           ರಾಜ್ಯ ಕಾಂಗ್ರೆಸ್‌ ಸರ್ಕಾರದ ಸ್ಥಿರ ಆಡಳಿತ,  ಅಭಿವೃದ್ಧಿ ಕಾರ್ಯ, ಅಭ್ಯರ್ಥಿಗಳ ಧನಾತ್ಮಕ ಅಂಶ  ಕೇಂದ್ರವಾಗಿಟ್ಟುಕೊಂಡು ಪ್ರಚಾರ ನಡೆಸಲಾಗುವುದು. ಭ್ರಷ್ಟಾಚಾರರಹಿತ ಆಡಳಿತ ನೀಡಿ ಬಿಜೆಪಿಗಿಂತ ಭಿನ್ನ ಎಂಬುದನ್ನು ಸಾಧಿಸಿ ತೋರಿಸಿದೆ. ಹತಾಶ ಬಿಜೆಪಿ ತನ್ನ ಹಳೆಯ ಸಿದ್ಧಾಂತ ಕೋಮು ಭಾವನೆ ಪ್ರಚೋದಿಸುವ ಕೆಲಸ ಮಾಡುತ್ತಿದೆ.

ಜನಾರ್ದನ ರೆಡ್ಡಿ ಬಿಜೆಪಿ ಪರ ಪ್ರಚಾರ ನಡೆಸುತ್ತಿರುವುದರ ಬಗ್ಗೆ ಏನು ಹೇಳುವಿರಿ?
           ಯಡಿಯೂರಪ್ಪ- ಜನಾರ್ದನ ರೆಡ್ಡಿ ಜೋಡಿಯ ಭ್ರಷ್ಟಾಚಾರವನ್ನು ಮರೆ ಮಾಚಲು ಚುನಾವಣಾ ಪ್ರಚಾರ ಕಾರ್ಯದ ಹೊಣೆ ಯನ್ನು ಕೇಂದ್ರ ಸಚಿವರ ನಾಯಕತ್ವಕ್ಕೆ ಹೊರ ಗುತ್ತಿಗೆ ನೀಡಿದಂತಿದೆ. ಜನಾರ್ದನರೆಡ್ಡಿ ಅವರ ಪಾಸ್‌ಪೋರ್ಟ್‌ ಜಫ್ತಿಯಾಗಿದ್ದು, ಬಳ್ಳಾರಿ ಪ್ರವೇಶಕ್ಕೆ ನಿರ್ಬಂಧವಿದೆ. ಅವರಿನ್ನೂ  ದೋಷಮುಕ್ತರಾಗಿಲ್ಲ. ಈ ಹೊತ್ತಿನಲ್ಲಿ ಅವರು ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದು, ಬಿಜೆಪಿಯ ನಿಲುವು ಏನು ಎಂಬುದು ಗೊತ್ತಾಗಿದೆ. ಬಿಎಸ್‌ವೈ ಮತ್ತು ರೆಡ್ಡಿ ಸಖ್ಯ ಭ್ರಷ್ಟಾಚಾರಕ್ಕೆ ದೃಢೀಕರಣ ಮುದ್ರೆ ಒತ್ತಿದೆ.

ಬಿಜೆಪಿ ಕೇಂದ್ರ ಸಚಿವರ ತಂಡವೇ ಪ್ರಚಾರದ ನೇತೃತ್ವ ವಹಿಸಿದೆ, ನಿಮ್ಮ ಪ್ರತಿತಂತ್ರ ಏನು?
           ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕರು ಸಹ ರಾಜ್ಯದೆಲ್ಲೆಡೆ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ಒಂದೆರಡು ದಿನದಲ್ಲೇ ರಾಷ್ಟ್ರೀಯ ನಾಯಕರು ಜಿಲ್ಲೆ, ತಾಲ್ಲೂಕು, ಪಟ್ಟಣ ಪ್ರದೇಶಗಳಲ್ಲಿ ಸರಣಿ ಪತ್ರಿಕಾಗೋಷ್ಠಿ, ಬಹಿರಂಗ ಸಭೆ ನಡೆಸ ಲಿ ದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಬಿಜೆಪಿ ಆಡಳಿತವಿರುವ ರಾಜ್ಯಗಳ ಅಭಿವೃದ್ಧಿಗೆ ಹೋಲಿಸುವ ಮೂಲಕ ತಿರುಗೇಟು ನೀಡಲಿ ದ್ದಾರೆ. ಮೂಲಸೌಕರ್ಯ, ಕಲ್ಯಾಣ, ಅಭಿವೃದ್ಧಿ ಚಿತ್ರಣ ನೀಡಲಿದ್ದಾರೆ. ರಾಜ್ಯದ ಸಂಸದರು ಸಕ್ರಿಯರಾಗಿ ಪ್ರಚಾರ ನಡೆಸಲಿದ್ದಾರೆ.

ಪಕ್ಷದ ಪ್ರಚಾರ ವೈಖರಿಯ ವಿಶೇಷತೆ ಏನು?
           360 ಡಿಗ್ರಿ ಕೋನದಲ್ಲೂ ಸಂವಹನ, ಪ್ರಚಾರ ತಂತ್ರ ರೂಪಿಸಲಾಗಿದೆ. ಕೇಂದ್ರದ ವೈಫ‌ಲ್ಯ, ರಾಜ್ಯ ಸರ್ಕಾರದ ಕೊಡುಗೆಗಳ ಬಗ್ಗೆ ತಿಳಿಸಲು ಜಾಲತಾಣ ಮತ್ತು ಇತರ ಮಾಧ್ಯಮಗಳನ್ನು  ಬಳಸಲಾಗು ವುದು.  ಸಿಬಿಎಸ್‌ಇ, ಐಸಿಎಸ್‌ಸಿ ಪ್ರಶ್ನೆ ಪತ್ರಿಕೆ ಸೋರಿಕೆ, ನಿರುದ್ಯೋಗ ಸಮಸ್ಯೆ  ಬಗ್ಗೆ ಯುವಜನತೆಗೆ ಎಸ್‌ಎಂಎಸ್‌ ಮಾಹಿತಿ ನೀಡಲಾಗುವುದು. ಗುಜರಾತ್‌  ಪ್ರಯೋಗ ದಂತೆ  ಮಹಿಳಾ ಸಂಘಟನೆಗಳು, ಗುಂಪು ಗಳೊಂದಿಗೆ ಸಂವಾದ ನಡೆಸಲಾಗುವುದು.

ಅಭ್ಯರ್ಥಿ ಆಯ್ಕೆ ಸಮರ್ಪಕವಾಗಿದೆಯೇ?
            ಸಾಕಷ್ಟು ಚರ್ಚೆ ನಡೆಸಿ ಏಕಕಾಲಕ್ಕೆ 218 ಸೂಕ್ತ ಅಭ್ಯರ್ಥಿಗಳ ಹೆಸರನ್ನು ಪಕ್ಷ ಪ್ರಕಟಿಸಿದೆ. ಆದರೆ ಬಿಜೆಪಿಯಲ್ಲಿ  ಕಳಂಕಿತರಿಗೆ ಟಿಕೆಟ್‌ ನೀಡಲಾ ಗಿದೆ. ಮಹಿಳೆ, ಅಲ್ಪಸಂಖ್ಯಾತರನ್ನು  ಕಡೆಗಣಿಸಲಾಗಿದೆ.

– ಎಂ.ಕೀರ್ತಿಪ್ರಸಾದ್‌ 

ಟಾಪ್ ನ್ಯೂಸ್

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Delhi: 9 ವರ್ಷಗಳಲ್ಲೇ ಡಿಸೆಂಬರ್‌ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್‌ ಮನವಿ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್‌, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Scotland: ಕೇರಳ ಮೂಲದ ವಿದ್ಯಾರ್ಥಿನಿ ಶವ ನದಿಯಲ್ಲಿ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru Crime: ವಾಟರ್‌ ಹೀಟರ್‌ನಿಂದ ಸ್ನೇಹಿತನ ಕೊಲೆಗೈದವ ಸೆರೆ

8

State Govt: ಸರ್ಕಾರದ ಬಳಿಯೇ ಇದೆ ಪಂಚಾಯತ್‌ ಅಧಿಕಾರ!

Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ

Fraud Case: ಉದ್ಯಮಿಗೂ 5 ಕೋಟಿ ರೂ. ವಂಚಿಸಿದ್ದ ಐಶ್ವರ್ಯ: ಆರೋಪ

Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್‌

Bengaluru: ನಕಲಿ ದಾಖಲೆ ನೀಡಿ ಹುದ್ದೆ ಪಡೆದ ಆರೋಪದಡಿ ಪಿಎಸ್‌ಐ ವಿರುದ್ಧ ಕೇಸ್‌

Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!

Fraud Case: ಸಾಗರದ ಚಿನ್ನದಂಗಡಿಗೂ 20 ಲಕ್ಷ ವಂಚಿಸಿದ್ದ ವರ್ತೂರು ಆಪ್ತೆ ಶ್ವೇತಾ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Pierre-Filliozat

ಫ್ರಾನ್ಸ್‌ ಮೂಲದ ಸಂಸ್ಕೃತ ವಿದ್ವಾಂಸ ಪಿಯರಿ ಸಿಲ್ವೇನ್‌ ಫಿಲಿಯೋಜಾ ನಿಧನ

Kimmane-Ratnakar

ಸಿ.ಟಿ.ರವಿ ಪ್ರಕರಣದ ತನಿಖೆ ಸಭಾಪತಿಯೇ ನಡೆಸಲಿ: ಮಾಜಿ ಸಚಿವ ಕಿಮ್ಮನೆ ರತ್ನಾಕರ್‌

court

Mangaluru; ಪ್ರತ್ಯೇಕ ಚೆಕ್‌ಬೌನ್ಸ್‌ ಪ್ರಕರಣ: ಇಬ್ಬರು ಖುಲಾಸೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ

death

Mangaluru: ದ್ವಿಚಕ್ರ ವಾಹನ ಢಿಕ್ಕಿ: ಟೆಂಪೋ ಚಾಲಕ ಸಾ*ವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.