ಪ್ರಿಯಾ ಸಾವು: ಮೂವರ ವಿರುದ್ಧ ಕೇಸ್
Team Udayavani, Aug 14, 2017, 12:04 PM IST
ಕೆ.ಆರ್.ಪುರ: ಕೆ.ಆರ್.ಪುರದ ಆಕಾಶ್ ನಗರದ ಎಂಇಜಿ ಬಡಾವಣೆಯ ಬಿಬಿಎಂಪಿ ಪಾರ್ಕ್‌ನಲ್ಲಿ ಕಬ್ಬಿಣದ ಸಲಾಕೆ ಬಿದ್ದು ಪ್ರಿಯಾ ಎಂಬ ಬಾಲಕಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಇಂಜಿನಿಯರ್, ಪಾರ್ಕ್ ಉಸ್ತುವಾರಿ ಮತ್ತು ಸೆಕ್ಯುರಿಟಿ ಗಾರ್ಡ್ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ.
ಅವಘಡ ಸಂಭವಿಸಿದ್ದ ಪಾರ್ಕ್‌ಗೆ ಭಾನುವಾರ ಭೇಟಿ ನೀಡಿದ್ದ ಬಿಬಿಎಂಪಿಯ ಮಹದೇವಪುರ ವಲಯ ಜಂಟಿ ಆಯುಕ್ತೆ ವಾಸಂತಿ ಅಮರ್, ಪಾಲಿಕೆ ಸದಸ್ಯ ಎಸ್.ಜಿ.ನಾಗರಾಜ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸ್ಥಳ ಪರಿಶೀಲನೆ ನಡೆಸಿದರು. ಇದೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಾಂತ್‌ಕುಮಾರ್ ಸಿಂಗ್, “ಘಟನೆಯ ಸಂಬಂಧ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯ ದೃಢಪಟ್ಟಲ್ಲಿ ಕ್ರಮ ಕೈಗೊಳ್ಳಲಾಗುವುದು,’ ಎಂದರು.
ಮಹದೇವಪುರದ ಕೃಷ್ಣಪ್ಪ ಲೇಔಟ್‌ನಲ್ಲಿನಲ್ಲಿರುವ ಪ್ರಿಯಾಳ ಮನೆಯ ಬಳಿ ಮೃತ ದೇಹವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಅಂತಿಮ ದರ್ಶನಕ್ಕೆ ಆಗಮಿಸಿದ್ದ ಶಾಸಕ ಬಸವರಾಜ್ ಪೋಷಕರಿಗೆ ಸಾಂತ್ವಾನ ಹೇಳಿದರು. “ಪ್ರಿಯಾ ಭದ್ರತಾ ಸಿಬ್ಬಂದಿಯೊಂದಿಗೆ ಜಗಳವಾಡಿ ಪಾರ್ಕ್‌ನಲ್ಲಿ ಆಡಲು ಹೋಗಿದ್ದಳು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ಅವರು ನೀಡಿದ ಹೇಳಿಕೆಯನ್ನು ಖಂಡಿಸಿದ ಪೋಷಕರು ಶಾಸಕರ ಬಳಿ ಅಸಮಾಧಾನ ವ್ಯಕ್ತಪಡಿಸಿದರು.
ಎಂಇಜಿ ಬಡಾವಣೆಯಲ್ಲಿ ಪಾಲಿಕೆಯ ಉದ್ಯಾನವನ ನವೀಕರಣಗೊಳ್ಳುತ್ತಿದ್ದು ಸಾರ್ವಜನಿಕರಿಗೆ ಇನ್ನೂ ಸಮರ್ಪಣೆಯಾಗಿಲ್ಲ. ಈ ನಡುವೆ ಅವಘಡ ಸಂಭವಿಸಿದೆ. ಕಾಮಗಾರಿ ನಡೆಸುವ ವೇಳೆ ಎಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಘಟನೆಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಲ್ಲಿ ಕ್ರಮಕ್ಕೆ ಸೂಚಿಸಲಾಗುವುದು ಎಂದು ಶಾಸಕರು ಪೋಷಕರಿಗೆ ತಿಳಿಸಿದರು.
ಹೋಗಬಾರದು ಎಂದಿದ್ದರೆ ಹೋಗುತ್ತಿರಲಿಲ್ಲ
“ನಾನು, ಪ್ರಿಯಾ ಮತ್ತು ನಯನಾ ಪಾರ್ಕ್‌ನಲ್ಲಿ ಆಡಲು ತೆರಳಿದ್ದಾಗ ಪಾರ್ಕ್‌ನ ಗೇಟ್ ತೆರದಿತ್ತು. ಮಕ್ಕಳ ಪಾರ್ಕ್‌ನಲ್ಲಿ ಕೆಲಸ ನಡೆಯುತ್ತಿತ್ತು. ಅದಕ್ಕೆ ಸೆಕ್ಯೂರಿಟಿ ಗಾರ್ಡ್ ಆಗಲೀ ಫಲಕವಾಗಲಿ ಇರಲಿಲ್ಲ. ಹೋಗಬಾರದು ಎಂಬ ಬೋರ್ಡ್ ಇದ್ದಿದ್ದರೆ ನಾವು ಆಟವಾಡಲು ಹೋಗುತ್ತಿರಲಿಲ್ಲ. ಮಕ್ಕಳೆಲ್ಲ ಆಟವಾಡುತ್ತಿದ್ದರಿಂದ ನಾವು ಕೂಡ ಹೋಗಿದ್ದೆವು. ನಾವು ಯಾರೊದಿಂಗೂ ಜಗಳ ಮಾಡಲಿಲ್ಲ,’ ಎಂದು ಪ್ರಿಯಾಳ ಗೆಳತಿ ಸುಭೀಕ್ಷಾ ಹೇಳಿದ್ದಾಳೆ.
ರಕ್ತದ ಮಡುವಿನಲ್ಲಿದ್ದಳ ಪ್ರಿಯಾಳ ವಿಡಿಯೋ ತೆಗೆದಯುತ್ತಿದ್ದರು
ತಲೆಗೆ ಪೆಟ್ಟು ಬಿದ್ದು ರಕ್ತದ ಮಡುವಲ್ಲಿದ್ದ ಬಾಲಕಿಯನ್ನು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಆಕೆಯನ್ನು ಆಸ್ಪತ್ರೆಗೆ ಸೇರಿಸದೇ ಕಾಲಹರಣ ಮಾಡಿದ್ದಾರೆ. ಇದು ತೀರ ವಿಷಾದನೀಯ ಸಂಗತಿ. ಕೂಡಲೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರೆ ಪ್ರಾಣ ಉಳಿಸಬಹುದಿತ್ತು. ಅವಘಡಗಳು ಸಂಭವಿಸಿದ ವೇಳೆ ಸಾರ್ವಜನಿಕರು ಪೂರ್ವ ಪೀಡಿತ ಭಯಬಿಟ್ಟು ಮಾನವೀಯತೆ ಮೆರೆದರೆ ಜೀವಗಳನ್ನು ಉಳಿಸಬಹುದು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಾಂತ್‌ಕುಮಾರ್ ಸಿಂಗ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.