ಸೋಂಕು ತಡೆಗೆ ಔಷಧಕ್ಕೆ ಮೊರೆ ಹೋದ ಪಾಲಿಕೆ
Team Udayavani, Mar 25, 2020, 12:16 PM IST
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ವೈರಸ್ ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಉದ್ದೇಶದಿಂದ ಜೆಟ್ಟಿಂಗ್ ಯಂತ್ರ ಮತ್ತು ಡ್ರೋಣ್‌ಗಳ ಮೂಲಕ ಸೋಡಿಯಂ ಹೈಪೋ ಕ್ಲೋರೈಡ್ ( ಸೋಂಕು ನಿವಾರಕ ದ್ರಾವಣ) ಸಿಂಪಡಣೆಗೆ ಮೇಯರ್ ಎಂ.ಗೌತಮ್‌ಕುಮಾರ್ ಅವರು ಮಂಗಳವಾರ ಪಾಲಿಕೆಯ ಕೇಂದ್ರ ಕಚೇರಿಯ ಆವರಣದಲ್ಲಿ ಚಾಲನೆ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮೇಯರ್, ಏಳು ಸಾವಿರ ಲೀಟರ್ ಸಾಮರ್ಥ್ಯದ 10 ಜೆಟ್ಟಿಂಗ್ ಯಂತ್ರಗಳನ್ನು ತಾತ್ಕಾಲಿಕ ಬಳಕೆಗೆ ತೆಗೆದುಕೊಳ್ಳಲಾಗಿದೆ. ಈ ಯಂತ್ರಗಳ ಮೂಲಕ ಪಾಲಿಕೆ ವ್ಯಾಪ್ತಿಯಲ್ಲಿ ಸೋಂಕು ನಿವಾರಣೆ ಸಿಂಪಡಣೆ ಮಾಡಲಾಗುವುದು ಎಂದರು. ಮಂಗಳವಾರ ಹಡ್ಸನ್ ಸರ್ಕಲ್, ಸರ್.ಪುಟ್ಟಣ್ಣ ಚೆಟ್ಟಿ ಪುರಭವನ, ಕೆ.ಆರ್. ಮಾರುಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಯಿತು.
ನಗರ ಪ್ರಮುಖ ಭಾಗದಲ್ಲಿ ಸಿಂಪಡಣೆ: ನಗರದ ಪ್ರಮುಖ ಮಾರುಕಟ್ಟೆಗಳು, ಕಚೇರಿಗಳು ಹಾಗೂ ಕೋವಿಡ್ 19 ಸೋಂಕು ದೃಢಪಟ್ಟ ಪ್ರದೇಶಗಳಲ್ಲಿ ಜಟ್ಟಿಂಗ್ ಯಂತ್ರ ಮತ್ತು ದ್ರೋಣ್‌ನ ಮೂಲಕ ಸೋಂಕು ನಿವಾರಣ ದ್ರಾವಣ ಸಿಂಪಡಣೆ ಮಾಡಲು ಪಾಲಿಕೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವೇಳೆ ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್, ಬಿಬಿಎಂಪಿ ವಿಶೇಷ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ರಂದೀಪ್, ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ) ಸರ್ಪರಾಜ್ ಖಾನ್ ಮತ್ತಿತರರು ಹಾಜರಿದ್ದರು.
ಸೋಂಕಿತರ ಕಟ್ಟಡಗಳಿಗೆ ಸಿಂಪಡಣೆ: ಕೋವಿಡ್ 19 ಸೋಂಕಿತರು ಹಾಗೂ ಹೋಂ ಕ್ವಾರಂಟೈನ್ ನಲ್ಲಿರುವವರ ಮನೆಗಳು, ಕಟ್ಟಡಗಳು ಹಾಗೂ ಅವರು ಸಂಚಾರ ಮಾಡಿರುವ ಪ್ರದೇಶಗಳನ್ನು ಗುರುತಿಸಿ ಔಷಧ ಸಿಂಪಡಿಸಲು ಮೊದಲ ಆದ್ಯತೆ ನೀಡಲಾಗುವುದು. ಇಂತಹ ಪ್ರದೇಶಗಳಲ್ಲಿ 15 ಲೀ. ಔಷಧ ಸಿಂಪಡಣೆ ಸಾಮರ್ಥ್ಯದ ಡ್ರೋಣ್‌ಗಳ ಬಳಸಲಾಗುವುದು. ತಲಾ 4 ಗಂಟೆಯಂತೆ ಔಷಧ ಸಿಂಪಡಣೆ ಸಾಮರ್ಥ್ಯ ಹೊಂದಿರುವ 3 ಡ್ರೋಣ್ ಗಳನ್ನು ಬಳಸಲಾಗುತ್ತಿದೆ ಎಂದು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಸರ್ಪರಾಜ್ ಖಾನ್ ಮಾಹಿತಿ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.