ಬಳ್ಳಾರಿ ನಂಟು ಬಿಡದ ಬಾಹ್ಯಾಕಾಶ ವಿಜ್ಞಾನಿ
Team Udayavani, Jul 25, 2017, 6:30 AM IST
ಬಳ್ಳಾರಿ: ವಿಶ್ವ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿಸಿದ ವಿಜ್ಞಾನಿ ಯು.ಆರ್.ರಾವ್ ಅವರು ಪ್ರೌಢ
ಹಾಗೂ ಇಂಟರ್ ಮೀಡಿಯಟ್ ಶಿಕ್ಷಣ ಪಡೆದಿದ್ದು ಬಳ್ಳಾರಿಯಲ್ಲಿ. ವಿದ್ಯಾರ್ಥಿಯಾಗಿದ್ದಾಗ ರಾವ್ ಅವರು ಇಲ್ಲಿನ ಶ್ರೀನಿವಾಸ ಆಚಾರ್ ಅವರ ಮನೆಯಲ್ಲಿ ಇದ್ದರು.
60-70ರ ದಶಕದಲ್ಲಿ ಬಹು ದೊಡ್ಡ ಹೆಸರು ಗಳಿಸಿದ್ದ ನಗರದ ಮೀನಾಕ್ಷಿ ಭವನದ ಮಾಲೀಕರಾಗಿದ್ದ ಮೀನಾಕ್ಷಿ ಸೀನಪ್ಪನವರು (ಶ್ರೀನಿವಾಸ ಆಚಾರ್ ) ಪ್ರೊ| ಯು.ಆರ್.ರಾವ್ ಅವರಿಗೆ ಬಳ್ಳಾರಿಯಲ್ಲಿ ಆಶ್ರಯ ಕಲ್ಪಿಸಿಕೊಟ್ಟಿದ್ದರು. ರಾವ್ ಅವರಿಂದ ಹಣ ಪಡೆಯದೇ 2 ವರ್ಷಗಳ ಕಾಲ ಊಟ- ತಿಂಡಿ ವ್ಯವಸ್ಥೆ ಕಲ್ಪಿಸಿದ್ದರು.
ಯು.ಆರ್.ರಾವ್ ಅವರ ತಂದೆ ಲಕ್ಷ್ಮಣ ಆಚಾರ್ ಪ್ರಸಿದಟಛಿ ಸಿಹಿ ತಿನಿಸಿನ ತಯಾರಕರಾಗಿದ್ದರು. ಈ ಸಂದರ್ಭ ರಾವ್ 1940ರ ದಶಕದಲ್ಲಿ ನಗರದ ವಾಡ್ಲಾì ಹೈಸ್ಕೂಲಿನಲ್ಲಿ ಎರಡು ವರ್ಷ ಅಭ್ಯಾಸ ಮಾಡಿದ್ದರು. ಕೆಲ ಕಾಲದ ನಂತರ ಬಳ್ಳಾರಿಗೆ ಮರಳಿದ್ದ ಪ್ರೊ| ರಾವ್ 1947ರಲ್ಲಿ ನಗರದ ವೀರಶೈವ ಕಾಲೇಜಿನಲ್ಲಿ ಭೌತಶಾಸ್ತ್ರ, ರಾಸಾಯನ ಶಾಸ್ತ್ರ ಹಾಗೂ ಗಣಿತ ಶಾಸ್ತ್ರಗಳಿದ್ದ ವಿಜ್ಞಾನ ಇಂಟರ್ ಮೀಡಿಯೇಟ್ ಓದಿದ್ದರು.
ಬಳ್ಳಾರಿಯಲ್ಲಿದ್ದ ಸಂದರ್ಭ ನಗರದ ಶ್ರೀ ಕನ್ಯಕಾ ಪರಮೇಶ್ವರಿ ದೇವಸ್ಥಾನದ ಹಿಂದಿನ ಬೀದಿಯಲ್ಲಿ ವಾಸಿಸುತ್ತಿದ್ದರು. ಆಗ ಅವರು ಮೀನಾಕ್ಷಿ ಸೀನಪ್ಪನವರ ಮನೆಗೆ ಹೋಗಿ ಬರುತ್ತಿದ್ದರು. ಅವರ ಮಕ್ಕಳೊಡನೆ ಬೆರೆಯುತ್ತಿದ್ದರು. ಮುಂದೆ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆ ಮಾಡಿ ವಿಶ್ವ ಪ್ರಸಿದಟಛಿರಾಗಿದ್ದರೂ ಬಾಲ್ಯದಲ್ಲಿ ಆಶ್ರಯ ನೀಡಿದ್ದ ಬಳ್ಳಾರಿಯನ್ನು ಎಂದಿಗೂ ಮರೆತಿರಲಿಲ್ಲ.
ಬಳ್ಳಾರಿಯ ಬಗೆಗೆ ಸಾಕಷ್ಟು ಅಭಿಮಾನ, ಪ್ರೀತಿ ಇರಿಸಿಕೊಂಡಿದ್ದರು. ಬಾಹ್ಯಾಕಾಶ ವಿಜ್ಞಾನಿಯಾಗಿ ಮಹತ್ವದ ಸಂಶೋಧನೆಗಳ ಆನಂತರ ಬಳ್ಳಾರಿಗೆ ಕೆಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಪ್ರೊ| ರಾವ್, ತಮ್ಮ ಭಾಷಣಗಳಲ್ಲಿ ಬಳ್ಳಾರಿಯಲ್ಲಿ ಕಳೆದ ದಿನಗಳನ್ನು, ಮೀನಾಕ್ಷಿ ಸೀನಪ್ಪನವರ ಮನೆಯ ಆತಿಥ್ಯವನ್ನು, ಅವರ ಎರಡನೇ ಪುತ್ರ ಹಾಗೂ ಸ್ನೇಹಿತರಾಗಿದ್ದ ವಕೀಲ ಕೆ.ಸೀತಾರಾಮ್ ಅವರೊಂದಿಗಿನ ಗೆಳೆತನವನ್ನು ಪ್ರಸ್ತಾಪಿಸುತ್ತಿದ್ದರು. ಸೀನಪ್ಪನವರ ಹಿರಿಯ ಪುತ್ರ ಪ್ರಸ್ತುತ ಬೆಂಗಳೂರಿನಲ್ಲಿರುವ ಕೆ.ಕೃಷ್ಣಮೂರ್ತಿ, “ಯು.ಆರ್. ರಾವ್ ನನ್ನ ಆಪ್ತ ಮಿತ್ರರಾಗಿದ್ದರು. ಇತ್ತೀಚಿನವರೆಗೂ ನಾವಿಬ್ಬರೂ ಭೇಟಿಯಾಗುತ್ತಿದ್ದ ಸಂದರ್ಭಗಳಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕುತ್ತಿದ್ದೆವು. ನಮ್ಮ ವಿದ್ಯಾರ್ಥಿ ದೆಸೆಯಲ್ಲಿ ಇಬ್ಬರೂ ವಾಡ್ಲಾì ಹೈಸ್ಕೂಲಿನ ಮೈದಾನದಲ್ಲಿ ಫುಟ್‌ಬಾಲ್, ಕಬಡ್ಡಿ ಆಡುತ್ತಿದ್ದೆವು. ಅವರ ನಿಧನದಿಂದ ನನಗೆ ತುಂಬಾ ನೋವಾಗಿದೆ’ ಎಂದು ಸಂತಾಪ ಸೂಚಿಸಿದ್ದಾರೆ.
ರಾವ್ ಅವರೊಂದಿಗಿನ ಗೆಳೆತನದ ಕುರಿತು ಮಾತನಾಡಿರುವ ಸೀನಪ್ಪನವರ ಎರಡನೇ ಪುತ್ರ, ಬಳ್ಳಾರಿಯಲ್ಲಿರುವ ವಕೀಲ ಸೀತಾರಾಮ್, ಪ್ರೊ|ರಾವ್ ಅಷ್ಟು ದೊಡ್ಡ ವ್ಯಕ್ತಿಯಾಗಿದ್ದರೂ ಬಳ್ಳಾರಿಗೆ ಬಂದಾಗಲೆಲ್ಲಾ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದರು. ಬಾಲ್ಯದಲ್ಲಿ ಹೇಗಿದ್ದರೋ ಅವರು ದೊಡ್ಡವರಾಗಿ ಬೆಳೆದಾಗಲೂ ಅದು ಮಾಸಿರಲಿಲ್ಲ. ಊಟ ಮಾಡುತ್ತಾ ಹಳೆಯ ದಿನಗಳ ನೆನಪನ್ನು ನೆನೆಯುತ್ತಾ ಅವರು ನಮ್ಮೊಂದಿಗೆ ಹರಟುತ್ತಿದ್ದರು ಎಂದು ಸ್ಮರಿಸಿದ್ದಾರೆ.
– ಎಂ.ಮುರಳಿಕೃಷ್ಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ನ.28ಕ್ಕೆ ಮುಂದೂಡಿದ ಹೈಕೋರ್ಟ್
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sirsi: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್ ಟೀಕೆ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
India: 68 ಮಿಲಿಯನ್ ಟನ್ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ
ದೋಟಿಹಾಳ: ಉದ್ಘಾಟನೆ ಕಾಣದೆ ಅಂಗನವಾಡಿ ಕಟ್ಟಡ ಅನಾಥ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.