ಬಣ್ಣ ಹಚ್ಚುವುದರಲ್ಲೇ ನೆಮ್ಮದಿ ಕಂಡುಕೊಂಡ ವೈದ್ಯ
Team Udayavani, Dec 17, 2021, 11:02 AM IST
ಬೆಂಗಳೂರು: ವೈದ್ಯರೆಂದರೆ ಸಾಮಾನ್ಯವಾಗಿ ಅವರ ವೃತ್ತಿ ಹೊರತಾಗಿ, ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅಧ್ಯಯನ, ಸಂಶೋಧನೆ ಮಾಡಲು ಇಚ್ಛಿಸುತ್ತಾರೆ. ಇನ್ನೂ ಕೆಲವರಿಗೆ ಕಾದಂಬರಿ ಓದುವುದು, ಸಂಗೀತ ಕೇಳುವುದರಲ್ಲಿ ನೆಮ್ಮದಿ ಸಿಗುತ್ತಿದ್ದರೆ, ಇಲ್ಲೊಬ್ಬ ವೈದ್ಯನಿಗೆ ಕುಂಚಗಳನ್ನು ಹಿಡಿದು ಬಿಳಿ ಹಾಳೆಗೆ ಬಣ್ಣ ಹಾಕುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಇವರು ವೃತ್ತಿಯಲ್ಲಿ ವೈದ್ಯರು.
ನಗರದ ರೈಲ್ವೇ ಆಸ್ಪತ್ರೆಯಲ್ಲಿ ಇ ಅಂಡ್ ಟಿ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ. ಹೇಮಂತ್ ವಾಮನ್‌ಶಂಕರ್. ಆಸ್ಪತ್ರೆಯ ಕೆಲಸದ ಬಿಡುವಿನ ಸಮಯಚಿತ್ರಕಲೆಬಿಡಿಸುವುದೇ ಇವರ ಹವ್ಯಾಸ. ಉದಯವಾಣಿ ಜತೆ ಮಾತ ನಾಡಿದ ಇವರು, ಚಿಕ್ಕವಯ ಸ್ಸಿನಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ವಿಕೇಂಡ್ ಹಾಬಿ ಕ್ಲಾಸ್‌ಗಳಿಗೆ ತೆರಳಿ, ಮೂಲ ಚಿತ್ರಕಲೆಯ ಕೌಶಲ್ಯಗಳನ್ನು ಕಲಿಯ ಲಾಯಿತು.
ಪಿಯುಸಿ ಶಿಕ್ಷಣ ಮುಗಿದ ನಂತರ, 2002 ರಲ್ಲಿ ಬಬ್ಲು ರೈ ಎಂಬ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಹಾಗೂ ತಾಯಿ ಜತೆ ಸೇರಿಕೊಂಡು ಆಯಿಲ್ ಮತ್ತುಆಕ್ರಲಿಕ್ ಪೇಂಟಿಂಗ್ ಮಾಡಲು ಆರಂಭಿಸಿದೆ ಎಂದರು. ಉನ್ನತ ಶಿಕ್ಷಣಾಭ್ಯಾಸದ ನಂತರ ವೃತ್ತಿ ಆರಂಭದಲ್ಲಿ ಕೆಲಸದ ಒತ್ತಡದಲ್ಲಿ ತನ್ನ ಹವ್ಯಾಸಕ್ಕೆ ಒಂದು ಬ್ರೇಕ್ ಬಿದ್ದಿತ್ತು. ತದನಂತರ ಅದೇ ಒತ್ತಡವನ್ನು ಕಡಿಮೆ ಮಾಡಲು ಪುನಃ ಬಣ್ಣ ಮತ್ತು ಬ್ರೆಶ್‌ಗಳನ್ನು ಹಿಡಿಯಲಾಯಿತು.
ಕೋವಿಡ್ ಸಮಯದಲ್ಲಿ ಸೋಂಕಿತರ ಜತೆ ಕಾರ್ಯನಿರ್ವಹಿಸುವುದು, ಅವರಿಗೆ ಚಿಕಿತ್ಸೆ ನೀಡುವುದು ಒಂದು ಸವಾಲಿನ ಕೆಲಸವಾಗಿತ್ತು. ಏಕೆಂದರೆ, ಸೋಂಕತರೆಲ್ಲರಿಗೂ ಚಿಕಿತ್ಸೆ ಫಲಕಾರಿ ಯಾಗುತ್ತಿರಲಿಲ್ಲ. ಕಣ್ಣು ಮುಂದೆಯೇ ಅನೇಕ ಸೋಂಕಿತರು ಪ್ರಾಣ ಬಿಡುತ್ತಿದ್ದರು. ಈ ಸಮ ಯದಲ್ಲಿ ನ ಒತ್ತಡ ಕಡಿಮೆಗೊಳಿಸಿದ್ದೇ ಈ ಪೇಂಟಿಂಗ್‌ಗಳು ಎಂದು ಅನುಭವ ಹಂಚಿಕೊಂಡರು. ಇವರ ತಾಯಿ ರಾಧಾ ಎಸ್.ಜಿ. ಸೈಕೋ ಥೆರಪಿ, ಫಾಸ್ಟ್ ಲೈಫ್ ಥೆರಪಿ, ಕೌನ್ಸಲಿಂಗ್ ಮಾಡುತ್ತಿದ್ದರು. ಆದರೆ, ಕೊರೊನಾ ದಿಂದಾಗಿ ಅವರ ಮೂಲ ಹವ್ಯಾಸ ಪೇಂಟಿಂಗ್ ಮಾಡಲು ಹೆಚ್ಚು ಸಮಯ ದೊರಕಿತು. ಸುಮಾರು ಎಂಬತ್ತಕ್ಕೂ ಅಧಿಕ ಚಿತ್ರಕಲೆಗಳನ್ನು ಬಿಡಿಸಿದ್ದಾರೆ.
ಯಾವ ರೀತಿಯ ಪೇಂಟಿಂಗ್‌ಗಳು: ಸಂಗೀತ ವಾದ್ಯಗಳ ಸರಣಿ, ಪಕ್ಷಿಗಳ ಸರಣಿ, ಕಟ್ಟಡಗಳ ಸರಣಿ, ಲ್ಯಾಂಡ್ ಸ್ಕೇಪ್ ಸರಣಿ, ಮಾನ್ಸೂನ್ ಸರಣಿ, ಫಾಸ್ಟ್ ಲೈಫ್ ಥೆರಪಿಯ ಸರಣಿ ಸೇರಿದಂತೆ ನಾನಾ ಬಗೆಯ ಸರಣಿಯ ಪೇಂಟಿಂಗ್‌ಗಳನ್ನು ಚಿತ್ರಿಸಿದ್ದಾರೆ.
ಪೇಂಟಿಂಗ್ ಮಾಡಲು ತೆಗೆದುಕೊಂಡ ಸಮಯ: ಒಂದೊಂದು ಪೇಂಟಿಂಗ್‌ಗಳು ಗಾತ್ರ ಮತ್ತು ವಿನ್ಯಾಸದ ಮೇಲೆ ಸಮಯ ತೆಗೆದುಕೊಳ್ಳಲಾಗುತ್ತದೆ. ಒಂದು ಚಿತ್ರಕಲೆ ಬಿಡಿಸಲು ಕನಿಷ್ಠ ಐದು ಪದರಗಳ ಬಣ್ಣ ಹಾಕಲಾಗುತ್ತದೆ. ಎರಡು ದಿನಗಳಿಂದ ಹಿಡಿದು ಎರಡು ತಿಂಗಳುಗಳ ಕಾಲ ಒಂದು ಚಿತ್ರಕಲೆಗೆ ಸಮಯ ಬೇಕಾಗುತ್ತದೆ. ರೋಸ್ಟರ್ ಎಂಬ ಪಕ್ಷಿಯ ಸರಣಿ ಬಿಡಿಸಲು ಒಂದು ವಾರದ ಸಮಯವಕಾಶ ಬೇಕಾಯಿತು.
ಪ್ರದರ್ಶನ ಮತ್ತು ಮಾರಾಟ: ಕಸ್ತೂರ್ಬಾ ರಸ್ತೆಯ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಗುರುವಾರದಿಂದ ಭಾನುವಾರ(ಡಿ.19)ವರೆಗೆ ಒಟ್ಟು ನಾಲ್ಕು ದಿನಗಳ ಕಾಲ ಬೆಳಗ್ಗೆ 11 ರಿಂದ ಸಂಜೆ 6.30 ವರೆಗೆ ಸಾರ್ವಜನಿಕರಿಗೆ ಪ್ರದರ್ಶನಕ್ಕಿಡಲಾಗುವುದು. ಜತೆಗೆ ಪೇಂಟಿಂಗ್ ಖರೀದಿಸಲು ಅವಕಾಶವಿದೆ.
“ಪೇಂಟಿಂಗ್ ಮಾಡುವುದು ನನ್ನ ಹವ್ಯಾಸ. ನನ್ನಕೆಲಸದ ಒತ್ತಡವನ್ನು ಕಡಿಮೆ ಮಾಡಲು ಚಿತ್ರಬಿಡಿಸುವುದು ಹಾಗೂ ನನ್ನಕ್ರಿಯಾತ್ಮಕತೆಯನ್ನು ಬಣ್ಣಗಳ ಮೂಲಕ ಹೊರಹಾಕಲು ಇಚ್ಛಿಸುತ್ತೇನೆ. ಪೇಂಟಿಂಗ್‌ನಲ್ಲಿ ನೈಫ್ ಪೇಂಟಿಂಗ್ ಮಾಡುವುದೆಂದರೆ ನನಗೆ ತುಂಬಾ ಇಷ್ಟ.” ●ಡಾ. ಹೇಮಂತ್ ವಾಮನ್‌ಶಂಕರ್, ವೈದ್ಯ ಮತ್ತು ಚಿತ್ರಕಲಾವಿದ.
“ಕೊರೊನಾ ಸಮಯದಲ್ಲಿ ಮನೆಗೆಲಸ ಜತೆಗೆ ಪೇಂಟಿಂಗ್ ಮಾಡಲು ಹೆಚ್ಚು ಸಮಯ ಸಿಕ್ಕಿತು. ಆದ್ದರಿಂದ ಬಹುತೇಕ ಚಿತ್ರಗಳನ್ನು ಬಿಡಿಸಲಾಯಿತು. ನನ್ನೊಂದಿಗೆ ಮಗನು ಪೇಟಿಂಗ್‌ಕಡೆ ಒಲವು ತೋರಿಸಿ, ವಿಭಿನ್ನ ರೀತಿಯ ಚಿತ್ರಕಲೆಗಳನ್ನು ಬಿಡಿಸಿರುವುದು ಸಂತಸ ವಿಷಯ.” ●ರಾಧಾ ಎಸ್.ಜಿ.ಕಲಾವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.