ಆಯುಕ್ತರ ಕೈಗೆ ಆಸ್ತಿತೆರಿಗೆ ಹೆಚ್ಚಳ ಅಸ್ತ್ರ?
2008ರಿಂದ ಆಸ್ತಿತೆರಿಗೆ ಹೆಚ್ಚಳವೇ ಆಗಿಲ್ಲ,ಹೆಚ್ಚಳ ಜವಾಬ್ದಾರಿ ಆಯುಕ್ತರಿಗೆ ನೀಡಲು ಸರ್ಕಾರಕ್ಕೆಪ್ರಸ್ತಾವನೆ ಚಿಂತನೆ
Team Udayavani, Oct 12, 2020, 1:07 PM IST
ಬೆಂಗಳೂರು: ನಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಅಧಿಕಾರವನ್ನು ಬಿಬಿಎಂಪಿ ಆಯುಕ್ತರಿಗೆ ನೀಡುವ ನಿಟ್ಟಿನಲ್ಲಿ ಕೆಎಂಸಿ ಕಾಯ್ದೆಗೆ ತಿದ್ದುಪಡಿ ತರಲು ಪಾಲಿಕೆಯ ಆಡಳಿತಾಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದೆ.
ಕರ್ನಾಟಕ ಮುನ್ಸಿಪಾಲಿಟಿ ಕಾರ್ಪೊರೇಷನ್ (ಕೆಎಂಸಿ) ಕಾಯ್ದೆಯ ಪ್ರಕಾರ ಸ್ಥಳೀಯ ಸಂಸ್ಥೆಗಳುಪ್ರತಿ ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಹೆಚ್ಚಳಮಾಡಬಹುದಾಗಿದೆ. ಆದರೆ, ನಗರದಲ್ಲಿ 2008ರಿಂದಆಸ್ತಿ ತೆರಿಗೆ ಹೆಚ್ಚಳ ಮಾಡಿಲ್ಲ. ಹೀಗಾಗಿ, ಪಾಲಿಕೆಯ ನಿರ್ವಹಣೆ ಹಾಗೂ ಆಡಳಿತಾತ್ಮಕ ವೆಚ್ಚಗಳಿಗೆ ಸಮಸ್ಯೆಯಾಗುತ್ತಿದೆ.
ಹೀಗಾಗಿ, ಆಸ್ತಿ ತೆರಿಗೆ ಕಟ್ಟದವರಿಂದ ಆಸ್ತಿ ತೆರಿಗೆ ಸಂಗ್ರಹ ಮಾಡುವ ಹಾಗೂ ಆಸ್ತಿ ವ್ಯಾಪ್ತಿಗೆಸೇರದವರನ್ನು ಆಸ್ತಿ ವ್ಯಾಪ್ತಿಗೆಸೇರಿಸುವುದಕ್ಕೆ ಹೆಚ್ಚು ಆದ್ಯತೆ ನೀಡಲು ಚರ್ಚೆ ನಡೆದಿದೆ. ಇದರೊಂದಿಗೆಪಾಲಿಕೆ ವ್ಯಾಪ್ತಿಯಲ್ಲಿ ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಲು ತಜ್ಞರ ಕಮಿಟಿ ರಚನೆಮಾಡಲಾಗಿದ್ದು, ಆಸ್ತಿ ತೆರಿಗೆ ಹೆಚ್ಚಳ ಅಧಿಕಾರವನ್ನುಆಯುಕ್ತರಿಗೇ ನೀಡುವುದಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಪಾಲಿಕೆ ಮುಂದಾಗಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವುದಕ್ಕೆ ಪಾಲಿಕೆಯ ಸದಸ್ಯರು ಮೀನಾಮೇಷ ಎಣಿಸು ವುದರಿಂದ ಹಾಗೂ ಚುನಾವಣೆ ಸಂದರ್ಭಗಳಲ್ಲಿಪಕ್ಷಾತೀತವಾಗಿ ಯಾವುದೇ ಪಕ್ಷವಿದ್ದರೂ, ಆಸ್ತಿ ತೆರಿಗೆಹೆಚ್ಚಳಮಾಡದೆ ಪ್ರಸ್ತಾವನೆಯನ್ನು ಮುಂದೂಡುತ್ತಲೇ ಇರುವುದರಿಂದ ಆಡಳಿತ್ಮಾಕ ಹಂತದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವನೆ ಇದ್ದರೆ ಸರ್ಕಾರದಿಂದ ನೇರವಾಗಿ ಅನುಮೋದನೆ ಪಡೆದುಕೊಳ್ಳಬಹುದು. ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳಪ್ರಸ್ತಾವನೆ ಹಲವು ವರ್ಷಗಳಿಂದ ನನೆಗುದಿಗೆಬಿದ್ದಿದ್ದು, ಆಸ್ತಿ ತೆರಿಗೆ ಹೆಚ್ಚಳ ಅಧಿಕಾರ ಬಿಬಿಎಂಪಿ ಆಯುಕ್ತರ ಕೈಯಲ್ಲೇ ಇದ್ದರೆ, ಪ್ರತಿ ವರ್ಷ ಸಾರ್ವಜನಿಕರಿಗೂ ಹೊರೆಯಾಗದಂತೆ ಹಾಗೂ ಪಾಲಿಕೆಗೂ ಆರ್ಥಿಕಸಂಕಷ್ಟ ಸೃಷ್ಟಿಯಾಗದಂತೆ ಸರಿದೂಗಿಸಬಹುದು ಎಂಬ ಲೆಕ್ಕಾಚಾರ ನಡೆದಿದೆ.
ಏರಿಯಾ ಯೂನಿಟ್ ಆಸ್ತಿ ತೆರಿಗೆ ಹೆಚ್ಚಳವೇ ಸೂಕ್ತ:ನಗರದಲ್ಲಿ ಈಗಾಗಲೇ ಯೂನಿಟ್ ಬೇಸ್ ಆಧಾರದ ಮೇಲೆ ಆಸ್ತಿ ತೆರಿಗೆ ನಿಗದಿ ಮಾಡಲಾಗಿದೆ. ಹೀಗಾಗಿ, ಇದೇ ಮಾದರಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಮಾಡುವುದು ಉತ್ತಮ ಒಂದೊಮ್ಮೆ ವ್ಯಾಲ್ಯೂ ಬೇಸ್ಡ್ ಆಧಾರದ ಮೇಲೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಿದರೆ ಸಾರ್ವಜನಿಕರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಹೀಗಾಗಿ, ಈಗಾಗಲೇ ಇರುವಯೂನಿಟ್ ಆಧಾರದ ಮೇಲೆ ಆಸ್ತಿ ತೆರಿಗೆ ಸಂಗ್ರಹ ಮಾಡುವುದು ಉತ್ತಮ ಎಂದುಕಂದಾಯ ವಿಭಾಗದ ಅಧಿಕಾರಿಗಳು ಆಡಳಿತಾಧಿಕಾರಿಗೆ ಮನವಿ ಮಾಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಮಾರ್ಗಸೂಚಿ ದರ ಅಥವಾ ಕ್ಯಾಪಿಟಲ್ ವ್ಯಾಲ್ಯೂಸಿಸ್ಟಮ್ (ಜಾಗಕ್ಕೆ ಅಥವಾ ಮನೆ ಕಟ್ಟಿದ್ದರೆ, ಮನೆ ನಿರ್ಮಾಣಕ್ಕೆ ಬಳಸಲಾದ ವಸ್ತುಗಳ ಆಧಾರದ ಮೇಲೆ) ಆಸ್ತಿ ತೆರಿಗೆ ಹೆಚ್ಚಳ ಮಾಡಬಹುದು ಎಂಬಬಗ್ಗೆ ಚರ್ಚೆ ನಡೆದಿತ್ತು. ಆದರೆ, ಈ ಎರಡೂ ಮಾದರಿಯೂ 400ರಿಂದ 500 ಪ್ರತಿಶತ ಆಸ್ತಿ ತೆರಿಗೆಹೆಚ್ಚಳವಾಗುವ ಸಾಧ್ಯತೆ ಇದೆ. ಹೀಗಾಗಿ, ಈ ಎರಡೂಮಾದರಿಯ ಮೇಲೆ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಕೈಬಿಡಲಾಗಿದೆ.
ಕೋವಿಡ್ ದಿಂದ ಆರ್ಥಿಕ ಸಂಕಷ್ಟ ಹಾಗೂ ಬಿಬಿಎಂಪಿ ಚುನಾವಣೆಯ ಹೊಸ್ತಿಲಿನಲ್ಲಿ ಇರುವುದ ರಿಂದ ಈ ಸಂದರ್ಭದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಸಾಧ್ಯತೆ ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡಬೇಕಾದರೆ ಏನು ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಚರ್ಚೆ ನಡೆದಿದ್ದು, ತಜ್ಞರ ಸಮಿತಿ ರಚನೆ ಆಗಿದೆ. ಸಮಿತಿಯು ಪ್ರತಿ ವಲಯದಿಂದ 10 ಆಸ್ತಿಗಳನ್ನುಆಯ್ಕೆ ಮಾಡಿಕೊಂಡು ಹಾಲಿ ಮತ್ತು ಮುಂದೆ ಆಸ್ತಿತೆರಿಗೆ ಹೆಚ್ಚಳ ಮಾಡಿದರೆ,ಅದರ ಪ್ರಮಾಣ ಎಷ್ಟಾಗಲಿದೆ, ಈ ರೀತಿ ಮಾಡುವುದರಿಂದ ಪಾಲಿಕೆಗೆ ಎಷ್ಟು ಆದಾಯ ಬರಲಿದೆ. ಮುಖ್ಯವಾಗಿ ಇದು ಸಾರ್ವಜನಿಕರಿಗೆ ಕಟ್ಟಲು ಸಾಧ್ಯವೇ ಎಂಬ ಬಗ್ಗೆ ಕಮಿಟಿ ವರದಿ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಆಸ್ತಿ ತೆರಿಗೆ ಹೆಚ್ಚಳ ಪ್ರಸ್ತಾವನೆ ಏಕೆ?: ಪಾಲಿಕೆ ಖರ್ಚುಗಳು ಅವಲಂಬಿತವಾಗಿರುವುದು ಆಸ್ತಿ ತೆರಿಗೆಯ ಮೇಲೆ. 2008ರಲ್ಲಿ ಆಸ್ತಿ ತೆರಿಗೆ ಹೆಚ್ಚಳವಾದ ಸಂದರ್ಭದಲ್ಲಿ 10ರಿಂದ 12 ಸಾವಿರ ಆಸ್ತಿ ತೆರಿಗೆ ಕಟ್ಟುತ್ತಿದ್ದವರು ಇಂದಿಗೂ ಅಷ್ಟೇಪಾವತಿ ಮಾಡುತ್ತಿದ್ದಾರೆ. ಅದೇ ಆಸ್ತಿಗೆ ಈಗ ಮಾರುಕಟ್ಟೆಯ ಮೌಲ್ಯ 19-20 ಸಾವಿರ ರೂ. ಇದೆ. ಅಲ್ಲದೆ, ಪಾಲಿಕೆಯ ವೆಚ್ಚ ಹಾಗೂ ನಿರ್ವಹಣೆ ಸೇರಿದಂತೆ ಹೊಸ ಯೋಜನೆ, ಕಾಮಗಾರಿಗಳಿಗೂ ಹಣಕಾಸು ಕೊರತೆ ಇದೆ. ಹೀಗಾಗಿ,ಆಸ್ತಿ ತೆರಿಗೆಹೆಚ್ಚಳ ಪ್ರಸ್ತಾವನೆ ಮುನ್ನೆಲೆಗೆ ಬಂದಿದೆ.
ಗರದಲ್ಲಿ ಆಸ್ತಿ ತೆರಿಗೆ ಹೆಚ್ಚಳ ಮಾಡುವ ಪ್ರಸ್ತಾವನೆಇದೆ. ಈ ಪ್ರಸ್ತಾವನೆಯ ಆಧಾರದ ಮೇಲೆ ಮುಂದಿನ ಕ್ರಮಕೈಗೊಳ್ಳಲಾಗುವುದು. ಅಲ್ಲದೆ, ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವವರಿಂದಆಸ್ತಿ ತೆರಿಗೆ ವಸೂಲಿ ಮಾಡುವುದು ಹಾಗೂ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದವರನ್ನು ವ್ಯಾಪ್ತಿಗೆ ತರಲು ಆದ್ಯತೆಯ ಮೇಲೆ ಕ್ರಮವಹಿಸಲಾಗುತ್ತಿದೆ. –ಗೌರವ್ ಗುಪ್ತಾ, ಬಿಬಿಎಂಪಿಯ ಆಡಳಿತಾಧಿಕಾರಿ
ಹಿತೇಶ್ ವೈ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.