ಗುಜರಾತ್ ಮಾದರಿ ನಿಧಿಗೆ ಪ್ರಸ್ತಾವನೆ?
Team Udayavani, Dec 31, 2019, 3:08 AM IST
ಬೆಂಗಳೂರು: ಎಲೆಕ್ಟ್ರಿಕ್ ಬಸ್ ಸೇವೆಗೆ ಸಂಬಂಧಿಸಿದಂತೆ ಕರೆದಿದ್ದ ಟೆಂಡರ್‌ನಲ್ಲಿ ಭಾಗವಹಿಸಿದ ಕಂಪನಿಗಳು ನಿರೀಕ್ಷೆಗಿಂತ ಹೆಚ್ಚು ದರ ನಿಗದಿಪಡಿಸಿದ್ದು, ಇದರಿಂದ ಆಗಲಿರುವ ಹೆಚ್ಚುವರಿ ಆರ್ಥಿಕ ಹೊರೆಯನ್ನು ಸರಿದೂ ಗಿಸಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯು ಗುಜರಾತ್ ಮಾದರಿ ಅನುಸರಿಸಲು ಮುಂದಾಗಿದೆ.
ಹವಾನಿಯಂತ್ರಿತ ಬಸ್‌ನ ಪ್ರತಿ ಕಿ.ಮೀ. ಕಾರ್ಯಾಚರಣೆಗೆ ಆಗುವ ಖರ್ಚು ಅನ್ನು ಪ್ರತಿ ಕಿ.ಮೀ.ಗೆ ಬರುವ ಆದಾಯಕ್ಕೆ ಹೋಲಿಸಿದರೆ, ಕನಿಷ್ಠ 25ರಿಂದ 28 ರೂ. ಹೆಚ್ಚುವರಿ ಹೊರೆ ಆಗುತ್ತದೆ. ಈ ಹೊರೆಯನ್ನು ತಗ್ಗಿಸಲು ಗುಜರಾತ್ ಮಾದರಿಯಲ್ಲಿ ಸಂಸ್ಥೆಗೆ “ಕಾರ್ಯಸಾಧ್ಯತಾ ಅಂತರ ನಿಧಿ’ (ವಯಾಬಲಿಟಿ ಗ್ಯಾಪ್ ಫಂಡ್)ಯನ್ನು ನೀಡುವಂತೆ ಪ್ರಸ್ತಾವನೆ ಸಲ್ಲಿಸಲು ಬಿಎಂಟಿಸಿ ಚಿಂತನೆ ನಡೆಸಿದೆ.
ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ “ಫೇಮ್-2′ ಅಡಿ ರಾಜ್ಯ ಸಾರಿಗೆ ನಿಗಮಗಳು ಒಟ್ಟಾರೆ 400 ವಿದ್ಯುತ್‌ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಲು ಟೆಂಡರ್ ಆಹ್ವಾನಿಸಿತ್ತು. ಇದರಲ್ಲಿ ಬಿಎಂಟಿಸಿಗೇ 300 ಬಸ್‌ಗಳು ಪೂರೈಕೆ ಆಗಲಿವೆ. 37 ಆಸನಗಳ ಈ 300 ಎಲೆಕ್ಟ್ರಿಕ್ ಬಸ್‌ಗಳಿಗೆ ಈಗಾಗಲೇ ತಾಂತ್ರಿಕ ಮತ್ತು ಹಣಕಾಸು ಬಿಡ್ ತೆರೆಯಲಾಗಿದ್ದು, ಮೂಲಗಳ ಪ್ರಕಾರ ಎರಡು ಕಂಪೆನಿಗಳು ಟೆಂಡರ್‌ನಲ್ಲಿ ಭಾಗವಹಿಸಿದ್ದು, ಈ ಪೈಕಿ ಹೈದರಾಬಾದ್ ಮೂಲದ ಕಂಪೆನಿಯು ಕನಿಷ್ಠ ದರ ಅಂದರೆ ಕಿ.ಮೀ.ಗೆ ಸುಮಾರು 88ರಿಂದ 90 ರೂ. (ಎಸಿ) ನಿಗದಿಪಡಿಸಿವೆ. ಇದಲ್ಲದೆ, ಚಾಲಕ ಮತ್ತು ನಿರ್ವಹಣಾ ವೆಚ್ಚ ಪ್ರತ್ಯೇಕವಾಗಿರುತ್ತದೆ. ಹಾಗಾಗಿ, ಹೆಚ್ಚು-ಕಡಿಮೆ 100 ರೂ. ದಾಟಲಿದೆ.
ಆದರೆ, ವೋಲ್ವೋ ಬಸ್‌ವೊಂದರಿಂದ ಪ್ರಸ್ತುತ ಪ್ರತಿ ಕಿ.ಮೀ. ಬರುವ ಆದಾಯವೇ 66ರಿಂದ 68 ರೂ. ಎಂದು ಅಂದಾಜಿಸಲಾಗಿದೆ. ಇನ್ನು ಡೀಸೆಲ್ ಆಧಾರಿತ ಹವಾನಿಯಂತ್ರಿ ಬಸ್‌ನ ಕಾರ್ಯಾಚರಣೆ ವೆಚ್ಚ ಕಿ.ಮೀ.ಗೆ 75ರಿಂದ 80 ರೂ. ಆಗುತ್ತದೆ. ಹೀಗಿರುವಾಗ, ಯೋಜನೆ ಅನುಷ್ಠಾನ ಖರ್ಚು ಮತ್ತು ಆದಾಯದ ನಡುವಿನ ಅಂತರದ ಮೊತ್ತವನ್ನು ಭರಿಸುವಂತೆ ಮನವಿ ಮಾಡಲು ಸಿದ್ಧತೆ ನಡೆಸಿದೆ. ಈ ಸಂಬಂಧ ಹಣಕಾಸು ಇಲಾಖೆಯೊಂದಿಗೆ ಮಾತುಕತೆಯನ್ನೂ ನಡೆಸುತ್ತಿದೆ ಎಂದು ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
ಗುಜರಾತ್‌ನಲ್ಲಿ ಹೇಗಿದೆ?: ಗುಜರಾತಿನಲ್ಲಿ ಕೂಡ ಇದೇ ರೀತಿ ನಗರ ಸಾರಿಗೆಗೆ ವಿದ್ಯುತ್‌ಚಾಲಿತ ಬಸ್‌ಗಳನ್ನು ರಸ್ತೆಗಿಳಿಸಿದೆ. ಬಸ್ ಕಾರ್ಯಾಚರಣೆ ಖರ್ಚು ಮತ್ತು ಅದರಿಂದ ಬರುವ ಆದಾಯದ ನಡುವಿನ ಅಂತರವನ್ನು ಅಲ್ಲಿನ ಸರ್ಕಾರವೇ ಭರಿಸುತ್ತಿದೆ. ಅದೇ ರೀತಿ, ಇಲ್ಲಿಯೂ ಅನುದಾನದ ನೆರವು ನೀಡಬೇಕು ಎಂಬುದು ಸಂಸ್ಥೆಯ ಪ್ರತಿಪಾದನೆ. ಅಂದಹಾಗೆ, ವಿದ್ಯುತ್‌ಚಾಲಿತ ಬಸ್‌ವೊಂದಕ್ಕೆ ಕೇಂದ್ರವು ಫೇಮ್-2 ಯೋಜನೆ ಅಡಿ ಗರಿಷ್ಠ 50 ಲಕ್ಷ ರೂ. ಸಬ್ಸಿಡಿ ನೀಡುತ್ತಿದೆ.
ಬಸ್‌ಗೆ ತಗಲುವ ವೆಚ್ಚ ಅಂದಾಜು 1.50 ಕೋಟಿ ರೂ. ಉಳಿದ ಒಂದು ಕೋಟಿ ರೂ.ಗಳನ್ನು ಪ್ರತಿ ಕಿ.ಮೀ.ಗೆ ದರ ನಿಗದಿಪಡಿಸಿ ಗುತ್ತಿಗೆ ರೂಪದಲ್ಲಿ ಕಾರ್ಯಾಚರಣೆ ಮಾಡುವ ಮೂಲಕ ಸರಿದೂಗಿಸಬೇಕಾಗುತ್ತದೆ. ನಿರೀಕ್ಷೆಗಿಂತ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ್ದರಿಂದ ಬಿಎಂಟಿಸಿಯು ಇಕ್ಕಟ್ಟಿಗೆ ಸಿಲುಕಿದೆ. ಯೋಜನೆ ಅನುಷ್ಠಾನದಿಂದ ಕೋಟ್ಯಂತರ ರೂ. ಆರ್ಥಿಕ ಹೊರೆ ಆಗುತ್ತದೆ. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆಗೆ ಇದು ನುಂಗಲಾರದ ತುತ್ತು. ಹಾಗಂತ, ಅನುಷ್ಠಾನ ಮಾಡದಿದ್ದರೆ ಸರ್ಕಾರಗಳ ಕೆಂಗಣ್ಣಿಗೆ ಗುರಿ ಆಗಬೇಕಾಗುತ್ತದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಇದ್ದು, ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯೂ ಇದಾಗಿದೆ. ಬಸ್‌ಗಳ ಖರೀದಿ-ಗುತ್ತಿಗೆ ನಡುವಿನ ಹಗ್ಗಜಗ್ಗಾಟದಲ್ಲೇ ಫೇಮ್-1 ಅನುಷ್ಠಾನ ಆಗಲಿಲ್ಲ. ಈಗ ಮತ್ತೂಂದು ನೆಪದಲ್ಲಿ ಯೋಜನೆಗೆ ಹಿನ್ನಡೆಯಾದರೆ, ಅದು ಮತ್ತೂಂದು ರೀತಿಯ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ಬಸ್‌ಗಳನ್ನು ರಸ್ತೆಗಿಳಿಸುವ ಅನಿವಾರ್ಯತೆ ಕೂಡ ಇದೆ ಎಂದು ನಿಗಮದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಕನಿಷ್ಠ ಬಿಡ್‌ಗೆ ಪೂರೈಕೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ವಾಯವ್ಯ ರಸ್ತೆ ಸಾರಿಗೆ ನಿಗಮ (ಎನ್‌ಡಬುಕೆಆರ್‌ಟಿಸಿ)ದ ವ್ಯಾಪ್ತಿಯಲ್ಲಿ ಬರುವ ಅಂತರ ನಗರಗಳಲ್ಲಿ ಕಾರ್ಯಾಚರಣೆ ಮಾಡಲು ತಲಾ 50 ವಿದ್ಯುತ್‌ಚಾಲಿತ ಹವಾನಿಯಂತ್ರಿತ ಬಸ್‌ಗಳಿಗೂ ಟೆಂಡರ್ ಕರೆಯಲಾಗಿತ್ತು. ಕನಿಷ್ಠ ಬಿಡ್ ಕ್ರಮವಾಗಿ ಕಿ.ಮೀ.ಗೆ 68.4 ರೂ. ಹಾಗೂ 91.8 ರೂ. ಆಗಿದೆ. ಮೂರೂ ಸಂಸ್ಥೆಗಳಿಗೆ “Olectra-BYD’ ಕಂಪನಿ ಕನಿಷ್ಠ ಬಿಡ್‌ಗೆ ಬಸ್‌ಗಳನ್ನು ಪೂರೈಸಲು ಮುಂದೆಬಂದಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದು ಆಯಾ ಸಾರಿಗೆ ನಿಗಮಗಳ ಆಡಳಿತ ಮಂಡಳಿಯಲ್ಲಿ ಅನುಮೋದನೆಗೊಂಡ ನಂತರ ಅಂತಿಮವಾಗಲಿದೆ.
ಈಚೆಗಷ್ಟೇ ತಾಂತ್ರಿಕ ಮತ್ತು ಹಣಕಾಸು ಬಿಡ್ ತೆರೆಯಲಾಗಿದೆ. ಆಯಾ ಕಂಪೆನಿಗಳು ಮಾಡಿರುವ ಬಿಡ್ ದರವನ್ನು ನೋಡಿಕೊಂಡು, ಒಂದು ವೇಳೆ ಸಂಸ್ಥೆಗೆ ಆರ್ಥಿಕವಾಗಿ ಹೊರೆ ಆಗುವಂತಿದ್ದರೆ, “ವಯಾಬಿಲಿಟಿ ಗ್ಯಾಪ್ ಫಂಡ್’ಗಾಗಿ ಸರ್ಕಾರ ಮನವಿ ಸಲ್ಲಿಸುವ ಬಗ್ಗೆ ಚಿಂತನೆ ನಡೆಸಲಾಗುವುದು.
-ಸಿ. ಶಿಖಾ, ವ್ಯವಸ್ಥಾಪಕ ನಿರ್ದೇಶಕಿ, ಬಿಎಂಟಿಸಿ
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ
Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ
Bengaluru: ಸೆಂಟ್ರಿಂಗ್ ಮರಗಳು ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಸಾವು
Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.